AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್

Aadhaar app and mAadhaar App: ಯುಐಡಿಎಐ ಇದೀಗ ಹೊಸ ಆಧಾರ್ ಆ್ಯಪ್ ಅನ್ನು ಹೊರತಂದಿದೆ. ಈಗಾಗಲೇ ಎಂಆಧಾರ್ ಎನ್ನುವ ಆ್ಯಪ್ ಕೂಡ ಇದೆ. ಆದರೆ, ಈ ಎರಡೂ ಆ್ಯಪ್​ಗಳು ಬೇರೆ ಬೇರೆ ಉದ್ದೇಶ ಮತ್ತು ಫೀಚರ್​ಗಳನ್ನು ಹೊಂದಿವೆ. ಹೊಸ ಆಧಾರ್ ಆ್ಯಪ್​ನಲ್ಲಿ ಒಂದಕ್ಕಿಂತ ಹೆಚ್ಚು ಆಧಾರ್​ಗಳನ್ನು ನಿರ್ವಹಿಸಬಹುದು. ಆಧಾರ್ ಪ್ರೈವಸಿ ಡಾಟಾ ನಿಯಂತ್ರಣ ಇತ್ಯಾದಿ ಇರುತ್ತವೆ.

ಹೊಸ ಆಧಾರ್ ಆ್ಯಪ್​ಗೂ ಹಿಂದಿನ ಎಂ ಆಧಾರ್ ಆ್ಯಪ್​ಗೂ ಏನು ವ್ಯತ್ಯಾಸ? ಇಲ್ಲಿದೆ ಡೀಟೇಲ್ಸ್
ಆಧಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2025 | 3:26 PM

Share

ಯುಐಡಿಎಐ ಸಂಸ್ಥೆ ಹೊಸ ಆಧಾರ್ ಆ್ಯಪ್ (Aadhaar) ಅನ್ನು ಕೆಲ ದಿನಗಳ ಹಿಂದೆ (2025ರ ನ. 10) ಬಿಡುಗಡೆ ಮಾಡಿದೆ. ಗೂಗಲ್​ನ ಪ್ಲೇಸ್ಟೋರ್ ಹಾಗು ಆ್ಯಪಲ್​ನ ಆ್ಯಪ್ ಸ್ಟೋರ್​ನಲ್ಲಿ ಆಧಾರ್ ಆ್ಯಪ್ ಲಭ್ಯ ಇದ್ದು, ಡೌನ್​ಲೋಡ್ ಮಾಡಿಕೊಳ್ಳಬಹುದು. ಗುರುತು ದಾಖಲೆ ಪರಿಶೀಲನೆಯ ಅವಶ್ಯಕತೆ ಇದ್ದಾಗ ಈ ಆ್ಯಪ್ ಅನ್ನು ಬಳಸಬಹುದು. ಇದೂ ಸೇರಿದಂತೆ ಇನ್ನೂ ಹಲವು ಕಾರ್ಯಗಳಿಗೆ ಹೊಸ ಆಧಾರ್ ಆ್ಯಪ್ ಪ್ರಯೋಜನಕಾರಿ ಎನಿಸಬಲ್ಲುದು. ಈಗಾಗಲೇ ಎಂಆಧಾರ್ (mAadhaar – My Aadhaar) ಎನ್ನುವ ಆ್ಯಪ್ ಕೂಡ ಅಸ್ತಿತ್ವದಲ್ಲಿದ್ದು, ಈ ಹೊಸ ಆ್ಯಪ್ ಯಾಕೆ ಎಂದನಿಸಬಹುದು. ಈ ಎರಡೂ ಆ್ಯಪ್​ಗಳ ಮಧ್ಯೆ ವ್ಯತ್ಯಾಸಗಳಿವೆ. ಸದ್ಯಕ್ಕೆ ಎರಡೂ ಕೂಡ ಪ್ರತ್ಯೇಕವಾಗಿ ಲಭ್ಯ ಇವೆ. ಈ ಎರಡೂ ಆ್ಯಪ್​ಗಳ ನಡುವಿನ ವ್ಯತ್ಯಾಸ ಗುರುತಿಸುವ ಮೊದಲು ಹೊಸ ಆಧಾರ್ ಆ್ಯಪ್​ನ ಕೆಲ ಮುಖ್ಯ ಫೀಚರ್​ಗಳೇನು ಎನ್ನುವ ವಿವರ ಈ ಕೆಳಕಂಡಂತಿವೆ:

ಹೊಸ ಆಧಾರ್ ಆ್ಯಪ್​ನ ಫೀಚರ್​ಗಳು

  • ಒಂದೇ ಮೊಬೈಲ್ ನಂಬರ್ ಲಿಂಕ್ ಆಗಿರುವ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್​ಗಳನ್ನು ಒಂದೇ ಆ್ಯಪ್​ನಲ್ಲಿ ಇಟ್ಟುಕೊಂಡು ನಿರ್ವಹಿಸಬಹುದು.
  • ಆಧಾರ್ ಡಾಟಾ ಲಾಕ್ ಮಾಡಲು ಮತ್ತು ಅನ್​ಲಾಕ್ ಮಾಡಲು ಬಯೋಮೆಟ್ರಿಕ್ ಅಥೆಂಟಿಕೇಶನ್​ನ ನಿಯಂತ್ರಣ ಹೊಸ ಆಧಾರ್ ಆ್ಯಪ್​ನಲ್ಲಿ ಇರುತ್ತದೆ. ಅಂದರೆ, ಆಧಾರ್ ದೃಢೀಕರಣಕ್ಕಾಗಿ ಆಧಾರ್ ಅನ್ನು ಅನ್​ಲಾಕ್ ಮಾಡಿದ ನಂತರ ಮತ್ತೆ ಅದನ್ನು ಲಾಕ್ ಮಾಡಬಹುದು.
  • ಆಧಾರ್ ಡಾಟಾದಲ್ಲಿ ಯಾವುದನ್ನು ತೋರಿಸಬೇಕು, ತೋರಿಸಬಾರದು ಎನ್ನುವ ನಿಯಂತ್ರಣ ನಿಮ್ಮ ಕೈಲಿರುತ್ತದೆ. ಅಂದರೆ, ಆಧಾರ್​ನಲ್ಲಿ ನಿಮ್ಮ ಹೆಸರು ಮತ್ತು ಫೋಟೋ ಮಾತ್ರ ಕಾಣಬೇಕು. ವಿಳಾಸ, ಜನ್ಮದಿನಾಂಕ ವಿವರ ಕಾಣಬಾರದು ಎಂದಿದ್ದರೆ ಅದರ ನಿಯಂತ್ರಣ ನಿಮಗಿರುತ್ತದೆ.
  • ಬ್ಯಾಂಕು, ಸರ್ಕಾರಿ ಕಚೇರಿ, ಸರ್ವಿಸ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಆಧಾರ್ ವೆರಿಫಿಕೇಶನ್​ಗೆ ಆಧಾರ್ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಸೌಲಭ್ಯವನ್ನು ಈ ಆ್ಯಪ್ ಒದಗಿಸುತ್ತದೆ.
  • ಇಂಟರ್ನೆಟ್ ಇಲ್ಲದಿದ್ದರೂ ಆಧಾರ್ ವಿವರವನ್ನು ವೀಕ್ಷಿಸಲು ಅವಕಾಶ ಇರುತ್ತದೆ.
  • ಆಧಾರ್ ಅನ್ನು ಯಾವಾಗ್ಯಾವಾಗ ಮತ್ತು ಯಾವ ಉದ್ದೇಶಕ್ಕೆ ಬಳಸಲಾಯಿತು ಎನ್ನುವುದನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್​ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

ಹೊಸ ಆಧಾರ್ ಆ್ಯಪ್ ಸೆಟಪ್ ಪ್ರಕ್ರಿಯೆ

  • ಫೋನ್​ಗೆ ಆಧಾರ್ ಆ್ಯಪ್ ಡೌನ್​ಲೋಡ್ ಮಾಡಿ, ಇನ್ಸ್​ಟಾಲ್ ಮಾಡಿಕೊಂಡ ಬಳಿಕ ಅದನ್ನು ತೆರೆಯಿರಿ.
  • ಆಧಾರ್ ನಂಬರ್ ಅನ್ನು ನಮೂದಿಸಿ
  • ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕ ವೆರಿಫೈ ಮಾಡಿ
  • ಫೇಸ್ ಅಥೆಂಟಿಕೇಶನ್ ಮಾಡಬೇಕು.
  • ನಂತರ, ನಿಮ್ಮ ಆಧಾರ್ ಪ್ರೊಫೈಲ್ ರಕ್ಷಣೆಗೆ 5 ಅಂಕಿಗಳ ಸೆಕ್ಯೂರಿಟಿ ಪಿನ್ ರಚಿಸಬೇಕು.

ಹಳೆಯ ಎಂ ಆಧಾರ್ ಆ್ಯಪ್ ಬಳಕೆ ಯಾತಕ್ಕೆ?

  • ಎಂ ಆಧಾರ್ ಆ್ಯಪ್​ನಲ್ಲಿ ನೀವು ಆಧಾರ್ ದಾಖಲೆಯನ್ನು ಪಿಡಿಎಫ್ ಫೈಲ್​ನಲ್ಲಿ ಪಡೆದು ಸಲ್ಲಿಸಬಹುದು.
  • ಭೌತಿಕವಾದ ಪಿವಿಸಿ ಆಧಾರ್ ಕಾರ್ಡ್​ಗಳನ್ನು ಪೋಸ್ಟ್ ಮೂಲಕ ತರಿಸಿಕೊಳ್ಳಬಹುದು.
  • ಆನ್​ಲೈನ್ ಟ್ರಾನ್ಸಾಕ್ಷನ್ ವೇಳೆ, 16 ಅಂಕಿಗಳ ತಾತ್ಕಾಲಿಕ ಐಡಿ ಸೃಷ್ಟಿಸಿ ನೀಡಬಹುದು. ಇದರಿಂದ ನಿಜವಾದ ಆಧಾರ್ ನಂಬರ್ ಅನ್ನು ಮರೆಮಾಚಬಹುದು.
  • ಆಧಾರ್​ಗೆ ನೊಂದಾಯಿತವಾದ ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಪರಿಶೀಲಿಸಬಹುದು ಅಥವಾ ಬದಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!