ಕಾಪಿ ಹೊಡೆಯೋದು ಇನ್ನು 100 ವರ್ಷ ಆದ್ರೂ ನಿಲ್ಲೋಲ್ಲ ಅಂತಾ ‘ಹೇಳಿದ್ದು’ ಯಾರು!?

ಟಿವಿ9 ಕನ್ನಡ ವಾಹಿನಿಯಲ್ಲಿ ಅನಾದಿ ಕಾಲದಿಂದಲೂ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ವಿಡಂಬನಾತ್ಮಕ ಪುಟ್ಟ ಕಾರ್ಯಕ್ರಮ ಅಂದ್ರೆ ‘ನೀವು ಹೇಳಿದ್ದು-ನಾವು ಕೇಳಿದ್ದು’! ಪ್ರತಿನಿತ್ಯ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ವಿಡಂಬನೆಯಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ವಿಷಯಗಳೂ, ವ್ಯಕ್ತಿಗಳೂ, ಪ್ರಸಂಗಗಳ ಮೆರವಣಿಗೆ ಹಾದುಹೋಗುತ್ತವೆ. ಆದ್ರೆ ಅದಕ್ಕೊಂದು ವಿಡಂಬನಾತ್ಮಕ ಟಚ್ ಇರುತ್ತದೆ. ಕಾಪಿ ಹೊಡೆಯೋದು ನಮ್ಮ ಆಜನ್ಮ ಸಿದ್ಧ ಹಕ್ಕು ಅನ್ನೋರೂ ಇದ್ದಾರೆ! ಇಂದೂ ಅಷ್ಟೇ.. ಕೊರೊನಾ ಸಂಕಷ್ಟದಲ್ಲಿಯೂ SSLC ಪರೀಕ್ಷೆ ನಡೆಸುವ ಪ್ರತಿಜ್ಞೆ ತೊಟ್ಟಿರುವ ಶಿಕ್ಷಣ ಸಚಿವರು ಆರೋಗ್ಯದ ದೃಷ್ಟಿಯಿಂದ […]

ಕಾಪಿ ಹೊಡೆಯೋದು ಇನ್ನು 100 ವರ್ಷ ಆದ್ರೂ ನಿಲ್ಲೋಲ್ಲ ಅಂತಾ ‘ಹೇಳಿದ್ದು’ ಯಾರು!?
ಸಾಧು ಶ್ರೀನಾಥ್​

Updated on: Jun 28, 2020 | 8:24 AM

ಟಿವಿ9 ಕನ್ನಡ ವಾಹಿನಿಯಲ್ಲಿ ಅನಾದಿ ಕಾಲದಿಂದಲೂ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ವಿಡಂಬನಾತ್ಮಕ ಪುಟ್ಟ ಕಾರ್ಯಕ್ರಮ ಅಂದ್ರೆ ‘ನೀವು ಹೇಳಿದ್ದು-ನಾವು ಕೇಳಿದ್ದು’! ಪ್ರತಿನಿತ್ಯ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ವಿಡಂಬನೆಯಲ್ಲಿ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲ ವಿಷಯಗಳೂ, ವ್ಯಕ್ತಿಗಳೂ, ಪ್ರಸಂಗಗಳ ಮೆರವಣಿಗೆ ಹಾದುಹೋಗುತ್ತವೆ. ಆದ್ರೆ ಅದಕ್ಕೊಂದು ವಿಡಂಬನಾತ್ಮಕ ಟಚ್ ಇರುತ್ತದೆ.

ಕಾಪಿ ಹೊಡೆಯೋದು ನಮ್ಮ ಆಜನ್ಮ ಸಿದ್ಧ ಹಕ್ಕು ಅನ್ನೋರೂ ಇದ್ದಾರೆ!
ಇಂದೂ ಅಷ್ಟೇ.. ಕೊರೊನಾ ಸಂಕಷ್ಟದಲ್ಲಿಯೂ SSLC ಪರೀಕ್ಷೆ ನಡೆಸುವ ಪ್ರತಿಜ್ಞೆ ತೊಟ್ಟಿರುವ ಶಿಕ್ಷಣ ಸಚಿವರು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರದತ್ತ ಅಪ್ಪಿತಪ್ಪಿಯೂ ಯಃಕಶ್ಚಿತ್ ಕೊರೊನಾ ಕ್ರಿಮಿ ನುಸುಳಬಾರದು, ಮಕ್ಕಳನ್ನು ಬಾಧಿಸಬಾರದು ಎಂಬುದು ಸುರೇಶ್​ಕುಮಾರ್ ಅವರ ಕಳಕಳಿ. ಹೀಗಿರುವಾಗ ಕಾಪಿ ಎಂಬ ಪಿಡುಗು ಸಹ ಈ ಬಾರಿ ನುಸುಳೋಲ್ಲ ಎಂದೇ ಪ್ರಜ್ಞಾವಂತರು ಭಾವಿಸಿದ್ದರು. ಆದ್ರೆ.. ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ನಮ್ ಗೋಪಾಲಣ್ಣ-ಬಿಕನಾಸಿ ನಡುವಣ ಸಂಭಾಷಣೆಯಲ್ಲಿ ಕೆಳಗಿನ ವಿಡಿಯೋದಲ್ಲಿ ನೀವೇ ನೋಡಿ!

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us