Apple Glass ವಿವರಗಳು ಸೋರಿಕೆ, ವಿಶೇಷತೆಗಳು ಏನು ಗೊತ್ತಾ?
ಆ್ಯಪಲ್ ಗ್ಲಾಸ್ ಎಂಬ ಅತ್ಯಾಧುನಿಕ ಹೊಚ್ಚಹೊಸ ಕನ್ನಡಕವನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ಅದು ಸಾಧ್ಯವಾಗಿಲ್ಲ. ಈ ಮಧ್ಯೆ, ಜಾನ್ ಪ್ರೊಸರ್ ಎಂಬ ಟೆಕ್ ಪ್ರೇಮಿ ಆ್ಯಪಲ್ ಗ್ಲಾಸ್ ಕುರಿತಾದ ತಾಂತ್ರಿಕ ವಿವರಗಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಆ್ಯಪಲ್ ಗ್ಲಾಸ್ನ ವಿಶೇಷತೆ, ಅದರ ವಿನ್ಯಾಸದ ಕುರಿತು ವಿವರಿಸಿದ್ದಾರೆ. ಆ್ಯಪಲ್ ವಾಚ್ ಹೇಗೆ ಸಂವಹನ ನಡೆಸುತ್ತದೆಯೋ ಅದೇ ರೀತಿ ಐಫೋನ್ ಕನೆಕ್ಟ್ ಮಾಡುವ ಮೂಲಕ ರಿಯಾಲಿಟಿ ಸ್ಮಾರ್ಟ್ ಆ್ಯಪಲ್ ಗ್ಲಾಸ್ ಕೂಡ […]
ಆ್ಯಪಲ್ ಗ್ಲಾಸ್ ಎಂಬ ಅತ್ಯಾಧುನಿಕ ಹೊಚ್ಚಹೊಸ ಕನ್ನಡಕವನ್ನು ಆ್ಯಪಲ್ ಸಂಸ್ಥೆ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ಅದು ಸಾಧ್ಯವಾಗಿಲ್ಲ. ಈ ಮಧ್ಯೆ, ಜಾನ್ ಪ್ರೊಸರ್ ಎಂಬ ಟೆಕ್ ಪ್ರೇಮಿ ಆ್ಯಪಲ್ ಗ್ಲಾಸ್ ಕುರಿತಾದ ತಾಂತ್ರಿಕ ವಿವರಗಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಅದರಲ್ಲಿ ಆ್ಯಪಲ್ ಗ್ಲಾಸ್ನ ವಿಶೇಷತೆ, ಅದರ ವಿನ್ಯಾಸದ ಕುರಿತು ವಿವರಿಸಿದ್ದಾರೆ. ಆ್ಯಪಲ್ ವಾಚ್ ಹೇಗೆ ಸಂವಹನ ನಡೆಸುತ್ತದೆಯೋ ಅದೇ ರೀತಿ ಐಫೋನ್ ಕನೆಕ್ಟ್ ಮಾಡುವ ಮೂಲಕ ರಿಯಾಲಿಟಿ ಸ್ಮಾರ್ಟ್ ಆ್ಯಪಲ್ ಗ್ಲಾಸ್ ಕೂಡ ಆಪರೇಟ್ ಮಾಡಬಹುದು.
ಇದು ನೋಡಲು ಕಣ್ಣಿಗೆ ಹಾಕುವ ಗ್ಲಾಸ್ ಮಾದರಿಯಲ್ಲಿದೆ. ಇದನ್ನು ಐಫೋನ್ಗೆ ಕನೆಕ್ಟ್ ಮಾಡಬೇಕು. ಅದು ವೈರ್ಲೆಸ್ ಕನೆಕ್ಟರ್ ಆಗಿರುತ್ತದೆ. ಈ ಆ್ಯಪಲ್ ಕನ್ನಡಕವನ್ನು ಐಫೋನ್ ಮೂಲಕ ನಿಯಂತ್ರಿಸಲಾಗುತ್ತದೆ. ಇದನ್ನು ಹಾಕಿಕೊಂಡಾಗ ಕಣ್ಣ ಮುಂದೆಯೇ ಎಲ್ಲಾ ಮಾಹಿತಿ ಕಾಣಿಸುತ್ತಿರುವ ರೀತಿ ಭಾಸವಾಗುತ್ತದೆ. ಹಾಗೂ ಎಲ್ಲಾ ಡೇಟಾ ಮ್ಯಾಪ್ ಕನ್ನಡಕದಲ್ಲಿ ಡಿಸ್ಪ್ಲೇ ಆಗುತ್ತದೆ. ಇದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಕೇವಲ 499 ಡಾಲರ್ಸ್ನಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.
ಆಪಲ್ ಗ್ಲಾಸ್ನ ವಿಶೇಷತೆಗಳು: -ಕನ್ನಡಕದ ಬಲಭಾಗದ ಫ್ರೇಮ್ನಲ್ಲಿ ಲಿಡಾರ್ ಅನ್ನು ಸಂಯೋಜಿಸಲಾಗಿದೆ, ಆದರೆ ಮೂಲಮಾದರಿಯಲ್ಲಿ ಬೇರೆ ಯಾವುದೇ ಕ್ಯಾಮೆರಾ ಅಳವಡಿಸಿಲ್ಲ. -ಆ್ಯಪಲ್ ಗ್ಲಾಸ್ ವೈರ್ಲೆಸ್ ಚಾರ್ಜಿಂಗ್ ಆಗಿದ್ದು, ಪ್ಲಾಸ್ಟಿಕ್ ಸ್ಟ್ಯಾಂಡ್ ನೀಡಲಾಗುತ್ತದೆ. -ಕನ್ನಡಕದ ಎರಡೂ ಲೆನ್ಸ್ಗಳಲ್ಲಿ ಮಾಹಿತಿ ಪ್ರದರ್ಶನಗೊಳ್ಳುತ್ತೆ. ಬಳಕೆದಾರನ ಸಂಜ್ಞೆಗಳ ಮೂಲಕ ಸಾಧನವನ್ನು ನಿಯಂತ್ರಿಸಬಹುದು. -ಪ್ರೊಸಸರ್ ಪ್ರಕಾರ ಈ ಡಿವೈಸ್ QR ಕೋಡ್ಗಳನ್ನ ಸ್ಕ್ಯಾನ್ ಮಾಡಬಲ್ಲದು.
ಆ್ಯಪಲ್ ಗ್ಲಾಸ್ನನ್ನು 2020 ರ ನಾಲ್ಕನೇ ತ್ರೈಮಾಸಿಕ ಅಥವಾ 2021 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಕೊರೊನಾ ಕಾಟದಿಂದಾಗಿ ಅದು ಮುಂದೂಡಲಾಗಿದೆ.
Published On - 4:30 pm, Thu, 28 May 20