ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮೊದಲ ದೀಪಾವಳಿ.. ಗಿನ್ನಿಸ್ ದಾಖಲೆಯತ್ತ! Photos

|

Updated on: Nov 13, 2020 | 3:19 PM

ಶ್ರೀರಾಮ ವನವಾಸ ಮುಗಿಸಿ ಹಿಂದಿರುಗಿ ಬಂದಾಗ ಅಯೋಧ್ಯೆಯ ಜನ ಅಮಾವಾಸ್ಯೆಯ ದಿನ ದೀಪ ಹಚ್ಚಿ ಖುಷಿ ಹಂಚಿಕೊಂಡಿದ್ದರಂತೆ. ಈ ಬಾರಿ, ಅಯೋಧ್ಯೆ ರಾಮನ ಕಾಲವನ್ನು ನಾಚಿಸುವಂತೆ ದೀಪದಿಂದ ಬೆಳಗಲಿದೆ, ಕಂಗೊಳಿಸಲಿದೆ. ಈ ಬಾರಿ 5.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆಚರಿಸುವ ದೀಪಾವಳಿ ಆಚರಣೆಗೆ ವಿಶೇಷ ಮೆರಗು ಬಂದಿದೆ. ಅದಕ್ಕೆ ಸರಿಯಾಗಿ ಸಿಎಂ ಯೋಗಿ ಆದಿತ್ಯನಾಥ್ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದಾರೆ. ಹಬ್ಬದ ದಿನ ದೇವಾಲಯ […]

ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮೊದಲ ದೀಪಾವಳಿ.. ಗಿನ್ನಿಸ್ ದಾಖಲೆಯತ್ತ! Photos
Follow us on

ಶ್ರೀರಾಮ ವನವಾಸ ಮುಗಿಸಿ ಹಿಂದಿರುಗಿ ಬಂದಾಗ ಅಯೋಧ್ಯೆಯ ಜನ ಅಮಾವಾಸ್ಯೆಯ ದಿನ ದೀಪ ಹಚ್ಚಿ ಖುಷಿ ಹಂಚಿಕೊಂಡಿದ್ದರಂತೆ. ಈ ಬಾರಿ, ಅಯೋಧ್ಯೆ ರಾಮನ ಕಾಲವನ್ನು ನಾಚಿಸುವಂತೆ ದೀಪದಿಂದ ಬೆಳಗಲಿದೆ, ಕಂಗೊಳಿಸಲಿದೆ. ಈ ಬಾರಿ 5.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ.

ಸುಪ್ರೀಂ ಕೋರ್ಟ್ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಆಚರಿಸುವ ದೀಪಾವಳಿ ಆಚರಣೆಗೆ ವಿಶೇಷ ಮೆರಗು ಬಂದಿದೆ. ಅದಕ್ಕೆ ಸರಿಯಾಗಿ ಸಿಎಂ ಯೋಗಿ ಆದಿತ್ಯನಾಥ್ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದಾರೆ. ಹಬ್ಬದ ದಿನ ದೇವಾಲಯ ಹಾಗೂ ಸರಯೂ ನದಿಯ ಸುತ್ತ ಲಕ್ಷಾಂತರ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ. ರಾಮ ಜನ್ಮ ಭೂಮಿ- ಬಾಬರಿ ಮಸೀದಿ ವಿವಾದ ತೀರ್ಪಿನ ಮುನ್ನ ಯಾವುದೇ ಸಂಭ್ರಮಾಚರಣೆಗೆ ಅವಕಾಶಗಳಿರಲಿಲ್ಲ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾದ ಅಯೋಧ್ಯೆಯಲ್ಲಿ ನಡೆಯಲಿರುವ ಅದ್ಧೂರಿ ದೀಪೋತ್ಸವಕ್ಕೆ ಭೇಟಿ ನೀಡಲಿದ್ದಾರೆ. ಕ್ಚೇತ್ರದ ಅಭಿವೃದ್ಧಿ ಕಾರ್ಯ ಯೋಜನೆಗಳ ಕುರಿತು ಮಾತನಾಡಲಿದ್ದಾರೆ. ರಾಮ, ಸೀತೆ ಮತ್ತು ಲಕ್ಷ್ಣಣ ವೇಷಧಾರಿಗಳು ಪುಷ್ಪಕ ವಿಮಾನ ಸಹಿತ ಹೂವಿನ ಹಾಸಿಗೆಯಲ್ಲಿ ಬರಲಿದ್ದು, ಗವರ್ನರ್ ಆನಂದಿ ಪಟೇಲ್ ಮತ್ತು ಮುಖ್ಯಮಂತ್ರಿಗಳು ಅವರನ್ನು ಬರಮಾಡಿಕೊಳ್ಳಲಿದ್ದಾರೆ.

ರಾಮನ ಭಕ್ತರು ಧನ್ಯೋಸ್ಮಿ ಅನ್ನಲಿದ್ದಾರೆ!

ಉಡುಗೊರೆಯಾಗಿ ಭರ್ಜರಿ ಯೋಜನೆಗಳನ್ನು ಮುಖ್ಯಮಂತ್ರಿ ಯೋಗಿ ಘೋಷಿಸಲಿದ್ದಾರೆ. ಅಲ್ಲದೇ 19.02 ಕೋಟಿ ವೆಚ್ಚದಲ್ಲಿ ಭಜನಾ ಸ್ಥಳ, ಹಾಗೂ ಕ್ವೀನ್ ಹ್ಯಿಯೋ ಮೆಮೋರಿಯಲ್ ಪಾರ್ಕ್ 21.92 ಕೋಟಿ, ರಾಮಕಥಾ ಗ್ಯಾಲರಿ 7.79 ಕೋಟಿ, ರಾಮ ಮೈದಾನ 2.75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಜೊತೆಗೆ 7.40 ಕೋಟಿ ವೆಚ್ಚದಲ್ಲಿ ಅಧಿಂಕ ಬಸ್ಸ್ಟಾಂಡ್ ಹಾಗೂ ಮಲ್ಟಿ ಲೆವೆಲ್ ಪಾರ್ಕ್ ಹಾಗೂ ಫೂಟ್ಪಾತ್ ಗಳ ನಿರ್ಮಾಣಕ್ಕೆ ಘೋಷಣೆ ಮಾಡಲಿದ್ದಾರೆ. ಸರಯೂ ನದಿ ಹರಿವು, ಸ್ವಚ್ಛತೆ, ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಇತರ ವಿಷಯಗಳ ಕುರಿತು ಮುಖ್ಯಮಂತ್ರಿ ಮಾತನಾಡಲಿದ್ದಾರೆ. ಹಾಗೆಯೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ದೀಪಾವಳಿಯಲ್ಲಿ ವಿಶೇಷ ಕೊಡುಗೆಯಾಗಿ ಸಲ್ಲುತ್ತದೆ.

ದೀಪಾವಳಿಯಲ್ಲಿ ವಿಶೇಷ ಮೆರವಣಿಗೆ:
ಅಯೋಧ್ಯೆಯ ಸಾಕೇತ್ ಕಾಲೇಜಿನಿಂದ ಭಗವಾನ್ ರಾಮನ ಭವ್ಯ ಪಟ್ಟಾಭಿಷೇಕ ನಡೆಯಲಿದ್ದು, ಸುಮಾರು 5 ಕಿ.ಮೀ ವಿಸ್ತೀರ್ಣದವರೆಗೆ ಮೆರವಣಿಗೆ ನಡೆಯುತ್ತದೆ. ಗುರುಕುಲ ಶಿಕ್ಷಣ, ರಾಮ ಸೀತಾ ವಿವಾಹ, ಕೆವತ್ ಪ್ರಸಂಗ, ರಾಮ್ ದರ್ಬಾರ್, ಶಬರಿ-ರಾಮ್ ಮಿಲಾಪ್ ಮತ್ತು ಲಂಕಾ ದಹನ ವಿಷಯಗಳ ಕುರಿತು ಕಥೆಗಳ ಸಾರವು ಮೆರವಣಿಗೆಯಲ್ಲಿ ಸಾಗುತ್ತವೆ. ಸೂರ್ಯಾಸ್ತದ ನಂತರ ಸರಯೂ ನದಿಯಲ್ಲಿ ಮಹಾಮಂಗಳಾರತಿ ನಡೆಯಲಿದೆ.

ದೀಪಗಳಿಂದ ರಂಗೇರಿದ ರಾಮ ಜನ್ಮಭೂಮಿ:
ದೇವಾಲಯವನ್ನು 11,000 ಮಣ್ಣಿನ ಹಣತೆಗಳಿಂದ ಅಲಂಕರಿಸಲಾಗುತ್ತದೆ. ಸರಯೂ ನದಿಯ ಸುತ್ತ 5.51 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಲಾಗುತ್ತದೆ. ಇದು ಗಿನ್ನೆಸ್ ಬುಕ್ಕಿಗೆ ಸೇರುವ ಸಾಧ್ಯತೆ ಇದೆ. ಶುಕ್ರವಾರ ಸಂಜೆಯಿಂದ ಹಬ್ಬದ ತಯಾರಿ ಜರುಗಲಿದೆ. ಪ್ರತಿ ವರ್ಷಕ್ಕಿಂತ ಹೆಚ್ಚಿನ ಮೆರಗು ಈ ವರ್ಷದ ಅಯೋಧ್ಯೆಯಲ್ಲಿ ಕಾಣಸಿಗಲಿದೆ.

ಅಯೋಧ್ಯೆಯ ಶುಕ್ರವಾರದ ಚಿತ್ರಣ:
ಹತ್ತು ಹಲವು ಬಣ್ಣಗಳ ಲೈಟಿಂಗ್ಸ್ ನಿಂದ ಅಯೋಧ್ಯೆಯನ್ನು ಸಿಂಗರಿಸಲಾಗಿದೆ. ರಾಮಮಂದಿರದ ರಾಮ್ ಕಿ ಪೈಡಿ ಘಾಟ್​ಗಳನ್ನು ದೀಪೋತ್ಸವಕ್ಕಾಗಿ ಅಲಂಕರಿಸಲಾಗಿದ್ದು, ರಾಮಾಯಣದ ಕೆಲವು ದೃಶ್ಯಗಳನ್ನು ಘಾಟ್​ಗಳ ಮೇಲೆ ಚಿತ್ರಿಸಲಾಗಿದೆ. ಇಂದು ಸಂಜೆ ಘಾಟ್​ಗಳನ್ನು ಮಣ್ಣಿನ ಹಣತೆಯ ದೀಪ ಬೆಳಗುವ ಮೂಲಕ ರಂಗೇರಿಸಲಾಗುವುದು.

ರಾಮನ ಭಕ್ತರು ಧನ್ಯೋಸ್ಮಿ ಅನ್ನಲಿದ್ದಾರೆ!
ಈ ಬಾರಿ ದೀಪಾವಳಿಗೆ ಅಯೋಧ್ಯೆಯಲ್ಲಿ ಸೇರುವ ರಾಮನ ಭಕ್ತರು ನಿಜಕ್ಕೂ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ರಾಮ ಜನ್ಮಭೂಮಿ ಇನ್ನು ಮೂರು ದಿನ ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ನುವ ಹಾಗಿರುತ್ತದೆ.

Published On - 3:01 pm, Fri, 13 November 20