AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ. ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. […]

ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ
ಸಾಧು ಶ್ರೀನಾಥ್​
| Edited By: |

Updated on:Nov 14, 2020 | 1:58 PM

Share

ಹಬ್ಬಗಳ ರಾಜ ದೀಪಾವಳಿಯಲ್ಲಿ ರಾಜ್ಯದ ಒಂದಲ್ಲಾ ಒಂದು ಭಾಗದಲ್ಲಿ ಹಲವು ರೀತಿಯ ವಿಶಿಷ್ಟ ಆಚರಣೆಗಳು ಕಾಣಸಿಗುತ್ತವೆ. ಇಂದು ದೀಪಾವಳಿಯ ನರಕ ಚತುರ್ದಶಿ. ರಾಜ್ಯದ ಹಲವು ಭಾಗಗಳಲ್ಲಿ ಇಂದು ಅಭ್ಯಂಗ ಸ್ನಾನ ಮಾಡುವ ಪದ್ಧತಿಯಿದೆ. ಕೊಬ್ಬರಿ ಎಣ್ಣೆಯನ್ನು ಕಿವಿಗೆ, ಮೈಗೆ ಹಚ್ಚಿಕೊಂಡು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವ ಈ ಸಂಪ್ರದಾಯಕ್ಕೆ ವೈದ್ಯಕೀಯ, ಪೌರಾಣಿಕ ಹಿನ್ನೆಲೆಯೂ ಇದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವನ್ನು ತಡೆಯುವ ಶಕ್ತಿಯೂ ಅಭ್ಯಂಜನ (ಅಭ್ಯಂಗ) ಸ್ನಾನಕ್ಕಿದೆ.

ಅಭ್ಯಂಜನ ಸ್ನಾನದ ಪೌರಾಣಿಕ ಹಿನ್ನೆಲೆಯೇನು? ನರಕಾಸುರನ ಹಾವಳಿಯಿಂದ ಜನಸಾಮಾನ್ಯರು ಕಂಗೆಟ್ಟಿರುತ್ತಾರೆ. 16 ಸಾವಿರ ಸ್ತ್ರೀಯರನ್ನು ಬಂಧಿಸಿರುತ್ತಾನೆ ನರಕಾಸುರ. ಶ್ರೀಕೃಷ್ಣ ನರಕಾಸುರನ ಮೇಲೆ ಯುದ್ಧ ಹೂಡುತ್ತಾನೆ. ಅವನ ವಧೆ ಮಾಡುವ ಮೂಲಕ ಜನರ ಕಷ್ಟಗಳನ್ನು ಪರಿಹರಿಸುತ್ತಾನೆ. ಯುದ್ಧದ ವೇಳೆ ರಕ್ತದಲ್ಲಿ ತೊಯ್ದ ಕೃಷ್ಣನ ಹೆಂಗಳೆಯರು ಮೈಗೆ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡಿಸಿ ಖುಷಿಪಡುತ್ತಾರೆ. ಅಂದಿನಿಂದ ಈ ದಿನವನ್ನು ನರಕ ಚತುರ್ದಶಿಯೆಂದೇ ಅಚರಿಸುತ್ತ್ತಾರೆ. ಬಲೀಂದ್ರನ ಚಿತ್ರವನ್ನು ಸೌತೆಕಾಯಿಯ ಮೇಲೆ ಬಿಡಿಸುತ್ತಾರೆ. ನಂತರ ಮಹಿಳೆಯರು ಮನೆಯ ಪುರುಷರಿಗೆ ಅಭ್ಯಂಜನ ಮಾಡಿಸುತ್ತಾರೆ ಎಂದು ಶಿರಸಿಯ ಗಣೇಶ್ ನೆಲೆಮಾಂವ್ ಟಿವಿ9 ಡಿಜಿಟಲ್​ಗೆ ವಿವರಿಸಿದರು.

ಆಯುರ್ವೇದದಲ್ಲೂ ಇದೆ ಮಹತ್ವ ಅಭ್ಯಂಜನ ಸ್ನಾನಕ್ಕೆ ಆಯುರ್ವೇದ ತುಂಬಾ ಮಹತ್ವ ನೀಡುತ್ತದೆ. ಇದು ಶರದ್ ಋತು ಮುಗಿದು ಹೇಮಂತ ಋತುವಿಗೆ ಪ್ರವೇಶಿಸುವ ಕಾಲ. ಈಕಾಲದಲ್ಲಿ ಬೀಸುವ ತಂಪು ಗಾಳಿ ದೇಹವನ್ನು ಒಣಗಿಸುತ್ತದೆ. ದೇಹ ಹಸಿಹಸಿಯಾಗಿರಲು ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಕೊಳ್ಳಬೇಕು ಎನ್ನುತ್ತದೆ ಪುರಾತನ ವೈದ್ಯ ಪದ್ಧತಿ.

ಎಣ್ಣೆ ಸ್ನಾನ ದಿನಚರಿಯಾಗಲಿ.. ಅಭ್ಯಂಗ ಸ್ನಾನ ನರಕ ಚತುರ್ದಶಿಗಷ್ಟೇ ಸೀಮಿತವಾದಿರಲಿ ಎಂದು ಹೇಳುತ್ತಾರೆ ಆಯುರ್ವೇದ ವೈದ್ಯೆ ಸುಚೇತಾ ಮದ್ಗುಣಿ. ಪ್ರತಿದಿನ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ಒಳ್ಳೆಯದು. ಚರ್ಮದ ಆರೋಗ್ಯವನ್ನು ಇದು ಕಾಪಾಡುತ್ತದೆ. ಸಿಕ್ಕ ಸಿಕ್ಕ ಕ್ರೀಂಗಳನ್ನು ಬಳಸುವುದಕ್ಕಿಂತ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಳಸಲು ಅವರು ಸೂಚಿಸುತ್ತಾರೆ.

ಕಣ್ಣಿಗೂ ಒಳ್ಳೆಯದು ಕೊಬ್ಬರಿ ಎಣ್ಣೆ ಕೊಬ್ಬರಿ ಎಣ್ಣೆಯ ಬಳಕೆ ಕಣ್ಣಿಗೆ ಬಹಳ ಒಳ್ಳೆಯದು. ಅಲ್ಲದೇ ದೇಹದ ಶ್ರಮವನ್ನು ಅದು ಕಡಿಮೆ ಮಾಡುತ್ತದೆ. ಅಲ್ಲದೇ ತ್ವಚೆಯನ್ನು ಕೋಮಲಗೊಳಿಸುತ್ತದೆ. ಕಾಂತಿಯಿಂದ ಹೊಳೆಯುವಂತೆ ಕಾಡುತ್ತದೆ. ಚರ್ಮರೋಗಗಳಿಂದಲೂ ದೂರವಿಡುತ್ತದೆ. ದಿನನಿತ್ಯ ತಲೆಗೆ ಎಣ್ಣೆ ಹಾಕುವುದರಿಂದ ಕೂದಲು ಸದೃಢವಾಗುತ್ತದೆ.

ಈ ಸಂದರ್ಭಗಳಲ್ಲಿ ಅಭ್ಯಂಜನ ವರ್ಜ್ಯ.. ಗಂಟಲು ನೋವು,ಜ್ವರ, ಕಫ ಇದ್ದರೆ ಅಭ್ಯಂಜನ ಮಾಡಬೇಡಿ. ಅಜೀರ್ಣ ಕಾಡುತ್ತಿದ್ದರೆ ದೂರವಿರಿ. ತಿಂಡಿ, ಊಟ ನಂತರ ಅಭ್ಯಂಗ ಸ್ನಾನ ಮಾಡಬೇಡಿ.

“ಎಷ್ಟೋ ಜನ ಇಂದು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ನಿದ್ರಿಸುವ ಮುನ್ನ ತಲೆಗೆ ಕೊಬ್ಬರಿ ಅಥವಾ ಎಳ್ಳೆಣ್ಣೆ ಬಳಿದುಕೊಳ್ಳುವದರಿಂದ ಚೆನ್ನಾಗಿ ನಿದ್ರಿಸಬಹುದು. ಅಲ್ಲದೇ ಪ್ರತಿನಿತ್ಯ ಅಭ್ಯಂಜನ ಸ್ನಾನ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೋನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.” -ಸುಚೇತಾ ಮದ್ಗುಣಿ, ಆಯುರ್ವೇದ ತಜ್ಞರು

Published On - 1:57 pm, Sat, 14 November 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ