ಮಸೀದಿಯ ಲೌಡ್​ಸ್ಪೀಕರ್​ಗಳಲ್ಲಿ ಕೂಗುವ ಅಜಾನ್ ನಿಲ್ಲಿಸಬೇಕು- ಜಾವೇದ್ ಅಕ್ತರ್

|

Updated on: May 13, 2020 | 2:14 PM

ಹಿರಿಯ ಗೀತರಚನೆಕಾರ ಹಾಗೂ ಬರಹಗಾರರಾಗಿರುವ ಜಾವೇದ್ ಅಕ್ತರ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಹೊಸ ಕಾಂಟ್ರೋವರ್ಸಿಯನ್ನು ಹುಟ್ಟುಹಾಕಿದ್ದಾರೆ. ಅದೇನಂದ್ರೆ ಮಸೀದಿಗಳ ಲೌಡ್​ಸ್ಪೀಕರ್​ಗಳ ಮೂಲಕ ಜನರನ್ನು ಪ್ರಾರ್ಥನೆಗೆ ಆಹ್ವಾನಿಸುವ ಅಜಾನ್ ನಿಲ್ಲಿಸಬೇಕು. ಇದರಿಂದ ಅನ್ಯ ಜನರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. 50 ವರ್ಷಗಳಿಂದ ಲೌಡ್​ಸ್ಪೀಕರ್​ಗಳಲ್ಲಿ ಅಜಾನ್ ಕೂಗುವುದನ್ನು ನಿಷೇಧ ಮಾಡಲಾಗಿತ್ತು. ಈಗ ಅದಕ್ಕೆ ಸಮ್ಮತಿ ನೀಡಲಾಗಿದೆ.  ಆದ್ರೆ ಈಗ ಅದಕ್ಕೆ ಅಂತ್ಯ ಹಾಡಲೇ ಬೇಕು. ಅಜಾನ್ ಕೂಗುವುದರಲ್ಲಿ ತಪ್ಪಿಲ್ಲ. ಆದ್ರೆ ಅದನ್ನು ಲೌಡ್​ಸ್ಪೀಕರ್​ ಮೂಲಕ […]

ಮಸೀದಿಯ ಲೌಡ್​ಸ್ಪೀಕರ್​ಗಳಲ್ಲಿ ಕೂಗುವ ಅಜಾನ್ ನಿಲ್ಲಿಸಬೇಕು- ಜಾವೇದ್ ಅಕ್ತರ್
Follow us on

ಹಿರಿಯ ಗೀತರಚನೆಕಾರ ಹಾಗೂ ಬರಹಗಾರರಾಗಿರುವ ಜಾವೇದ್ ಅಕ್ತರ್ ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಹೊಸ ಕಾಂಟ್ರೋವರ್ಸಿಯನ್ನು ಹುಟ್ಟುಹಾಕಿದ್ದಾರೆ. ಅದೇನಂದ್ರೆ ಮಸೀದಿಗಳ ಲೌಡ್​ಸ್ಪೀಕರ್​ಗಳ ಮೂಲಕ ಜನರನ್ನು ಪ್ರಾರ್ಥನೆಗೆ ಆಹ್ವಾನಿಸುವ ಅಜಾನ್ ನಿಲ್ಲಿಸಬೇಕು. ಇದರಿಂದ ಅನ್ಯ ಜನರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ.

50 ವರ್ಷಗಳಿಂದ ಲೌಡ್​ಸ್ಪೀಕರ್​ಗಳಲ್ಲಿ ಅಜಾನ್ ಕೂಗುವುದನ್ನು ನಿಷೇಧ ಮಾಡಲಾಗಿತ್ತು. ಈಗ ಅದಕ್ಕೆ ಸಮ್ಮತಿ ನೀಡಲಾಗಿದೆ.  ಆದ್ರೆ ಈಗ ಅದಕ್ಕೆ ಅಂತ್ಯ ಹಾಡಲೇ ಬೇಕು. ಅಜಾನ್ ಕೂಗುವುದರಲ್ಲಿ ತಪ್ಪಿಲ್ಲ. ಆದ್ರೆ ಅದನ್ನು ಲೌಡ್​ಸ್ಪೀಕರ್​ ಮೂಲಕ ಕೂಗಬಾರದು. ಇದರಿಂದ ಅನ್ಯರಿಗೆ ತೊಂದರೆ ಉಂಟಾಗುತ್ತೆ. ಈಗಲಾದ್ರು ಇದನ್ನು ಸರಿ ಮಾಡ್ಕೊಳ್ತಾರಾ ಕಾದು ನೋಡಬೇಕು ಎಂದು ಅಕ್ತರ್ ಟ್ವೀಟ್ ಮೂಲಕ ತಮ್ಮ ಆಶಯ ಹೇಳಿದ್ದಾರೆ.

ಹರಾಮ್ ಆಂದ್ರೆ ಇಸ್ಲಾಂ ಧರ್ಮದ ಪ್ರಕಾರ ನಿಷೇಧ ಎಂದರ್ಥ. ಜಾವೇದ್ ಅಕ್ತರ್ ನೀಡಿರುವ ಹೇಳಿಕೆಗೆ ಸಂಬಂಧಿಸಿ ದೇವಾಲಯಗಳಲ್ಲಿಯೂ ಲೌಡ್​ಸ್ಪೀಕರ್​ಗಳನ್ನು ಬಳಸುತ್ತಾರಲ್ಲಾ? ಎಂದು ಪ್ರಶ್ನಿಸಿ ತಮ್ಮ ಅಭಿಪ್ರಾಯವನ್ನು ಕೇಳಿದಾಗ, ಜಾವೇದ್ ಅಕ್ತರ್ ಉತ್ತರಿಸಿದ್ದು ಹೀಗೆ.. ಹಬ್ಬದ ಸಮಯದಲ್ಲಿ ದೇವಾಲಯ ಅಥವಾ ಮಸೀದಿಗಳಲ್ಲಿ ಸ್ಪೀಕರ್‌ಗಳನ್ನು ಬಳಸಲಿ. ಆದರೆ ದೈನಂದಿನ ಬಳಕೆಗೆ ಅಪಾಯ ಉಂಟುಮಾಡುತ್ತೆ ಎಂದು ಉತ್ತರಿಸಿದ್ದಾರೆ.

ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ ಸಂದರ್ಭದಲ್ಲಿ ಜಾವೇದ್ ಅಕ್ತರ್ ಅವರ ಈ ವಿವಾದಾತ್ಮಕ ಹೇಳಿಕೆ  ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪವಿತ್ರ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ ಮತ್ತು ಪ್ರಾರ್ಥನೆ ಸಲ್ಲಿಸುತ್ತಾರೆ.

ಇದೇ ರೀತಿ 2017 ರಲ್ಲಿ ಗಾಯಕ ಸೋನು ನಿಗಮ್ ಕೂಡ ಈ ವಿಷಯಕ್ಕೆ ಸಂಬಂಧಿಸಿ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ರು. ಈಗ ಜಾವೇದ್ ಅಕ್ತರ್ ಹೇಳಿಕೆಗೆ ಅನೇಕ ಕಡೆ ವಿರೋಧ ವ್ಯಕ್ತವಾಗುತ್ತಿದೆ.

Published On - 1:17 pm, Wed, 13 May 20