ಕೊರೊನಾ ಮಹಾಮಾರಿಯನ್ನು ಒದ್ದೋಡಿಸುವ ಸುಲಭ ಉಪಾಯ ಇಲ್ಲಿದೆ ನೋಡಿ, ಮಾಡಿ!

|

Updated on: Jul 20, 2020 | 6:36 PM

ಇಡೀ ವಿಶ್ವವನ್ನೇ ತನ್ನನ್ನ ಕರಿಛಾಯೆಯಲ್ಲಿ ಮುಳುಗಿಸಿರುವ ಕೊರೊನಾ ವೈರಸ್​ ಹೆಜ್ಜೆಹೆಜ್ಜೆಗೂ ಹರಡುತ್ತಾ ಹಲವರ ಬಲಿ ಪಡೆಯುತ್ತಿದೆ. ಸಿಕ್ಕ ಸಿಕ್ಕ ಕಡೆ ಹೊಕ್ಕು ಅಮಾಯಕರನ್ನ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿರುವ ಈ ಸೈಲೆಂಟ್​ ಕಿಲ್ಲರ್ ಟಾರ್ಗೆಟ್​ ಮಾಡೋದೇ ನಮ್ಮ ಶ್ವಾಸಕೋಶಗಳನ್ನು. ಉಸಿರಾಟದ ಮೂಲಕ ದೇಹ ಪ್ರವೇಶಿಸಿ ಈ ಕೊಲೆಗಾರ ಶ್ವಾಸಕೋಶಗವನ್ನು ದುರ್ಬಲಗೊಳಿಸಿ ಸೋಂಕಿತ ಕೊನೆಯುಸಿರೆಳೆಯಲೂ ನರಳುವಂತೆ ಮಾಡಿಬಿಡುತ್ತೆ. ಇನ್ನು ಸೋಂಕಿನಿಂದ ಹೇಗೋ ಬಚಾವ್​ ಆಗಿ ಬದುಕುಳಿದವರ ಕಥೆಯೂ ಭಿನ್ನವಲ್ಲ. ಶ್ವಾಸಕೋಶವನ್ನ ಒಂದು ಮಟ್ಟಿಗೆ ದುರ್ಬಲಗೊಳಿಸುವ ಈ ಹೆಮ್ಮಾರಿ ಜೀವನಪರ್ಯಂತ ಉಸಿರಾಟಕ್ಕೆ […]

ಕೊರೊನಾ ಮಹಾಮಾರಿಯನ್ನು ಒದ್ದೋಡಿಸುವ ಸುಲಭ ಉಪಾಯ ಇಲ್ಲಿದೆ ನೋಡಿ, ಮಾಡಿ!
Follow us on

ಇಡೀ ವಿಶ್ವವನ್ನೇ ತನ್ನನ್ನ ಕರಿಛಾಯೆಯಲ್ಲಿ ಮುಳುಗಿಸಿರುವ ಕೊರೊನಾ ವೈರಸ್​ ಹೆಜ್ಜೆಹೆಜ್ಜೆಗೂ ಹರಡುತ್ತಾ ಹಲವರ ಬಲಿ ಪಡೆಯುತ್ತಿದೆ. ಸಿಕ್ಕ ಸಿಕ್ಕ ಕಡೆ ಹೊಕ್ಕು ಅಮಾಯಕರನ್ನ ತನ್ನ ತೆಕ್ಕೆಗೆ ಸೇರಿಸಿಕೊಳ್ಳುತ್ತಿರುವ ಈ ಸೈಲೆಂಟ್​ ಕಿಲ್ಲರ್ ಟಾರ್ಗೆಟ್​ ಮಾಡೋದೇ ನಮ್ಮ ಶ್ವಾಸಕೋಶಗಳನ್ನು. ಉಸಿರಾಟದ ಮೂಲಕ ದೇಹ ಪ್ರವೇಶಿಸಿ ಈ ಕೊಲೆಗಾರ ಶ್ವಾಸಕೋಶಗವನ್ನು ದುರ್ಬಲಗೊಳಿಸಿ ಸೋಂಕಿತ ಕೊನೆಯುಸಿರೆಳೆಯಲೂ ನರಳುವಂತೆ ಮಾಡಿಬಿಡುತ್ತೆ.

ಇನ್ನು ಸೋಂಕಿನಿಂದ ಹೇಗೋ ಬಚಾವ್​ ಆಗಿ ಬದುಕುಳಿದವರ ಕಥೆಯೂ ಭಿನ್ನವಲ್ಲ. ಶ್ವಾಸಕೋಶವನ್ನ ಒಂದು ಮಟ್ಟಿಗೆ ದುರ್ಬಲಗೊಳಿಸುವ ಈ ಹೆಮ್ಮಾರಿ ಜೀವನಪರ್ಯಂತ ಉಸಿರಾಟಕ್ಕೆ ಸಮಸ್ಯೆ ಉಂಟುಮಾಡುತ್ತದೆ. ಹೀಗಾಗಿ, ಸೋಂಕಿನಿಂದ ದೂರವಿರೋದೇ ಲೇಸು. ಆದರೆ, ಕಣ್ಣಿಗೆ ಕಾಣದ ವೈರಸ್​ನಿಂದ ದೂರವಿರೋದಕ್ಕಿಂತ ಅದರ ವಿರುದ್ಧ ದೇಹವನ್ನ ಸದೃಢಗೊಳಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಅದರಲ್ಲೂ ಶ್ವಾಸಕೋಶವನ್ನ ಬಲಪಡಿಸೋದು ಬಹಳ ಮುಖ್ಯ. ಆದರೆ, ಇದಕ್ಕಾಗಿ ನೀವೇನು ವ್ಯಾಯಾಮ, ಯೋಗ ಅಥವಾ ಪ್ರಾಣಾಯಾಮವನ್ನೆ ಮಾಡಬೇಕು ಅಂತಿಲ್ಲ.

ಶ್ವಾಸಕೋಶವನ್ನು ಸದೃಢವಾಗಿಸಲು Balloon ಊದಿ
ಹೌದು, ನಿಮ್ಮ ಶ್ವಾಸಕೋಶವನ್ನು ಸದೃಢವಾಗಿಸಲು ನೀವು ಮಾಡಬೇಕಾದ್ದು ಇಷ್ಟೇ. ಒಂದು ಬಲೂನ್​ ತೆಗೆದುಕೊಂಡು ಒಂದೇ ಉಸಿರಾಟದಲ್ಲಿ ಅದನ್ನು ಊದಿ. ನಂತರ ಇದೇ ಕ್ರಿಯೆಯನ್ನ ಎರಡು ಬಾರಿ ಪುನರಾವರ್ತಿಸಿ. ಹೀಗೆ, ಕೇವಲ ಮೂರೇ ಉಸಿರಾಟದಲ್ಲಿ ಬಲೂನ್​ ತುಂಬಿಸಿದರೆ ನಿಮ್ಮ ಶ್ವಾಸಕೋಶಗಳು ಬಲಿಷ್ಠ ಎಂದೇ ಅರ್ಥ. ಒಂದು ವೇಳೆ ನಿಮಗೆ ಆಗದಿದ್ದರೆ ಚಿಂತೆ ಬೇಡ. ಆದರೆ ಹೀಗೆ ಮಾಡಿ..

ಮೂರು ಉಸಿರಾಟದಲ್ಲಿ ಬಲೂನ್​ಗೆ ಗಾಳಿ ತುಂಬಿಸುವಂತೆ ಪ್ರತಿ ನಿತ್ಯ ಅಭ್ಯಾಸ ಮಾಡಿ. ಇದರಿಂದ ನಿಮ್ಮ ಶ್ವಾಸಕೋಶಗಳು ನಿಧಾನವಾಗಿ ಸ್ಟ್ರಾಂಗ್​ ಆಗುತ್ತವೆ. So,ಇದನ್ನ ನೀವು ಮಾಡಿ ನಿಮ್ಮ ಪ್ರಿಯರಿಗೂ ಕಲಿಸಿಕೊಡಿ. ಅಂದ ಹಾಗೆ ಈ ಸುಲಭದ ಐಡಿಯಾ ಕೊಟ್ಟಿರೋದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. KK ಅಗರ್​ವಾಲ್​.

Published On - 6:14 pm, Mon, 20 July 20