ಚಾಂಪಿಯನ್ ಪರೋಪಕಾರಿ ಈ ಪಾಂಡಿಯನ್!
ಇಲ್ಲಿರುವ ಭಿಕ್ಷುಕನನ್ನು ಒಮ್ಮೆ ನೋಡಿ. ಆತ ಭಿಕ್ಷೆ ದಿನಾಲು ಭಿಕ್ಷೆ ಎತ್ತುತ್ತಿರುವುದು ತನಗಾಗಿ ಅಥವಾ ಆತನ ಮೇಲೆ ಅವಲಂಬಿತರಾಗಿರಬಹುದಾದ ಕುಟುಂಬದ ಸದಸ್ಯರಿಗೆ ಅಂತ ನೀವಂದುಕೊಳ್ಳುವುದಾದರೆ, ನಿಮ್ಮ ಊಹೆ ತಪ್ಪು. ನಿಮಗೆ ಆಶ್ಚರ್ಯವಾಗಬಹುದು, ತಮಿಳುನಾಡಿದ ಮದುರೈನಲ್ಲಿ ವಾಸಿಸುವ ಈತ ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ರೂ. 90,000 ಸಾವಿರಗಳ ಮೊತ್ತವನ್ನು, ಹತ್ತತ್ತು ಸಾವಿರಗಳ ಕಂತುಗಳ ಮೂಲಕ ತಮಿಳು ನಾಡು ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ. ಕೊನೆಯ ರೂ.10,000ಗಳ ಕಂತನ್ನು ಆತ ಸೋಮವಾರದಂದು, ಮದುರೈ ಜಿಲ್ಲಾಧಿಕಾರಿಗಳಿಗೆ […]
ಇಲ್ಲಿರುವ ಭಿಕ್ಷುಕನನ್ನು ಒಮ್ಮೆ ನೋಡಿ. ಆತ ಭಿಕ್ಷೆ ದಿನಾಲು ಭಿಕ್ಷೆ ಎತ್ತುತ್ತಿರುವುದು ತನಗಾಗಿ ಅಥವಾ ಆತನ ಮೇಲೆ ಅವಲಂಬಿತರಾಗಿರಬಹುದಾದ ಕುಟುಂಬದ ಸದಸ್ಯರಿಗೆ ಅಂತ ನೀವಂದುಕೊಳ್ಳುವುದಾದರೆ, ನಿಮ್ಮ ಊಹೆ ತಪ್ಪು. ನಿಮಗೆ ಆಶ್ಚರ್ಯವಾಗಬಹುದು, ತಮಿಳುನಾಡಿದ ಮದುರೈನಲ್ಲಿ ವಾಸಿಸುವ ಈತ ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ರೂ. 90,000 ಸಾವಿರಗಳ ಮೊತ್ತವನ್ನು, ಹತ್ತತ್ತು ಸಾವಿರಗಳ ಕಂತುಗಳ ಮೂಲಕ ತಮಿಳು ನಾಡು ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ. ಕೊನೆಯ ರೂ.10,000ಗಳ ಕಂತನ್ನು ಆತ ಸೋಮವಾರದಂದು, ಮದುರೈ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ.
ಅಂದಹಾಗೆ, ಈ ಸಮಾಜಮುಖಿ ಭಿಕ್ಷುಕನ ಹೆಸರು ಪೂಲ್ ಪಾಂಡಿಯನ್. ಆತನನ್ನು ಭಿಕ್ಷುಕ ಎಂದು ಸಂಭೋದಿಸುವುದು ಸರ್ವಥಾ ತಪ್ಪಾಗುತ್ತದೆ. ಆ ಮಟ್ಟಿಗೆ ಹೃದಯ ವೈಶಾಲ್ಯತೆ ಹೊಂದಿರುವವನು, ಯಾವಾಗಲೂ ಸಮಾಜದ ಏಳಿಗೆ ಬಗ್ಗೆ ಯೋಚಿಸುವವನು ಭಿಕ್ಷುಕ ಹೇಗಾಗುತ್ತಾನೆ? ಸರಕಾರದಿಂದ ಕೋವಿಡ್ ಸೋಂಕಿತರಿಗೆಂದು ಬಿಡುಗಡೆಯಾಗುವ ಹಣವನ್ನು ದೋಚಿ ತಮ್ಮ ಜೇಬಿಗಿಳಿಸುವ ರಾಜಕಾರಣಿಗಳ ನಡುವೆ, ಪಾಂಡಿಯನ್ ಚಾಂಪಿಯನ್ ಪರೋಪಕಾರಿಯಂತೆ ಕಂಗೊಳಿಸುತ್ತಾನೆ. ಆತನ ಈ ಗುಣಕ್ಕೆ ಸರಿಸಾಟಿಯುಂಟೆ?
ತಾನು ಕೂಡಿಸಿದ ಹಣವನ್ನು ಹೀಗೆ ಸಮಾಜಮುಖಿ ಕೆಲಸಗಳಿಗೆ ಪಾಂಡಿಯನ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಶಾಲೆಯೊಂದರ ಪೀಠೋಪಕರಣಗಳಿಗೆ ಮತ್ತು ಅಲ್ಲಿ ಓದುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆತ ಸಾವಿರಾರು ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದ.
ಪಾಂಡಿಯನ್ನೊಂದಿಗೆ ನಾವು ಬದುಕುತ್ತಿರುವುದು ಖಂಡಿತವಾಗಿಯೂ ಎದೆಸೆಟೆಸಿಕೊಂಡು ಹೇಳುವ ವಿಷಯವೇ, ಆತನ ಗುಣ ನಮ್ಮಲಿಲ್ಲದ ಹೊರತಾಗಿಯೂ………