ಬಿ ಎಸ್ ವೈಗೆ ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಯಾತ್ರಿ ನಿವಾಸ ಕಟ್ಟುವ ಯೋಚನೆ!

|

Updated on: Aug 07, 2020 | 9:21 PM

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ ಐದರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕನ್ನಡಿಗರಿಗಾಗಿ ಅಲ್ಲೊಂದು ಯಾತ್ರಿ ನಿವಾಸ ನಿರ್ಮಿಸುವ ಯೋಚನೆ ಮಾಡುತ್ತಿದ್ದಾರೆ. ಕೊವಿಡ್ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿಗಳು ಅಲ್ಲಿನ ಬೆಡ್ ಮೇಲೆ ಕುಳಿತೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಯಾತ್ರಿ ನಿವಾಸ ಕಟ್ಟಲು ಎರಡೆಕರೆ ಜಮೀನು ಮಂಜೂರು ಮಾಡುವಂತೆ ಕೋರಿದ್ದಾರೆ ರಾಮಂಮಂದಿರ ನಿರ್ಮಾಣಗೊಳ್ಳತ್ತಿರುವುದನ್ನು ನೋಡಲು ಮತ್ತು […]

ಬಿ ಎಸ್ ವೈಗೆ ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಯಾತ್ರಿ ನಿವಾಸ ಕಟ್ಟುವ ಯೋಚನೆ!
Follow us on

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ ಐದರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸಿದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕನ್ನಡಿಗರಿಗಾಗಿ ಅಲ್ಲೊಂದು ಯಾತ್ರಿ ನಿವಾಸ ನಿರ್ಮಿಸುವ ಯೋಚನೆ ಮಾಡುತ್ತಿದ್ದಾರೆ.

ಕೊವಿಡ್ ಸೋಂಕಿಗೊಳಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿಗಳು ಅಲ್ಲಿನ ಬೆಡ್ ಮೇಲೆ ಕುಳಿತೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಯಾತ್ರಿ ನಿವಾಸ ಕಟ್ಟಲು ಎರಡೆಕರೆ ಜಮೀನು ಮಂಜೂರು ಮಾಡುವಂತೆ ಕೋರಿದ್ದಾರೆ

ರಾಮಂಮಂದಿರ ನಿರ್ಮಾಣಗೊಳ್ಳತ್ತಿರುವುದನ್ನು ನೋಡಲು ಮತ್ತು ನಿರ್ಮಾಣ ಸಂಪೂರ್ಣಗೊಂಡು ಮಂದಿರದೊಳಗೆ ಭಗವಾನ್ ರಾಮ ಪ್ರತಿಷ್ಠಾಪನೆಗೊಂಡ ನಂತರ ಸಹಸ್ರಾರು ಕನ್ನಡಿಗರು ರಾಮನ ದರ್ಶನಕ್ಕೆ, ತೀರ್ಥಯಾತ್ರೆಗೆ ನಿಶ್ಚಯವಾಗಿ ಹೋಗುವುದರಿಂದ ಅವರಿಗೆ ನೆಲಸಲು ನಿವಾಸದ ಅವಶ್ಯಕತೆಯಿರುವುದನ್ನು ಮನಗಂಡಿರುವ ಮುಖ್ಯಮಂತ್ರಿಗಳು ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿರುವುದು ಶ್ಲಾಘನೀಯವೇ ಸರಿ.