ಕ್ಯಾನ್ಸರನ್ನು ರೋಗಲಕ್ಷಣ ಕಾಣಿಸುವ ಮೊದಲೇ ಪತ್ತೆ ಹಚ್ಚಬಹುದಂತೆ

| Updated By: ಆಯೇಷಾ ಬಾನು

Updated on: Nov 23, 2020 | 11:47 AM

ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ 5 ಬಗೆಯ ಕ್ಯಾನ್ಸರ್ ವ್ಯಾಧಿಯ ಲಕ್ಷಣಗಳನ್ನು ಒಂದು ಸರಳವಾದ ರಕ್ತ ಪರೀಕ್ಷಣೆಯ (ಪ್ಯಾನ್​ಸೀರ್ ಬ್ಲಡ್ ಟೆಸ್ಟ್) ಮೂಲಕ ನಾಲ್ಕು ವರ್ಷಗಳಷ್ಟು ಮೊದಲೇ ಪತ್ತೆಹಬಹುದಾದ ಆಶಾದಾಯಕ ಸಂಗತಿ ಹೊರಬಿದ್ದಿದೆ. ‘ಕ್ಯಾನ್ಸರ್’ ಉಲ್ಲೇಖವೇ ನಮ್ಮ ಮೈಯಲ್ಲಿ ಭಯದ ನಡುಕ ಹುಟ್ಟಿಸುತ್ತದೆ. ಮಾನವ ಪೀಳಿಗೆಯನ್ನು ಶತಮಾನಗಳಿಂದ ಕಾಡುತ್ತಿರುವ ಭಯಂಕರ ರೋಗವಿದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಗೆಡ್ಡೆಯಾಗಿ ಬೆಳೆದು ಆರೋಗ್ಯವಂತ ಜೀವಕೋಶಗಳನ್ನು ಹಾಳು ಮಾಡುತ್ತಾ ಇಡೀದೇಹವನ್ನೇ ಪಸರಿಸುವ ವ್ಯಾಧಿ. ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ […]

ಕ್ಯಾನ್ಸರನ್ನು ರೋಗಲಕ್ಷಣ ಕಾಣಿಸುವ ಮೊದಲೇ ಪತ್ತೆ ಹಚ್ಚಬಹುದಂತೆ
Follow us on

ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ 5 ಬಗೆಯ ಕ್ಯಾನ್ಸರ್ ವ್ಯಾಧಿಯ ಲಕ್ಷಣಗಳನ್ನು ಒಂದು ಸರಳವಾದ ರಕ್ತ ಪರೀಕ್ಷಣೆಯ (ಪ್ಯಾನ್​ಸೀರ್ ಬ್ಲಡ್ ಟೆಸ್ಟ್) ಮೂಲಕ ನಾಲ್ಕು ವರ್ಷಗಳಷ್ಟು ಮೊದಲೇ ಪತ್ತೆಹಬಹುದಾದ ಆಶಾದಾಯಕ ಸಂಗತಿ ಹೊರಬಿದ್ದಿದೆ.

‘ಕ್ಯಾನ್ಸರ್’ ಉಲ್ಲೇಖವೇ ನಮ್ಮ ಮೈಯಲ್ಲಿ ಭಯದ ನಡುಕ ಹುಟ್ಟಿಸುತ್ತದೆ. ಮಾನವ ಪೀಳಿಗೆಯನ್ನು ಶತಮಾನಗಳಿಂದ ಕಾಡುತ್ತಿರುವ ಭಯಂಕರ ರೋಗವಿದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಗೆಡ್ಡೆಯಾಗಿ ಬೆಳೆದು ಆರೋಗ್ಯವಂತ ಜೀವಕೋಶಗಳನ್ನು ಹಾಳು ಮಾಡುತ್ತಾ ಇಡೀದೇಹವನ್ನೇ ಪಸರಿಸುವ ವ್ಯಾಧಿ. ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ.

ನೇಚರ್ ಕಮ್ಯುನಿಕೇಷನ್ಸ್ ಹೆಸರಿನ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಪ್ಯಾನ್​ಸೀರ್ ಎನ್ನುವುದು ಒಂದು ಸರಳ ಬ್ಲಡ್ ಟೆಸ್ಟ್ ಆಗಿದ್ದು, ಈ ಪರೀಕ್ಷಣೆಯ ಮೂಲಕ ಶೇಕಡಾ 95ರಷ್ಟು ಕ್ಯಾನ್ಸರ್​ನ ಲಕ್ಷಣಗಳನ್ನು ತೋರದ ಜನರಲ್ಲಿ, 4 ವರ್ಷಗಳಷ್ಟು ಮುಂಚೆಯೇ ರೋಗ ಪತ್ತೆ ಹಚ್ಚಬಹುದು. ದೊಡ್ಡಕರುಳು ಅಥವಾ ಗುದದ್ವಾದರ ಕ್ಯಾನ್ಸರ್, ಅನ್ನನಾಳ, ಯಕೃತ್ತು, ಶ್ವಾಸಕೋಶ ಮತ್ತು ಉದರದ ಕ್ಯಾನ್ಸರ್​ಗಳನ್ನು ಪ್ಯಾನ್​ಸೀರ್ ಟೆಸ್ಟ್ ಮೂಲಕ ಪತ್ತೆಹಚ್ಚಬಹುದಂತೆ. 

ಜನರಲ್ಲಿ ಈಗಾಗಲೇ ಒಂದು ಭರವಸೆಯ ಕಿರಣ ಮೂಡಿಸಿರುವ ಸದರಿ ಟೆಸ್ಟ್ ಇನ್ನೂ ಪ್ರಾಯೋಗಿಕ ಹಂತದಲ್ಲ್ಲಿದೆ. ಆದರೆ, ಹಲವಾರು ವಿಜ್ಞಾನಿಗಳು ಟೆಸ್ಟ್​ನ ನಿಖರತೆ ಕುರಿತು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.

Published On - 5:20 pm, Mon, 31 August 20