ಯೂಟಬ್ ನಲ್ಲಿ ಅಪ್ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಗೊತ್ತಾ? ಈ ವ್ಯಕ್ತಿಗೆ YouTubeನಲ್ಲಿ ಉನ್ನತ ಹುದ್ದೆ

YouTube : ಯೂಟಬ್ ಎಲ್ಲ ವಿಚಾರಕ್ಕೂ ಪೂರಕವಾಗಿ ಕೆಲಸ ಮಾಡುತ್ತಾದೆ. ಆಧುನೀಕ ವಿಚಾರದಿಂದ ಹಿಡಿದು ಹಳೆಯ, ಐತಿಹಾಸಿಕ ವಿಚಾರಗಳ ಬಗ್ಗೆಯು  ಮಾಹಿತಿಯನ್ನು ನೀಡುತ್ತದೆ.

ಯೂಟಬ್ ನಲ್ಲಿ ಅಪ್ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಗೊತ್ತಾ? ಈ ವ್ಯಕ್ತಿಗೆ YouTubeನಲ್ಲಿ ಉನ್ನತ ಹುದ್ದೆ
ಸಾಂದರ್ಭಿಕ ಚಿತ್ರ
Image Credit source: Google
Updated By: ಅಕ್ಷಯ್​ ಪಲ್ಲಮಜಲು​​

Updated on: Mar 03, 2022 | 7:50 PM

ಯೂಟಬ್…. ಯೂಟಬ್… ಇಡಿ ಜಗತ್ತಿನ ಜನರ  ನಿತ್ಯ ಸ್ನೇಹಿ ಈ ಯೂಟಬ್. ಯೂಟಬ್ ಯಾರಿಗೆ ಬೇಡ ಹೇಳಿ , ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೂ ಈ ಯೂಟಬ್ ಎಂಬುದು ಬೇಕೇ ಬೇಕು, ಏಕೆಂದರೆ ಇದು ಯೂಟಬ್ ಜಗತ್ತು. ಇಲ್ಲಿ ಯಾವ ವಿಷಯ ಸಿಗುವುದಿಲ್ಲ ಹೇಳಿ, ಎಲ್ಲವೂ ಇಲ್ಲಿ ಲಭ್ಯ, ಯೂಟಬ್ ಎಂಬುದು  ಪ್ರತಿಯೊಂದಕ್ಕೂ ಅವಲಂಬಿಸಿಕೊಂಡಿದೆ, ಅಡುಗೆ , ಆಟ, ಊಟ-ಪಾಠ, ಎಲ್ಲವನ್ನು ಇಲ್ಲಿ ಕಾಣಬಹುದು ಏಕೆಂದರೆ ಯೂಟಬ್ ನಲ್ಲಿ  ವಿಶ್ವ ಗ್ರಂಥವಾಗಿದೆ.  ವಿಶ್ವದ ಎಲ್ಲ ವಿಷಯಗಳನ್ನು ಪ್ರಪಂಚಕ್ಕೆ ತೋರಿಸುವ ಒಂದು ಮಾಧ್ಯಮವಾಗಿ ಯೂಟಬ್. ಸಾಮಾಜಿಕ ಜಾಲತಾಣಗಳ ಪೈಕಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಮೀಡಿಯಾ ಅದು ಯೂಟಬ್,  ವಿಶ್ವ  ಜನರ ಮನವನ್ನು ಗೆದ್ದಿದೆ, ಜಗತ್ತಿನಲ್ಲಿ ಆಗುವ ಎಲ್ಲ ವಿಷಯಗಳನ್ನು ಈ ಯೂಟಬ್ ನಲ್ಲಿ ನೋಡಬಹುದು, ಎಲ್ಲ ಕಾರ್ಯಕ್ಕೂ ಮುಖ್ಯವಾಗಿ  ಕಾರ್ಯನಿರ್ವಹಿಸುವ ಮಾಧ್ಯಮ ಯೂಟಬ್.

ಯೂಟಬ್ ಎಲ್ಲ ವಿಚಾರಕ್ಕೂ ಪೂರಕವಾಗಿ ಕೆಲಸ ಮಾಡುತ್ತಾದೆ. ಆಧುನೀಕ ವಿಚಾರದಿಂದ ಹಿಡಿದು ಹಳೆಯ, ಐತಿಹಾಸಿಕ ವಿಚಾರಗಳ ಬಗ್ಗೆಯು  ಮಾಹಿತಿಯನ್ನು ನೀಡುತ್ತದೆ. YouTube ಇದನ್ನು ಫೆಬ್ರವರಿ 14, 2005 ರಂದು ಸ್ಟೀವ್ ಚೆನ್, ಚಾಡ್ ಹರ್ಲಿ ಮತ್ತು ಜಾವೇದ್ ಕರೀಮ್, ಅಮೇರಿಕನ್ ಇ-ಕಾಮರ್ಸ್ ಕಂಪನಿ ಪೇಪಾಲ್‌ನ ಮೂವರು ಮಾಜಿ ಉದ್ಯೋಗಿಗಳು ಪ್ರಾರಂಭ ಮಾಡುತ್ತಾರೆ.  ಇದರ ಪ್ರಧಾನ ಕಚೇರಿ  ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರೂನೋದಲ್ಲಿ  ಇದೆ.

ಜನವರಿ 2006 ರ ಹೊತ್ತಿಗೆ  25 ಮಿಲಿಯನ್ ವೀಕ್ಷಣೆಗಳಿಗೆ ಹೆಚ್ಚಾಯಿತು. ಸೈಟ್‌ನಲ್ಲಿ ಲಭ್ಯವಿರುವ ವೀಡಿಯೊಗಳ ಸಂಖ್ಯೆಯು ಮಾರ್ಚ್ 2006 ರಲ್ಲಿ 25 ಮಿಲಿಯನ್ ಮೀರಿದೆ, ಪ್ರತಿದಿನ 20,000 ಕ್ಕೂ ಹೆಚ್ಚು ಹೊಸ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗಿದೆ. 2006 ರ ಬೇಸಿಗೆಯ ವೇಳೆಗೆ, YouTube ದಿನಕ್ಕೆ 100 ಮಿಲಿಯನ್‌ಗಿಂತಲೂ ಹೆಚ್ಚು ವೀಡಿಯೊಗಳನ್ನು ಒದಗಿಸುತ್ತಿತ್ತು. ಆದರೆ ಯೂಟಬ್ ನಲ್ಲಿ ಹೆಚ್ಚು ಜನರು ವಿಡಿಯೋಗಳನ್ನು ಹಾಕಲು ಪ್ರಾರಂಭಿಸಿದರು, ಆದರೆ ಯೂಟಬ್ ನಲ್ಲಿ ಮೊದಲು ಅಪ್‌ಲೋಡ್ ಆಗಿರುವ ವಿಡಿಯೋ ಯಾವುದು ಗೊತ್ತಾ? ಈ ಬಗ್ಗೆ ಒಂದು ಆಸಕ್ತಿಯುತವಾದ ಸ್ಟೋರಿ ಇಲ್ಲಿದೆ. ಯೂಟಬ್ ನಲ್ಲಿ ಮೊದಲು ಅಪ್ ಲೋಡ್ ಆಗಿರುವ ವಿಡಿಯೋ ಮತ್ತು ಅದನ್ನು ಅಪ್ ಲೋಡ್ ಮಾಡಿದ ವ್ಯಕ್ತಿ ಈಗ ಹೇಳಿದ್ದಾನೆ ಗೊತ್ತಾ?

ಮೊದಲ YouTube ವೀಡಿಯೊವನ್ನು ಏಪ್ರಿಲ್ 23, 2005 ರಂದು ಅಪ್‌ಲೋಡ್ ಮಾಡಲಾಗಿದೆ. ಅದು ಅಪ್ ಲೋಡ್ ಆಗಿ ಸುಮಾರು 15 ವರ್ಷಗಳು ಹೆಚ್ಚಾಗಿದೆ.  ಇದನ್ನು ಅಪ್  ಲೋಡ್ ಮಾಡಿದ ವ್ಯಕ್ತಿ ಇದು  ಯೂಟ್ಯೂಬ್ ಸಹ-ಸಂಸ್ಥಾಪಕ. ಹೌದು  ಜಾವೇದ್ ಕರೀಮ್ ಅವರು 18 ಸೆಕೆಂಡುಗಳ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, “Me at the zoo” ಶೀರ್ಷಿಕೆಯಡಿಯಲ್ಲಿ ಅಪ್ ಲೋಡ್  ಮಾಡಿದ್ದರು . ಆ ವಿಡಿಯೋ ಇಂದಿಗೆ  90 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇಂದಿಗೂ ಇದು ಕರೀಮ್‌ನ ಚಾನೆಲ್‌ನಲ್ಲಿರುವ ಏಕೈಕ ವೀಡಿಯೊವಾಗಿದೆ.

ಯೂಟಬ್ ಅಲ್ಲಿಂದ ಇಲ್ಲಿಯವರೆಗೆ ಕೋಟಿ ಕೋಟಿ ವೀಕ್ಷಕರನ್ನು ಪಡೆದುಕೊಂಡಿದೆ. ಯೂಟಬ್  ಇಂದು ಜಗತ್ತಿನ ಮನುಷ್ಯ ಜೀವಿಗೆ ಒಂದು ಮಾಹಿತಿ ಗ್ರಂಥದಂತೆ ಆಗಿದೆ. ಪ್ರತಿಯೊಬ್ಬರಿಗೂ ಬೇಕಾದ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡುತ್ತದೆ.  ಹಾಗಾಗಿ ಯೂಟಬ್ ನಲ್ಲಿ ಎಲ್ಲ ಮಾಹಿತಿಯನ್ನು ನೀಡುವುದರ ಜೊತೆಗೆ ಲಕ್ಷಾಂತರ ಜನರಿಗೆ ಯೂಟಬ್ ಚಾನಲ್  ಮಾಡಲು ಅವಕಾಶವನ್ನು ನೀಡಿದೆ. ಜೊತೆಗೆ ಸಂಪಾದನೆಗೆ ವೇದಿಕೆಯು ಆಗಿದೆ.

Published On - 6:18 pm, Thu, 3 March 22