ಸೈಡ್‌ಗೋಗಿ ಬಂದೇ ಬಿಡ್ತು ಸ್ಟೈಲಿಶ್‌ ಸೂಪರ್ ಬೈಕ್, ರೇಟ್ ಕೇಳಿದ್ರೆ ದಂಗಾಗಿ ಬಿಡ್ತೀರಾ!

| Updated By: ಆಯೇಷಾ ಬಾನು

Updated on: Nov 23, 2020 | 11:51 AM

ಖ್ಯಾತ ಡುಕಾಟಿ ಬೈಕ್ ಕಂಪನಿ ತನ್ನ ಹೊಸ ಮಾಡೆಲ್ ಡುಕಾಟಿ ಪ್ಯಾನಿಗೇಲ್ ವಿ2 ಬೈಕ್ ಅನ್ನು ಭರ್ಜರಿಯಾಗಿಯೇ ಬಿಡುಗಡೆ ಮಾಡುತ್ತಿದೆ. ಈ ಸಂಬಂಧ ಬೈಕ್ ಪ್ರಿಯರಿಗೆ ಈ ಹೊಸ ಮಾಡೆಲ್ ಖರೀದಿಸಲು ಆಡ್ವಾನ್ಸ್ ಬುಕಿಂಗ್ ಪ್ರಾರಂಭಿಸಿದೆ. ಇದಕ್ಕಾಗಿ ಬೈಕ್ ಪ್ರಿಯರು ಕಟ್ಟಬೇಕಾಗಿರೋದು ಕೇವಲ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಮಾತ್ರ. ಹೌದು ರೇಸ್ ಬೈಕ್ ಎಂದೇ ಖ್ಯಾತಿಯಾಗಿರುವ ಡುಕಾಟಿ ಪ್ಯಾನಿಗೇಲ್ ಬೈಕ್ ಈಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಆಡ್ವಾನ್ಸ್ ಬುಕ್ಕಿಂಗ್ಸ್ ಆರಂಭವಾಗಿದೆ. ಭಾರತದಲ್ಲಿ ಬಿಎಸ್-VI ಮಾಡೆಲ್ ಮೋಟರ್ ಸೈಕಲ್ […]

ಸೈಡ್‌ಗೋಗಿ ಬಂದೇ ಬಿಡ್ತು ಸ್ಟೈಲಿಶ್‌ ಸೂಪರ್ ಬೈಕ್, ರೇಟ್ ಕೇಳಿದ್ರೆ ದಂಗಾಗಿ ಬಿಡ್ತೀರಾ!
Follow us on

ಖ್ಯಾತ ಡುಕಾಟಿ ಬೈಕ್ ಕಂಪನಿ ತನ್ನ ಹೊಸ ಮಾಡೆಲ್ ಡುಕಾಟಿ ಪ್ಯಾನಿಗೇಲ್ ವಿ2 ಬೈಕ್ ಅನ್ನು ಭರ್ಜರಿಯಾಗಿಯೇ ಬಿಡುಗಡೆ ಮಾಡುತ್ತಿದೆ. ಈ ಸಂಬಂಧ ಬೈಕ್ ಪ್ರಿಯರಿಗೆ ಈ ಹೊಸ ಮಾಡೆಲ್ ಖರೀದಿಸಲು ಆಡ್ವಾನ್ಸ್ ಬುಕಿಂಗ್ ಪ್ರಾರಂಭಿಸಿದೆ. ಇದಕ್ಕಾಗಿ ಬೈಕ್ ಪ್ರಿಯರು ಕಟ್ಟಬೇಕಾಗಿರೋದು ಕೇವಲ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ಮಾತ್ರ.

ಹೌದು ರೇಸ್ ಬೈಕ್ ಎಂದೇ ಖ್ಯಾತಿಯಾಗಿರುವ ಡುಕಾಟಿ ಪ್ಯಾನಿಗೇಲ್ ಬೈಕ್ ಈಗ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು ಆಡ್ವಾನ್ಸ್ ಬುಕ್ಕಿಂಗ್ಸ್ ಆರಂಭವಾಗಿದೆ. ಭಾರತದಲ್ಲಿ ಬಿಎಸ್-VI ಮಾಡೆಲ್ ಮೋಟರ್ ಸೈಕಲ್ ಪೈಕಿ ಪ್ಯಾನಿಗೇಲ್ V2 ನೂತನ ಮಾಡೆಲ್ ಆಗಿದೆ. ಈ ಮೊದಲಿದ್ದ ಡುಕಾಟಿ ಪ್ಯಾನಿಗೇಲ್-959ನ ಹೊಸ ಅಪ್‌ಡೇಟೆಡ್ ರೂಪವಾಗಿರುವ ಪ್ಯಾನಿಗೇಲ್ V2 ಅನ್ನು ಕಳೆದ ವರ್ಷವೇ ವಿಶ್ವಾದ್ಯಂತ ಪರಚಯಿಸಲಾಗಿತ್ತು.

ಆದ್ರೆ ಭಾರತದಲ್ಲಿ ಈಗ ಪರಿಚಯಿಸುತ್ತಿದ್ದು, ಈ ಸಂಬಂಧ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸಲಾಗಿದೆ. ಮೊದಲ ಹಂತವಾಗಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಕೊಲ್ಕತಾ, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್, ಕೊಚ್ಚಿ ಮತ್ತು ಪುಣೆಗಳಲ್ಲಿ ಬುಕ್ಕಿಂಗ್ ತೆರೆಯಲಾಗಿದೆ. ಬೈಕ್ ಪ್ರಿಯರಿಗೆ ಈ ಮಹಾನಗರಗಳಲ್ಲಿ ಶೀಘ್ರದಲ್ಲಿಯೇ ಲಭ್ಯವಾಗಲಿವೆ.

ಆಧುನಿಕ ಜಗತ್ತಿನ ಯುವ ಪೋರರನ್ನೇ ಗುರಿಯಾಗಿಸಿಕೊಂಡು ತಯಾರಾಗಿರುವ ಈ ಬೈಕ್ ಈಗಿನ ಯುವಕರಿಗೆ ಬೇಕಾದ ಎಲ್ಲ ಬಗೆಯ ತಂತ್ರಜ್ಞಾನವನ್ನ ಹೊಂದಿದೆ. ಸ್ಟೈಲೀಶ್‌ ಆಗಿದೆ, ಲುಕ್ ಚೆನ್ನಾಗಿದೆ, 155 ಹಾರ್ಸ್ ಪವರ್ ಹಾಗೂ ಆರು ಸೂಪರ್ ಸ್ಪೀಡ್ ಗೇರ್ ಬಾಕ್ಸ್‌ಗಳಿದ್ದು ನೋಡಲು ಕೂಡಾ ಸೂಪರ್ ಸೆಕ್ಸಿಯಾಗಿದೆ. ಈ ಹೊಸ ಪ್ಯಾನಿಗೇಲ್ V2 ಬೈಕ್ ನೋಡಿದ ಬೈಕ್ ಪ್ರಿಯ ಖರೀದಿಸದೇ ಇರಲಾರ ಹಾಗಿದೆ ಈ ಹೊಸ ಮಾಡೆಲ್.

ಅಂದ ಹಾಗೆ ಅಡ್ವಾನ್ಸ್ ಬುಕ್ ಮಾಡಲೇ ಒಂದು ಲಕ್ಷ ರೂಪಾಯಿ ಕಟ್ಟಬೇಕಾಗಿರುವ ಈ ಬೈಕ್ನ ಶೋರೂಮ್ ಬೆಲೆ ದೆಹಲಿಯಲ್ಲಿ 14,75,000 ರೂ.ಗಳು. ಇನ್ನು ಇತರ ನಗರಗಳಲ್ಲಿ ಶೋರೂಮ್ ಬೆಲೆ ಸುಮಾರು 15 ಲಕ್ಷದಿಂದ 15.5 ಲಕ್ಷದಷ್ಟಾಗಲಿದೆ. ಹೀಗಾಗಿ ಇದು ಶ್ರೀಮಂತ ಸವಾರರ ಕೈಗೆ ಮಾತ್ರ ಎಟುಕುವಂತಾಗಿದೆ.

Published On - 6:58 pm, Tue, 21 July 20