Back flip perfect landing.. ಸೀರೆಯಲ್ಲಿ ಬ್ಯಾಕ್ ಫ್ಲಿಪ್ ಜಂಪ್​, ನೆಟ್ಟಿಗರು ಫುಲ್ ಫಿದಾ!

ಸಾಮಾಜಿಕ ಜಾಲತಾಣಗಳು ಅನೇಕ ಪ್ರತಿಭೆಗಳಿಗೆ ಹೆಸರು- ಉಸಿರು ನೀಡಿವೆ. ಎಷ್ಟೂ ಪ್ರತಿಭೆಗಳ ಲಕ್ಕನ್ನು ಬದಲಾಯಿಸಿದೆ. ಅನೇಕರು ತಮ್ಮ ಕಲೆಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಫೇಸ್​ಬುಕ್, ಟ್ವಿಟರ್‌ ಮತ್ತು ಇತರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಇಲ್ಲಿ ಸೀರೆಯಲ್ಲೆ ಮಹಿಳೆಯೊಬ್ಬರು ಪಲ್ಟಿ ಹೊಡೆಯುವ ವಿಡಿಯೋ ಟ್ವಿಟರ್‌ನಲ್ಲಿ ಹಲ್ ಚಲ್ ಎಬ್ಬಿಸಿದೆ. ಇದು ಸ್ಲೋ ಮೋಷನ್ ವಿಡಿಯೋ ಆಗಿದ್ದು, ಗಾಳಿಯಲ್ಲಿ ಆ ಮಹಿಳೆ ಮಾಡಿದ ಫ್ಲಿಪ್ ಜಂಪ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. Back flip perfect landing! ಸದ್ಯ ಸಾಮಾಜಿಕ […]

Back flip perfect landing.. ಸೀರೆಯಲ್ಲಿ ಬ್ಯಾಕ್ ಫ್ಲಿಪ್ ಜಂಪ್​, ನೆಟ್ಟಿಗರು ಫುಲ್ ಫಿದಾ!
Follow us
ಆಯೇಷಾ ಬಾನು
|

Updated on:Jun 15, 2020 | 4:21 PM

ಸಾಮಾಜಿಕ ಜಾಲತಾಣಗಳು ಅನೇಕ ಪ್ರತಿಭೆಗಳಿಗೆ ಹೆಸರು- ಉಸಿರು ನೀಡಿವೆ. ಎಷ್ಟೂ ಪ್ರತಿಭೆಗಳ ಲಕ್ಕನ್ನು ಬದಲಾಯಿಸಿದೆ. ಅನೇಕರು ತಮ್ಮ ಕಲೆಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಫೇಸ್​ಬುಕ್, ಟ್ವಿಟರ್‌ ಮತ್ತು ಇತರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಅದೇ ರೀತಿ ಇಲ್ಲಿ ಸೀರೆಯಲ್ಲೆ ಮಹಿಳೆಯೊಬ್ಬರು ಪಲ್ಟಿ ಹೊಡೆಯುವ ವಿಡಿಯೋ ಟ್ವಿಟರ್‌ನಲ್ಲಿ ಹಲ್ ಚಲ್ ಎಬ್ಬಿಸಿದೆ. ಇದು ಸ್ಲೋ ಮೋಷನ್ ವಿಡಿಯೋ ಆಗಿದ್ದು, ಗಾಳಿಯಲ್ಲಿ ಆ ಮಹಿಳೆ ಮಾಡಿದ ಫ್ಲಿಪ್ ಜಂಪ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Back flip perfect landing! ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಮಹಿಳೆ ಸೀರೆ ತೊಟ್ಟು ಅದರಲ್ಲೇ ತುಂಬ ಸುಂದರವಾಗಿ ಹಾಗೂ ಸಲೀಸಾಗಿ ಫ್ಲಿಪ್ ಜಂಪ್ ಮಾಡಿದ್ದಾರೆ. ವಿಡಿಯೋ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೂ ಅದನ್ನು ಶೇರ್ ಮಾಡ್ತಿದ್ದಾರೆ.

ಸಂಗೀತಾ ವಾರಿಯರ್ ಎಂಬುವವರು ಈ ವಿಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಸೂಪರ್ ವುಮನ್ ಎಂದು ನೆಟ್ಟಿಗರು ಹೊಗಳಿದ್ಧಾರೆ.

ಈ ಮಧ್ಯೆ ವಿಡಿಯೋದಲ್ಲಿನ ಮಹಿಳೆ ಯಾರು ಎಂಬುದನ್ನು ಹುಡುಕುತ್ತಾ ಹೋದಾಗ.. ಆ ಮಹಿಳೆ ಟಿಕ್ ಟಾಕ್ ಪ್ರತಿಭೆ ಮಿಲಿ ಸರ್ಕಾರ್​ ಎಂದು ತಿಳಿದುಬಂದಿದೆ. ಈ ಅದ್ಭುತ ಜಂಪಿಂಗ್ ಮಾಡುವ ಮುನ್ನ ಮಿಲಿ ಸರ್ಕಾರ್ ನಡೆಸಿರುದ ಕಸರತ್ತು ಅಮೇಜಿಂಗ್ ಆಗಿದೆ. ನೀವೂ ನೋಡಿ..

Published On - 1:56 pm, Mon, 15 June 20