ದೇವರ ಆರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮಗಳು ಯಾವುವು?

|

Updated on: Apr 15, 2021 | 6:35 AM

ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.

ದೇವರ ಆರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ನಿಯಮಗಳು ಯಾವುವು?
ಸಂಗ್ರಹ ಚಿತ್ರ
Follow us on

ಹಿಂದೂ ಸಂಪ್ರದಾಯದ ಪ್ರಕಾರ, ಭಗವಂತನ ಪೂಜೆಗೆ ವಿಶೇಷ ಮಹತ್ವ ಇದೆ. ಭಗವಂತನನ್ನು ಆರಾಧಿಸೋದು ಅಂದ್ರೆ ಅದು ವಿಗ್ರಹಾರಾಧನೆ. ಕೆಲ ಪುರಾಣಗಳ ಪ್ರಕಾರ, ಸಾವಿರಾರು ವರ್ಷಗಳಿಂದಲೂ ಮುಕ್ಕೋಟಿ ದೇವತೆಗಳ ಪೈಕಿ ಒಂದೊಂದು ದೇವರಿಗೆ, ಒಂದೊಂದು ಮೂರ್ತಿ ರೂಪವನ್ನು ನೀಡಿ ಭಕ್ತಿ-ಭಾವದಿಂದ ಆರಾಧಿಸಿಕೊಂಡು ಬರಲಾಗಿದೆ. ಹಿಂದೂ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಮನೆಯಲ್ಲೂ ದೇವರ ಆರಾಧನೆಗೆ ಒಂದು ಪವಿತ್ರವಾದ ಸ್ಥಳ ಇರುತ್ತೆ. ಅಲ್ಲಿ ದೇವರ ಫೋಟೋ ಅಥವಾ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತೆ. ಮೂರ್ತಿಯನ್ನು ಇಟ್ಟು ಪೂಜಿಸುವಾಗ ಕೆಲವು ರೀತಿ-ನೀತಿಗಳನ್ನು ಹಾಗೂ ಧಾರ್ಮಿಕ ನಿಯಮಗಳನ್ನು ಅನುಸರಿಸಬೇಕು ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಹಾಗಾದ್ರೆ ವಿಗ್ರಹಾರಾಧನೆ ಮಾಡುವುದಕ್ಕೂ ಮೊದಲು ಪಾಲಿಸಬೇಕಾದ ಆ ನಿಯಮಗಳು ಯಾವುವು? ಅನ್ನೋದನ್ನು ಇಲ್ಲಿ ತಿಳಿಯಿರಿ.

ವಿಗ್ರಹಾರಾಧನೆಯ ನಿಯಮಗಳು
1.ವಿಗ್ರಹಾರಾಧನೆ ಮಾಡೋಕು ಮುನ್ನ ತಲೆಸ್ನಾನ ಮಾಡಬೇಕು.
2.ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಬೇಕು.
3.ನಂತರ ಹಣೆಗೆ ಕುಂಕುಮ ಇಡಬೇಕು.
4.ಹಾಲು, ಹಣ್ಣುಗಳನ್ನ ನೈವೇದ್ಯಕ್ಕಾಗಿ ತಂದಿಟ್ಟುಕೊಳ್ಳಬೇಕು.
5.ವಿಗ್ರಹಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
6.ವಿಗ್ರಹಗಳಿಗೆ ಅರಿಶಿನ, ಕುಂಕುಮ ಹಚ್ಚಬೇಕು.
7.ದೇವರ ವಿಗ್ರಹಗಳಿಗೆ ನೀರನ್ನು ಸಿಂಪಡಿಸಿದ ಹೂಗಳನ್ನು ಇಡಬೇಕು.
8.ದೇವರ ಪೂಜೆ ಮಾಡೋಕೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.
9.ಪೂಜೆ ಮಾಡೋಕೆ ನೆಲದ ಮೇಲೆ ಆಸನ ಹಾಕಿಕೊಂಡು ಕುಳಿತುಕೊಳ್ಳಬೇಕು.
10.ದೇವರ ಮುಂದೆ ದೀಪ ಹಚ್ಚಬೇಕು.
11.ಒಂದು ದೀಪದಿಂದ ಮತ್ತೊಂದು ದೀಪವನ್ನು ಹಚ್ಚಬಾರದು.
12.ಪ್ರತಿದಿನ ಪೂಜಿಸುವಾಗ ಪಂಚ ದೇವತೆಗಳಾದ ಸೂರ್ಯ, ಗಣೇಶ, ದುರ್ಗೆ, ಈಶ್ವರ ಹಾಗೂ ಮಹಾವಿಷ್ಣುವನ್ನು ತಪ್ಪದೇ ಸ್ಮರಿಸಬೇಕು.
13.ನಂತರ ಕುಲದೇವತೆಯನ್ನು ಪ್ರಾರ್ಥಿಸಬೇಕು.
14.ದೇವರಿಗೆ ಅಗರಬತ್ತಿ, ಧೂಪ, ದೀಪ, ಕರ್ಪೂರದಿಂದ ಬೆಳಗಿ ಶ್ರದ್ಧಾ ಭಕ್ತಿಯಿಂದ ನಮಿಸಬೇಕು.
15.ಭಗವಂತನಿಗೆ ಮಂಗಳಾರತಿ ಮಾಡಿ ಆರತಿಯನ್ನು ಕಣ್ಣಿಗೊತ್ತಿಕೊಳ್ಳಬೇಕು.
16.ಇಷ್ಟಾರ್ಥಗಳು ಈಡೇರಬೇಕೆಂದು ಭಗವಂತನಲ್ಲಿ ಭಕ್ತಿಯಿಂದ ಸಂಕಲ್ಪ ಮಾಡಿಕೊಳ್ಳಬೇಕು.
17.ಮನೆಯಲ್ಲಿ ಪೂಜಿಸುವ ದೇವರ ವಿಗ್ರಹಗಳು ಸಮ ಸಂಖ್ಯೆಯಲ್ಲಿರಬೇಕು.

ಈ ರೀತಿ ನಿಯಮಬದ್ಧವಾಗಿ ವಿಗ್ರಹಗಳಿಗೆ ಪ್ರತಿದಿನ ಸರಳವಾಗಿಯಾದರೂ ಪೂಜೆ ಮಾಡಿದ್ರೆ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಶುಭ ಫಲಗಳು ಉಂಟಾಗುತ್ತವೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ.
(How To Perform Puja or How To Worship God Idols)
ಇದನ್ನೂ ಓದಿ: ಶಕ್ತಿ ದೇವತೆ ಬನಶಂಕರಿಯ ಅಮ್ಮಗೆ ಯುಗಾದಿಯಂದು ವಿಶೇಷ ಪೂಜೆ