ಇಪ್ಪತ್ತರ ಭಾನು ಗಣಿತದಲ್ಲಿ ಶಕುಂತಲಾ ದೇವಿಯನ್ನೂ ಮೀರಿಸಿ ಬಾನೆತ್ತರಕ್ಕೆ ಹಾರಿದ್ದಾನೆ

|

Updated on: Aug 26, 2020 | 8:19 PM

ಚಿತ್ರದಲ್ಲಿರುವ ಯುವಕನನ್ನೊಮ್ಮೆ ನೋಡಿ. ಹೈದಾರಾಬಾದ್ ನಿವಾಸಿಯಾಗಿರುವ 20 ವರ್ಷ ವಯಸ್ಸಿನ ಈ ಯುವಕನ ಸಾಧನೆ ಏನು ಗೊತ್ತಾ? ಇವನು ವಿಶ್ವದಲ್ಲೇ ಅತಿವೇಗದ ಕ್ಯಾಲ್ಕುಲೇಟರ್. ಇವನು ಅಂತಿಂಥ ಕ್ಯಾಲ್ಕುಲೇಟರ್ ಅಲ್ಲ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕಂತಲಾ ದೇವಿ ಅವರಿಗಿಂತ ವೇಗದಲ್ಲಿ ಲೆಕ್ಕಗಳನ್ನು ಮಾಡುವ ಅಪ್ರತಿಮ ಕ್ಯಾಲ್ಕುಲೇಟರ್! ಇವನ ಹೆಸರು ನೀಲಕಂಠ ಭಾನು ಪ್ರಕಾಶ. ಕೆಲ ದಿನಗಳ ಹಿಂದೆ ಲಂಡನ್​ನಲ್ಲಿ ಮೈಂಡ್ ಸ್ಪೋರ್ಟ್ಸ್ ಒಲಂಪಿಯಾಡ್ ಆಯೋಜಿಸಿದ ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾನು ದೆಹಲಿಯ […]

ಇಪ್ಪತ್ತರ ಭಾನು ಗಣಿತದಲ್ಲಿ ಶಕುಂತಲಾ ದೇವಿಯನ್ನೂ ಮೀರಿಸಿ ಬಾನೆತ್ತರಕ್ಕೆ ಹಾರಿದ್ದಾನೆ
Follow us on

ಚಿತ್ರದಲ್ಲಿರುವ ಯುವಕನನ್ನೊಮ್ಮೆ ನೋಡಿ. ಹೈದಾರಾಬಾದ್ ನಿವಾಸಿಯಾಗಿರುವ 20 ವರ್ಷ ವಯಸ್ಸಿನ ಈ ಯುವಕನ ಸಾಧನೆ ಏನು ಗೊತ್ತಾ? ಇವನು ವಿಶ್ವದಲ್ಲೇ ಅತಿವೇಗದ ಕ್ಯಾಲ್ಕುಲೇಟರ್. ಇವನು ಅಂತಿಂಥ ಕ್ಯಾಲ್ಕುಲೇಟರ್ ಅಲ್ಲ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕಂತಲಾ ದೇವಿ ಅವರಿಗಿಂತ ವೇಗದಲ್ಲಿ ಲೆಕ್ಕಗಳನ್ನು ಮಾಡುವ ಅಪ್ರತಿಮ ಕ್ಯಾಲ್ಕುಲೇಟರ್!

ಇವನ ಹೆಸರು ನೀಲಕಂಠ ಭಾನು ಪ್ರಕಾಶ. ಕೆಲ ದಿನಗಳ ಹಿಂದೆ ಲಂಡನ್​ನಲ್ಲಿ ಮೈಂಡ್ ಸ್ಪೋರ್ಟ್ಸ್ ಒಲಂಪಿಯಾಡ್ ಆಯೋಜಿಸಿದ ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಭಾನು ದೆಹಲಿಯ ಸೆಂಟ್ ಸ್ಟೀಫೆನ್ಸ್ ಕಾಲೇಜಿನಿಂದ ಗಣಿತ ಶಾಸ್ತ್ರದಲ್ಲಿ ಪದವಿಯನ್ನು ಪೂರೈಸಿದ್ದಾನೆ.

ಬಾಲ್ಯದಲ್ಲೇ ಗಣಿತದ ಬಗ್ಗೆ ಅತೀವ ಆಸಕ್ತಿ ಬಳೆಸಿಕೊಂಡಿದ್ದ ಭಾನು ತನ್ನ ಕೌಶಲ್ಯತೆ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಎಸ್​ಐಪಿ ಅಬೇಕಸ್ ಪ್ರೊಗ್ರಾಮ್​ಗೆ ಸೇರಿದ್ದ. 2011 ಮತ್ತು 2012ರಲ್ಲಿ ರಾಷ್ರೀಯ ಅಬೇಕಸ್ ಚಾಂಪಿಯನ್ ಆದವನು ಮರುವರ್ಷ ಅಂದರೆ, 2103 ರಲ್ಲಿ ಅಂತರರಾಷ್ರೀಯ ಚಾಂಪಿಯನ್ ಕೂಡ ಆಗಿ ಹೊರಹೊಮ್ಮಿದ.

1997 ರಲ್ಲಿ ಆರಂಭಗೊಂಡು, ವರ್ಷಕ್ಕೊಮ್ಮೆ ನಡೆಯುವ ಮೆಂಟಲ್ ಕ್ಯಾಲ್ಕುಲೇಷನ್ ವರ್ಲ್ಡ್ ಚಾಂಪಿಯನ್​ಶಿಪ್ ಬೌದ್ಧಿಕ ಪರಿಣಿತಿಯನ್ನು ಒರಗೆ ಹಚ್ಚುವ ಹಲವಾರು ಬಗೆಯ ಸ್ಫರ್ಧೆಗಳನ್ನೊಳಗೊಂಡಿರುತ್ತದೆ. ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಪ್ರಸಕ್ತ ವರ್ಷದ ಚಾಂಪಿಯನ್​ಶಿಪ್ ಅನ್​ಲೈನ್​ ಮೂಲಕ ನಡೆಸಲಾಯಿತು.

13 ದೇಶಗಳ 30 ಸ್ಫರ್ಧಿಗಳನ್ನು ಹಿಂದಿಕ್ಕಿ ಭಾನು ಈ ಬಾರಿಯ ಚಾಂಪಿಯನ್​ಶಿಪ್ ಕಿರೀಟವನ್ನು ಧರಿಸಿದ್ದೂ ಅಲ್ಲದೆ, ಅತಿ ವೇಗದ ಮಾನವ ಕಂಪ್ಯೂಟರ್​ಗಳೆಂದು ಹೆಸರಾಗಿರುವ ಶಕುಂತಲಾ ದೇವಿ ಹಾಗೂ ಅಮೇರಿಕಾದ ಸ್ಕಾಟ್ ಫ್ಲ್ಯಾನ್ಸ್​ಬರ್ಗ್ ಅವರು ಹೊಂದಿದ್ದ ದಾಖಲೆಗಳನ್ನು ಉತ್ತಮಪಡಿಸಿ ಅವುಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡ.

ಭಾನು ದಾಖಲೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.‘‘ ದಾಖಲೆಗಳು ಶಾಶ್ವತವಲ್ಲ, ವೈಯಕ್ತಿಕ ಹಿರಿಮೆ ನನಗೆ ಇಷ್ಟವಾಗಲ್ಲ, ಮಾನವ ಕ್ಯಾಲ್ಕುಲೇಟರ್​ಗಳ ಒಂದು ಗಣಿತ ಶಾಸ್ರ ಸಮುದಾಯವನ್ನು ಬೆಳೆಸುವ ಯೋಚನೆ ನನಗಿದೆ,’’ ಎಂದು ಒಂದಿಷ್ಟೂ ಅಹಂ ತೋರದೆ ಅವನು ಹೇಳುತ್ತಾನೆ.