AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಯಾರ್​ ರೀ, ಲಂಡನ್​ ಲಂಡನ್​ ಲಂಡನ್! ದೆಹಲಿ to ಲಂಡನ್​ ಬಸ್​ ಸೇವೆ, ಯಾವಾಗ?

ಥುತ್​!.. ಈ ಹಾಳು ಕೊರೊನಾ ಬಂದು ನಮ್ಮ ಲೈಫೇ ಒಂಥರಾ ಲಾಕ್​ಡೌನ್​ ಆಗೋಯ್ತು. ಆಗಸದಲ್ಲಿ ಹಾರಾಡೋ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಟ್ರಿಪ್​, ಪಿಕ್​ನಿಕ್ ಅಂತಾ ಎಲ್ಲಾ ಕಡೆ ಸುತ್ತಾಡುತ್ತಿದ್ದ ನಮಗೆ ಇದೀಗ ಎಲ್ಲೂ ಹೋಗೋಕೆ ಆಗ್ತಿಲ್ಲ ಅಂತಾ ಬೇಜಾರು ಇದ್ರೆ ಚಿಂತೆ ಬೇಡ. ನಿಮಗಾಗಿ ಬಂದಿದೆ ಒಂದು ವಿನೂತನ ಟ್ರಿಪ್​. ಹೌದು, ಅಡ್ವೆಂಚರ್ಸ್​ ಓವರಲ್ಯಾಂಡ್​ ಅನ್ನೋ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿ ಪ್ರೇಮಿಗಳಿಗಾಗಿ ಒಂದು ವಿಭಿನ್ನ ಬಸ್​ ಸೇವೆಯನ್ನು ಮೇ 2021ರಿಂದ ಶುರು ಮಾಡ್ತಿದೆ. ಅದೂ ಅಂತಿಂಥ ಬಸ್​ […]

ಆ ಯಾರ್​ ರೀ, ಲಂಡನ್​ ಲಂಡನ್​ ಲಂಡನ್! ದೆಹಲಿ to ಲಂಡನ್​ ಬಸ್​ ಸೇವೆ, ಯಾವಾಗ?
KUSHAL V
| Edited By: ಸಾಧು ಶ್ರೀನಾಥ್​|

Updated on: Aug 27, 2020 | 6:44 PM

Share

ಥುತ್​!.. ಈ ಹಾಳು ಕೊರೊನಾ ಬಂದು ನಮ್ಮ ಲೈಫೇ ಒಂಥರಾ ಲಾಕ್​ಡೌನ್​ ಆಗೋಯ್ತು. ಆಗಸದಲ್ಲಿ ಹಾರಾಡೋ ಹಕ್ಕಿಗಳ ಹಾಗೆ ಸ್ವಚ್ಛಂದವಾಗಿ ಟ್ರಿಪ್​, ಪಿಕ್​ನಿಕ್ ಅಂತಾ ಎಲ್ಲಾ ಕಡೆ ಸುತ್ತಾಡುತ್ತಿದ್ದ ನಮಗೆ ಇದೀಗ ಎಲ್ಲೂ ಹೋಗೋಕೆ ಆಗ್ತಿಲ್ಲ ಅಂತಾ ಬೇಜಾರು ಇದ್ರೆ ಚಿಂತೆ ಬೇಡ. ನಿಮಗಾಗಿ ಬಂದಿದೆ ಒಂದು ವಿನೂತನ ಟ್ರಿಪ್​.

ಹೌದು, ಅಡ್ವೆಂಚರ್ಸ್​ ಓವರಲ್ಯಾಂಡ್​ ಅನ್ನೋ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿ ಪ್ರೇಮಿಗಳಿಗಾಗಿ ಒಂದು ವಿಭಿನ್ನ ಬಸ್​ ಸೇವೆಯನ್ನು ಮೇ 2021ರಿಂದ ಶುರು ಮಾಡ್ತಿದೆ. ಅದೂ ಅಂತಿಂಥ ಬಸ್​ ಅಲ್ಲ. ಈ ಬಸ್​ ಸೇವೆ ಇರೋದು ಬರೋಬ್ಬರಿ 20 ಸಾವಿರ ಕಿ.ಮಿ. ದೂರವಿರುವ ದೆಹಲಿ ಮತ್ತು ಲಂಡನ್​ ನಡುವೆ.

ಯೆಸ್​, ನೀವು ಸರಿಯಾಗೇ ಓದಿದ್ರೀ. ಅಡ್ವೆಂಚರ್ಸ್​ ಓವರಲ್ಯಾಂಡ್ ಕಂಪನಿಯು ಜಗತ್ತಿನ ಪ್ರಪ್ರಥಮ ಹಾಪ್​ ಆನ್​ ಹಾಪ್​ ಆಫ್​ ಬಸ್​ ಸೇವೆ (ಎಲ್ಲಿ ಬೇಕಾದ್ರು ಇಳಿದು ನಂತರ ಬರುವ ಬಸ್​ನ ಏರಬಹುದು) ಆರಂಭಿಸಲು ಮುಂದಾಗಿದೆ. ​ ಲಂಡನ್​ ಮತ್ತು ದೆಹಲಿ ನಡುವಿನ ಪ್ರಯಾಣವನ್ನು ಪ್ರತಿ ಬಸ್ 70 ದಿನಗಳಲ್ಲಿ ಪೂರ್ಣಗೊಳಿಸಲಿದೆ.

ಷರತ್ತುಗಳು ಅನ್ವಯ, ಯಾವುವು? ಎರಡು ಖಂಡ, 18 ದೇಶಗಳಲ್ಲಿ ಸಾಗುತ್ತಾ ಲಂಡನ್​ ತಲುಪುವ ಈ ಬಸ್​ ಸೇವೆ ಬಳಸಲು ಇಚ್ಛಿಸುವವರಿಗೆ ಚೀನಾ, ಮ್ಯಾನ್​ಮಾರ್​, ಉಜ್ಬೇಕಿಸ್ತಾನ, ತಜಿಕಿಸ್ತಾನ, ರಷ್ಯಾ, ಬೆಲ್ಜಿಯಂ, ಜರ್ಮನಿ ಹೀಗೆ ಮತ್ತಷ್ಟು ದೇಶಗಳನ್ನು ಸುತ್ತಾಡುವ ಅವಕಾಶ ಸಹ ನೀಡಲಾಗುವುದು. ಆದರೆ, ಕಂಪನಿಯ ಸಂಸ್ಥಾಪಕ ತುಷಾರ್​ ಅಗರ್​ವಾಲ್​ರ ಪ್ರಕಾರ ಈ ಬಸ್​ ಪ್ರವಾಸ ಕೈಗೊಳ್ಳಲು ಕೆಲ ಷರತ್ತುಗಳು ಅನ್ವಯಿಸಲಿದೆ. ಅವು ಹೀಗಿವೆ.

1. ನಿಮ್ಮ ಪಾಸ್​ಪೋರ್ಟ್​ ಜನವರಿ 2020ರ ವರೆಗೆ ಸಿಂಧುತ್ವ ಹೊಂದಿರಬೇಕು 2. ಪಾಸ್​ಪೋರ್ಟ್​ನಲ್ಲಿ 20 ಹಾಳೆಗಳು ಖಾಲಿ ಇರಲೇಬೇಕು (10 ದೇಶಗಳ ವೀಸಾ ಪ್ರಕ್ರಿಯೆಗಾಗಿ)

ಅಷ್ಟೇ ಅಲ್ಲ, ಈ ಪ್ರವಾಸದಲ್ಲಿ ನೀವು 70 ದಿನಗಳ ಕಾಲ ಬಸ್​ನಲ್ಲೇ ಕೂತಿರಲ್ಲ. 25 ದಿನಗಳ ಕಾಲ ಟ್ರೆಕ್ಕಿಂಗ್​ ಹಾಗೂ ಪ್ರವಾಸಕ್ಕೆಂದು ಓಡಾಡಲು ಅವಕಾಶ ಸಹ ಇರುತ್ತದೆ.

ಜೊತೆಗೆ, 70 ದಿನಗಳ ಪ್ರಯಾಣವಾಗಿರೋದ್ರಿಂದ ಪ್ರತಿ ಬಸ್​ನಲ್ಲೂ ಉಚಿತ Wi-Fi, ಮೊಬೈಲ್​ ಚಾರ್ಜಿಂಗ್​ ವ್ಯವಸ್ಥೆ, ವೈಯಕ್ತಿಕ ಮನರಂಜನಾ ವ್ಯವಸ್ಥೆ, ಉತ್ತಮ ಸೀಟಿಂಗ್​ ಮತ್ತು ತಿಂಡಿ ಪಾನೀಯಗಳನ್ನು ತಂಪಾಗಿರಿಸಲು ಫ್ರಿಡ್ಜ್​ ಸೇರಿದಂತೆ ಮತ್ತಷ್ಟು ಸವಲತ್ತುಗಳನ್ನು ನೀಡಲಿದ್ದಾರೆ. ಓಹ್​, ಅಂದ ಹಾಗೆ, ಈ ಬಸ್​ನ ಟಿಕೆಟ್​ ದರ 15 ಲಕ್ಷ ರೂಪಾಯಿ, ಅಷ್ಟೇ!

https://www.instagram.com/p/CD5YzcGpGHX/

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!