ಮಹಿಳಾ ಅಧಿಕಾರಿಗೆ ಕೊಡೋ ಗೌರವ ಇದೇನಾ? ಪ್ರತಿಭಟನೆಕಾರರ ನಡವಳಿಕೆಗೆ ಹಾಸನ ಡಿಸಿ ಬೇಸರ
ಹಾಸನದ ಬೇಲೂರಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನದ ಅಂತರದಲ್ಲಿ ಇಬ್ಬರು ಬಲಿಯಾಗಿದ್ದಾರೆ.ತಾಲೂಕು ಆಸ್ಪತ್ರೆ ಎದುರು ಸಾವಿರಾರು ಜನ ಜಮಾಯಿಸಿ ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅಲ್ಲದೇ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೂ ಸಹ ಪ್ರತಿಭಟನೆಕಾರರು ಏಕವಚನದಲ್ಲಿ ಬೈದು ತಮ್ಮ ಆಕ್ರೋಶ ಹಾಕಿದ್ದಾರೆ. ಇನ್ನೊಂದೆಡೆ ಪ್ರತಿಭಟನೆಕಾರರ ಮಾತಿನಿಂದ ಡಿಸಿ ಲತಾ ಕುಮಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನ, ನವೆಂಬರ್ 26: ಹಾಸನದ ಬೇಲೂರಿನಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನದ ಅಂತರದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಒಬ್ಬರ ಸಾವಿನ ನೋವು ಮಾಸುವ ಮುನ್ನವೇ ಮತ್ತೊಂದು ಜೀವ ಬಲಿಯಾಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.. ನಿನ್ನೆವರೆಗೂ ಶವವಿಟ್ಟು ಪ್ರತಿಭಟನೆ ನಡೆಸಿದ್ದ ಜನ, ಇಂದು (ನವೆಂಬರ್ 16 ಮತ್ತೊಂದು ಸಾವಿನಿಂದ ಕೆರಳಿದ್ದು, ತಾಲೂಕು ಆಸ್ಪತ್ರೆ ಎದುರು ಸಾವಿರಾರು ಜನ ಜಮಾಯಿಸಿ ರಸ್ತೆ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಅಲ್ಲದೇ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೂ ಸಹ ಪ್ರತಿಭಟನೆಕಾರರು ಏಕವಚನದಲ್ಲಿ ಬೈದು ತಮ್ಮ ಆಕ್ರೋಶ ಹಾಕಿದ್ದಾರೆ.
ಹಫೀಜ್ ರೆಹಾಮಾನ್ರನ್ನ ಬೇಲೂರು ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ನೋಡಿ ಹಫೀಜ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಆಗ ಜನ ಮರಣೋತ್ತರ ಪರೀಕ್ಷೆಗೆ ಕೊಡಲ್ಲ ಎಂದಿದ್ದಾರೆ. ಆದರೆ ಡಿಸಿ ನನಗೆ ಕರೆ ನಿಮ್ಮ ವಿರುದ್ಧ ಕೇಸ್ ಹಾಕ್ತೇನೆ ಅಂತಾರೆ ಎಂದು ರೈತ ಹೋರಾಟಗಾರ ಸ್ವಾಮಿಗೌಡ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಯನ್ನ ಮೊದಲ ಜಿಲ್ಲೆಯಿಂದ ವರ್ಗಾವಣೆ ಮಾಡಿಸಿ. ಅವಳನ್ನು ಹೇಗೆ ಓಡಿಸಬೇಕು ಎಂದು ನನಗೆ ಗೊತ್ತಿದೆ ಎಂದು ಜಿಲ್ಲಾಧಿಕಾರಿ ಎದುರೇ ಏಕವಚನದಲ್ಲಿ ಕಿಡಿಕಾರಿದ್ದಾರೆ.ಸ್ವಾಮಿಗೌಡ ಮಾತಿಗೆ ಕೆರಳಿ ಕೆಂಡವಾದ ಡಿಸಿ ಲತಾ ಕುಮಾರ್, ಏನ್ರಿ ಅವರು ಅವ್ಯಾಚ್ಚ ಶಬ್ದಗಳಿಂದ ಮಾತಾಡ್ತಾರೆ ಎಂದು ಗರಂ ಆದರು. ಈ ವೇಳೆ ಕಲವರು ಡಿಸಿ ಲತಾ ಕುಮಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದಿ ಡಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

