ಮಹಾಮಾರಿ ಕೊರೊನಾದ ಎರಡನೇ ಅಲೆ ಇಡೀ ದೇಶವನ್ನು ಮಂಕಾಗಿಸಿದೆ. ಕೊರೊನಾ ಹೊಡೆತಕ್ಕೆ ಜನ ನಲುಗಿದ್ದಾರೆ. ಲಾಕ್ಡೌನ್ ಹೇರಿದ್ರೂ ಸೋಂಕಿತರ ಮತ್ತು ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಇಂತಹ ಗಂಭೀರ ಸಮಯದಲ್ಲಿ ನಾವು ನಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇರುತ್ತದೆ. ಈ ಸಮಯದಲ್ಲಿ ವೈರಸ್ ಜನರ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಮತ್ತು ಉಸಿರಾಟದ ತೊಂದರೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ನಮಗಿರುವ ಒಂದೇ ದಾರಿಯಾಗಿದೆ. ಆದ್ದರಿಂದ ವಿಶ್ವ ಹಾಲಿನ ದಿನವಾದ ಇಂದು ನಾವು ನಿಮಗೆ ಹಾಲಿನಿಂದ ಆರೋಗ್ಯ ವೃದ್ಧಿಯಾಗುವ ಬಗ್ಗೆ ತಿಳಿಸಿಕೊಡಲಿದ್ದೇವೆ.
ಕೊರೊನಾ ಕಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ. ಮತ್ತು ಅದನ್ನು ಮಾಡಲು ಉತ್ತಮ ಮಾರ್ಗವೆಂದರೆ ನೀವು ದಿನವಿಡೀ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ನಿಗಾ ಇಡುವುದು. ತರಕಾರಿಗಳು, ದ್ವಿದಳ ಧಾನ್ಯಗಳಿಂದ ಹಿಡಿದು ಆರೋಗ್ಯಕರ ಡೈರಿ ಉತ್ಪನ್ನಗಳವರೆಗೆ, ಒಬ್ಬರು ತಮ್ಮ ಆಹಾರದಲ್ಲಿ ಎಲ್ಲವನ್ನೂ ಸೇರಿಸಿಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಂದಾಗ ಹಾಲನ್ನು ಅತ್ಯುತ್ತಮ ಆಯ್ಕೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಪ್ರತಿ ಜೂನ್ 1 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಹಾಲಿನ ದಿನವಾದ ಇಂದು ನಾವು ನಿಮಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಡೈರಿ ಉತ್ಪನ್ನಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಹಾಲು: ಪುಟ್ಟ ಮಗುವಿನಿಂದ ವಯಸ್ಸಾದ ವಯಸ್ಕರವರೆಗೂ ಹಾಲು ಸಂಪೂರ್ಣ ಆಹಾರವಾಗಿ ಪರಿಗಣಿಸಲಾಗುತ್ತದೆ. ಇದು ವಿಟಮಿನ್ ಎ, ವಿಟಮಿನ್ ಡಿ, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ ಅದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೊಸರು: ತಜ್ಞರ ಪ್ರಕಾರ, ಪ್ರೋಬಯಾಟಿಕ್ ಭರಿತ ಮೊಸರು ಸೇವನೆಯಿಂದ ವಯಸ್ಕರಲ್ಲಿ ಕಾಣಿಸುವ ಅನೇಕ ಜ್ವರ ತರಹದ ಸೋಂಕುಗಳನ್ನು ನಿಯಂತ್ರಿಸಬಹುದು. ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್‌ನ ಅಂಶ ಸಮೃದ್ಧವಾಗಿದೆ, ಇದು ಪ್ರೋಬಯಾಟಿಕ್ ಆಗಿದೆ (ಇದು ಪ್ರಯೋಜನಕಾರಿ ಪ್ರಕಾರದ ಬ್ಯಾಕ್ಟೀರಿಯಾ ಎಂದೂ ಕರೆಯಲ್ಪಡುತ್ತದೆ) ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಚೀಸ್: ಫಿನ್‌ಲ್ಯಾಂಡ್‌ನ ತುರ್ಕು ವಿಶ್ವವಿದ್ಯಾಲಯದ ತಜ್ಞರು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಚೀಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಹಳ ಸಹಾಯಕವಾಗಿದೆ. ಇದರಲ್ಲಿ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಇರುವುದರಿಂದ ಅದು ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ ಎಂದು ಪರಿಗಣಿಸಲಾಗಿದೆ.
ಹಾಲು, ಚೀಸ್ ಮತ್ತು ಮೊಸರು ಸೇರಿದಂತೆ ಮೇಲೆ ತಿಳಿಸಲಾದ ಡೈರಿ ಆಹಾರಗಳಲ್ಲಿ ವಿಟಮಿನ್ ಎ ಮತ್ತು ಡಿ, ಪ್ರೋಟೀನ್‌ನಂತಹ ಪ್ರಮುಖ ಪೋಷಕಾಂಶಗಳಿವೆ, ಇದು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ವಿಟಮಿನ್ ಎ ಜಠರಗರುಳಿನ ಪ್ರದೇಶ ಮತ್ತು ಉಸಿರಾಟದ ವ್ಯವಸ್ಥೆಗಳ ಅಂಗಾಂಶಗಳಿಗೆ ಶಕ್ತಿ ನೀಡುತ್ತದೆ.
-ವಿಟಮಿನ್ ಡಿ ನಿಮ್ಮ ಜಠರಗರುಳಿನ ವ್ಯವಸ್ಥೆಯನ್ನು ಹಾಗೇ ಇರಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ದೇಹವನ್ನು ಶ್ವಾಸಕೋಶದ ಸೋಂಕಿನಿಂದ ರಕ್ಷಿಸುತ್ತದೆ.
-ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಾಗ ಚರ್ಮದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸತು ಸಹಾಯ ಮಾಡುತ್ತದೆ.
-ನಿಮ್ಮ ದೇಹ ವೇಗವಾಗಿ ಚೇತರಿಸಿಕೊಳ್ಳಲು ಮತ್ತು ದೇಹದ ಆಯಾಸ ದೂರು ಮಾಡಲು ಪ್ರೋಟೀನ್ ಸಹಾಯ ಮಾಡುತ್ತದೆ
ಇದನ್ನೂ ಓದಿ: World Milk Day 2021 ವಿಶ್ವ ಹಾಲು ದಿನ.. ಈ ದಿನದ ಮಹತ್ವ ನಿಮಗೆ ಗೊತ್ತೆ?