World Milk Day 2021 ವಿಶ್ವ ಹಾಲು ದಿನ.. ಈ ದಿನದ ಮಹತ್ವ ನಿಮಗೆ ಗೊತ್ತೆ?
ಅಂತಾರಾಷ್ಟೀಯ ಮಟ್ಟದಲ್ಲಿ ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಹಾಗೂ ಅರಿವು ಮೂಡಿಸಲು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 2001 ರಲ್ಲಿ ವಿಶ್ವ ಹಾಲು ದಿನವನ್ನು ಪ್ರತಿ ವರ್ಷ ಜೂನ್ 1 ರಂದು ಆಚರಿಸುವಂತಾಗಿದೆ.
ಮಹಾಮಾರಿ ಕೊರೊನಾ ಇಡೀ ದೇಶವನ್ನು ವ್ಯಾಪಿಸಿದೆ. ಇಂತಹ ಸಮಯದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಆರೋಗ್ಯಕರ ಮತ್ತು ಸಮತೋಲಿತ ಆಹಾರದಲ್ಲಿ ಹಾಲು ಒಂದು ಪ್ರಮುಖ ಭಾಗವಾಗಿದೆ. ವಿಶ್ವ ಹಾಲು ದಿನವನ್ನು ಆಚರಿಸಲು ಹಾಗೂ ಈ ದಿನದ ಮಹತ್ವವನ್ನು ತಿಳಿಯಲು ಇದೊಂದು ಬಳ್ಳೆಯ ಸರಿಯಾದ ಸಂದರ್ಭವಾಗಿದೆ. ಕಳೆದ ಕೆಲವು ವರ್ಷಗಳಿಂದ, ಭಾರತವು 150 ಮಿಲಿಯನ್ ಟನ್ ಉತ್ಪಾದನೆ ಮತ್ತು ದಿನಕ್ಕೆ 300 ಗ್ರಾಂ ಗಿಂತ ಹೆಚ್ಚು ತಲಾ ಲಭ್ಯತೆಯೊಂದಿಗೆ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಲ್ಲಿ ಒಂದಾಗಿದೆ.
ವಿಶ್ವ ಹಾಲು ದಿನದ ಇತಿಹಾಸ ಅಂತಾರಾಷ್ಟೀಯ ಮಟ್ಟದಲ್ಲಿ ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಹಾಗೂ ಅರಿವು ಮೂಡಿಸಲು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) 2001 ರಲ್ಲಿ ವಿಶ್ವ ಹಾಲು ದಿನವನ್ನು ಪ್ರತಿ ವರ್ಷ ಜೂನ್ 1 ರಂದು ಆಚರಿಸುವಂತಾಗಿದೆ.
ವಿಶ್ವ ಹಾಲು ದಿನದ ಮಹತ್ವ ವಿಶ್ವ ಹಾಲು ದಿನದಂದು, ಹಾಲು ಮತ್ತು ಡೈರಿ ಉತ್ಪನ್ನಗಳ ಸೇವನೆಯಿಂದ ಜನರಿಗೆ ಆಗುವ ಪ್ರಯೋಜನಗಳನ್ನು ವಿಶ್ವದಾದ್ಯಂತ ಉತ್ತೇಜಿಸಲು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಗುತ್ತೆ. ಇದರಲ್ಲಿ ಡೈರಿ ಒಂದು ಶತಕೋಟಿಗೂ ಹೆಚ್ಚು ಜನರ ಜೀವನೋಪಾಯವನ್ನು ಅವಲಂಬಿಸಿದೆ. ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಡೈರಿ ಕ್ಷೇತ್ರವು ಜಾಗತಿಕ ಆಹಾರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ, ಇದು ವಿಶ್ವದಾದ್ಯಂತದ ಅನೇಕ ಜನರಿಗೆ ಆರ್ಥಿಕ, ಪೌಷ್ಠಿಕಾಂಶ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡುತ್ತದೆ. ಭಾರತವು ಕೃಷಿ ರಾಷ್ಟ್ರವಾಗಿರುವುದರಿಂದ, ಇದು ದೇಶದ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಿರುವುದರಿಂದ ಈ ದಿನವು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
2021 ರ ಥೀಮ್ ಈ ವರ್ಷ, ವಿಶ್ವ ಹಾಲು ದಿನಾಚರಣೆಯಂದು ‘ಡೈರಿ ಕ್ಷೇತ್ರದಲ್ಲಿ ಸುಸ್ಥಿರತೆ ಮತ್ತು ಪರಿಸರ, ಪೋಷಣೆ ಮತ್ತು ಸಾಮಾಜಿಕ-ಆರ್ಥಿಕತೆಯನ್ನು ಸಬಲೀಕರಣಗೊಳಿಸುವುದರ ಮೇಲೆ ಕೇಂದ್ರೀಕರಿಸಲಾಗಿದೆ. ಡೈರಿಗೆ ಭವಿಷ್ಯವನ್ನು ಸೃಷ್ಟಿಸಲು ಸಹಾಯ ಮಾಡುವ ಮೂಲಕ ಡೈರಿ ಕೃಷಿಯನ್ನು ಜಗತ್ತಿಗೆ ಪುನಃ ಪರಿಚಯಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಹಾಲು ಮತ್ತು ಡೈರಿ ಉತ್ಪನ್ನಗಳನ್ನು ನಮ್ಮ ದಿನ ತಿನ್ಯದ ಆಹಾರದಲ್ಲಿ ಬಳಸುವ ಬಗ್ಗೆ ಪ್ರತಿವರ್ಷ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ವಿಶ್ವ ಹಾಲು ದಿನದಂದು ಮಾಡಲಾಗುತ್ತೆ.
ಹಾಲು ದಿನವನ್ನು ಪ್ರಪಂಚದಾದ್ಯಂತ ಹೇಗೆ ಆಚರಿಸಲಾಗುತ್ತದೆ? ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಈ ಬಾರಿ ಯಾವುದೇ ದೊಡ್ಡ ಈವೆಂಟ್ಗಳನ್ನು ಆಯೋಜನೆ ಮಾಡಿಲ್ಲ. ಆದರೆ ಗ್ಲೋಬಲ್ ಡೈರಿ ಪ್ಲಾಟ್ಫಾರ್ಮ್ ಹಲವಾರು ಅಭಿಯಾನಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಗಳು ಮೇ 29-31 ರಿಂದ ‘ಎಂಜಾಯ್ ಡೈರಿ ರ್ಯಾಲಿ’ಯೊಂದಿಗೆ ಪ್ರಾರಂಭವಾಗಿದೆ.
ಕೊರೊನಾ ವೈರಸ್ ಈ ದೇಶಕ್ಕೆ ಏಕಾಏಕಿ ದಾಳಿ ಮಾಡಿದೆ. ಜನ ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಈ ದಿನವನ್ನು ಅಗತ್ಯವಿರುವ ಜನರಿಗೆ ಹಾಲಿನ ಪ್ಯಾಕೆಟ್ಗಳನ್ನು ದಾನ ಮಾಡುವ ಮೂಲಕ ಆಚರಿಸಬೇಕು. ಹಾಲಿನಿಂದ ಸಿಗುವ ಪೌಷ್ಟಿಕಾಂಶಗಳ ಬಗ್ಗೆ ತಿಳಿದುಕೊಳ್ಳಬೇಕು.
ಹಾಲು ಕುಡಿಯುವುದರಿಂದ ಆರೋಗ್ಯ ಸುಧಾರಣೆ ಹಾಲು ಪೋಷಕಾಂಶಗಳಿಂದ ಕೂಡಿದೆ. ಹಾಲಿನಂದ ಮಾನವ ಶರೀರದ ಬೆಳವಣೆಗೆ ಹಾಗೂ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಹಾಲಿನ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.
1. ಪೌಷ್ಟಿಕಾಂಶ: ಹಾಲಿನಲ್ಲಿ ಸಸಾರಜನಕ, ಪ್ರೋಟಿನ್, ಜಿಡ್ಡು, ಸಕ್ಕರೆ ಮತ್ತು ಪಿಷ್ಟ-ಕಾರ್ಬೋಹೈಡ್ರೇಟ್, ಲವಣಗಳು, ಮಿನರಲ್, ಜೀವಸತ್ವಗಳು ಹಾಗೂ ನೀರಿನಾಂಶ ಇರುತ್ತದೆ. ಇದು ದೇಹದ ಆರೋಗ್ಯಕ್ಕೆ ಉತ್ತಮವಾದ ಆಹಾರ. ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿ ತರಲು ಮುಖ್ಯ ಅಂಶಗಳಾಗಿವೆ.
2. ಮೂಳೆಗಳ ಆರೋಗ್ಯಕ್ಕೆ ಪ್ರಯೋಜನಕಾರಿ: ಹಾಲು ಕುಡಿಯುವುದರಿಂದ ಮೂಳೆಗಳು ಸಧೃಡವಾಗಿರುತ್ತವೆ. ಹಾಳಿನಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್, ಮಿಟಮಿನ್-ಡಿ ಮಕ್ಕಳಲ್ಲಿ ಮೂಳೆ ಮತ್ತು ಹಲ್ಲುಗಳ ಬೆಳವಣೆಗೆಗೆ ಸಹಾಯ ಮಾಡುತ್ತೆ.
3. ಹಾಲು ಒಂದು ಬಹುಮುಖ ಘಟಕಾಂಶವಾಗಿದ್ದು ಅದನ್ನು ನಿಮ್ಮ ಆಹಾರಕ್ರಮದಲ್ಲಿ ಸುಲಭವಾಗಿ ಸೇರಿಸಬಹುದು. ಓಟ್ ಮೀಲ್, ಕಾಫಿ, ಸೂಪ್ ಸೇರಿದಂತೆ ಅನೇಕ ಆಹಾರ ಬಗೆಯ ಆಹಾರ ತಯಾರಿಸಲು ಇದನ್ನು ಬಳಸಬಹುದು. ಹಾಲಿನಿಂದ ಅನೇಕ ಉತ್ಪನ್ನಗಳನ್ನು ತಯಾರಿಸಬಹುದು. ಮುಖ್ಯವಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಚೀಸ್, ಪನ್ನೀರ್, ಪೇಡ, ಕುಂದ, ಐಸ್ಕ್ರೀಮ್ ಸೇರಿದಂತೆ ಅನೇಕ ಪದಾರ್ಥಗಳನ್ನು ಉತ್ಪಾದಿಸಿ ಪ್ರಯೋಜನ ಪಡೆಯಬವುದು.
ಇದನ್ನೂ ಓದಿ: Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು