ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅದರ ಗಾಂಭೀರ್ಯ, ಬೇಟೆಗೆ ಸಂಚು ರೂಪಿಸುವ ಕ್ರಮ ಮತ್ತು ಅದರ ಭವ್ಯತೆಯಿಂದ ಹೆಸರುವಾಸಿಯಾದ ಪ್ರಾಣಿ. ಇತ್ತೀಚಿನ ದಿನಗಳಲ್ಲಿ ಹುಲಿಯ ಸಂತತಿ ಅಳಿವಿನಂಚಿನಲ್ಲಿ ಸಾಗುತ್ತಿದೆ. ಈ ರಾಷ್ಟ್ರೀಯ ಪ್ರಾಣಿಯ ರಕ್ಷಣೆ ಮತ್ತು ಅದರ ಕುರಿತಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ದಿನ (International Tiger Day) ಆಚರಿಸಲಾಗುತ್ತದೆ. 2010ರಿಂದ ಹುಲಿಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದು ಈಗಾಗಲೇ ಹೇಳಲಾಗುತ್ತಿದ್ದು, ಅವುಗಳ ರಕ್ಷಣೆಗಾಗಿ ಹುಲಿ ಉಳಿಸಿ (Save Tiger) ಯಂತಹ ರಾಷ್ಟ್ರೀಯ ಮಟ್ಟದ ಅಭಿಯಾನಗಳು ನಡೆಸಲಾಗಿದೆ. ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡುಗಳ ನಾಶದಿಂದ ಹುಲಿಗಳ ಸಂಖ್ಯೆಗಳ ಇಳಿಮುಖವಾಗುತ್ತಿದೆ. ಜಗತ್ತಿನ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಾಣಲು ಸಿಗುತ್ತಿದ್ದು, 3,200 ಹುಲಿಗಳು ಮಾತ್ರ ಉಳಿದುಕೊಂಡಿವೆ. ಅಂತಾರಾಷ್ಟ್ರೀಯ ಈ ಹುಲಿ ದಿನ ಸಂದರ್ಭದಲ್ಲಿ ಅನೇಕ ದೇಶಗಳು ಹುಲಿಗಳ ರಕ್ಷಣೆಗೆ ಚರ್ಚಿಸುತ್ತಿದ್ದು, ವನ್ಯಜೀವಿ ಸಂರಕ್ಷಣೆಗೆ ಹಣ ಸಂಗ್ರಹ ಕೂಡ ಮಾಡಲಾಗುತ್ತಿದೆ. ಜೊತೆಗೆ ದತ್ತು ತೆಗೆದುಕೊಳ್ಳುವ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ.
ಇದನ್ನೂ ಓದಿ: International Friendship Day 2022: ಮಾನಸಿಕ ಆರೋಗ್ಯದ ಮೇಲೆ ಸ್ನೇಹ ಹೇಗೆ ಪರಿಣಾಮ ಬೀರುತ್ತೆ?
ಅಂತಾರಾಷ್ಟ್ರೀಯ ಹುಲಿ ದಿನ ಹಿನ್ನೆಲೆ:
ಜನರಲ್ಲಿ ಹುಲಿಗಳ ಬಗ್ಗೆ ಜಾಗೃತಿ ಮೂಡಿಸಲು 2010ರಂದು ರಷ್ಯಾದ ಸೇಂಟ್ ಪೀಟರ್ಬ್ಗನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ಸಮ್ಮೇಳನದಲ್ಲಿ ಹಲವು ದೇಶಗಳು 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
ಅಂತರಾಷ್ಟ್ರೀಯ ಹುಲಿ ದಿನದ ಮಹತ್ವ:
WWF ತಜ್ಞ ಡ್ಯಾರೆನ್ ಗ್ರೋವರ್ ಪ್ರಕಾರ, ಕಳೆದ 100 ವರ್ಷಗಳಲ್ಲಿ ಪ್ರಪಂಚವು 97 ಪ್ರತಿಶತ ಹುಲಿಗಳು ನಾಶವಾಗಿವೆ. ಒಂದು ಶತಮಾನದ ಹಿಂದೆ ಸುಮಾರು 100,000 ಹುಲಿಗಳಿಗೆ ಹೋಲಿಸಿದರೆ ಪ್ರಸ್ತುತ ಕೇವಲ 3,000 ಹುಲಿಗಳು ಜೀವಂತವಾಗಿವೆ. ವಿಶ್ವ ವನ್ಯಜೀವಿ ನಿಧಿ (WWF), ಪ್ರಾಣಿ ಕಲ್ಯಾಣಕ್ಕಾಗಿ ಅಂತಾರಾಷ್ಟ್ರೀಯ ನಿಧಿ (IFAW) ಮತ್ತು ಸ್ಮಿತ್ಸೋನಿಯನ್ ಕನ್ಸರ್ವೇಶನ್ ಬಯಾಲಜಿ ಇನ್ಸ್ಟಿಟ್ಯೂಟ್ (SCBI) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಕಾಡು ಹುಲಿಗಳ ಸಂರಕ್ಷಣೆಯಲ್ಲಿ ತೊಡಗಿವೆ.
ಇದನ್ನೂ ಓದಿ: World Nature Conservation Day 2022: ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಉದ್ದೇಶ, ಮಹತ್ವ, ಇತಿಹಾಸದ ಬಗ್ಗೆ ಮಾಹಿತಿ
ಅಂತರಾಷ್ಟ್ರೀಯ ಹುಲಿ ದಿನ 2022 ಥೀಮ್
2022 ರ ಅಂತಾರಾಷ್ಟ್ರೀಯ ಹುಲಿ ದಿನಾಚರಣೆಯ ಈ ವರ್ಷದ ಥೀಮ್ ಹುಲಿ ಸಂಖ್ಯೆಯನ್ನು ಹೆಚ್ಚಿಸಲು ಭಾರತವು ಪ್ರಾಜೆಕ್ಟ್ ಟೈಗರ್ನ್ನು ಪ್ರಾರಂಭಿಸಿದೆ. ವಿಶ್ವ ವನ್ಯಜೀವಿ ನಿಧಿ ಹುಲಿಯನ್ನು ದತ್ತು ಪಡೆದುಕೊಳ್ಳ ಬಯಸುವವರಿಗೆ ಸಹಕರಿಸುತ್ತದೆ. ಹುಲಿಗಳನ್ನು ರಕ್ಷಿಸಲು ಪ್ರಾದೇಶಿಕ ಜನರೊಂದಿಗೆ ಸಹಕರಿಸುವ ಉಪಕ್ರಮಗಳನ್ನು ಸಹ ಹೊಂದಿದ್ದು, ಮತ್ತು ಬೇಟೆಯಾಡುವಿಕೆ ಮತ್ತು ಅಕ್ರಮ ವ್ಯಾಪಾರದ ವಿರುದ್ಧ ಬಲವಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.
Published On - 7:54 am, Fri, 29 July 22