ಡಿಸೆಂಬರ್ 14 ಸೋಮವಾರ ಸೂರ್ಯಗ್ರಹಣ ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಸೂರ್ಯಗ್ರಹಣ. ಸೋಮವಾರ ಸಂಜೆ 7.30ಕ್ಕೆ ಆರಂಭವಾಗುವ ಸೂರ್ಯಗ್ರಹಣ ಮಂಗಳವಾರ ಮಧ್ಯರಾತ್ರಿ 12.23ಕ್ಕೆ ಮುಕ್ತಾಯವಾಗಲಿದೆ. ರಾತ್ರಿ 9.43ಕ್ಕೆ ಗ್ರಹಣವು ಉತ್ತುಂಗ ಸ್ಥಿತಿಯಲ್ಲಿರಲಿದೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಇದಾಗಿದ್ದು ಜೂನ್ 21ರಂದು ಮೊದಲ ಸೂರ್ಯಗ್ರಹಣ ಸಂಭವಿಸಿತ್ತು.
ಸಂಪೂರ್ಣ ಸೂರ್ಯಗ್ರಹಣ
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದು ಹೋದಾಗ ಸೂರ್ಯನ ಕಿರಣಗಳು ಭೂಮಿಗೆ ಮೇಲೆ ಬೀಳದಂತೆ ತಾತ್ಕಾಲಿಕ ತಡೆಯುಂಟಾಗುತ್ತದೆ. ಹೀಗೆ ಆದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಮೂರು ವಿಧದ ಸೂರ್ಯಗ್ರಹಣದಲ್ಲಿ ಮೂರು ವಿಧಗಳು; ಭಾಗಶಃ, ಸಂಪೂರ್ಣ ಮತ್ತು ವಾರ್ಷಿಕ.
ಸೂರ್ಯನ ವ್ಯಾಸದ ಮೇಲೆ ಚಂದ್ರನ ನೆರಳು ಎಷ್ಟು ಆವೃತವಾಗಿರುತ್ತದೆ ಎಂಬುದನ್ನು ಆಧರಿಸಿ ಭಾಗಶಃ ಅಥವಾ ಸಂಪೂರ್ಣ ಸೂರ್ಯಗ್ರಹಣ ಎಂದು ಹೇಳಲಾಗುತ್ತದೆ. ಭಾಗಶಃ ಅಥವಾ ವಾರ್ಷಿಕ ಸೂರ್ಯಗ್ರಹಣದ ಪ್ರಮಾಣ 0.0 ಮತ್ತು 1.0 ನಡುವೆ ಇರುತ್ತದೆ. ಅದೇ ವೇಳೆ ಸಂಪೂರ್ಣ ಸೂರ್ಯಗ್ರಹಣದ ಪ್ರಮಾಣವು 1.0ಗೆ ಸಮ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.
ಸೋಮವಾರ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣದ ಅವಧಿ 2 ನಿಮಿಷ 10 ಸೆೆಕೆಂಡ್ ಆಗಿದೆ.
ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?
ಜಗತ್ತಿನ ಹಲವು ಭಾಗಗಳಲ್ಲಿ ಈ ಸೂರ್ಯಗ್ರಹಣ ಗೋಚರಿಸಲಿದೆ. ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಮಾತ್ರ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಲಿದೆ. ಪೆಸಿಫಿಕ್ ಸಮುದ್ರ , ಅಂಟಾರ್ಟಿಕ ಮತ್ತು ದಕ್ಷಿಣ ಅಮೆರಿಕದ ದಕ್ಷಿಣ ಭಾಗಗಳಲ್ಲಿ ಮಾತ್ರ ಭಾಗಶಃ ಗ್ರಹಣ ಗೋಚರಿಸಲಿದೆ.
ಚಿಲಿಯ ಸ್ಯಾಂಟಿಗೊ , ಬ್ರೆಜಿಲ್ನ ಸಾವೊ ಪಾಲೊ, ಅರ್ಜೆಂಟಿನಾದ ಬೆನೊಸ್ ಐರಿಸ್, ಪೆರುವಿನ ಲಿಮಾ, ಉರುಗ್ವೆಯ ಮೊಂಟೆವಿಡಿಯೊ ಪೆರುಗ್ವೆಯ ಅಸನ್ಸಿಯನ್ ನಲ್ಲಿ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ.
Earth is a pretty special place in space. Sometimes, our planetary & celestial neighbors give us beautiful & unusual views from our home planet. Over the next few weeks, you’ll have the chance to sit back, look up, & take in multiple extraordinary sights. https://t.co/fell9Hm2Gg
— NASA Earth (@NASAEarth) December 11, 2020
ಸೂರ್ಯಗ್ರಹಣ ವೀಕ್ಷಣೆ ಹೇಗೆ?
ಚಿಲಿ ಮತ್ತು ಅರ್ಜೆಂಟಿನಾದಲ್ಲಿ ಡಿಸೆಂಬರ್ 14ರಂದು ಪೂರ್ಣ ಸೂರ್ಯಗ್ರಹಣ ಗೋಚರಿಸಲಿದ್ದು, ಬೆಳಗ್ಗೆ 9.40ರಿಂದ ನಾಸಾ ಲೈವ್ ಚಿತ್ರಗಳನ್ನು ಶೇರ್ ಮಾಡಲಿದೆ.