ಮೌಂಟ್ ಎವರೆಸ್ಟ್ (Mount Everest).. ಇದು ಪ್ರಪಂಚದ ಅತ್ಯುನ್ನತ ಶಿಖರ. ಒಮ್ಮೆಯಾದರೂ ಈ ಶಿಖರವನ್ನು ಏರಬೇಕು ಎಂಬುವುದು ಬಹುತೇಕ ಸಾಹಸಿಗಳ ಕನಸಾಗಿರುತ್ತೆ. ಇದಕ್ಕಾಗಿ ವರ್ಷಾನುಗಟ್ಟಲೆ ದೇಹ ದಂಡಿಸಿ, ತಯಾರಿ ನಡೆಸುವುದೂ ಉಂಟು. ಅಷ್ಟೇ ಅಲ್ಲ ಈ ಪರ್ವತ ತಲೆಮಾರುಗಳಿಂದ ವಿಜ್ಞಾನಿಗಳನ್ನೂ ಆಕರ್ಷಿಸುತ್ತಿದೆ. ಒಂದಷ್ಟು ರಹಸ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಈ ಪರ್ವತದಲ್ಲಿ ರಾತ್ರಿಯ ಸಮಯದಲ್ಲಿ ಪರ್ವತದ ಶಿಖರವನ್ನು ಸುತ್ತುವರೆದಿರುವ ಹಿಮನದಿಗಳಿಂದ ವಿಲಕ್ಷಣವಾದ ಶಬ್ದಗಳು ಕೇಳಿಬರುತ್ತದೆ ಎಂಬ ಮಾತಿದೆ. ಜೊತೆಗೆ ಪರ್ವತ ಏರುವಾಗ ಪರ್ವತಾರೋಹಿಗಳು ನಾಪತ್ತೆಯಾದ ಘಟನೆಗಳೂ ನಡೆದಿವೆ. ಇದೆಲ್ಲ ಒಂದು ಕಡೆಯಾದ್ರೆ ಮತ್ತೊಂದೆಡೆ ಈ ಪರ್ವತದ ಎತ್ತರವನ್ನು ಮೊಟ್ಟ ಮೊದಲ ಬಾರಿಗೆ ಅಳೆದದ್ದು ಭಾರತೀಯ (Radhanath Sikdar). ಆದ್ರೆ ಈ ಪರ್ವತಕ್ಕೆ ಹೆಸರು ಸಿಕ್ಕಿದ್ದು ಮಾತ್ರ ಓರ್ವ ಬ್ರಿಟಿಷ್ ಅಧಿಕಾರಿಯದ್ದು. ಪ್ರತಿ ವರ್ಷ ಮೇ 29 ರಂದು ಅಂತಾರಾಷ್ಟ್ರೀಯ ಎವರೆಸ್ಟ್ ದಿನವನ್ನು ಆಚರಿಸಲಾಗುತ್ತದೆ. 1953ರಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಸರ್ ಎಡ್ಮಂಡ್ ಹಿಲರಿ ಮತ್ತು ನೇಪಾಳದ ತೇನ್ಸಿಂಗ್ ನಾರ್ಗೆ ಶೆರ್ಪಾ ಅವರು ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಅಲ್ಲಿ 15 ನಿಮಿಷಗಳ ಕಾಲ ಸಮಯ ಕಳೆದು ಸಾಧನೆ ಮಾಡಿದ್ದರು. ಅವರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತೆ. ಆದರೆ ನಾವಿಲ್ಲಿ ಮುಖ್ಯವಾಗಿ ನೆನಪಿಸಿಕೊಳ್ಳಬೇಕಿರುವ ರಾಧಾನಾಥ್ ಸಿಕ್ದರ್ ಅವರನ್ನೇ ಮರೆತುಬಿಟ್ಟಿದ್ದೇವೆ. ಇತಿಹಾಸ ಕೂಡ ಭಾರತೀಯನ ಸಾಧನೆಯನ್ನು ಮರೆ ಮಾಚಿದೆ. ಭಾರತ ಅಳೆಯಲು ಮುಂದಾದ ಬ್ರಿಟಿಷರು ಅದು 1802. ಬ್ರಿಟಿಷರ ಆಳ್ವಿಕೆ ಸಮಯ. ಇಡೀ ಭಾರತವನ್ನು ಲೂಟಿ ಮಾಡಬೇಕೆಂಬ ಉದ್ದೇಶ ಹೊಂದಿದ್ದ ಬ್ರಿಟಿಷರು ಭಾರತದ ಅಧಿಕೃತ ನಕ್ಷೆ ತಯಾರಿಸಲು ಮುಂದಾಗುತ್ತಾರೆ. ಭಾರತದ ನಕ್ಷೆ...