
ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣು ಇದು! ಇದಕ್ಕೆ ರೇಷ್ಮೆ ಸೊಪ್ಪಿನ ಹಣ್ಣು, mulberry ಅಂತಲೂ ಕರೆಯುತ್ತಾರೆ. ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುವ ಕೋಲಾರ ಬಯಲುಸೀಮೆ ಸೇರಿದಂತೆ ಅನೇಕ ಕಡೆ ಕರ್ನಾಟಕದಲ್ಲಿ ಬೆಳೆಯುತ್ತಾರೆ.
mulberry ಅಥವಾ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು?
ಕಂಬಳಿ ಹಣ್ಣು ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಿಮಿನ್ ಸಿ ಅನ್ನು ಧಾರಾಳವಾಗಿ ಹೊಂದಿದೆ. ಜೊತೆಗೆ ಒಂದಷ್ಟು ಪೊಟ್ಯಾಷಿಯಂ ಹಾಗೂ ವಿಟಿಮಿನ್ ಇ -ವಿಟಿಮಿನ್ ಕೆ ಹೊಂದಿದೆ. ಇದನ್ನು ವೈನ್, ಜ್ಯೂಸ್, ಜ್ಯಾಮ್, ಚಹಾ ತಯಾರಿಕೆಯಲ್ಲಿ ಬಳಸುತ್ತಾರೆ. ಕ್ಯಾನ್ಸರ್ ಮತ್ತು ಮಧುಮೇಹ ಹೊಂದಿರುವವರಿಗೆ ಇದು ಉಪಯೋಗಿ.
Published On - 2:37 pm, Tue, 9 June 20