ಬೆಂಗಳೂರು: ‘ಇದು ನನ್ನ ದೇಶ, ಸದಾ ಚೆನ್ನಾಗಿರಬೇಕು, ಎಲ್ಲ ಭಾರತೀಯರು ಸುಖವಾಗಿರಬೇಕು’ ಎನ್ನುವುದು ಎಲ್ಲರ ಕನಸು. ಕೇವಲ ಕನಸು ಕಂಡರಷ್ಟೇ ಸಾಕೆ? ಈ ಕನಸು ಸಾಕಾರಗೊಳ್ಳಲು ನಮ್ಮ ಪರಿಶ್ರಮವೂ ಬೇಕಲ್ಲವೇ?
ಈ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರವನ್ನು ನಮ್ಮ ನಡುವಿನ ಹಲವರು ಈಗಾಗಲೇ ಕಂಡುಕೊಂಡಿದ್ದಾರೆ. ಮಾತ್ರವಲ್ಲ ತಮ್ಮದೇ ಆದ ರೀತಿಯಲ್ಲಿ ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ಇಂಥವರನ್ನು ಸಮಾಜಕ್ಕೆ ಪರಿಚಯಿಸುವ ಅಭಿಯಾನವನ್ನು ‘ಟಿವಿ9’ ಮಾಧ್ಯಮ ಸಮೂಹ ಆರಂಭಿಸಿದೆ.
ನನ್ನ ದೇಶಕ್ಕಾಗಿ ನಾನು ಇಂಥದ್ದೊಂದು ಕೆಲಸ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಲು ಪ್ರತಿದಿನವೂ ಶುಭದಿನವೇ. ನೀವು ಇಚ್ಛಿಸಿದ ಕರ್ತವ್ಯದ ಬಗ್ಗೆ ವಿಡಿಯೊ ಶೂಟ್ ಮಾಡಿ, Facebookನಲ್ಲಿ #MyIndiaMyDuty ಹ್ಯಾಷ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿ. @Tv9Kannada ಟ್ಯಾಗ್ ಮಾಡುವುದು ಮರೆಯದಿರಿ.
ಬನ್ನಿ ‘ನನ್ನ ದೇಶಕ್ಕಾಗಿ ನನ್ನ ಕರ್ತವ್ಯ’ ಘೋಷಿಸಿಕೊಳ್ಳೋಣ. ದೇಶದ ಹಿತಕ್ಕಾಗಿ ಶ್ರಮಿಸೋಣ. ಸಮಾಜದ ಹಿತಕ್ಕಾಗಿ, ನೀವಷ್ಟೇ ಅಲ್ಲ ನಿಮ್ಮ ಗೆಳೆಯ/ಗೆಳತಿಯರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆಯೂ ನೀವು ನಮ್ಮೊಂದಿಗೆ ವಿಡಿಯೊ ಹಂಚಿಕೊಳ್ಳಬಹುದು. ಇದು ನಿರಂತರ ನಡೆಯುವ ಅಭಿಯಾನ. ಒಳ್ಳೇ ಕೆಲಸ ಹಂಚಿಕೊಳ್ಳಲು ಕೊನೆಯ ದಿನದ ಗಡುವು ಇಲ್ಲ.
Published On - 10:47 am, Tue, 26 January 21