ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?

| Updated By:

Updated on: Jul 06, 2020 | 3:01 PM

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ! ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ […]

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?
Follow us on

ದೇಶಕ್ಕೆ ಮುಂಗಾರು ಕಾಲಿಟ್ಟಿದೆ. ಕೃಷಿ ಚಟುವಟಿಕೆಗಳು ಗರಿಗೆದರಿದೆ. ಇಷ್ಟು ದಿನ ಬೇಸಿಗೆಯ ಸುಡು ಬಿಸಿಲು ಮತ್ತು ಲಾಕ್​ಡೌನ್​ನಿಂದ ಮನೆಯಲ್ಲೇ ಕಾಲಕಳೆಯುತ್ತಿದ್ದ ಜನರಿಗೆ ಸುರಿಯುತ್ತಿರುವ ಜಿಟಿಜಿಟಿ ಮಳೆ ಮನಸ್ಸಿಗೆ ಮುದ ನೀಡಿದೆ. ಆದರೆ, ಮಳೆಯ ಸೊಬಗನ್ನು ಎಂಜಾಯ್​ ಮಾಡಲು ಮನೆಯಿಂದ ಹೊರ ಹೋಗುವ ಮುನ್ನ ಜೋಕೆ. ಹಾಗೆಯೇ, ನಮ್ಮ ರೈತಾಪಿ ವರ್ಗವೂ ಸಿಡಿಲಿನ ಹೊಡೆತಕ್ಕೆ ಸಿಕ್ಕಿ ನರಳಾಡುವುದು ಸಾಮಾನ್ಯ. ಸಿಡಿಲಿಗೆ ಹೆಚ್ಚು ಬಲಿಯಾಗುವವರು ತೋಟ-ಹೊಲಗಳಲ್ಲಿ ಬಟಾಬಯಲಿನಲ್ಲಿರುವ ರೈತರೇ!

ಯಾಕಂದ್ರೆ, ದೇಶದೆಲ್ಲೆಡೆ ಗುಡುಗು ಮತ್ತು ಸಿಡಿಲು ಸಹಿತ ಭಾರಿ ಮಳೆ ಸುರಿಯಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಹಾಗಾಗಿ, ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವು (National Disaster Management Authority) ಸಾರ್ವಜನಿಕರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸಿಡಿಲು ಮತ್ತು ಮಿಂಚಿನ ಆರ್ಭಟದ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಬಿಡುಗಡೆ ಮಾಡಿದೆ.

ಅಂತೆಯೇ ನಿಮ್ಮ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಗುಡುಗು ಮಳೆ ಸಂಭವಿಸುವಂತಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ.
1. ಮನೆಯಲ್ಲಿರುವ ಎಲ್ಲಾ ವಿದ್ಯುತ್​ ಉಪಕರಣಗಳ ಬಂದ್​ ಮಾಡಿ ಅವುಗಳ ಪ್ಲಗ್​ಗಳನ್ನ ಸಾಕೆಟ್​ನಿಂದ ಬಿಚ್ಚಿಡಿ
2. ಗುಡುಗಿನ ವೇಳೆ ಲ್ಯಾಂಡ್​ಲೈನ್​ ಫೋನ್​ಗಳನ್ನ ಬಳಸಬೇಡಿ
3. ಯಾವುದೇ ಕಬ್ಬಿಣದ ಸಾಮಾನು ಮುಟ್ಟಬೇಡಿ
4. ಹರಿಯುವ ನೀರನ್ನು ಬಳಸದಿರಿ
5. ಸುರಿವ ಮಳೆಯಿಂದ ತಪ್ಪಿಸಿಕೊಳ್ಳಲು ಮರಗಳ ಕೆಳಗಡೆ ಆಶ್ರಯ ಪಡೆಯಬೇಡಿ
6. ಗುಂಪುಗುಂಪಾಗಿ ನಿಲ್ಲದೆ, ಏಕಾಂಗಿಯಾಗಿ ನಿಲ್ಲುವುದು ಸೂಕ್ತ
7. ಉಕ್ಕು ಅಥವಾ ತಗಡಿನ ಶೀಟುಗಳಿರುವ ಮೇಲ್ಛಾವಣಿಗಳಿಂದ ದೂರವಿರಿ
8. ಯಾವುದೇ ಲೋಹದ ವಸ್ತುಗಳನ್ನ ಮುಟ್ಟಬೇಡಿ
9. ವಿದ್ಯುತ್​ ಮತ್ತು ಟೆಲಿಫೋನ್​​ ತಂತಿಗಳಿಂದ ದೂರವಿರಿ
10. ಆದಷ್ಟು ಮನೆಯೊಳಗೆ ಅಥವಾ ಕಟ್ಟಡ ಒಳಗೆ ಇರುವುದು ಸೂಕ್ತ
11. ಒಂದು ವೇಳೆ ಆಚೆಯಿದ್ದರೆ ನೆಲದ ಮೇಲೆ ಕೂರಬೇಡಿ

ಈ ಮೇಲ್ಕಂಡ ಕ್ರಮಗಳನ್ನು ಕೈಗೊಂಡರೆ ಯಾವುದೇ ಪ್ರಾಣಾಪಾಯವು ಎದುರಾಗೋದಿಲ್ಲ ಎಂದು ಪ್ರಾಧಿಕಾರವು ಹೇಳಿದೆ.

Published On - 2:51 pm, Mon, 6 July 20