AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣನಿಗೆ ಇಷ್ಟವಾದ ಗಿಡವನ್ನು ಅಯೋಧ್ಯೆಯಲ್ಲಿ ನೆಡಲಿದ್ದಾರೆ ಪ್ರಧಾನಿ ಮೋದಿ! ಏನಿದರ ಐತಿಹ್ಯ?

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಂಗುರಂಗಿನ ಸಿದ್ಧತೆ ಭರದಿಂದ ಸಾಗಿದೆ. ಭಾರೀ ಐತಿಹ್ಯ ವಿಶೇಷಗಳನ್ನೊಳಗೊಂಡಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ. ಮೊದಲು ರಾಮನ ಭಕ್ತ ಆಂಜನೇಯನಿಗೆ ಅಗ್ರ ಪೂಜೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಹುಮುಖ್ಯವಾದ ಪಾರಿಜಾತ ಗಿಡವನ್ನು ಪ್ರಧಾನಿ ಮೋದಿ ನೆಡಲಿದ್ದಾರೆ. ಅದಾದ ಬಳಿಕ ರಾಮಮಂದಿರ ಭೂಮಿ ಪೂಜೆ ನೆರವೇರಲಿದೆ. ಮಹಾಭಾರತದ ಪೂಜಾ ಹೂ ರಾಮನ ಅಂಗಳದಲ್ಲಿ! ಈ […]

ಕೃಷ್ಣನಿಗೆ ಇಷ್ಟವಾದ ಗಿಡವನ್ನು ಅಯೋಧ್ಯೆಯಲ್ಲಿ ನೆಡಲಿದ್ದಾರೆ ಪ್ರಧಾನಿ ಮೋದಿ! ಏನಿದರ ಐತಿಹ್ಯ?
ಸಾಧು ಶ್ರೀನಾಥ್​
|

Updated on:Aug 05, 2020 | 11:18 AM

Share

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಂಗುರಂಗಿನ ಸಿದ್ಧತೆ ಭರದಿಂದ ಸಾಗಿದೆ. ಭಾರೀ ಐತಿಹ್ಯ ವಿಶೇಷಗಳನ್ನೊಳಗೊಂಡಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ.

ಮೊದಲು ರಾಮನ ಭಕ್ತ ಆಂಜನೇಯನಿಗೆ ಅಗ್ರ ಪೂಜೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಹುಮುಖ್ಯವಾದ ಪಾರಿಜಾತ ಗಿಡವನ್ನು ಪ್ರಧಾನಿ ಮೋದಿ ನೆಡಲಿದ್ದಾರೆ. ಅದಾದ ಬಳಿಕ ರಾಮಮಂದಿರ ಭೂಮಿ ಪೂಜೆ ನೆರವೇರಲಿದೆ.

ಮಹಾಭಾರತದ ಪೂಜಾ ಹೂ ರಾಮನ ಅಂಗಳದಲ್ಲಿ! ಈ ಮಧ್ಯೆ ಕುತೂಹಲದ ಸಂಗತಿಯೆಂದ್ರೆ ಪಾರಿಜಾತವು ಮಹಾಭಾರತದ ಬರುವ ವಿಶೇಷ ಪೂಜಾ ಹೂ. ಇದು ರಾಮಾಯಣ ಐತಿಹ್ಯದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಹತ್ವ ಪಡೆದುಕೊಂಡಿರುವುದು ಸೋಜಿಗದ ಸಂಗತಿಯಾಗಿದೆ!

ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರ ಸಮುದ್ರದಿಂದ ಹುಟ್ಟಿದ 5 ಕಲ್ಪವೃಕ್ಷಗಳಲ್ಲಿ ಇದೂ ಒಂದು. ಪಂಚ ವೃಕ್ಷಗಳ ಪೈಕಿ ಉಳಿದ ನಾಲ್ಕು ವೃಕ್ಷಗಳೆಂದ್ರೆ ಮಂದಾರ, ಸಂತಾನ, ಕಲ್ಪವೃಕ್ಷ ಮತ್ತು ಹರಿಚಂದನ.

Godly Flower ಕೃಷ್ಣವತಾರ ಕಾಲದಲ್ಲಿ ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟಿದ ಎಂಬ ಮಹಾಭಾರತದ ಕಥೆಯಿದೆ. ಕೃಷ್ಣ ಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪಂಚಪ್ರಾಣ! ನೆಲದ ಮೇಲೆ ಬಿದ್ದರೂ ದೇವರಿಗೆ ಅರ್ಪಿಸಬಹುದಾದ ಏಕೈಕ ಹೂವು ಇದಾಗಿದೆ.

Published On - 8:28 pm, Tue, 4 August 20

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್