‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ

|

Updated on: Sep 02, 2020 | 6:43 PM

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ. ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ. ‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು […]

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ: ರೈನಾ
Follow us on

ಯುಎಇಯಿಂದ ತಮ್ಮ ದಿಢೀರ್ ನಿರ್ಗಮನದ ಬಗ್ಗೆ ಮೌನವಾಗಿದ್ದ ಚೆನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್​ಮನ್ ಸುರೇಶ್ ರೈನಾ, ಟ್ವೀಟ್​ಗಳ ಮೂಲಕ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ಆದರೆ, ತಾನು ಯಾಕೆ ವಾಪಸ್ಸು ಬಂದೆನೆನ್ನುವುದಕ್ಕೆ ಸ್ಪಷ್ಟೀಕರಣ ನೀಡಿಲ್ಲ.

ಮಂಗಳವಾರವಾರದಂದು ಮಾಡಿರುವ ಟ್ವೀಟ್​ನಲ್ಲಿ ಅವರು, ಶಂಕಿತ ದರೋಡೆಕೋರರಿಂದ ಹತ್ಯೆಗೊಳಗಾದ ತಮ್ಮ ಅಂಕಲ್, ಒಬ್ಬ ಕಸಿನ್ ಹಾಗೂ ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡು ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಅತ್ತೆ ಮತ್ತು ಇನ್ನೊಬ್ಬ ಕಸಿನ್ ಕುರಿತು ಮಾತಾಡಿದ್ದಾರೆ.

‘‘ಪಂಜಾಬ್​ನಲ್ಲಿ ನನ್ನ ಕುಟುಂಬದೊಂದಿಗೆ ನಡೆದಿದ್ದು ಘೋರಕ್ಕಿಂತ ಭಯಾನಕ. ನನ್ನ ಅಂಕಲ್ ಅವರನ್ನು ಪಶುವಿನಂತೆ ಹತ್ಯೆ ಮಾಡಲಾಗಿದೆ. ನನ್ನ ಬುವಾ (ಅತ್ತೆ) ಮತ್ತು ನನ್ನಿಬ್ಬರು ಕಸಿನ್​ಗಳು ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ದುರದೃಷ್ಟವಶಾತ್, ನನ್ನ ಒಬ್ಬ ಕಸಿನ್ ಕೂಡ ನಿನ್ನೆ ರಾತ್ರಿ ಜೀವದೊಂದಿಗೆ ಹೋರಾಡುತ್ತಾ ಪ್ರಾಣಬಿಟ್ಟ. ನನ್ನ ಬುವಾಳನ್ನು ಲೈಫ್ ಸಪೋರ್ಟ್ ಮೇಲಿರಿಸಲಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ,’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.

ರೈನಾ, ಪಂಜಾಬ್ ಪೊಲೀಸ್ ಹಾಗೂ ರಾಜ್ಯದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೂ ಮನವಿ ಸಲ್ಲಿಸಿದ್ದು, ಆದಷ್ಟ ಬೇಗ ಅಪರಾಧಿಗಳನ್ನು ಬಂಧಿಸಿದರೆ, ಕನಿಷ್ಠಪಕ್ಷ ಈ ಹೀನ ಕೃತ್ಯ ನಡೆಸಿದವಱರೆಂದು ಅಂತ ಗೊತ್ತಾಗುತ್ತದೆ ಎಂದಿದ್ದಾರೆ.

‘‘ಅಂದು ರಾತ್ರಿ ನಡೆದಿದ್ದೇನು ಅಂತ ನಮಗೆ ಇದುವರೆಗೆ ಗೊತ್ತಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಪಂಜಾಬ್ ಪೊಲೀಸ್​ಗೆ ವಿನಂತಿಸಿಕೊಳ್ಳುತ್ತೇನೆ. ಕನಿಷ್ಠಪಕ್ಷ ಇಂಥ ಭೀಕರ ಹಲ್ಲೆ ನಡೆಸಿದವಱರು ಅನ್ನೋದಾದರೂ ನಮಗೆ ಗೊತ್ತಾಗಬೇಕು. ಅವರು ಮತ್ತಷ್ಟು ಅಪರಾಧ ಕೃತ್ಯಗಳನ್ನೆಸಗದಂತೆ ತಡೆಯಬೇಕು@capt_amarinder’’ ಎಂದು ರೈನಾ ಟ್ವೀಟ್ ಮಾಡಿದ್ದಾರೆ.