ಕಲಿಯುಗದ ಅಂತ್ಯಕ್ಕೆ ಧರ್ಮ ಸಂಸ್ಥಾಪನೆಗಾಗಿ ಬಿಳಿ ಕುದುರೆ ಏರಿ ಬರಲಿದ್ದಾನೆ ಕಲ್ಕಿ!

ಭಗವಂತ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ, ಅದರ ಹಿಂದಿನ ರಹಸ್ಯದ ಬಗ್ಗೆ ಈಗಾಗಲೇ ಕೆಲ ವಿಶೇಷ ಬರಹಗಳಲ್ಲಿ ಹಂಚಿಕೊಳ್ಳಲಾಗಿದೆ. ಅದೇ ರೀತಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರದ ಬಗ್ಗೆ ಇಲ್ಲಿ ತಿಳಿಯಿರಿ. ಕಲಿಯುಗದಲ್ಲಿ ಅಧರ್ಮ, ಅನೀತಿ, ಜನರ ಪಾಪ ಕೃತ್ಯಗಳು ಹೆಚ್ಚಾದಾಗ ಭಗವಾನ್‌ ವಿಷ್ಣು ಕಲ್ಕಿಯ ಅವತಾರವೆತ್ತಿ ಬಂದು ಧರ್ಮ ಸಂಸ್ಥಾಪನೆ ಮಾಡ್ತಾನೆ ಅಂತಾ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ವಿಷ್ಣು ಪುರಾಣದ ಪ್ರಕಾರ ಕಲ್ಕಿಯ ಅವತಾರ ವಿಷ್ಣುವಿನ 25 ನೆಯ ಅವತಾರ ಎನ್ನಲಾಗಿದೆ. ಆದ್ರೆ ಗರುಡ […]

ಕಲಿಯುಗದ ಅಂತ್ಯಕ್ಕೆ ಧರ್ಮ ಸಂಸ್ಥಾಪನೆಗಾಗಿ ಬಿಳಿ ಕುದುರೆ ಏರಿ ಬರಲಿದ್ದಾನೆ ಕಲ್ಕಿ!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 02, 2020 | 3:58 PM

ಭಗವಂತ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ, ಅದರ ಹಿಂದಿನ ರಹಸ್ಯದ ಬಗ್ಗೆ ಈಗಾಗಲೇ ಕೆಲ ವಿಶೇಷ ಬರಹಗಳಲ್ಲಿ ಹಂಚಿಕೊಳ್ಳಲಾಗಿದೆ. ಅದೇ ರೀತಿ ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರದ ಬಗ್ಗೆ ಇಲ್ಲಿ ತಿಳಿಯಿರಿ. ಕಲಿಯುಗದಲ್ಲಿ ಅಧರ್ಮ, ಅನೀತಿ, ಜನರ ಪಾಪ ಕೃತ್ಯಗಳು ಹೆಚ್ಚಾದಾಗ ಭಗವಾನ್‌ ವಿಷ್ಣು ಕಲ್ಕಿಯ ಅವತಾರವೆತ್ತಿ ಬಂದು ಧರ್ಮ ಸಂಸ್ಥಾಪನೆ ಮಾಡ್ತಾನೆ ಅಂತಾ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ವಿಷ್ಣು ಪುರಾಣದ ಪ್ರಕಾರ ಕಲ್ಕಿಯ ಅವತಾರ ವಿಷ್ಣುವಿನ 25 ನೆಯ ಅವತಾರ ಎನ್ನಲಾಗಿದೆ. ಆದ್ರೆ ಗರುಡ ಪುರಾಣದ ಪ್ರಕಾರ ಕಲ್ಕಿ ಅವತಾರ ವಿಷ್ಣುವಿನ 10 ನೆಯ ಅವತಾರ ಎನ್ನಲಾಗುತ್ತೆ. ಅದೇ ರೀತಿ ಮತ್ಸ್ಯ ಪುರಾಣ, ಬ್ರಹ್ಮ ವೈವರ್ಥ ಪುರಾಣ, ಭಾಗವತ್ ಪುರಾಣ, ಭವಿಷತ್ ಪುರಾಣ, ಶ್ರೀ ವಾಯು ಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಕಲ್ಕಿಯ ಬಗ್ಗೆ ಉಲ್ಲೇಖವಿದೆ.

ಕಲ್ಕಿ ಪುರಾಣದಲ್ಲಿ ಕಲ್ಕಿಯ ಅವತಾರ ಯಾವಾಗ ಆಗುತ್ತೆ? ಹೇಗೆ ಆಗುತ್ತೆ? ಅವನು ಏನು ಮಾಡ್ತಾನೆ? ಅನ್ನೋದರ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗಿದೆ. ಇನ್ನು ಭಾಗವತ್ ಪುರಾಣದಲ್ಲಿ, ಕಲಿಯುಗದ ಅಂತ್ಯದಲ್ಲಿ ಅಧರ್ಮ ಮಿತಿ ಮೀರಿದಾಗ ಧರ್ಮ ಸ್ಥಾಪನೆಗಾಗಿ ಕಲ್ಕಿ ಅವತಾರ ಎತ್ತುತ್ತಾನೆ ಅಂತಾ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ ಕಲ್ಕಿ ಹೇಗೆ ಯಾವ ಸಮಯದಲ್ಲಿ ಜನ್ಮ ತಾಳುತ್ತಾರೆ ಅನ್ನೋ ಮಾಹಿತಿಯನ್ನು ನೀಡಲಾಗಿದೆ.

ಭಾಗವತ್ ಪುರಾಣದ ಪ್ರಕಾರ, ಕಲಿಯುಗದ ಅಂತ್ಯದ ವೇಳೆ, ಹಿಮಾಲಯದ ತಪ್ಪಲಿನಲ್ಲಿರುವ ಶಾಂಬಲಾ ಅನ್ನೋ ಗ್ರಾಮದಲ್ಲಿ ವಿಷ್ಣುವೇಶ್ ಅನ್ನೋ ಬ್ರಾಹ್ಮಣನಿಗೆ ಕಲ್ಕಿ ಮಗನಾಗಿ ಜನಿಸ್ತಾನೆ ಎನ್ನಲಾಗಿದೆ. ಭಗವಾನ್‌ ಮಹಾವಿಷ್ಣು ಶ್ರಾವಣ ಮಾಸದ, ಶುಕ್ಲ ಪಕ್ಷದ, ಷಷ್ಠಿ ತಿಥಿಯಂದು ವಿಷ್ಣುವೇಶ್ ಹಾಗೂ ಆತನ ಪತ್ನಿ ಸುಮತಿಯ ಮಗನಾಗಿ ಕಲ್ಕಿಯ ಅವತಾರವೆತ್ತಿ ಬರ್ತಾನೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕಲ್ಕಿಯ ಅವತಾರ ನಿಷ್ಕಳಂಕ ಅವತಾರ ಅಂತಾ ಪ್ರಸಿದ್ಧಿ ಪಡೆದು, ಎಲ್ಲಾ 64 ಕಲೆಗಳು ಈ ಅವತಾರದಲ್ಲಿ ಕಂಡುಬರಲಿವೆ ಅಂತಾ ಪುರಾಣಗಳು ಹೇಳುತ್ತವೆ. ಇದಿಷ್ಟೇ ಅಲ್ಲದೇ ಪುರಾಣಗಳಲ್ಲಿ ಕಲ್ಕಿಯ ಸಹೋದರರು, ಕುಟುಂಬ ಹಾಗೂ ಮಕ್ಕಳ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಪುರಾಣಗಳ ಪ್ರಕಾರ, ಕಲ್ಕಿಗೆ 3 ಜನ ಅಣ್ಣಂದಿರಿದ್ದು, ಅವರ ಹೆಸರು ಸುಮನ್, ಕವಿ ಹಾಗೂ ಪ್ರಗ್ಯಾನ್ ಅಂತಾ ಹೇಳಲಾಗಿದೆ. ಕಲ್ಕಿಗೆ ಪದ್ಮ ಹಾಗೂ ರಮಾ ಅನ್ನೋ ಇಬ್ಬರು ಪತ್ನಿಯರು ಇದ್ದಾರೆ. ಆ ಇಬ್ಬರು ಪತ್ನಿಯರಿಗೆ ಜಯ, ವಿಜಯ, ಮೇಘ, ಮಾಲ ಹಾಗೂ ಬಲಾಯಕ್ ಅನ್ನೋ ಹೆಸರಿನ ಮಕ್ಕಳು ಇರುತ್ತಾರೆ ಅಂತಾ ಪುರಾಣಗಳು ಹೇಳುತ್ತವೆ.

ಅಧರ್ಮವನ್ನು ನಾಶಪಡಿಸಿ, ಧರ್ಮಸಂಸ್ಥಾಪನೆ ಮಾಡಲೆಂದು ಕಲ್ಕಿ, ದೇವದತ್ತ ಅನ್ನೋ ಹೆಸರಿನ ಬಿಳಿ ಕುದುರೆ ಏರಿ ಬರಲಿದ್ದಾನೆ ಅಂತಾ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೇ, ಕಲ್ಕಿ ರೆಕ್ಕೆಗಳನ್ನು ಹೊಂದಿರುತ್ತಾನೆ, ಬಿಳಿ ಬಣ್ಣದ ಕುದುರೆ ಏರಿ ಬರ್ತಾನೆ ಹಾಗೂ ಎಡಗೈಯಲ್ಲಿ ಖಡ್ಗವನ್ನು ಹಿಡಿದಿರ್ತಾನೆ ಅಂತಲೂ ಪುರಾಣಗಳಲ್ಲಿ ವರ್ಣಿಸಲಾಗಿದೆ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ