ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಏಕೆ?
ಬೆಕ್ಕು ಅಡ್ಡ ಬಂದ್ರೆ ಆಗೋ ಕೆಲಸವು ಆಗೋದಿಲ್ಲವಾ. ಆಕಸ್ಮಾತ್ ಆ ಸೂಚನೆಯನ್ನ ಲೆಕ್ಕಿಸದೆ ಮುಂದೆ ಸಾಗಿದರೆ ಪ್ರಮಾಧಗಳು ನಡೆಯುತ್ತವಾ ಎಂಬ ಪ್ರಶ್ನೆಗಳು, ಸಂಶಯಗಳು ನಮ್ಮನ್ನ ಕಾಡದೆ ಇರೋದಿಲ್ಲಾ. ಅಂತಹ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಯಾವುದಾದ್ರೂ ಶುಭ ಕಾರ್ಯಕ್ಕೆ ಹೋಗುವಾಗಲೂ, ಅಥವಾ ಹಾಗೆಯೇ ಹೊರಗಡೆ ಸುಮ್ಮನೆ ಹೋಗುವಾಗಲು ಬೆಕ್ಕು ಎದುರಾದ್ರೆ ಮನಸ್ಸಲ್ಲಿ ಏನೋ ಒಂದು ರೀತಿಯ ಭಯ, ದುಗುಡ ಮನದಲ್ಲಿ ಮೂಡಿ ಒಂದು ಹೆಜ್ಜೆ ಮುಂದೆ ಇಡಲು ಕೂಡ ಯೋಚನೆ ಮಾಡಿ. ಅದೆಷ್ಟೋ ಜನರು ಎಷ್ಟೆ ಪ್ರಮುಖವಾದ ಕೆಲಸಕ್ಕೆ […]
ಬೆಕ್ಕು ಅಡ್ಡ ಬಂದ್ರೆ ಆಗೋ ಕೆಲಸವು ಆಗೋದಿಲ್ಲವಾ. ಆಕಸ್ಮಾತ್ ಆ ಸೂಚನೆಯನ್ನ ಲೆಕ್ಕಿಸದೆ ಮುಂದೆ ಸಾಗಿದರೆ ಪ್ರಮಾಧಗಳು ನಡೆಯುತ್ತವಾ ಎಂಬ ಪ್ರಶ್ನೆಗಳು, ಸಂಶಯಗಳು ನಮ್ಮನ್ನ ಕಾಡದೆ ಇರೋದಿಲ್ಲಾ. ಅಂತಹ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಯಾವುದಾದ್ರೂ ಶುಭ ಕಾರ್ಯಕ್ಕೆ ಹೋಗುವಾಗಲೂ, ಅಥವಾ ಹಾಗೆಯೇ ಹೊರಗಡೆ ಸುಮ್ಮನೆ ಹೋಗುವಾಗಲು ಬೆಕ್ಕು ಎದುರಾದ್ರೆ ಮನಸ್ಸಲ್ಲಿ ಏನೋ ಒಂದು ರೀತಿಯ ಭಯ, ದುಗುಡ ಮನದಲ್ಲಿ ಮೂಡಿ ಒಂದು ಹೆಜ್ಜೆ ಮುಂದೆ ಇಡಲು ಕೂಡ ಯೋಚನೆ ಮಾಡಿ. ಅದೆಷ್ಟೋ ಜನರು ಎಷ್ಟೆ ಪ್ರಮುಖವಾದ ಕೆಲಸಕ್ಕೆ ಹೋಗೋದಿದ್ರೂ ಅದನ್ನು ಮೊಟಕುಗೊಳಿಸುತ್ತಾರೆ.
ಅತಿ ಬುದ್ಧಿವಂತ ಪ್ರಾಣಿಗಳಲ್ಲಿ ಬೆಕ್ಕು ಕೂಡಾ ಒಂದು. ಇದು ಆಹಾರಕ್ಕಾಗಿ ಹೊಂಚು ಹಾಕುವ ರೀತಿಗೆ, ಇದರ ನಡೆಗೆಗೆ ಖ್ಯಾತಿಯನ್ನ ಹೊಂದಿದೆ. ಮಾರ್ಜಾಲ ನಡೆ ಎಂಬ ಪದವು ಇದರ ಗುಣಗಳಿಂದ ಹೊರಹೊಮ್ಮಿದೆ. ಜೊತೆಗೆ ಕೆಲಶಕ್ತಿ ದೇವತೆಗೊಂದಿಗೆ ಗುರುತಿಸಿಕೊಂಡಿರುವ ಬೆಕ್ಕನ್ನ ಭವಿಷ್ಯವನ್ನು ಸೂಚಿಸುವ, ಮುಂದಿನ ಆಗು-ಹೋಗುಗಳ ಬಗ್ಗೆ ಮನ್ಸೂಚನೆ ನೀಡುವ ಪ್ರಾಣಿ ಎಂಬ ಅಭಿಪ್ರಾಯ ಕೆಲವರದ್ದಾಗಿದೆ.
ಇನ್ನು ಬೆಕ್ಕು ರಾಹು ಗ್ರಹದ ವಾಹನ. ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ, ಪೆಟ್ಟಾಗುವ ಸಾಧ್ಯತೆಗಳು ಇರುತ್ತವೆಂದು ಹೇಳಲಾಗುತ್ತೆ. ಆ ಕಾರಣದಿಂದಾಗಿ ಬೆಕ್ಕು ಅಂತಹ ಅವಘಡಗಳ ಬಗ್ಗೆ ಸೂಚನೆ ನೀಡುತ್ತೆಂಬುದು ಕೆಲವರ ಅಭಿಪ್ರಾಯವಾಗಿದೆ.
ಬೆಕ್ಕು ಮುಂದೆ ಹಾದು ಹೋದರೆ ಅಪಶಕುನವೆಂಬ ಮಾತುಗಳ ನಡುವೆ ಇಂತಹ ಆಚರಣೆ, ಹಾಗೂ ನಂಬಿಕೆ ಹೇಗೆ? ಏತಕ್ಕೆ ಹುಟ್ಟಿಕೊಂಡವೆಂಬ ಪ್ರಶ್ನೆಗಳಿಗೆ ಶತ ಶತಮಾನಗಳ ಹಿಂದಿನ ಜನ ಜೀವನ ಉತ್ತರವನ್ನ ನೀಡುತ್ತೆ.
ಮೊದಲಿಗೆ ಬೆಕ್ಕು ಅಡ್ಡ ಬಂದರೆ ಅದು ಅಪಶಕುನವಲ್ಲ. ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋ ಮಾತು ಯಾಕೆ ಬಂತು ಅಂದ್ರೆ ಹಿಂದಿನ ಕಾಲದಲ್ಲಿ ರಾತ್ರಿ ಸಮಯದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದಾಗ ಎತ್ತುಗಳು, ಕುದುರೆಗಳು ಬೆದರಿ ಅಪಾಯ ಆಗುತ್ತಿದ್ದವು.
ಎತ್ತುಗಳು ಮತ್ತು ಕುದುರೆಗಳು ಬೆಕ್ಕು ಅಡ್ಡ ಬಂದಾಗ ಯಾಕೆ ಬೆದರುತ್ತಿದ್ದವು ಅಂದ್ರೆ ಬೆಕ್ಕಿನ ಕಣ್ಣಿನಲ್ಲಿ ವಿಶೇಷವಾದ ರೆಟಿನಾ ಪದರ ಇರುತ್ತೆ. ಇದು ರಾತ್ರಿ ಸಮಯ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುವುದರಿಂದ ಪ್ರಾಣಿಗಳು ಬೆದರಿ ಇದರಿಂದ ಅಪಾಯವುಂಟಾಗುತ್ತಿದ್ದವು.
ಹೀಗೆ ಉಂಟಾಗುತ್ತಿದ್ದ ಅಪಾಯಗಳಿಂದ ಅಪಾರ ಪ್ರಮಾಣದ ಸಾವು ನೋವುಗಳು ಉಂಟಾಗುತ್ತಿದ್ದರಿಂದ ಕಾಲಾಂತರದಲ್ಲಿ ಬೆಕ್ಕು ಅಡ್ಡ ಬಂದರೆ ಅಪಾಯ ಎಂಬ ಭಾವನೆ ಜನರ ಮನಸ್ಸಲ್ಲಿ ಉಳಿಯಿತು.
ಮತ್ತೊಂದು ಪ್ರಮುಖ ಅಂಶವೆಂದರೆ ಬೆಕ್ಕಿನ ಕೂದಲಿನಲ್ಲಿ ಆರೋಗ್ಯಕ್ಕೆ ಹಾನಿಕಾರವಾದ, ಕ್ಯಾನ್ಸರ್ ಉಂಟುಮಾಡುವ ಅಂಶವಿರುತ್ತೆ. ಹಾಗಾಗಿ ಬೆಕ್ಕು ದಾರಿಯಲ್ಲಿ ಬಂದಾಗ, ತಕ್ಷಣ ಹೋಗುವುದರಿಂದ ಗಾಳಿಯಲ್ಲಿ ತೇಲಿ ಬರುವ ಬೆಕ್ಕಿನ ಕೂದಲು ನಮ್ಮ ದೇಹದೊಳಗೆ ಸೇರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ವೈಜ್ಞಾನಿಕ ತಿಳುವಳಿಕೆಯಿದೆ. ಈ ಕಾರಣಕ್ಕಾಗಿ ದಾರಿಯಲ್ಲಿ ನಾವು ನಡೆದುಕೊಂಡು ಹೋಗುವಾಗ ಬೆಕ್ಕು ಅಡ್ಡ ಬಂದಾಗ ಸ್ವಲ್ಪ ಕಾಲ ನಿಂತುಕೊಂಡು ಹೋಗಬೇಕು ಎಂಬ ವೈಜ್ಞಾನಿಕ ಮಾತಿದೆ.