12 ವಾರಗಳ ಬಿಗ್ ಬಾಸ್ ಸೀಸನ್​ಗೆ ಸಲ್ಲೂ ಪಡೆಯಲಿರೋದು ಬರೋಬ್ಬರಿ ರೂ. 450 ಕೋಟಿ!!!

|

Updated on: Sep 05, 2020 | 3:02 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಬಹಲ ದಿನಗಳಿಂದ ಸುದ್ದಿಯಲ್ಲಿರಲಿಲ್ಲ, ದೇಶದಾದ್ಯಂತ ಲಾಕ್​ಡೌನ್ ಜಾರಿಯಲ್ಲಿದ್ದಾಗ ಪನ್ವೆಲ್​ನಲ್ಲಿರುವ ತನ್ನ ಫಾರ್ಮ್​ಹೌಸ್​ನಲ್ಲೇ ಇದ್ದು ಅದರ ಸುತ್ತಮುತ್ತ ವಾಸವಾಗಿರುವ ವಲಸೆ ಕಾರ್ಮಿಕರಿಗೆ ಫಾರ್ಮ್​ನಲ್ಲಿ ಬೆಳೆದ ತರಕಾರಿ ಮತ್ತು ಹಣ್ಣು ಹಂಪಲು ನೀಡಿ ನೆರವಾಗುತ್ತಿದ್ದ ಅವರ ಒಂದೇ ಒಂದು ಚಿತ್ರ ಈ ವರ್ಷ ಬಿಡುಗಡೆಯಾಗಿಲ್ಲವೆನ್ನುವುದು ಸೋಜಿಗದ ಸಂಗತಿಯೇ. ಹಾಗೆ ನೋಡಿದರೆ, ಸಲ್ಮಾನ್​ನ ಬಹು–ನಿರೀಕ್ಷಿತ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್,’ ರಂಜಾನ್ ಹಬ್ಬದಂದು ರಿಲೀಸ್ ಆಗಬೇಕಿತ್ತು, ಆದರೆ, ಕೊವಿಡ್-19 ಪಿಡುಗಿನಿಂದಾಗಿ ಅದು ಸಾಧ್ಯವಾಗಲಿಲ್ಲ. ಅದಾದ […]

12 ವಾರಗಳ ಬಿಗ್ ಬಾಸ್ ಸೀಸನ್​ಗೆ ಸಲ್ಲೂ ಪಡೆಯಲಿರೋದು ಬರೋಬ್ಬರಿ ರೂ. 450 ಕೋಟಿ!!!
Follow us on

ಬಾಲಿವುಡ್ ನಟ ಸಲ್ಮಾನ್ ಖಾನ್ ಬಹಲ ದಿನಗಳಿಂದ ಸುದ್ದಿಯಲ್ಲಿರಲಿಲ್ಲ, ದೇಶದಾದ್ಯಂತ ಲಾಕ್​ಡೌನ್ ಜಾರಿಯಲ್ಲಿದ್ದಾಗ ಪನ್ವೆಲ್​ನಲ್ಲಿರುವ ತನ್ನ ಫಾರ್ಮ್​ಹೌಸ್​ನಲ್ಲೇ ಇದ್ದು ಅದರ ಸುತ್ತಮುತ್ತ ವಾಸವಾಗಿರುವ ವಲಸೆ ಕಾರ್ಮಿಕರಿಗೆ ಫಾರ್ಮ್​ನಲ್ಲಿ ಬೆಳೆದ ತರಕಾರಿ ಮತ್ತು ಹಣ್ಣು ಹಂಪಲು ನೀಡಿ ನೆರವಾಗುತ್ತಿದ್ದ ಅವರ ಒಂದೇ ಒಂದು ಚಿತ್ರ ಈ ವರ್ಷ ಬಿಡುಗಡೆಯಾಗಿಲ್ಲವೆನ್ನುವುದು ಸೋಜಿಗದ ಸಂಗತಿಯೇ.

ಹಾಗೆ ನೋಡಿದರೆ, ಸಲ್ಮಾನ್​ನ ಬಹುನಿರೀಕ್ಷಿತ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್,’ ರಂಜಾನ್ ಹಬ್ಬದಂದು ರಿಲೀಸ್ ಆಗಬೇಕಿತ್ತು, ಆದರೆ, ಕೊವಿಡ್-19 ಪಿಡುಗಿನಿಂದಾಗಿ ಅದು ಸಾಧ್ಯವಾಗಲಿಲ್ಲ. ಅದಾದ ನಂತರ ಸುಶಾಂತ್ ಸಿಂಗ್ ರಜಪೂತ ಅಕಾಲಿಕ ಮರಣದಿಂದ ಬಾಲಿವುಡ್ ತತ್ತರಗೊಂಡಾಗ ಸಲ್ಮಾನ್ ವಿರುದ್ಧ ಸ್ವಜನ ಪಕ್ಷಪಾತದ ಆರೋಪಗಳು ಕೇಳಿಬಂದವು.

ಸಲ್ಲೂ ಭಾಯ್ ಈಗ ಸುದ್ದಿಯಲ್ಲಿದ್ದಾರೆ. ಅವರು ನಡೆಸಿಕೊಡುವ ಬಿಗ್ ಬಾಸ್ 14 ನೇ ಸೀಸನ್ ಅಕ್ಟೋಬರ್​ನಲ್ಲಿ ಶುರುವಾಗಲಿದೆಯಂತೆ. ಗೊರೆಗಾಂವ್​ನ ಫಿಲ್ಮ್​ಸಿಟಿಯಲ್ಲಿ ನಡೆಯುವ ವಾರಾಂತ್ಯದ ಶೂಟ್​ಗಳಿಗೆ ಸಲ್ಮಾನ್ ಹಾಜರಾಗಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಬಾರಿಯ 12 ವಾರಗಳ ಬಿಗ್ ಬಾಸ್ ಸೀಸನ್​ಗೆ ಸಲ್ಮಾನ್ ಪಡೆಯಲಿರುವ ಸಂಭಾವನೆ ಎಷ್ಟು ಅಂತ ಊಹಿಸಬಲ್ಲಿರಾ? ಬರೋಬ್ಬರಿ 480 ಕೋಟಿ ರೂಪಾಯಿಗಳು!! ಹೌದು, ನೀವು ಓದಿದ್ದು ಸರಿ, ಪ್ರತಿ ಎಪಿಸೋಡ್​ಗೆ 20 ಕೋಟಿ ರೂಪಾಯಿಗಳಂತೆ ಪೂರ್ತಿ ಸೀಸನ್​ಗೆ ರೂ 480 ಕೋಟಿಗಳು. 

ಕಳೆದ ಸೀಸನ್​ಗೆ ಅವರು ಪ್ರತಿ ಎಪಿಸೋಡ್​ಗೆ ರೂ. 15 ಕೋಟಿ ಲೆಕ್ಕದಲ್ಲಿ 250 ಕೋಟಿ ರೂಪಾಯಿ ಪಡೆದಿದ್ದರು. ಒಂದು ಪಕ್ಷ ಈ ಸೀಸನ್​ನ ಎಪಿಸೋಡ್​ಗಳ ಸಂಖ್ಯೆಯೇನಾದರೂ ಹೆಚ್ಚಾದರೆ, ಸಲ್ಮಾನ್ ಅವುಗಳಿಗೆ ಪ್ರತ್ಯೇಕವಾಗಿ ಸಂಭಾವನೆ ಪಡೆಯಲಿದ್ದಾರೆ.

ಈಗಷ್ಟೇ ದೊರೆತಿರುವ ಮಾಹಿತಿ ಪ್ರಕಾರ, ಸಲ್ಮಾನ್ ಖಾನ್​ನ ಪ್ರೊಡಕ್ಷನ್ ಹೌಸ್ ರೂ. 450 ಕೋಟಿಗಳಿಗೆ ಬಿಗ್ ಬಾಸ್ ಸೀಸನ್ 14 ಡೀಲನ್ನು ಕುದಿರಿಸಿದೆಯಂತೆ.