ಸುರಗಂಗೆಯನ್ನು ಭೂಲೋಕಕ್ಕೆ ಕರೆಸಿದ್ದು ಯಾರು?

ಯಾರಾದ್ರೂ ನಿರಂತರವಾಗಿ ಯಾವುದಾದ್ರೂ ಕೆಲಸಕ್ಕೆ ಪ್ರಯತ್ನ ಪಟ್ಟರೆ ಅದು ಭಗೀರಥ ಪ್ರಯತ್ನ ಅಂತಾ ಕೆಲವರು ಹೇಳೋ ವಾಡಿಕೆ ಇಂದಿಗೂ ಇದೆ. ಅಷ್ಟಕ್ಕೂ ಪುರಾಣಗಳ ಪ್ರಕಾರ, ಭಗೀರಥ ಪ್ರಯತ್ನ ಅನ್ನೋ ಮಾತಿನ ಸ್ವಾರಸ್ಯವೇನು? ಭಗೀರಥ ಅಂದ್ರೆ ಯಾರು? ಆತ ಪಟ್ಟ ಪ್ರಯತ್ನವೇನು? ತಿಳಿಯಿರಿ ಇಲ್ಲಿ. ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ಅದಕ್ಕೆ ಶ್ರಮ, ಶ್ರದ್ಧೆ ಜೊತೆಗೆ ಪ್ರಯತ್ನವೆಂಬ ಕೀಲಿ ಕೈ ಇರಲೇಬೇಕು. ಹೀಗೆ ಪ್ರಯತ್ನ ಎಂದಾಗ ನೆನಪಿಗೆ ಬರುವ ಹೆಸರೆಂದರೆ ಭಗೀರಥ. ತನ್ನ ಅಚಲ ಪ್ರಯತ್ನದಿಂದ ದೇವಲೋಕದಿಂದ ಗಂಗೆ […]

ಸುರಗಂಗೆಯನ್ನು ಭೂಲೋಕಕ್ಕೆ ಕರೆಸಿದ್ದು ಯಾರು?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 04, 2020 | 4:11 PM

ಯಾರಾದ್ರೂ ನಿರಂತರವಾಗಿ ಯಾವುದಾದ್ರೂ ಕೆಲಸಕ್ಕೆ ಪ್ರಯತ್ನ ಪಟ್ಟರೆ ಅದು ಭಗೀರಥ ಪ್ರಯತ್ನ ಅಂತಾ ಕೆಲವರು ಹೇಳೋ ವಾಡಿಕೆ ಇಂದಿಗೂ ಇದೆ. ಅಷ್ಟಕ್ಕೂ ಪುರಾಣಗಳ ಪ್ರಕಾರ, ಭಗೀರಥ ಪ್ರಯತ್ನ ಅನ್ನೋ ಮಾತಿನ ಸ್ವಾರಸ್ಯವೇನು? ಭಗೀರಥ ಅಂದ್ರೆ ಯಾರು? ಆತ ಪಟ್ಟ ಪ್ರಯತ್ನವೇನು? ತಿಳಿಯಿರಿ ಇಲ್ಲಿ.

ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ಅದಕ್ಕೆ ಶ್ರಮ, ಶ್ರದ್ಧೆ ಜೊತೆಗೆ ಪ್ರಯತ್ನವೆಂಬ ಕೀಲಿ ಕೈ ಇರಲೇಬೇಕು. ಹೀಗೆ ಪ್ರಯತ್ನ ಎಂದಾಗ ನೆನಪಿಗೆ ಬರುವ ಹೆಸರೆಂದರೆ ಭಗೀರಥ. ತನ್ನ ಅಚಲ ಪ್ರಯತ್ನದಿಂದ ದೇವಲೋಕದಿಂದ ಗಂಗೆ ಧರೆಗಿಳಿಯುವಂತೆ ಮಾಡಿ, ತನ್ನ ಪೂರ್ವಜರ ಆತ್ಮಗಳಿಗೆ ಶಾಂತಿ ದೊರಕಿಸಿಕೊಟ್ಟವ ಭಗೀರಥ. ಇಕ್ಷ್‌ವಾಕು ವಂಶದಲ್ಲಿ ಸಗರ ಎಂಬ ಅಸಹಾಯಶೂರ ರಾಜ ಇದ್ದ. ನೂರೊಂದು ಅಶ್ವಮೇಧ ಯಾಗಗಳನ್ನು ಮಾಡಿ, ಹೆಸರು ಗಳಿಸಿದ್ದ. ಆತ ದಿಗ್ವಿಜಯಿ ಅರಸ.

ಸಗರ ರಾಜನ ಯಾಗದ ಕುದುರೆ ಕದ್ದ ಇಂದ್ರ: ಸಗರ ರಾಜ ಕಡೆಯ ಯಾಗವನ್ನು ಮಾಡುವಾಗ, ಇಂದ್ರ ಅಸೂಯೆಯಿಂದ ಸಗರ ರಾಜನ ಯಾಗದ ಕುದುರೆಯನ್ನು ಕದ್ದೊಯ್ದು, ಕಪಿಲಮುನಿಯ ಆಶ್ರಮದಲ್ಲಿ ಕಟ್ಟಿಹಾಕ್ತ್ತಾನೆ. ಆಗ ಯಾಗದ ಕುದುರೆ ಕಾಣದೆ ಸಗರ ತಲ್ಲಣಿಸ್ತ್ತಾನೆ. ಯಾಗದ ಕುದುರೆ ಕಾಣದೇ ಸಗರ ತಲ್ಲಣಿಸಿ, ತನ್ನ ಅರವತ್ತು ಸಾವಿರ ಮಕ್ಕಳನ್ನೆಲ್ಲಾ ಕುದುರೆಯನ್ನ ಹುಡುಕಿ ತರಲು ಕಳುಹಿಸ್ತ್ತಾನೆ.

ಅವರೆಲ್ಲಾ ಕುದುರೆಯನ್ನ ಹುಡುಕಾಡುತ್ತಾ ಬರುವಾಗ, ಕಪಿಲ ಮಹರ್ಷಿಯ ಆಶ್ರಮದಲ್ಲಿ ಕುದುರೆ ಕಂಡುಬರುತ್ತೆ. ಯಾಗದ ಕುದುರೆಯನ್ನು ಕಪಿಲ ಮಹರ್ಷಿಯೇ ತಂದು ಕಟ್ಟಿರುವನೆಂದು ತಿಳಿದು, ಸಗರನ ಮಕ್ಕಳು ತಪೋಮಗ್ನರಾಗಿದ್ದ ಋಷಿಮುನಿಯ ತಪಸ್ಸಿಗೆ ಭಂಗ ಮಾಡ್ತ್ತಾರೆ. ತಪಸ್ಸಿಗೆ ಭಂಗ ಉಂಟಾಗಿದ್ರಿಂದ ಕೋಪಿತಗೊಂಡ ಕಪಿಲ ಮುನಿಗಳು ಕೋಪದಲ್ಲಿ ತಮ್ಮ ಕೈಯಿಂದ ಆಗ್ನಿಯನ್ನ ಹೊರಸೂಸ್ತ್ತಾರೆ.

ಋಷಿಮುನಿಯು ಬಿಟ್ಟ ಅಗ್ನಿಯಿಂದ ಅಷ್ಟೋ ಮಂದಿ ರಾಜಕುಮಾರರೂ ಸುಟ್ಟು ಬೂದಿ ಆಗ್ತ್ತಾರೆ. ಅಷ್ಟು ಮಂದಿ ರಾಜಕುಮಾರನನ್ನ ಕಳೆದುಕೊಂಡು ಸಗರ ರಾಜ ವ್ಯಾಕುಲದಲ್ಲಿ ಸಿಲುಕ್ತ್ತಾನೆ. ದಿನಕ್ರಮೇಣ ರಾಜನಿಗೆ ಅಸಮಂಜಸ ಅನ್ನೋ ಮಗ ಜನಿಸ್ತ್ತಾನೆ. ಇವನ ಮಗನೇ ಅಂಶುಮಂತ.

ತಾತನ ಯಾಗ ಪೂರೈಸದಿರುವುದನ್ನು ಕಂಡು, ಅಂಶುಮಂತ ಕುದುರೆಯನ್ನು ಹುಡುಕುತ್ತಾ ಕಪಿಲ ಋಷಿ ಆಶ್ರಮಕ್ಕೆ ಬರ್ತಾನೆ. ಅಂಶುಮಂತ ಕಪಿಲ ಋಷಿಮುನಿಗಳ ಆಶ್ರಮದ ಆವರಣದಲ್ಲಿ ಭಸ್ಮರಾಶಿ ಹಾಗೂ ಕುದುರೆಯನ್ನು ಕಾಣ್ತ್ತಾನೆ. ಕಪಿಲ ಮಹರ್ಷಿಯಿಂದ ಸಕಲ ಸಂಗತಿಯನ್ನೂ ತಿಳಿದುಕೊಳ್ತಾನೆ. ನಂತರ ಅವರಲ್ಲಿ ಕ್ಷಮೆಯಾಚಿಸಿ, ತನ್ನ ಪಿತೃಗಳಿಗೆ ಸದ್ಗತಿ ದೊರಕಿಸುವಂತೆ ಬೇಡ್ತ್ತಾನೆ.

ಸುರಗಂಗೆಯನ್ನು ಭೂಲೋಕಕ್ಕೆ ತರಿಸಿದ ಭಗೀರಥ: ಆಗ ಕಪಿಲ ಮುನಿಯು ಈ ಬೂದಿಯ ಮೇಲೆ ಸುರನದಿ ದೇವಗಂಗೆ ಹರಿದರೆ ನಿನ್ನ ಪಿತೃಗಳು ಸದ್ಗತಿ ಹೊಂದುವರು ಅಂತಾ ಹೇಳ್ತ್ತಾನೆ. ಅಸಮಂಜಸನು ತನ್ನ ಪಿತೃಗಳಿಗೆ ಒದಗಿರುವ ದುರ್ಗತಿಯಿಂದ ವ್ಯಥಿತನಾಗಿ ರಾಜ್ಯಭಾರದ ಹೊರೆಯನ್ನು ತನ್ನ ಮಗನಾದ ಅಂಶುಮಂತನಿಗೆ ವಹಿಸಿ, ತಾನು ತಪಸ್ಸು ಮಾಡಿ ತನ್ನ ಪೂರ್ವಜರಿಗೆ ಸದ್ಗತಿ ದೊರಕಿಸಲು ತಪಸ್ಸಾನ್ನಾಚರಿಸಲು ಕಾಡಿಗೆ ಹೋಗ್ತ್ತಾನೆ.

ಅಂಶುಮಂತನೂ ಎಷ್ಟೇ ಪ್ರಯತ್ನಪಟ್ಟರೂ ದೇವಗಂಗೆಯನ್ನು ಭೂಲೋಕಕ್ಕೆ ತರಲು ಸಾಧ್ಯವಾಗೋದಿಲ್ಲ. ಅಸಮಂಜಸನ ತಪಸ್ಸು ಫಲಿಸದಿದ್ದಾಗ, ಸುರಗಂಗೆಯನ್ನು ಭೂಲೋಕಕ್ಕೆ ತರಲು ಪ್ರಯತ್ನಿಸಿ ಯಶಸ್ವಿಯಾದವನೇ ಭಗೀರಥ. ಗಂಗೆಯನ್ನ ಭೂಲೋಕಕ್ಕೆ ಬರುವಂತೆ ಮಾಡಲು, ಸುರಗಂಗೆಯನ್ನ ಕುರಿತು ಭಗೀರಥ ಘೋರ ತಪಸ್ಸನ್ನಾಚರಿಸ್ತ್ತಾನೆ. ಭಗೀರಥನ ಕಠಿಣ ತಪಸ್ಸಿಗೆ ಮೆಚ್ಚಿ ಗಂಗಾದೇವಿ ಪ್ರತ್ಯಕ್ಷಳಾಗ್ತ್ತಾಳೆ.

ತಪಸ್ಸಿಗೆ ಮೆಚ್ಚಿದ ದೇವಗಂಗೆ, ವತ್ಸ ನಿನಗೇನು ವರ ಬೇಕೋ ಕೇಳೆಂದು ಭಗೀರಥನಿಗೆ ಕೇಳ್ತ್ತಾಳೆ. ಮಹಾಮಾತೆ, ನನ್ನ ಮೃತ ಪಿತೃಗಳ ಬೂದಿಯ ಮೇಲೆ ನೀನು ಹರಿದು, ಅವರಿಗೆ ಸದ್ಗತಿಯನ್ನು ಕರುಣಿಸಬೇಕೆಂದು ಕೇಳಿಕೊಳ್ತಾನೆ. ಗಂಗೆಯು ನಾನು ಸುರಲೋಕದಿಂದ ಭೂಲೋಕಕ್ಕೆ ಇಳಿದು ಬರುವಾಗ, ರಭಸದಿಂದ ಧುಮ್ಮಿಕ್ಕುತ್ತಾ ಬರಬೇಕಾಗುತ್ತೆ. ಆಗ ಭೂಮಿ ಕೊರೆದು ಸೀಳಿ ಹೋಗಿ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ನನ್ನನ್ನು ತಡೆದಲ್ಲಿ ನಾನು ನಿಧಾನವಾಗಿ ಹರಿದುಬರುತ್ತಾ ನಿನ್ನ ಪಿತೃಗಳಿಗೆ ಸದ್ಗತಿಯನ್ನು ನೀಡಬಲ್ಲೆ ಅಂತಾ ಗಂಗೆ ಹೇಳ್ತ್ತಾಳೆ.

ಗಂಗೆಯನ್ನು ತನ್ನ ಜಟೆಯಲ್ಲಿ ಕಟ್ಟಿಕೊಂಡ ಶಿವ: ರಭಸದಿಂದ ಹರಿಯುವ ನನ್ನನ್ನು ತಡೆದು ನಿಲ್ಲಿಸುವ ಶಕ್ತಿ, ಸಾಮರ್ಥ್ಯ ಪಾರ್ವತೀಶನೋರ್ವನಿಗೆ ಮಾತ್ರ ಇದೆ. ನೀನು ಗಂಗಾಧರನನ್ನು ಕುರಿತು ತಪಸ್ಸು ಮಾಡೆಂದು ಗಂಗೆ ಭಗೀರಥನಿಗೆ ಹೇಳ್ತ್ತಾಳೆ. ಭಗೀರಥ ರಭಸದಿಂದ ಧುಮ್ಮಿಕ್ಕುವ ಗಂಗೆಯನ್ನ ತಡೆದು, ನಿಧಾನವಾಗಿ ಹರಿದು ಬರುವಂತೆ ಮಾಡಲು ಅರ್ಧನಾರೀಶ್ವರನನ್ನ ಕುರಿತು ತಪಸ್ಸನ್ನಾಚರಿಸ್ತ್ತಾನೆ. ತನ್ನ ಭಕ್ತನ ಕೋರಿಕೆಯನ್ನು ಈಡೇರಿಸಲು ಸಿದ್ಧನಾದ ನೀಲಕಂಠ ಭೋರ್ಗರೆದು ಧುಮ್ಮಿಕ್ಕಿ ಹರಿಯುವ ಗಂಗೆಯನ್ನು ತನ್ನ ಜಟೆಯಲ್ಲಿ ಕಟ್ಟಿಕೊಂಡು ಗಂಗಾಮಾತೆ ನಿಧಾನವಾಗಿ ಹರಿದು ಬರುವಂತೆ ಮಾಡುತ್ತಾನೆ.

ನಂತರ ಗಂಗೆ ನಿಧಾನವಾಗಿ ಭೂಲೋಕದೆಡೆಗೆ ಹರಿದು ಬರ್ತಾಳೆ. ಭಗೀರಥನು ಮುಂದೆ ಮುಂದೆ ಸಾಗಿದಂತೆ ಗಂಗೆ ಅವನನ್ನೇ ಹಿಂಬಾಲಿಸುತ್ತಾ ಬರ್ತಾಳೆ. ಅಷ್ಟರಲ್ಲೇ ದಾರಿಯಲ್ಲಿ ಜುಹ್ನು ಮಹರ್ಷಿಯ ಆಶ್ರಮ ಎದುರಾಗುತ್ತೆ. ದೇವಲೋಕದಿಂದ ಹರಿದು ಬರುತ್ತಿದ್ದ ಗಂಗೆ ತನ್ನ ಆಶ್ರಮವನ್ನು ಕೊಚ್ಚಿಕೊಂಡು ಹೋಗುತ್ತಾಳೆಂದು ಭಾವಿಸಿ ಜುಹ್ನು ಮಹರ್ಷಿ ಗಂಗೆಯನ್ನ ತೀರ್ಥದಂತೆ ಕೈಗೆ ತೆಗೆದುಕೊಂಡು ಕುಡಿದು ಬಿಡ್ತ್ತಾನೆ. ಭಗೀರಥ ಜುಹ್ನು ಮಹರ್ಷಿಯಲ್ಲಿ ಕ್ಷಮೆ ಬೇಡುತ್ತಾ, ತನ್ನ ದುಃಖದ ಕಥೆಯನ್ನು ಹೇಳ್ತ್ತಾನೆ. ಭಗೀರಥನ ಕಥೆ ಕೇಳಿ ಅವನ ಸಾಹಸದ ಪ್ರಯತ್ನವನ್ನು ಮೆಚ್ಚಿದ ಜುಹ್ನು ಆಪೋಶನ ತೆಗೆದುಕೊಂಡ ಗಂಗೆಯನ್ನು ಕಿವಿಯ ಮೂಲಕ ಹೊರಬಿಡ್ತ್ತಾನೆ.

ಬಳಿಕ ಕಪಿಲಾಶ್ರಮದ ಕಡೆ ಹರಿದು ಬಂದ ಸುರಗಂಗೆ ಭಸ್ಮದ ಮೇಲೆ ಹರಿದು, ನರಕದಲ್ಲಿದ್ದ ಸಗರಪುತ್ರರೆಲ್ಲರಿಗೂ ಸದ್ಗತಿ ಪಡೆಯುವಂತೆ ಮಾಡ್ತಾಳೆ. ನಂತರ ಸಗರಪುತ್ರರೆಲ್ಲರೂ ಸ್ವರ್ಗಕ್ಕೆ ಸೇರ್ತಾರೆ. ಭಗೀರಥನ ಸಾಹಸದಿಂದ ಸುರನದಿಯಾದ ಗಂಗೆ ಭೂಲೋಕದಲ್ಲಿ ಹರಿದುಬಂದ ಕಾರಣ, ಹಾಗೂ ಆತ ಪಟ್ಟ ಈ ಪ್ರಯತ್ನವನ್ನು ಇಂದಿಗೂ ಭಗೀರಥ ಪ್ರಯತ್ನ ಎಂದೇ ಕರೆಯಲಾಗುತ್ತೆ.

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ