ಇಂದು ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಕಳೆಕಟ್ಟಿದೆ. ಇನ್ನೊಂದು ವಿಶೇಷವೆಂದರೆ ಇಂದೇ ಮುಸ್ಲಿಂಮರು ಶಬ್-ಎ-ಮಿರಾಜ್ ಆಚರಿಸುತ್ತಾರೆ. ಇದು ಮುಸ್ಲಿಂಮರಿಗೆ ಪವಿತ್ರ ರಾತ್ರಿ ಇದ್ದಂತೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಈ ದಿನ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರ ದಿನಗಳಲ್ಲಿ ಒಂದಾಗಿದೆ. ಲೈಲಾತ್ ಅಲ್ ಮಿರಾಜ್ ಹಾಗೂ ಇಸ್ರಾ ಮತ್ತು ಮಿರಾಜ್ ಎಂದೂ ಕರೆಯಲ್ಪಡುವ ಶಬ್-ಎ-ಮಿರಾಜ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಏಳನೇ ತಿಂಗಳಾದ ರಜಬ್ ತಿಂಗಳ 27 ನೇ ದಿನದಂದು ಬರುವ ಪವಿತ್ರ ರಾತ್ರಿಯಾಗಿದೆ. ಈ ದಿನವನ್ನು ವಿಶ್ವದಾದ್ಯಂತ ಮುಸ್ಲಿಮರು ಪವಿತ್ರ ರಂಜಾನ್ ಅಥವಾ ರಂಜಾನ್ ಮಾಸಕ್ಕಿಂತ ಮುಂಚಿತವಾಗಿ ಆಚರಿಸುತ್ತಾರೆ.
ಶಬ್-ಎ-ಮಿರಾಜ್
ಶಾಬ್-ಎ-ಮಿರಾಜ್ ಅನ್ನು ರಜಬ್ ತಿಂಗಳ 27 ನೇ ದಿನ ಆಚರಿಸಲಾಗುತ್ತದೆ. ಆದ್ದರಿಂದ, ಭಾರತದಲ್ಲಿ, 27 ನೇ ರಜಬ್ ಅಂದ್ರೆ ಮಾರ್ಚ್ 12 ರಂದು ಆಚರಿಸಲಾಗುವುದು. ಹಾಗೂ ಸೌದಿ ಅರೇಬಿಯಾ ಮತ್ತು ಮಧ್ಯಪ್ರಾಚ್ಯದ (Middle East) ಇತರ ದೇಶಗಳಲ್ಲಿ, ಈ ದಿನವನ್ನು ಮಾರ್ಚ್ 11 ರಂದು ಆಚರಿಸಲಾಗುತ್ತದೆ. ಈ ದಿನವು ಆಯಾ ಪ್ರದೇಶಗಳ್ಲಿ ಚಂದ್ರನನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಮುಸ್ಲಿಂಮರು ಎಲ್ಲಾ ಹಬ್ಬಗಳನ್ನೂ ಚಂದ್ರನ ವೀಕ್ಷಣೆ ಮೂಲಕವೇ ಖಾತರಿ ಪಡಿಸಿಕೊಳ್ಳುತ್ತಾರೆ.
ಶಾಬ್-ಎ-ಮಿರಾಜ್ ಇತಿಹಾಸ ಮತ್ತು ಮಹತ್ವ
ಶಬ್-ಎ-ಮಿರಾಜ್.. ಇದು ಪ್ರವಾದಿ ಮೊಹಮ್ಮದ್ ಅವರಿಗೆ ಅತ್ಯಂತ ಮಹತ್ವದ ಘಟನೆ ನಡೆದ ದಿನ. ಈ ದಿನ ಪ್ರವಾದಿ ಮೊಹಮ್ಮದ್ ದೇವರನ್ನು ಭೇಟಿಯಾದ ಅತ್ಯಂತ ಪವಿತ್ರ ದಿನ. ಈ ದಿನದಂತೆ ಪ್ರವಾದಿ ಮೊಹಮ್ಮದ್ ಸ್ವರ್ಗಲೋಕಕ್ಕೆ ಪ್ರಯಾಣ ಬೆಳೆಸಿ ದೇವರನ್ನು ಭೇಟಿ ಮಾಡಿ ಅವರ ಸಿಂಹಾಸನವನ್ನು ವೀಕ್ಷಿಸಿದ ದಿನ ಎಂದು ಹೇಳಲಾಗುತ್ತೆ. ಪ್ರವಾದಿ ಸ್ವರ್ಗಕ್ಕೆ ಪ್ರಯಾಣ ಬೆಳೆಸಿದಕ್ಕೇ ಈ ದಿನದ ರಾತ್ರಿಯನ್ನು ಅತ್ಯಂತ ಪವಿತ್ರ ರಾತ್ರಿ ಎಂದು ಭಾವಿಸಲಾಗುತ್ತೆ.
ಪ್ರತಿದಿನ ಐದು ಬಾರಿ ನಮಾಜ್ ಮಾಡಬೇಕು
ಇಸ್ಲಾಂ ಧರ್ಮದ ಪ್ರಕಾರ, ಈ ರಾತ್ರಿ ಪ್ರವಾದಿ ಮೊಹಮ್ಮದ್ ದೈವಿಕ ಮಾರ್ಗದೊಂದಿಗೆ ದೇವಲೋಕಕ್ಕೆ ಪ್ರಯಾಣಿಸಿ ಸರ್ವಶಕ್ತನಾದ ಅಲ್ಲಾಹನನ್ನು ಭೇಟಿಯಾದ ಕ್ಷಣವನ್ನೇ ಮಿರಾಜ್ ಎಂದು ಕರೆಯಲಾಗುತ್ತದೆ. ಇಸ್ಲಾಂನಲ್ಲಿ ಮಿರಾಜ್ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದೆ. ಮಿರಾಜ್ ಅನ್ನು ಮುಸ್ಲಿಮರು ನಮಾಜ್‌ನ ಎರಡನೇ ಸ್ತಂಭವೆಂದು ಪರಿಗಣಿಸುತ್ತಾರೆ. ಹಾಗೂ ನಮಾಜ್, ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಎರಡನೇ ಸ್ತಂಭವಾಗಿದೆ. ಅಂದರೆ ಎಲ್ಲಾ ಮುಸ್ಲಿಮರಿಗೆ ನಮಾಜ್ ಕಡ್ಡಾಯವಾಗಿದೆ. ಮಿರಾಜ್‌ನ ಯಾತ್ರಯಲ್ಲೇ ಪ್ರವಾದಿ ಮೊಹಮ್ಮದ್ ಅವರಿಗೆ ಅಲ್ಲಾಹ್ ನಮಾಜ್ ಬಗ್ಗೆ ಸೂಚನೆಯನ್ನು ನೀಡಿದ್ದರು. ಅಂದರೆ ನೀವು ಪ್ರತಿದಿನ ಐದು ಬಾರಿ ಸಲಾತ್ (ನಮಾಜ್‌ನ ಇನ್ನೊಂದು ಹೆಸರು) ಪ್ರಾರ್ಥಿಸಬೇಕು ಎಂದು ಅಲ್ಲಾಹ್ ಈ ಪ್ರಯಾಣದಲ್ಲಿ ಹೇಳಿದ್ದರು ಎಂದು ನಂಬಲಾಗಿದೆ.
ಇನ್ನು ಶಾಬ್-ಎ-ಮಿರಾಜ್, ಲೈಲಾತ್ ಅಲ್ ಮಿರಾಜ್, ಎಂಬುವುದು ವಿವಿಧ ಪ್ರದೇಶಗಳಲ್ಲಿ ಬಳಸುವ ಒಂದೇ ಪದಗಳಾಗಿವೆ. ಶಾಬ್-ಎ-ಮಿರಾಜ್ ಅರ್ಥವನ್ನು ಇಸ್ಲಾಂನಲ್ಲಿ ನೀಡಲಾಗಿದೆ. ಈ ಪೈಕಿ ಇಸ್ಲಾಂ ಧರ್ಮ ಗ್ರಂಥ ಕುರಾನ್ ಪ್ರಕಾರ, ಸೂರಾ ಬನಿ-ಇಸ್ರೇಲ್ನಲ್ಲಿ ಈ ರೀತಿ ಹೇಳಲಾಗಿದೆ..
سُبْحَانَ الَّذِي أَسْرَى بِعَبْدِهِ لَيْلًا مِنْ الْمَسْجِدِ الْحَرَامِ إِلَى الْمَسْجِدِ الْأَقْصَى الَّذِي بَارَكْنَا حَوْلَهُ لِنُرِيَهُ آيَاتِنَا إِنَّه
هُوَ السَّمِيعُ الْبَصِيرُ
ಅರ್ಥ.. ಮಹಾನ್ ಪವಿತ್ರ ಸರ್ವಶಕ್ತನಾದ ಅಲ್ಲಾಹ್, ತನ್ನ ಏಕೈಕ ಸ್ನೇಹಿತನನ್ನು (ಮುಹಮ್ಮದ್) ಮಸೀದಿಯಿಂದ ನಿಂದ ಹರಾಮ್ (ಖಬಾ) ಗೆ ಕರೆದೊಯ್ದನು ಮತ್ತು ಈ ಪ್ರಯಾಣದಲ್ಲಿ ಅವರಿಗೆ ಅನೇಕ ಘಟನೆಗಳನ್ನು ತೋರಿಸಿ ಜೀವನದ ಪಾಠ ಮಾಡಿದ ಎಂದು ಹೇಳಲಾಗಿದೆ.
ಮತ್ತೊಂದು ಕಡೆ ಉಲ್ಲೇಖವಾದಂತೆ ಈ ತಿಂಗಳು, ಇಸ್ಲಾಂ ಧರ್ಮದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಈ ವೇಳೆ ಯುದ್ಧಗಳನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ಪೂರ್ವದ ಅರಬ್ಬರು ನಾಲ್ಕು ತಿಂಗಳುಗಳಲ್ಲಿ ಯುದ್ಧವನ್ನು ಧರ್ಮನಿಂದನೆ ಎಂದು ಪರಿಗಣಿಸಿದ್ದಾರೆ. ಶಿಯಾ ಮುಸ್ಲಿಮರ ಮೊದಲ ಇಮಾಮ್ ಮತ್ತು ಸುನ್ನಿ ಮುಸ್ಲಿಮರ ನಾಲ್ಕನೇ ಖಲೀಫ್ ಜನಿಸಿದ ಅಲಿಬ್ನ್ ಅಬೆ ತಾಲಿಬ್ ಜನಿಸಿದ ತಿಂಗಳು ಎಂದೂ ಸಹ ಕೆಲವರು ನಂಬುತ್ತಾರೆ. ಪ್ರವಾದಿ ಮೊಹಮ್ಮದ್ ಮೆಕ್ಕಾದಿಂದ ಜೆರುಸಲೆಮ್ ನಂತರ ಅಲ್ಲಾಹ್ನನ್ನು ಭೇಟಿಯಾಗಲು 7 ಸ್ವರ್ಗಗಳ ಮೂಲಕ ಪ್ರಯಾಣಿಸಿದ ಪವಿತ್ರ ತಿಂಗಳಾಗಿದೆ.