Kannada News Specials ಕಂಗನಾಳ ಕಚೇರಿ ಒಡೆದಿದ್ದು ಶಿವ ಸೇನೆಯಲ್ಲ, ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್: ರಾವತ್
ಕಂಗನಾಳ ಕಚೇರಿ ಒಡೆದಿದ್ದು ಶಿವ ಸೇನೆಯಲ್ಲ, ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್: ರಾವತ್
ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕಟ್ಟಡ ಧ್ವಂಸ ಮತ್ತು ಶಿವ ಸೇನೆ ನಡುವೆ ಯಾವುದೇ ಸಂಬಂಧವಿಲ್ಲವೆಂದು ಪಕ್ಷದ ನಾಯಕ ಸಂಜಯ ರಾವತ್ ಇಂದು ಮುಂಬೈಯಲ್ಲಿ ಹೇಳಿದರು. ‘‘ಆಕೆಯ ಕಟ್ಟಡ ಒಡೆಯವ ವಿಷಯ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್ಗೆ (ಬಿಎಮ್ಸಿ) ಸಂಬಂಧಿರುವುದರಿಂದ ನಾನು ಆ ಬಗ್ಗೆ ಮಾತಾಡಲು ಇಚ್ಛಿಸುವುದಿಲ್ಲ,’’ ಎಂದು ಸುದ್ದಿಗಾರರಿಗೆ ಹೇಳಿದ ರಾವತ್, ‘‘ಸದರಿ ವಿಷಯ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಮೇಯರ್ ಇಲ್ಲವೇ ಬಿಎಮ್ಸಿ ಕಮೀಷನರ್ ಜೊತೆ ಮಾತಾಡಿ,’’ ಎಂದರು. ಬುಧವಾರದಂದು ತಾನು ಬಿಡುಗಡೆ ಮಾಡಿದ್ದ […]
ಅರುಣ್ ಕುಮಾರ್ ಬೆಳ್ಳಿ
Updated on:
Sep 10, 2020 | 7:05 PM
ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕಟ್ಟಡ ಧ್ವಂಸ ಮತ್ತು ಶಿವ ಸೇನೆ ನಡುವೆ ಯಾವುದೇ ಸಂಬಂಧವಿಲ್ಲವೆಂದು ಪಕ್ಷದ ನಾಯಕ ಸಂಜಯ ರಾವತ್ ಇಂದು ಮುಂಬೈಯಲ್ಲಿ ಹೇಳಿದರು.
‘‘ಆಕೆಯ ಕಟ್ಟಡ ಒಡೆಯವ ವಿಷಯ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್ಗೆ (ಬಿಎಮ್ಸಿ) ಸಂಬಂಧಿರುವುದರಿಂದ ನಾನು ಆ ಬಗ್ಗೆ ಮಾತಾಡಲು ಇಚ್ಛಿಸುವುದಿಲ್ಲ,’’ ಎಂದು ಸುದ್ದಿಗಾರರಿಗೆ ಹೇಳಿದ ರಾವತ್, ‘‘ಸದರಿ ವಿಷಯ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಮೇಯರ್ ಇಲ್ಲವೇ ಬಿಎಮ್ಸಿ ಕಮೀಷನರ್ ಜೊತೆ ಮಾತಾಡಿ,’’ ಎಂದರು.
ಬುಧವಾರದಂದು ತಾನು ಬಿಡುಗಡೆ ಮಾಡಿದ್ದ ವಿಡಿಯೊವೊಂದರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಏಕವಚನದಲ್ಲೇ ಕೂಗಾಡಿದ್ದ ಕಂಗನಾ, ‘‘ನೀನು ನನ್ನ ಮನೆ ನಾಶ ಮಾಡಿದಂತೆಯೇ ನಿನ್ನ ದುರಹಂಕಾರ ಕೂಡ ಒಂದು ದಿನ ನಾಶವಾಗಲಿದೆ.’’ ಎಂದಿದ್ದರು. ಠಾಕ್ರೆ ವಿರುದ್ಧ ಕಂಗನಾಳ ಆಕ್ರೋಶದ ಮಾತುಗಳ ನಂತರ ಮುಂಬೈ ಪೊಲೀಸ್ ಎಫ್ಐಆರ್ ದಾಖಲಿಸಿದೆ.
ಸುಶಾಂತ್ ಸಿಂಗ್ ರಜಪೂತ ಸಾವಿನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿರುವ ಕಂಗನಾ ಪೊಲೀಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಕ್ಷರಶಃ ಕಾದಾಟಕ್ಕಿಳಿದಿದ್ದಾಳೆ. ಮುಂಬೈ ನಗರವನ್ನು ಆಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಂತರ ಶಿವ ಸೇನೆಯ ಕಾರ್ಯಕರ್ತರು ಆಕೆಗೆ ತಕ್ಕ ಶಾಸ್ತಿ ಮಾಡುವುದಾಗಿ ಪಣತೊಟ್ಟಿದ್ದಾರೆ. ಕೊವಿಡ್-19 ಸೋಂಕು ಶುರುವಾದಾಗಿನಿಂದ ಹಿಮಾಚಲ ಪ್ರದೇಶದಲಲ್ಲಿದ್ದ ಕಂಗನಾಗೆ ಮುಂಬೈಯಲ್ಲಿ ಕಾಲಿಡಲು ಬಿಡುವುದಿಲ್ಲ ಅಂತ ಸೇನೆಯ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದರು. ಆದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯು Z ಪ್ಲಸ್ ಭದ್ರತೆಯೊಂದಿಗೆ ನಿನ್ನೆ ಶಿಮ್ಲಾದಿಂದ ಮುಂಬೈಗೆ ಆಗಮಿಸಿದರು.
Arun Belly
ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.