ಸುಶಾಂತ್ ಸಿಂಗ್ ಅವರಿಗೆ ದುಬೈನೊಂದಿಗೆ ಒಡನಾಟವಿಟ್ಟುಕೊಂಡಿರುವ ಒಬ್ಬ ಡ್ರಗ್ ಡೀಲರ್ನೊಂದಿಗೆ ಸಂಪರ್ಕವಿತ್ತು ಎಂಬ ಆಘಾತಕಾರಿ ವಿಷಯವನ್ನು ಸ್ವಾಮಿ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಅವರ ಪೋಸ್ಟ್ನಲ್ಲಿ ಗಮನಿಸಬೇಕಾದ ಮ
‘‘ಸುನಂದಾ ಪುಷ್ಕರ್ ಸಾವು ಹೇಗೆ ಸಂಭವಿಸಿತು ಎನ್ನುವುದಕ್ಕೆ ಎ ಐ ಐ ಎಮ್ ಎಸ್ನ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸುಳಿವು ಸಿಕ್ಕಿತ್ತು. ಆದರೆ, ಶ್ರೀದೇವಿ ಹಾಗೂ ಸುಶಾಂತ್ ಅವರ ಪ್ರಕರಣಗಳಲ್ಲಿ ಹಾಗಾಗಲಿಲ್ಲ. ಸುಶಾಂತ್ ಪ್ರಕರಣದಲ್ಲಿ ಹೇಳುವುದಾದರೆ, ಆತ ‘ಕೊಲೆ‘ಯಾಗುವ ದಿನ ದುಬೈನೊಂದಿಗೆ ಒಡನಾಟವಿಟ್ಟುಕೊಂಡಿದ್ದ ಆಯಷ್ ಖಾನ್ ಎಂಬ ಹೆಸರಿನ ಡ್ರಗ್ ಡೀಲರ್ನನ್ನು ಭೇಟಿಗಾಗಿದ್ದ. ಯಾಕೆ?’’ ಎಂದು ಸ್ವಾಮಿ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.
ಮಂಗಳವಾರದಂದು ಸುಶಾಂತ್ ಕುರಿತು ಮತ್ತೊಂದು ಟ್ವೀಟ್ ಮಾಡಿರುವಸುಬ್ರಮಣಿಯನ್ ಸ್ವಾಮಿ, ದಿವಂಗತ ನಟನ ಮರಣೋತ್ತರ ಪರೀಕ್ಷೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಿಸಲಾಯಿತೆಂದು ಆಪಾದಿಸಿದ್ದಾರೆ. ಸುಶಾಂತ್ನ ದೇಹವನ್ನು ಹೊಕ್ಕಿದ್ದ ವಿಷ ಸಂಪೂರ್ಣವಾಗಿ, ಅಂದರೆ ಅದನ್ನು ಪತ್ತೆಹಚ್ಚಲಾಗದ ಮಟ್ಟಿಗೆ ದೇಹದಲ್ಲಿ ಕರಗಿಹೋಗಲಿ ಎಂಬ ಕಾರಣಕ್ಕೆ ಮರಣೋತ್ತರ ಪರೀಕ್ಷೆಯನ್ನು ನಿಧಾನಿಸಲಾಯಿತಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ
ಏತನ್ಮಧ್ಯೆ, ಸುಶಾಂತ್ ಸಾವಿನ ತನಿಖೆಯನ್ನು ಮುಂದುವರಿಸಿರುವ ಕೇಂದ್ರ ತನಿಖಾ ದಳ (ಸಿಬಿಐ) ನಟನ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.