ಹಿರಣ್ಯಕಶಿಪು ಸಂಹರಿಸಲು ನರಸಿಂಹಾವತಾರ ತಳೆದ ಮಹಾವಿಷ್ಣು ಪುರಾಣ

| Updated By: ಸಾಧು ಶ್ರೀನಾಥ್​

Updated on: Aug 28, 2020 | 3:58 PM

ಮಹಾವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ, ದುಷ್ಟನನ್ನು ಶಿಕ್ಷಿಸಲಿಕ್ಕಾಗಿ 10 ಅವತಾರಗಳನ್ನು ಎತ್ತಿದ. ಅದ್ರಲ್ಲಿ ಮೊದಲನೆಯದಾಗಿ ಮತ್ಸ್ಯಾವತಾರ. ಎರಡನೇ ಅವತಾರ ಕೂರ್ಮಾವತಾರ.. ಮೂರನೇ ಅವತಾರವೇ ವರಾಹ ಅವತಾರ. ಈ ಬಗ್ಗೆ ಈಗಾಗಲೇ ವಿಶೇಷ ಬರಹಗಳನ್ನು ಪ್ರಕಟಿಸಿದ್ದೇವೆ. ಅದನ್ನು ನೀವು ಓದಬಹುದು. ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ಅದರ ಕಥನ ಇಲ್ಲಿದೆ: ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು, […]

ಹಿರಣ್ಯಕಶಿಪು ಸಂಹರಿಸಲು ನರಸಿಂಹಾವತಾರ ತಳೆದ ಮಹಾವಿಷ್ಣು ಪುರಾಣ
Follow us on

ಮಹಾವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ, ದುಷ್ಟನನ್ನು ಶಿಕ್ಷಿಸಲಿಕ್ಕಾಗಿ 10 ಅವತಾರಗಳನ್ನು ಎತ್ತಿದ. ಅದ್ರಲ್ಲಿ ಮೊದಲನೆಯದಾಗಿ ಮತ್ಸ್ಯಾವತಾರ. ಎರಡನೇ ಅವತಾರ ಕೂರ್ಮಾವತಾರ.. ಮೂರನೇ ಅವತಾರವೇ ವರಾಹ ಅವತಾರ. ಈ ಬಗ್ಗೆ ಈಗಾಗಲೇ ವಿಶೇಷ ಬರಹಗಳನ್ನು ಪ್ರಕಟಿಸಿದ್ದೇವೆ. ಅದನ್ನು ನೀವು ಓದಬಹುದು. ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ಅದರ ಕಥನ ಇಲ್ಲಿದೆ:

ಧರ್ಮ ಸಂಸ್ಥಾಪನೆಗಾಗಿ ಶ್ರೀಮನ್ನಾರಾಯಣ ತಳೆದ ದಶಾವತಾರಗಳ ಪೈಕಿ ನಾಲ್ಕನೇ ಅವತಾರವೇ ನರಸಿಂಹ ಅವತಾರ. ವೈಶಾಖ ಶುದ್ಧ ಚತುರ್ದಶಿಯಂದು ಪ್ರದೋಷ ಕಾಲದಲ್ಲಿ ವಿಷ್ಣು, ನರಸಿಂಹನ ಅವತಾರವಾಯಿತೆಂದು ಪುರಾಣದಲ್ಲಿ ಉಲ್ಲೇಖವಾಗಿದೆ.

ನರಸಿಂಹನ ಅವತಾರದಲ್ಲಿ ಮಹಾವಿಷ್ಣುವು ಸಿಂಹದ ತಲೆ, ಮಾನವನ ದೇಹವುಳ್ಳ ರೂಪದಲ್ಲಿ ಅವತರಿಸಿದ ಎಂದು ಹೇಳಲಾಗುತ್ತೆ. ಅಷ್ಟಕ್ಕೂ, ಮಹಾವಿಷ್ಣು ಈ ರೂಪದಲ್ಲಿ ಅವತರಿಸಿದ್ದಾದ್ರೂ ಏಕೆ ಅಂದ್ರೆ..

ಕೆಲ ಪುರಾಣಗಳ ಪ್ರಕಾರ, ಮಹಾವಿಷ್ಣುವಿನ ವಾಸಸ್ಥಾನವಾದ ವೈಕುಂಠದ ದ್ವಾರಪಾಲಕರೇ ಜಯ-ವಿಜಯರು. ಈ ಸಹೋದರರು ವಿಷ್ಣು ದರ್ಶನಕ್ಕೆ ಬಂದ ಋಷಿಕುಮಾರರನ್ನು ತಡೆದ ಶಾಪದ ಪರಿಣಾಮವಾಗಿ ಭೂಲೋಕದಲ್ಲಿ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಪುವಾಗಿ ಜನಿಸ್ತಾರೆ.

ಇಬ್ಬರು ಸಹೋದರರ ಪೈಕಿ ಹಿರಣ್ಯಾಕ್ಷನ ಸಂಹಾರಕ್ಕಾಗಿ ಮಹಾವಿಷ್ಣು ವರಾಹ ಅವತಾರ ತಳೆದ ಕಥೆಯನ್ನು ಈ ಹಿಂದೆಯೇ ಪ್ರಕಟಿಸಿದ್ದೇವೆ. ಇನ್ನು ಹಿರಣ್ಯಾಕ್ಷನ ಸಹೋದರನಾದ ಹಿರಣ್ಯಕಶಿಪು ಸಂಹಾರಕ್ಕಾಗಿ ವಿಷ್ಣು ತಳೆದ ಆ ವಿಶಿಷ್ಟ ಅವತಾರವೇ ನರಸಿಂಹಾವತಾರ.

ಇದನ್ನೂ ಓದಿ: ಹಿರಣ್ಯಾಕ್ಷನ ಸಂಹಾರಕ್ಕೆ ಮಹಾವಿಷ್ಣು ವರಾಹ ರೂಪದಲ್ಲಿಯೇ ಅವತರಿಸುವುದು ಏಕೆ?

ತನ್ನ ಸಹೋದರ ಹಿರಣ್ಯಾಕ್ಷನನ್ನು ವರಾಹನ ರೂಪದಲ್ಲಿ ಕೊಂದ ಮಹಾವಿಷ್ಣುವಿನ ಮೇಲೆ ಹಿರಣ್ಯಕಶಿಪುವಿಗೆ ಎಲ್ಲಿಲ್ಲದ ಕೋಪ. ಹೀಗಾಗೇ ಸಹೋದರನ ಸಂಹಾರಕ್ಕೆ ಕಾರಣನಾದ ಮಹಾವಿಷ್ಣುವನ್ನು ಕೊಲ್ಲುವ ಸಂಕಲ್ಪ ಮಾಡ್ತಾನೆ. ಅದಕ್ಕಾಗಿ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸು ಮಾಡ್ತಾನೆ.

ಹಿರಣ್ಯಕಶಿಪುವಿನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗ್ತಾನೆ. ಆಗ ಹಿರಣ್ಯಕಶಿಪು ತನಗೆ ನೀನು ಸೃಷ್ಟಿಸಿದ ಯಾವುದೇ ಜೀವಿಗಳಿಂದ ಸಾವು ಬಾರದಂತೆ ವಿಶೇಷ ವರವನ್ನು ನೀಡೆಂದು ಬೇಡ್ತಾನೆ. ಭಕ್ತನ ಬೇಡಿಕೆಗೆ ಇಲ್ಲ ಎನ್ನಲಾಗದ ಬ್ರಹ್ಮ ಥತಾಸ್ತು ಎಂದು ವರ ನೀಡ್ತಾನೆ.

ಬ್ರಹ್ಮನಿಂದ ವರ ಪಡೆದ ಹಿರಣ್ಯಕಶಿಪು ತನಗೆ ಸಮನಾದವರು ಇನ್ಯಾರೂ ಇಲ್ಲ ಎಂದು ಮೆರೆಯುತ್ತಿದ್ದ. ವಿಷ್ಣು ದ್ವೇಷಿಯಾಗಿದ್ದ ಹಿರಣ್ಯಕಶಿಪುವಿಗೆ ಗಂಡು ಮಗುವಿನ ಜನನವಾಯ್ತು. ಪ್ರಹ್ಲಾದನೆಂದು ನಾಮಕರಣಗೊಂಡ ಹಿರಣ್ಯಕಶಿಪುವಿನ ಮಗ ವಿಷ್ಣು ಭಕ್ತನಾಗಿದ್ದ. ಹಿರಣ್ಯಕಶಿಪುಗೆ ಹರಿಯ ಮೇಲಿನ ದ್ವೇಷ ಎಷ್ಟಿತ್ತೆಂದರೆ ವಿಷ್ಣು ಭಕ್ತನಾಗಿದ್ದ ಸ್ವಂತ ಮಗನನ್ನೂ ಕೂಡ ಕೊಲ್ಲಿಸಲು ಮುಂದಾಗ್ತಾನೆ.

ತನ್ನ ಸೈನಿಕರಿಗೆ ಪ್ರಹ್ಲಾದನನ್ನು ಬೆಟ್ಟದಿಂದ ತಳ್ಳುವಂತೆ ಆಜ್ಞೆ ಮಾಡುತ್ತಾನೆ. ಆನೆಗಳಿಂದ ತುಳಿಸುವಂತೆ ಹೇಳ್ತಾನೆ. ವಿಷ ಸರ್ಪಗಳಿಂದ ಕಚ್ಚಿಸಲು ಹೇಳ್ತಾನೆ. ಕೊನೆಗೆ ಪ್ರಹ್ಲಾದನ ತಾಯಿ ಖಯಾದು ಕೈಯಿಂದಲೇ ವಿಷ ಕುಡಿಸಲು ಹೇಳ್ತಾನೆ. ಈ ಎಲ್ಲಾ ಸಂದರ್ಭಗಳಲ್ಲೂ ಪ್ರಹ್ಲಾದನನ್ನು ಶ್ರೀಮನ್ನಾರಾಯಣ ಕಾಪಾಡ್ತಾನೆ.

ಇದೆಲ್ಲದರಿಂದ ಬೇಸತ್ತ ಹಿರಣ್ಯಕಶಿಪು ಒಂದು ದಿನ ತನ್ನ ಮಗ ಪ್ರಹ್ಲಾದನನ್ನು ಕರೆದು ಪ್ರೀತಿಯಿಂದ ಮಾತನಾಡಿಸ್ತಾನೆ. ಆ ಹರಿ ಎಲ್ಲಿದ್ದಾನೆ? ಎಂದು ಪ್ರಶ್ನಿಸ್ತಾನೆ. ಹೀಗೆ ಹಿರಣ್ಯಕಶಿಪು ತನ್ನ ಅರಮನೆಯಲ್ಲಿದ್ದ ಕಂಬವನ್ನು ಗದೆಯಿಂದ ಹೊಡೆಯುತ್ತಾನೆ.

ಆಗ ಕಂಬವನ್ನು ಸೀಳಿಕೊಂಡು ಮಹಾವಿಷ್ಣು ಸಿಂಹದ ಮುಖ, ಮನುಷ್ಯನ ಶರೀರವಿರುವ ನರಸಿಂಹನ ಅವತಾರದಲ್ಲಿ ಹೊರ ಬರ್ತಾನೆ. ಹಿರಣ್ಯಕಶಿಪು ಹಾಗೂ ನರಸಿಂಹಾವತಾರಿ ವಿಷ್ಣುವಿನ ನಡುವೆ ಕಾಳಗ ನಡೆಯುತ್ತೆ.

ಹಿರಣ್ಯಕಶಿಪುವನ್ನು ಎರಡೂ ಕೈಗಳಿಂದ ಎತ್ತಿಕೊಂಡು ಹೊಸ್ತಿಲ ಮೇಲೆ ಕುಳಿತು ತೊಡೆಯ ಮೇಲೆ ಮಲಗಿಸಿಕೊಂಡ. ಹಿರಣ್ಯಕಶಿಪುವಿನ ಹೊಟ್ಟೆ ಬಗೆದು ಕರುಳುಗಳನ್ನು ಹೊರ ತೆಗೆಯುತ್ತಾ ಹಾರವನ್ನಾಗಿ ಹಾಕಿಕೊಳ್ತಾನೆ.

ಹೀಗೆ ಹರಿ ದ್ವೇಷಿಯಾಗಿದ್ದ ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ಮಹಾವಿಷ್ಣು ನರಸಿಂಹನ ಅವತಾರ ತಳೆದ ಅಂತಾ ಪುರಾಣಗಳು ಹೇಳುತ್ತವೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿರುವ ಅಹೋಬಲ ಕ್ಷೇತ್ರ ಶ್ರೀ ನರಸಿಂಹ ಸ್ವಾಮಿಯು ಅವತರಿಸಿದ ಪುಣ್ಯಕ್ಷೇತ್ರ ..