ಮಹಿಳೆಯರಲ್ಲಿ ಕೊವಿಡ್-19 ಸೋಂಕು ನಿರೋಧಕ ವ್ಯವಸ್ಥೆ ಪುರುಷರಿಗಿಂತ ಸದೃಢವಾಗಿರುತ್ತದೆ: ಅಧ್ಯಯನ

|

Updated on: Aug 28, 2020 | 5:15 PM

ಕೊರೊನ ವೈರಸ್ ಸೋಂಕು ಎಲ್ಲರನ್ನೂ ಕಾಡುತ್ತಿದೆ, ಅದಕ್ಕೆ ಲಿಂಗ, ವಯಸ್ಸು, ಜಾತಿ,ಧರ್ಮಗಳೆಂಬ ಬೇಧವಿಲ್ಲ. ಆದರೆ ಒಂದು ವಿಶಿಷ್ಟವಾದ ಸಂಗತಿಯನ್ನು ಈ ಪಿಡುಗಿಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಹೊರಗೆಡಹಿದ್ದಾರೆ. ವಯಸ್ಸಾದ ಪುರುಷರು, ತಮ್ಮ ಸಮವಯಸ್ಸಿನ ಮಹಿಳೆಯರಿಗಿಂತ ಕೊವಿಡ್-19 ಸೋಂಕಿಗೆ ಮತ್ತು ಸಾವಿಗೀಡಾಗುವ ಸಾಧ್ಯತೆಗಳು ದುಪ್ಪಟ್ಟು ಎಂದು ಅವರು ಹೇಳುತ್ತಾರೆ. ನೇಚರ್ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಬುಧವಾರದಂದು ಪ್ರಕಟಗೊಂಡಿರುವ ಕೆಲ ಸಂಶೋಧಕರ ಅಧ್ಯಯನದ ವರದಿಯ ಪ್ರಕಾರ, ವೈರಸ್ ವಿರುದ್ಧ ಹೋರಾಡುವ ಕ್ಷಮತೆ ಮಹಿಳೆಯರ ದೇಹಗಳಿಗಿಂತ ಪುರುಷರ ದೇಹದಲ್ಲಿ ದುರ್ಬಲವಾಗಿರುತ್ತದೆ. ಅವರ ಅಧ್ಯಯನದ […]

ಮಹಿಳೆಯರಲ್ಲಿ ಕೊವಿಡ್-19 ಸೋಂಕು ನಿರೋಧಕ ವ್ಯವಸ್ಥೆ ಪುರುಷರಿಗಿಂತ ಸದೃಢವಾಗಿರುತ್ತದೆ: ಅಧ್ಯಯನ
Follow us on

ಕೊರೊನ ವೈರಸ್ ಸೋಂಕು ಎಲ್ಲರನ್ನೂ ಕಾಡುತ್ತಿದೆ, ಅದಕ್ಕೆ ಲಿಂಗ, ವಯಸ್ಸು, ಜಾತಿ,ಧರ್ಮಗಳೆಂಬ ಬೇಧವಿಲ್ಲ. ಆದರೆ ಒಂದು ವಿಶಿಷ್ಟವಾದ ಸಂಗತಿಯನ್ನು ಈ ಪಿಡುಗಿಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಹೊರಗೆಡಹಿದ್ದಾರೆ. ವಯಸ್ಸಾದ ಪುರುಷರು, ತಮ್ಮ ಸಮವಯಸ್ಸಿನ ಮಹಿಳೆಯರಿಗಿಂತ ಕೊವಿಡ್-19 ಸೋಂಕಿಗೆ ಮತ್ತು ಸಾವಿಗೀಡಾಗುವ ಸಾಧ್ಯತೆಗಳು ದುಪ್ಪಟ್ಟು ಎಂದು ಅವರು ಹೇಳುತ್ತಾರೆ.

ನೇಚರ್ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಬುಧವಾರದಂದು ಪ್ರಕಟಗೊಂಡಿರುವ ಕೆಲ ಸಂಶೋಧಕರ ಅಧ್ಯಯನದ ವರದಿಯ ಪ್ರಕಾರ, ವೈರಸ್ ವಿರುದ್ಧ ಹೋರಾಡುವ ಕ್ಷಮತೆ ಮಹಿಳೆಯರ ದೇಹಗಳಿಗಿಂತ ಪುರುಷರ ದೇಹದಲ್ಲಿ ದುರ್ಬಲವಾಗಿರುತ್ತದೆ. ಅವರ ಅಧ್ಯಯನದ ಪ್ರಕಾರ, 60ಕ್ಕಿತ ಮೇಲ್ಪಟ್ಟ ವಯಸ್ಸಿನ ಪುರುಷರು ತಮ್ಮ ದೇಹ ಸೋಂಕಿನ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿಗಾಗಿ ಲಸಿಕೆಗಳ ಮೊರೆ ಹೋಗಬೇಕಾಗುತ್ತದೆ.

‘‘ದೇಹದಲ್ಲಿ ರೋಗ ನಿರೋಧಕ ಶಕ್ತಿ ಎದುರಿಸುವ ಸವಾಲುಗಳಿಗೆ ಸಂಬಂಧಿಸಿದಂತೆ ಸ್ಥಿರ ಫಲಿತಾಂಶಗಳು ಲಭ್ಯವಾಗುತ್ತಿವೆ. ಪುರುಷರ ದೇಹದಲ್ಲಿ ನೈಸರ್ಗಿಕ ನಿರೋಧಕ ಶಕ್ತಿ ಕಮ್ಮಿಯಾಗುತ್ತಿದೆ. ಆದರೆ ಮಹಿಳೆಯರಲ್ಲಿ ರೋಗ ನಿರೋಧಕ ಪ್ರತಿಕ್ರಿಯೆ ಶಕ್ತಿಯುತವಾಗಿ ಮತ್ತು ಧಾವಂತದಲ್ಲಿ ಉಂಟಾಗುತ್ತದೆ. ಯಾಕೆಂದರೆ ಆವರ ದೇಹವು ಗರ್ಭದಲ್ಲಿರುವ ಮತ್ತು ನವಜಾತ ಶಿಶುಗಳಿಗೆ ತಗುಲಬಹುದಾದ ಸೋಂಕುಗಳ ವಿರುದ್ಧ ಹೋರಾಡಲು ಯುದ್ಧಸನ್ನದ್ಧವಾಗಿರುತ್ತದೆ,’’ ಎಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಯೇಲ್ ಯುನಿವರ್ಸಿಟಿಯ ಪ್ರೊಫೆಸರ್ ಅಕಿಕೊ ಇವಾಸಾಕಿ ಹೇಳುತ್ತಾರೆ.

ಆದರೆ, ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆ ನಿರಂತರವಾಗಿ ಸನ್ನದ್ಧ ಸ್ಥಿತಿಯಲ್ಲಿರುವುದು ಕೂಡ ಅಪಾಯಕಾರಿಯೇ ಎಂದು ಸಂಶೋಧಕರು ಹೇಳುತ್ತಾರೆ. ಇಂಥ ವ್ಯವಸ್ಥೆಯ ಹಿನ್ನೆಲೆಯಲ್ಲಿ ಕೆಲವು ಸಲ ಆ ನಿರೋಧಕ ಶಕ್ತಿಯೇ ದೇಹದ ಮೇಲೆ ಅಕ್ರಮಣ ನಡೆಸುತ್ತದೆ, ಇದು ಮಹಿಳೆಯರಲ್ಲಿ ಜಾಸ್ತಿ ಕಂಡುಬರುವ ಅಂಶವಾಗಿದೆಯೆಂದು ಅವರು ಹೇಳುತ್ತಾರೆ.