ಅಚ್ಚರಿಗಳ ಆಲಯ.. ಪುರಿ ದೇಗುಲದಲ್ಲಿ ವಿಜ್ಞಾನ ಲೋಕವೇ ಚಕಿತಗೊಳ್ಳುವ ಅಚ್ಚರಿ!

ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಹಿಂದೂ ದೇವಾಲಯವಿದೆ. ಈ ದೇವಾಲಯ ವಿಜ್ಞಾನಲೋಕ ಚಕಿತಗೊಳ್ಳುವಂತಹ ನಾನಾ ಅಚ್ಚರಿಗಳನ್ನ ತೆರೆದಿಡುತ್ತಿದೆ. ಭಾರತದ ಪ್ರಮುಖ ವಿಷ್ಣು ಮಂದಿರಗಳಲ್ಲಿ ಒಂದಾಗಿರುವ ಪುರಿ ಜಗನ್ನಾಥ ದೇವಾಲಯವು ಜಗತ್ತನ್ನು ಬೆರಗುಗೊಳಿಸುವ ಅದೆಷ್ಟೋ ವಿಸ್ಮಯಗಳನ್ನ ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಆದಿ ಗುರು ಶ್ರೀಶಂಕರಾಚಾರ್ಯ ಸ್ಥಾಪಿತ ನಾಲ್ಕು ಶಕ್ತಿಪೀಠಗಳಲ್ಲಿ, ವಿಸ್ಮಯಗಳ ಆಗರವಾದ ಪುರಿಯ ಗೋವರ್ಧನ ಪೀಠವೂ ಒಂದು. ಸಾಕ್ಷಾತ್ ಶ್ರೀಮಹಾವಿಷ್ಣು ಇಲ್ಲಿ ಜಗನ್ನಾಥನಾಗಿ ನೆಲೆಸಿದ್ದಾನೆ. ಜೊತೆಗೆ ಶ್ರೀಕೃಷ್ಣ ತನ್ನ ನಿರ್ವಾಣದ ನಂತರ […]

ಅಚ್ಚರಿಗಳ ಆಲಯ.. ಪುರಿ ದೇಗುಲದಲ್ಲಿ ವಿಜ್ಞಾನ ಲೋಕವೇ ಚಕಿತಗೊಳ್ಳುವ ಅಚ್ಚರಿ!
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 28, 2020 | 3:33 PM

ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಹಿಂದೂ ದೇವಾಲಯವಿದೆ. ಈ ದೇವಾಲಯ ವಿಜ್ಞಾನಲೋಕ ಚಕಿತಗೊಳ್ಳುವಂತಹ ನಾನಾ ಅಚ್ಚರಿಗಳನ್ನ ತೆರೆದಿಡುತ್ತಿದೆ.

ಭಾರತದ ಪ್ರಮುಖ ವಿಷ್ಣು ಮಂದಿರಗಳಲ್ಲಿ ಒಂದಾಗಿರುವ ಪುರಿ ಜಗನ್ನಾಥ ದೇವಾಲಯವು ಜಗತ್ತನ್ನು ಬೆರಗುಗೊಳಿಸುವ ಅದೆಷ್ಟೋ ವಿಸ್ಮಯಗಳನ್ನ ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಆದಿ ಗುರು ಶ್ರೀಶಂಕರಾಚಾರ್ಯ ಸ್ಥಾಪಿತ ನಾಲ್ಕು ಶಕ್ತಿಪೀಠಗಳಲ್ಲಿ, ವಿಸ್ಮಯಗಳ ಆಗರವಾದ ಪುರಿಯ ಗೋವರ್ಧನ ಪೀಠವೂ ಒಂದು. ಸಾಕ್ಷಾತ್ ಶ್ರೀಮಹಾವಿಷ್ಣು ಇಲ್ಲಿ ಜಗನ್ನಾಥನಾಗಿ ನೆಲೆಸಿದ್ದಾನೆ. ಜೊತೆಗೆ ಶ್ರೀಕೃಷ್ಣ ತನ್ನ ನಿರ್ವಾಣದ ನಂತರ ಇಲ್ಲಿಯೇ ಶಿಲಾರೂಪದಲ್ಲಿ ನೆಲೆ ನಿಂತು ತನ್ನ ಭಕ್ತರನ್ನ ಹರಸುತ್ತಿದ್ದಾನೆ.

ಗಾಳಿಗೆ ವಿರುದ್ಧ ದಿಕ್ಕಿಗೆ ಹಾರಾಡುತ್ತೆ ಈ ಧ್ವಜ: ಮಹಾವಿಷ್ಣುವು ಜಗನ್ನಾಥನಾಗಿ ನೆಲೆ ನಿಂತಿರುವ ಈ ತಾಣದಲ್ಲಿ ವಿಜ್ಞಾನಕ್ಕೆ ಸವಾಲೆನಿಸುವ ನಾನಾ ಅಚ್ಚರಿಗಳು, ಅದ್ಭುತಗಳು ನಡೆಯುತ್ತವೆ. ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದ್ದು ವಿಜ್ಞಾನಕ್ಕೆ ಸವಾಲೆನಿಸುವ ನಾನಾ ಅಚ್ಚರಿಗಳನ್ನ ಎದುರಾಗಿಸುತ್ತಿದೆ. ದೇವಸ್ಥಾನದ ಮೇಲಿರುವ ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗಕ್ಕೆ, ಗಾಳಿಗೆ ವಿರುದ್ಧ ದಿಕ್ಕಿಗೆ ಹಾರಾಡುವುದು ಜಗನ್ನಾಥನ ಭಕ್ತರಲ್ಲಿ ಅಚ್ಚರಿಯನ್ನ ಮೂಡಿಸುತ್ತಿದೆ.

ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನು ಬದಲಾಯಿಸಿ ಹಾರಾಡಿಲ್ಲ. ಸಾಮಾನ್ಯವಾಗಿ ಗಾಳಿ ಬೀಸುವ ದಿಕ್ಕಿನಲ್ಲಿ ಬಾವುಟ ಹಾರಬೇಕು. ಆದರೆ, ಈ ದೇವಾಲಯದ ಗೋಪುರದ ಮೇಲಿನ ಬಾವುಟ ಗಾಳಿಗೆ ವಿರುದ್ಧವಾಗಿ ಹಾರುತ್ತದೆ. ಈ ಸ್ಥಳದಲ್ಲಿ ಪುರಿ ಜಗನ್ನಾಥನ ಪವಾಡ ಶಕ್ತಿಯೇ ಕಾರಣವೆಂಬುದು ಭಕ್ತರ ಮಾತಾಗಿದೆ. ಪ್ರತಿ ದಿನವೂ ಅರ್ಚಕರು 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸುತ್ತಾರೆ. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯ ತೆರೆಯುವಂತಿಲ್ಲ.

ಪುರಿ ಜಗನಾಥನ ದೇವಾಲಯದ ಗೋಪುರದ ಮೇಲಿನ ವಿಶೇಷತೆಗಳೇನು? ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರಿ ಇಡೀ ಜಗತ್ತನ್ನ ಚಕಿತಗೊಳಿಸುವ ಧ್ವಜದ ಚಮತ್ಕಾರದ ಜೊತೆಗೆ ಇಲ್ಲೊಂದು ವಿಶೇಷವಾದ ವಿಷ್ಣು ಚಕ್ರವಿದೆ. ಆ ವಿಷ್ಣು ಚಕ್ರ ಗೋಪುರದ ಮೇಲಿದೆ. ಈ ಚಕ್ರವು 20 ಅಡಿ ಎತ್ತರವಿದ್ದು, ಪುರಿಯ ಯಾವ ದಿಕ್ಕಿನಿಂದ ನೋಡಿದರೂ ಚಕ್ರ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುತ್ತದೆ. ಭಾರವಾಗಿರುವ ಈ ಚಕ್ರವನ್ನು 2000 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಪುರಿ ದೇವಾಲಯದ ಸಮೀಪದಲ್ಲಿ ಕಡಲ ತೀರವಿದೆ. ದೇವಾಲಯದ ಮುಖ್ಯ ದ್ವಾರಕ್ಕೆ ಬಂದಾಗ ಅಲ್ಲಿ ಸ್ಪಷ್ಟವಾಗಿ ಆ ನದಿಯ ಜುಳು ಜುಳು ಶಬ್ದ ಕೇಳಿಸುತ್ತದೆ. ದೇವಾಲಯದ ಒಳಭಾಗದಲ್ಲಿ ಸ್ವಲ್ಪ ದೂರ ನಡೆದು ಮತ್ತೆ ಮರಳಿ ದ್ವಾರದ ಹತ್ತಿರ ಬಂದರೆ ಸಮುದ್ರದ ಶಬ್ದ ನಿಮಗೆ ಕೇಳಿಸುವುದಿಲ್ಲ.

ಬದಲಾಗಿ ಮತ್ತೊಮ್ಮೆ ದೇವಾಲಯದ ಹೊರಭಾಗದಿಂದ ಒಳಗೆ ಪ್ರವೇಶ ಮಾಡುವಾಗ ಮಾತ್ರ ಈ ಶಬ್ದ ಕೇಳಿಸುತ್ತದೆ. ಐತಿಹಾಸಿಕ ಹಿನ್ನೆಲೆಯಿರುವ ಪುರಿ ಜಗನ್ನಾಥ ದೇವಾಲಯಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡ್ತಾರೆ. ಜಗನ್ನಾಥನ ದರ್ಶನಕ್ಕೆ ಬರುವ ಅಷ್ಟೂ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತೆ. ಹೀಗೆ ತಯಾರಾದ ಪ್ರಸಾದವು ಒಂದು ದಿನವೂ ವ್ಯರ್ಥ್ಯವಾಗಿಲ್ಲ. ಅಷ್ಟು ನಿಖರವಾಗಿಯೇ ಪ್ರಸಾದವನ್ನು ತಯಾರಿಸಲಾಗುತ್ತದೆ.

ಜಗನ್ನಾಥನ ಸನ್ನಿಧಾನದಲ್ಲಿ ಪ್ರಸಾದ ಮಾಡುವ ವಿಧಾನವೂ ಇಲ್ಲಿ ಬಹಳ ವಿಶೇಷ. ಏಳು ಮಣ್ಣಿನ ಮಡಿಕೆಗಳನ್ನು ಪ್ರಸಾದ ತಯಾರಿಸಲು ಬಳಸುತ್ತಾರೆ. ಒಂದರ ಮೇಲೆ ಮತ್ತೊಂದು ಮಡಿಕೆ ಇಟ್ಟು, ಪ್ರಸಾದವನ್ನು ಬೇಯಲು ಇಡುತ್ತಾರೆ. ಆಶ್ಚರ್ಯವೆಂದರೆ ಮೇಲಿನ ಮಡಿಕೆಯ ಪ್ರಸಾದ ಬೆಂದ ನಂತರ ಕೆಳಗಿನ ಮಡಿಕೆಯ ಪ್ರಸಾದ ಬೇಯುತ್ತದೆ.

ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ