ಸುಶಾಂತ್ ಪ್ರಕರಣ: ಮಿಡಿಯಾ ಸರ್ಕಸ್ ನಿಲ್ಲಿಸಿ ಎಂದ ನಿವೃತ್ತ ಪೊಲೀಸ್ ಅಧಿಕಾರಿಗಳು

|

Updated on: Sep 03, 2020 | 7:28 PM

ಮುಂಬೈ ಪೊಲೀಸ್​ಗೆ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಂಟು ಅಧಿಕಾರಿಗಳು, ಆಗಸ್ಟ 31ರಂದು ಬಾಂಬೆ ಹೈಕೋರ್ಟ್​ಗೆ ಮನವಿಯೊಂದನ್ನು ಸಲ್ಲಿಸಿ ಸುಶಾಂತ್ ಸಿಂಗ್ ರಜಪೂತ ನಿಗೂಢ ಸಾವಿನ ಪ್ರಕರಣದಲ್ಲಿ, ರಾಷ್ಟ್ರೀಯ ಸುದ್ದಿ ಚ್ಯಾನೆಲ್​ಗಳು ದಿನಂಪ್ರತಿ ಬಿತ್ತರಿಸುತ್ತಿರುವ ಸುಳ್ಳು, ಅಸಮರ್ಪಕ, ಹಾಗೂ ದುರದ್ದೇಶಪೂರಿತ ಸುದ್ದಿಗಳನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಬೇಕೆಂದು ಕೋರಿದ್ದಾರೆ. ‘‘ಕೆಲವು ಚ್ಯಾನೆಲ್​ಗಳ ಌಂಕರ್​ಗಳು ಸುಳ್ಳು, ಅವಮಾನಕರ ಮತ್ತು ಘಾತಕಕಾರಿ ಸುದ್ದಿಯನ್ನು ನಿರ್ಭಿಡೆಯಿಂದ ಬಿತ್ತರಿಸುತ್ತಿದ್ದಾರೆ. ಕೋಟ್ಯಾಂತರ ಅಮಾಯಕ ವೀಕ್ಷಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ಜನರಿಗೆ ಮುಂಬೈ […]

ಸುಶಾಂತ್ ಪ್ರಕರಣ: ಮಿಡಿಯಾ ಸರ್ಕಸ್ ನಿಲ್ಲಿಸಿ ಎಂದ ನಿವೃತ್ತ ಪೊಲೀಸ್ ಅಧಿಕಾರಿಗಳು
Follow us on

ಮುಂಬೈ ಪೊಲೀಸ್​ಗೆ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಂಟು ಅಧಿಕಾರಿಗಳು, ಆಗಸ್ಟ 31ರಂದು ಬಾಂಬೆ ಹೈಕೋರ್ಟ್​ಗೆ ಮನವಿಯೊಂದನ್ನು ಸಲ್ಲಿಸಿ ಸುಶಾಂತ್ ಸಿಂಗ್ ರಜಪೂತ ನಿಗೂಢ ಸಾವಿನ ಪ್ರಕರಣದಲ್ಲಿ, ರಾಷ್ಟ್ರೀಯ ಸುದ್ದಿ ಚ್ಯಾನೆಲ್​ಗಳು ದಿನಂಪ್ರತಿ ಬಿತ್ತರಿಸುತ್ತಿರುವ ಸುಳ್ಳು, ಅಸಮರ್ಪಕ, ಹಾಗೂ ದುರದ್ದೇಶಪೂರಿತ ಸುದ್ದಿಗಳನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಬೇಕೆಂದು ಕೋರಿದ್ದಾರೆ.

‘‘ಕೆಲವು ಚ್ಯಾನೆಲ್​ಗಳ ಌಂಕರ್​ಗಳು ಸುಳ್ಳು, ಅವಮಾನಕರ ಮತ್ತು ಘಾತಕಕಾರಿ ಸುದ್ದಿಯನ್ನು ನಿರ್ಭಿಡೆಯಿಂದ ಬಿತ್ತರಿಸುತ್ತಿದ್ದಾರೆ. ಕೋಟ್ಯಾಂತರ ಅಮಾಯಕ ವೀಕ್ಷಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇವರ ಬೇಜವಾಬ್ದಾರಿತನದಿಂದಾಗಿ ಜನರಿಗೆ ಮುಂಬೈ ಪೊಲೀಸ್ ಮೇಲೆ ಅಪನಂಬಿಕೆ ಉಂಟಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಜಾರಿಯಲ್ಲಿರುವ ತನಿಖೆಯ ಮೇಲೂ ಪ್ರಭಾವ ಬೀರುವ ಪ್ರಯತ್ನವನ್ನು ಮಾಡುತ್ತಿದ್ದಾರೆ,’’ ಎಂದು ಅಧಿಕಾರಿಗಳು ತಮ್ಮ ಮನವಿಯಲ್ಲಿ ಹೇಳಿದ್ದಾರೆ.

‘‘ಮುಂಬೈ ಪೊಲೀಸ್ ಭಾರತದ ಬಹಳ ಹಳೆಯ ಮತ್ತು ಅತ್ಯಂತ ವಿಶ್ವಾಸಾರ್ಹ ಪೊಲೀಸ್ ವ್ಯವಸ್ಥೆಯಾಗಿದೆ. ಸಾರ್ವಜನಿಕ ಸೇವೆಯಲ್ಲಿ ಮುಂಬೈ ಪೊಲೀಸ್ ತೋರುವ ವೃತ್ತಿಪರತೆ ಪ್ರಶ್ನಾತೀತವಾಗಿದೆ. ಇದನ್ನು ಹಾಳು ಮಾಡುವ ಕೆಲಸದಲ್ಲಿ ಮಿಡಿಯಾ ಹೌಸ್​ಗಳು ತೊಡಗಿರುವಂತಿವೆ. ದಯವಿಟ್ಟು ಇದನ್ನು ನಿಲ್ಲಿಸುವಂತೆ ಸೂಚನೆ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ,‘‘ ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಚ್ಯಾನೆಲ್​ಗಳು ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ಸುದ್ದಿ ಬಿತ್ತರಿಸಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಜನಕ್ಕೆ ಸುಳ್ಳು ಹೇಳುವುದು ಬೇಡ. ಆನೇಕ ಜನರ ಚಾರಿತ್ರ್ಯವಧೆ ಚ್ಯಾನೆಲ್​ಗಳಲ್ಲಿ ನಡೆಯುತ್ತಿದೆ. ಅವರು ಬಿತ್ತರಿಸುವ ಸುದ್ದಿ ಸಮತೋಲಿತ, ನ್ಯಾಯಯುತ ಮತ್ತು ಕೇವಲ ವಸ್ತುನಿಷ್ಠವಾಗಿರಲಿ ಅಂತ ನಿವೃತ್ತ ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ಮಹಾನಗರದ ಮಾಜಿ ಪೊಲೀಸ್ ಮುಖ್ಯಸ್ಥರಾದ ಎಮ್ ಎನ್ ಸಿಂಗ್, ಪಿ ಎಸ್ ಪಸ್ರಿಚಾ, ಕೆ ಶಿವಾನಂದನ್, ಸಂಜೀವ್ ದಯಾಳ್, ಸತೀಶ್ ಮಾಥುರ್ ಮತ್ತು ಕೆ ಸುಮ್ರಮಣ್ಯಮ್ ಅವರಲ್ಲದೆ, ಮುಂಬೈನ ಮಾಜಿ ಪೊಲೀಸ್ ಕಮೀಷನರ್ ಡಿ ಎನ್ ಜಾಧವ್ ಮತ್ತು ಮಾಜಿ ಹೆಚ್ಚುವರಿ ಡಿಜಿಪಿ ಕೆ ಪಿ ರಘುವಂಶಿ ಮನವಿಯನ್ನು ಸಲ್ಲಿಸಿರುವ ಅಧಿಕಾರಿಗಳಾಗಿದ್ದಾರೆ.