ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು?
ಪುರಾಣಗಳಿಗೆ ಸಂಬಂಧಿಸಿದ ವಿಚಾರಗಳ ಹಾಗೂ ಕೆಲವೊಂದು ಆಚರಣೆಗಳ ಬಗ್ಗೆ ನಮ್ಮಲ್ಲಿ ನಾನಾ ರೀತಿಯ ಸಂಶಯಗಳು, ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಅಂತಹ ಸಂಶಯಗಳಲ್ಲಿ ಒಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು? ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು? ಪ್ರದಕ್ಷಿಣೆ ಹಾಕಿದ್ರೆ ಏನಾಗುತ್ತೆ? ಪ್ರದಕ್ಷಿಣೆ ಹಾಕೋದ್ರಿಂದ ಸಿಗೋ ಫಲಗಳೇನು? ಅನ್ನೋ ಪ್ರಶ್ನೆಗಳು ಸರ್ವೇಸಾಮಾನ್ಯವಾಗಿ ಮೂಡುತ್ತೆ. ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಪುರಾಣಗಳ ಪ್ರಕಾರ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕೋದರ ಹಿಂದೆ ಒಂದು […]
ಪುರಾಣಗಳಿಗೆ ಸಂಬಂಧಿಸಿದ ವಿಚಾರಗಳ ಹಾಗೂ ಕೆಲವೊಂದು ಆಚರಣೆಗಳ ಬಗ್ಗೆ ನಮ್ಮಲ್ಲಿ ನಾನಾ ರೀತಿಯ ಸಂಶಯಗಳು, ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಅಂತಹ ಸಂಶಯಗಳಲ್ಲಿ ಒಂದು ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು? ದೇವಸ್ಥಾನಕ್ಕೆ ಪ್ರದಕ್ಷಿಣೆ ಯಾಕೆ ಹಾಕಬೇಕು? ಪ್ರದಕ್ಷಿಣೆ ಹಾಕಿದ್ರೆ ಏನಾಗುತ್ತೆ? ಪ್ರದಕ್ಷಿಣೆ ಹಾಕೋದ್ರಿಂದ ಸಿಗೋ ಫಲಗಳೇನು? ಅನ್ನೋ ಪ್ರಶ್ನೆಗಳು ಸರ್ವೇಸಾಮಾನ್ಯವಾಗಿ ಮೂಡುತ್ತೆ. ಇಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಪುರಾಣಗಳ ಪ್ರಕಾರ, ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕೋದರ ಹಿಂದೆ ಒಂದು ಕಾರಣವಿದೆ.
ಅದೇನಂದ್ರೆ ಭಗವಂತನ ಬಳಿ.. ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ. ನೀನು ತೋರಿಸಿದ ಮಾರ್ಗದಲ್ಲಿ ನಾವು ನಡೆಯುತ್ತೇವೆ ಅನ್ನೋದರ ಸಂಕೇತವಾಗಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಲಾಗುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ದೇವಸ್ಥಾನಕ್ಕೆ ಎಷ್ಟು ಬಾರಿ ಪ್ರದಕ್ಷಿಣೆ ಹಾಕಬೇಕು? ಹಿಂದೂ ಪುರಾಣಗಳ ಪ್ರಕಾರ, ದೇವರಿಗೆ ಹಾಕುವ ಪ್ರದಕ್ಷಿಣೆಯ ಬಗ್ಗೆ ಹಲವಾರು ಕಥೆಗಳಿವೆ. ಒಮ್ಮೆ ಶಿವ ತನ್ನ ಇಬ್ಬರು ಪುತ್ರರಾದ ಗಣಪತಿ ಮತ್ತು ಕಾರ್ತಿಕೇಯರನ್ನು ಕರೆದು ಇಡೀ ಭೂಮಂಡಲವನ್ನು ಸುತ್ತಿ ಬರಲು ತಿಳಿಸುತ್ತಾನೆ. ಆಗ ಸುಬ್ರಮಣ್ಯ ತನ್ನ ವಾಹನ ನವಿಲನ್ನೇರಿಕೊಂಡು ವಿಶ್ವ ಪರ್ಯಟನೆಗೆ ಮುಂದಾಗ್ತಾನೆ. ಆದ್ರೆ ಗಣಪತಿ ಮಾತ್ರ ಅಲ್ಲೇ ಇದ್ದು ಯೋಚಿಸ್ತಾನೆ. ನಂತರ ತನ್ನ ಮಾತಾ-ಪಿತೃಗಳಾದ ಲಯಕಾರಕ ಪರಮೇಶ್ವರ ಮತ್ತು ಪಾರ್ವತಿದೇವಿಯನ್ನು 3 ಬಾರಿ ಪ್ರದಕ್ಷಿಣೆ ಹಾಕ್ತಾನೆ!
ಗಣಪತಿ ಪ್ರದಕ್ಷಿಣೆ ಹಾಕೋದನ್ನು ಕಂಡ ಶಿವ, ಇದು ಮೋಸವಲ್ಲವೇ ಅಂತಾ ಆತನಿಗೆ ಕೇಳ್ತಾನೆ. ಶಿವನ ಪ್ರಶ್ನೆಗೆ ಉತ್ತರವಾಗಿ ಗಣಪತಿ, ನಿಮ್ಮೊಳಗೆ ವಿಶ್ವವೇ ಇದೆ. ಹಾಗಾಗಿ ನಾನು ನಿಮ್ಮನ್ನು ಪ್ರದಕ್ಷಿಣೆ ಮಾಡಿದೆ ಅಂತಾ ನಮ್ರವಾಗಿ ಹೇಳ್ತಾನೆ. ಗಣಪತಿಯ ಮಾತಿಗೆ ಶಿವ-ಪಾರ್ವತಿಯರು ಪ್ರಸನ್ನರಾಗ್ತಾರೆ. ಹೀಗೆ ಪುರಾಣದಲ್ಲಿ ಪ್ರದಕ್ಷಿಣೆಯ ಬಗ್ಗೆ ಈ ಕಥೆಯನ್ನು ಹೇಳಲಾಗಿದೆ.
ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ನಾವು ಇಂದಿಗೂ ಸಹ ಗಣಪತಿ ಅನುಸರಿಸಿದ ಮಾರ್ಗವನ್ನೇ ಅನುಸರಿಸುತ್ತಿದ್ದೇವೆ. ಅಂದರೆ, ಸಾಮಾನ್ಯವಾಗಿ ದೇವರಿಗೆ 3 ಬಾರಿ ಪ್ರದಕ್ಷಿಣೆ ಹಾಕುತ್ತೇವೆ. ಇನ್ನು ಪ್ರದಕ್ಷಿಣೆಗಳಲ್ಲಿ ಅನೇಕ ವಿಧಗಳಿವೆ. ಕೆಲವರು ಕೈ ಮುಗಿದು, ಕಣ್ಣು ಮುಚ್ಚಿಕೊಂಡು ಪ್ರದಕ್ಷಿಣೆ ಹಾಕಿದ್ರೆ, ಮತ್ತೆ ಕೆಲವರು ಮಂತ್ರವನ್ನು ಪಠಿಸುತ್ತಾ ಪ್ರದಕ್ಷಿಣೆ ಹಾಕ್ತಾರೆ. ಹೀಗೆ ಮಾಡಿದ್ರೆ ದೇವರು ನಮ್ಮ ಸನಿಹವೇ ಇದ್ದಾನೆ ಅನ್ನೋ ಭಾವನೆ ಮೂಡುತ್ತೆ ಅಂತಾ ಹಿರಿಯರು ಹೇಳಿದ್ದಾರೆ. ದೇವರಿಗೆ ಮಾಡುವ ಪ್ರದಕ್ಷಿಣೆ ತುಂಬಾ ಪವಿತ್ರವೆಂದು ಭಾವಿಸಲಾಗಿದೆ.
ಪುರಾಣಗಳ ಪ್ರಕಾರ, ಪ್ರದಕ್ಷಿಣೆ ಹಾಕಲು ಕೆಲ ನಿಯಮಗಳಿವೆ. ಅದೇನಂದ್ರೆ, ಕೈಗಳನ್ನು ಎದೆಯ ಮೇಲೆ ಜೋಡಿಸಿಕೊಂಡು, ಸಣ್ಣ ಸಣ್ಣ ಹೆಜ್ಜೆಗಳನ್ನು ಹಾಕುತ್ತಾ ನಿಧಾನವಾಗಿ ಮುನ್ನಡೆಯಬೇಕು. ದೇವಸ್ಥಾನದಲ್ಲಿರುವ ದೇವರ ಮಂತ್ರವನ್ನು ಜಪಿಸುತ್ತಾ, ಹೃದಯಲ್ಲಿ ಆ ದೇವರ ಚಿತ್ರವನ್ನು ಜ್ಞಾಪಿಸಿಕೊಳ್ಳಬೇಕು. ಇದರಿಂದ ಸಂಪೂರ್ಣ ಶಾಂತಿ ಮತ್ತು ಶರಣಾದ ಭಾವನೆ ಮೂಡುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ದೇವಸ್ಥಾನಗಳ ಸುತ್ತ ಧನಾತ್ಮಕ ಹಾಗೂ ಆಯಸ್ಕಾಂತೀಯ ಶಕ್ತಿ ಇರುತ್ತೆ. ನಾವು ಭಗವಂತನಿಗೆ ಪ್ರದಕ್ಷಿಣೆ ಹಾಕೋದ್ರಿಂದ ನಮ್ಮ ಮೇಲೆ ಧನಾತ್ಮಕ ಶಕ್ತಿ ಪ್ರವಹಿಸಿ ಋಣಾತ್ಮಕ ಶಕ್ತಿ ದೂರವಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಭಗವಂತನಿಗೆ ಪ್ರದಕ್ಷಿಣೆ ಹಾಕೋದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನಂದ್ರೆ, ನಮ್ಮ ಮನಸ್ಸಿನ ಮೇಲೆ ಹಿಡಿತ ಬರಲಿದೆ. ಮನಸ್ಸಿನ ನೆಮ್ಮದಿ ಹೆಚ್ಚಾಗುತ್ತೆ ಹಾಗೂ ಆರೋಗ್ಯ ಸುಧಾರಿಸುತ್ತೆ ಅಂತಾ ಹೇಳಲಾಗುತ್ತೆ.
ಇದನ್ನೂ ಓದಿ: ಯಾವ ದೇವರಿಗೆ, ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಈ ಫಲಗಳು ಪ್ರಾಪ್ತಿಯಾಗುತ್ತವೆ?