AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರವನ್ನು ‘ತಾಲಿಬಾನ್’​ಗೆ ಹೋಲಿಸಿದ ಕ್ವೀನಾ ಕಂಗನಾ

ಪ್ರಸ್ತುತವಾಗಿ ತನ್ನ ತಾಯ್ನಾಡಾದ ಹಿಮಾಚಲ ಪ್ರದೇಶದಲ್ಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್, ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಸರ್ಕಾರ ವಿರುದ್ಧ ಟೀಕೆ ಮಾಡುವುದನ್ನು ಮುಂದುವರಿಸಿ, ಶಿವ ಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಗುರುವಾರದಂದು, ಬಾಲಿವುಡ್​ನಲ್ಲಿ ಡ್ರಗ್ಸ್ ಜಾಲ ಸಕ್ರಿಯವಾಗಿದೆ ಮತ್ತು ಮುಂಬೈ ಮಹಾನಗರ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿದೆ ಎಂದಿದ್ದ ಈ ಆತ್ಯಂತ ಪ್ರತಿಭಾನ್ವಿತ ನಟಿ ಇಂದು ಮಹಾರಾಷ್ಟ್ರವನ್ನು ತಾಲಿಬಾನ್​ಗೆ ಹೋಲಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಆವರ ಸಾವಿಗೆ ಡ್ರಗ್ […]

ಮಹಾರಾಷ್ಟ್ರವನ್ನು ‘ತಾಲಿಬಾನ್’​ಗೆ ಹೋಲಿಸಿದ ಕ್ವೀನಾ ಕಂಗನಾ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 04, 2020 | 6:54 PM

Share

ಪ್ರಸ್ತುತವಾಗಿ ತನ್ನ ತಾಯ್ನಾಡಾದ ಹಿಮಾಚಲ ಪ್ರದೇಶದಲ್ಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರನೌತ್, ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಸರ್ಕಾರ ವಿರುದ್ಧ ಟೀಕೆ ಮಾಡುವುದನ್ನು ಮುಂದುವರಿಸಿ, ಶಿವ ಸೇನೆ ಹಾಗೂ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಗುರುವಾರದಂದು, ಬಾಲಿವುಡ್​ನಲ್ಲಿ ಡ್ರಗ್ಸ್ ಜಾಲ ಸಕ್ರಿಯವಾಗಿದೆ ಮತ್ತು ಮುಂಬೈ ಮಹಾನಗರ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗಿದೆ ಎಂದಿದ್ದ ಈ ಆತ್ಯಂತ ಪ್ರತಿಭಾನ್ವಿತ ನಟಿ ಇಂದು ಮಹಾರಾಷ್ಟ್ರವನ್ನು ತಾಲಿಬಾನ್​ಗೆ ಹೋಲಿಸಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಆವರ ಸಾವಿಗೆ ಡ್ರಗ್ ಜಾಲವೇ ಕಾರಣವೆಂದು ಸಹ ಕಂಗನಾ ಆರೋಪಿಸಿದ್ದರು.

ಸುಶಾಂತ್ ಸಾವಿನ ಬಗ್ಗೆ ಕಂಗನಾ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಶಿವ ಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ ರಾವತ್, ಆಕೆಗೆ ಮುಂಬೈ ಪೊಲೀಸ್​ ಭಯವಿದೆ, ಆಕೆ ಹಿಮಾಚಲ ಪ್ರದೇಶದಲ್ಲೇ ಇರಲಿ, ಮುಂಬೈಗೆ ಬರುವುದು ಬೇಡ ಎಂದಿದ್ದರು. ಕಂಗನಾ ಸಹ, ಅಷ್ಟೇ ಖಡಕ್ಕಾದ ಟ್ವೀಟ್ ಮೂಲಕ ರಾವತ್ ಅವರಿಗೆ ಉತ್ತರ ನೀಡಿ, ಸ್ವಾತಂತ್ರ್ಯದ ಘೋಷಣೆಗಳನ್ನು ಮುಂಬೈ ನಗರದ ಓಣಿಗಳಲ್ಲಿ ಕೂಗಿದ ನಂತರ ರಾವತ್ ಅವರು ನನಗೆ ಬಹಿರಂಗ ಬೆದರಿಕೆ ಒಡ್ಡುತ್ತಿದ್ದಾರೆ ಎಂದಿದ್ದರು.

‘‘ಶಿವ ಸೇನೆಯ ನಾಯಕ ಸಂಜಯ ರಾವತ್ ಅವರು ನನಗೆ ಬಹಿರಂಗ ಬೆದರಿಕೆ ನೀಡಿ ಮುಂಬೈಗೆ ಬರಬೇಡ ಎಂದು ಹೇಳಿದ್ದಾರೆ. ಮುಂಬೈನ ಬೀದಿಗಳಲ್ಲಿ ಇವರೆಲ್ಲ ಮೊದಲು ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತಾರೆ ನಂತರ ಇಂಥ ಬೆದರಿಕೆಗಳನ್ನು ಒಡ್ಡುತ್ತಾರೆ. ನಂಗ್ಯಾಕೋ ಮುಂಬೈ ನಗರವೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಗೋಚರವಾಗುತ್ತಿದೆ@KanganaTeam’’ ಎಂದು ಕಂಗನಾ ಟ್ವೀಟ್ ಮಾಡಿದ್ದರು.

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್ ಇಂದು ಹೇಳಿಕೆಯೊಂದನ್ನು ನೀಡಿ, ಕಂಗನಾ ಮುಂಬೈನಲ್ಲಿ ವಾಸಿಸಲು ಅಯೋಗ್ಯಳು ಎಂದು ಹೇಳಿದ್ದಾರೆ.

‘‘ಮುಂಬೈ ಪೊಲೀಸನ್ನು ಸ್ಕಾಟ್ಲೆಂಡ್ ಯಾರ್ಡ್​ನೊಂದಿಗೆ ಹೋಲಿಸಲಾಗುತ್ತದೆ. ಕೆಲವು ಜನ ಮುಂಬೈ ಪೊಲೀಸನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಬ್ಬ ಐಪಿಎಸ್ ಅಧಿಕಾರಿ ಪೊಲೀಸರ ವಿರುದ್ಧ ನ್ಯಾಯಾಲಯದ ಕಟೆಕಟೆ ಹತ್ತಿದ್ದಾರೆ. ಆಕೆಯ (ಕಂಗನಾ ರನೌತ್) ಹೋಲಿಕೆಯ ನಂತರ……ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ವಾಸ ಮಾಡುವುದಕ್ಕೆ ಆಕೆಗೆ ಯಾವುದೇ ಅಧಿಕಾರವಿಲ್ಲ.’’ ಎಂದು ದೇಶ್​ಮುಖ್ ಹೇಳಿದ್ದಾರೆ.

ದೇಶ್​ಮುಖ್​ ಅವರ ಹೇಳಿಕೆಗೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಂಗನಾ, ‘‘ಗೃಹ ಸಚಿವರು ನನ್ನ ಸಂವೈಧಾನಿಕ ಹಕ್ಕುಗಳ ಮೇಲೆ ಆಕ್ರಮಣ ಮಾಡುತ್ತಿದ್ದಾರೆ, ಒಂದೇ ದಿನದಲ್ಲಿ ಅವರು ಪಾಕ್ ಆಕ್ರಮಿತ ಕಾಶ್ಮೀರವನ್ನು ತಾಲಿಬಾನ್ ಆಗಿ ಪರಿವರ್ತಿಸಿದ್ದಾರೆ,’’ ಎಂದಿದ್ದಾರೆ.