ಲಾಲಾ ಅಮರನಾಥ್ ಹಾಗೂ ಅವರ ಪುತ್ರರಾದ ಮೊಹಿಂದರ್ ಮತ್ತು ಸುರಿಂದರ್ ಅಮರನಾಥ್ ಭಾರತೀಯ ಕ್ರಿಕೆಟ್ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸುರಿಂದರ್ ಅಮರನಾಥ್ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಶಾಲಾ ಕ್ರಿಕೆಟ್‌ನಲ್ಲಿ ಅಬ್ಬರ ತೋರಿದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕಾಗಿ 10 ಟೆಸ್ಟ್ ಪಂದ್ಯಗಳನ್ನು ಆಡಿದ ಅದೇ ಸುರಿಂದರ್, ತಮ್ಮ ಮೊದಲ ಪಂದ್ಯದಲ್ಲಿ ಅದ್ಭುತ ಶತಕ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಸ್ಮರಣೀಯ ಚೊಚ್ಚಲ ಪ್ರವೇಶ ಪಡೆದರು. ಇದರೊಂದಿಗೆ ಮತ್ತೊಂದು ಕುತೂಹಲಕಾರಿ ಕಥೆ ಇದೆ. ಅದೇನೆಂದರೆ, ಸುರಿಂದರ್ ಅಮರನಾಥ್ ತಮ್ಮ 15 ನೇ ವಯಸ್ಸಿನಲ್ಲಿ ತಮ್ಮ ತಂದೆ ಲಾಲಾ ಅಮರನಾಥ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಹೌದು.. ಡಿಸೆಂಬರ್ 30, 1948 ರಂದು ಕಾನ್ಪುರದಲ್ಲಿ ಜನಿಸಿದ ಸುರಿಂದರ್ ಅಮರನಾಥ್ ಅವರು ಶಾಲಾ ತಂಡದ ಪರವಾಗಿ ಇಂಗ್ಲೆಂಡ್ ಪ್ರವಾಸ ಮಾಡಿದ್ದರು. ಆ ಪಂದ್ಯದಲ್ಲಿ ಶತಕ ಗಳಿಸಿದ ಅವರು ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡಕ್ಕೆ ಅತ್ಯುತ್ತಮ ಗೆಲುವು ತಂದುಕೊಟ್ಟಿದ್ದರು. ನಂತರ 1975 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಅನಧಿಕೃತ ಟೆಸ್ಟ್ ಪಂದ್ಯವನ್ನಾಡಿದ ಸುರಿಂದರ್ ಅಲ್ಲೂ ಸಹ ಒಂದು ಶತಕ ಬಾರಿಸಿದರು. ಜೊತೆಗೆ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದ ಸುರಿಂದರ್ ಅಮರನಾಥ್ ಅಲ್ಲಿಯೂ ಸಹ ಒಂದು ಶತಕ ಬಾರಿಸಿದರು.
ತಂದೆಯ ತಂಡದ ವಿರುದ್ಧ 86 ರನ್ ಗಳಿಸಿದ ಸುರಿಂದರ್ ಅಮರನಾಥ್..
ಸುರಿಂದರ್ ಅಮರನಾಥ್ ಅವರು 15 ವರ್ಷ ವಯಸ್ಸಿನವರಾಗಿದ್ದಾಗ ತಮ್ಮ ಪ್ರಥಮ ದರ್ಜೆ ಪಂದ್ಯವನ್ನಾಡಿದರು. ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಪೂನಾದಲ್ಲಿ ಈ ಪಂದ್ಯವನ್ನು ಆಯೋಜಿಸಲಾಗಿತ್ತು. ಇನ್ನೂ ಹೆಚ್ಚು ಕುತೂಹಲಕಾರಿ ಸಂಗತಿಯೆಂದರೆ, ಇದು ಸುರಿಂದರ್ ಅಮರನಾಥ್ ಅವರ ಮೊದಲ ಪ್ರಥಮ ದರ್ಜೆ ಪಂದ್ಯವಾಗಿದ್ದರೆ, ಎದುರಾಳಿ ತಂಡದಲ್ಲಿದ್ದ ಅವರ ತಂದೆ 52 ವರ್ಷದ ಲಾಲಾ ಅಮರನಾಥ್ ಅವರ ಕೊನೆಯ ಪ್ರಥಮ ದರ್ಜೆ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸುರಿಂದರ್ ಅಮರನಾಥ್ 86 ರನ್ ಬಾರಿಸಿದ್ದರು.
ಸುರಿಂದರ್ ಅಮರನಾಥ್ ಅವರ ವೃತ್ತಿಜೀವನ
ಸುರಿಂದರ್ ಅಮರನಾಥ್ ಟೀಮ್ ಇಂಡಿಯಾ ಪರ 10 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಅವರು 30.55 ರ ಸರಾಸರಿಯಲ್ಲಿ 550 ರನ್ ಗಳಿಸಿದರೆ, ಏಕದಿನ ಪಂದ್ಯಗಳಲ್ಲಿ ಅವರ ಬ್ಯಾಟ್ನಿಂದ 33.33 ರ ಸರಾಸರಿಯಲ್ಲಿ 100 ರನ್ ಬಂದಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ವಿಕೆಟ್ ಸುರಿಂದರ್ ಅಮರನಾಥ್ 1 ಶತಕ ಮತ್ತು ಮೂರು ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
1983 Prudential World Cup ಗೆದ್ದುಕೊಟ್ಟಿದ್ದ ಮೊಹಿಂದರ್ ಅಮರನಾಥ್
ಲಾಲಾ ಅಮರನಾಥ್ ಅವರ ಮತ್ತೊಬ್ಬ ಮಗ ಮೊಹಿಂದರ್ ಅಮರನಾಥ್ ಸಹ ಭಾರತ ತಂಡ ಕಂಡ ಶ್ರೇಷ್ಠ ಕ್ರಿಕೆಟ್ಟಿಗ. ಆಲ್ ರೌಂಡರ್. ಮನಮೋಹಕ ಬ್ಯಾಟ್ಸ್ಮನ್. 1983 ರಲ್ಲಿ ಟೀಂ ಇಂಡಿಯಾ ಗೆದ್ದ ಚೊಚ್ಚಲ ವಿಶ್ವಕಪ್ನಲ್ಲಿ ಮೊಹಿಂದರ್ ಅಮರನಾಥ್ ಅವರ ಪಾತ್ರ ನಿರ್ಣಾಯಕವಾಗಿತ್ತು. ಸೆಮಿಫೈನಲ್ ಹಾಗೂ ಫೈನಲ್‌ನಲ್ಲಿ ಅವರು ತೋರಿದ ಪರಾಕ್ರಮ ಟೀಂ ಇಂಡಿಯಾಕ್ಕೆ ವಿಶ್ವಕಪ್ ತಂದುಕೊಟ್ಟಿತು.
1983 ರ ವಿಶ್ವಕಪ್ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊಹಿಂದರ್ ಅಮರನಾಥ್ ಅವರ ಸರ್ವಾಂಗೀಣ ಪ್ರದರ್ಶನ ಫೈನಲ್‌ನಲ್ಲಿ ಭಾರತವು ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇಂಗ್ಲೆಂಡ್ ತಂಡದ ಗ್ಯಾಟಿಂಗ್ ಮತ್ತು ಗೋವರ್ ಅವರ ವಿಕೆಟ್ ಪಡೆಯುವುದಲ್ಲದೆ ತಂಡಕ್ಕೆ ಅವಶ್ಯಕವಾದ 46 ರನ್ ಗಳಿಸಿದರು.
ಇದರ ಜೊತೆಗೆ ಫೈನಲ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡಿಸ್ ತಂಡವನ್ನು ಎದುರಿಸಿದ ಭಾರತ ತಂಡವು ಮೊದಲು ಬ್ಯಾಟ್ ಮಾಡಿ 183 ರನ್ ಕಲೆಹಾಕಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಗೆದ್ದೆ ಗೆಲುತ್ತದೆ ಎಂದುಕೊಂಡಿದ್ದವರಿಗೆ ಮೊದಲು ಶಾಕ್ ನೀಡಿದ್ದು ಟೀಂಇಂಡಿಯಾದ ಬಲ್ವಿಂದರ್ ಸಿಂಗ್ ಸಾಂಧು, ವಿಂಡೀಸ್ ಓಪನರ್ ಗಾರ್ಡನ್ ಗ್ರಿನಿಡ್ಜ್ ಅವರನ್ನು ಔಟ್ ಮಾಡುವ ಮೂಲಕ ಶುಭಾರಂಭ ತಂದುಕೊಟ್ಟರು. ನಂತರ ಮದನ್ ಲಾಲ್ ಅವರು ಅಪಾಯಕಾರಿಯಾದ ಸರ್ ಐಸಾಕ್ ವಿವಿಯನ್ ರಿಚರ್ಡ್ಸ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಗೆಲುವನ್ನ ಸನಿಹಕ್ಕೆ ತಂದಿಟ್ಟರು.
ಒಂದು ಹಂತದಲ್ಲಿ, ವೆಸ್ಟ್ ಇಂಡೀಸ್ 6 ನಿಕೆಟ್ ನಷ್ಟಕ್ಕೆ 76 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವೆಸ್ಟ್ ಇಂಡೀಸ್ ಬಾಲಗೊಂಚಿಗಳು ಮೈದಾನದಲ್ಲಿ ಉತ್ತಮವಾಗಿ ಆಟವಾಡಲು ಪ್ರಾರಂಭಿಸಿದರು. ಈ ವೇಳೆ ದಾಳಿಗಿಳಿದ ಮೊಹಿಂದರ್ ಅಮರನಾಥ್ 3 ವಿಕೆಟ್ ಪಡೆದು ಮಿಂಚಿದರು. ಮತ್ತು ಬ್ಯಾಟಿಂಗ್ನಲ್ಲಿ ತಂಡಕ್ಕೆ ಅವಶ್ಯಕವಾದ 26 ರನ್ ತಂದುಕೊಟ್ಟರು. ಹೀಗಾಗಿ ಫೈನಲ್ ಪಂದ್ಯದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ಮೊಹಿಂದರ್ ಅಮರನಾಥ್ ಪಂದ್ಯ ಪುರುಷ ಪ್ರಶಸ್ತಿಗೂ ಭಾಜನರಾದರು.
ಟೆಸ್ಟ್ಗೆ ಪಾದಾರ್ಪಣೆ ಮಾಡಿದ 2ನೇ ಕಿರಿಯ ಭಾರತೀಯ, 4 ವಿಶ್ವ ಕಪ್ ಆಡಿದ ಪಿಯೂಷ್ ಚಾವ್ಲಾಗೆ ಇಂದು ಜನ್ಮ ದಿನ