ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?

|

Updated on: May 13, 2020 | 2:48 PM

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು. ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ […]

ಶುಭ ಸುದ್ದಿ! ಮೇ 17ರ ಬಳಿಕ ತಿಮ್ಮಪ್ಪನ ದರ್ಶನ ಭಾಗ್ಯ ಸಿಗುತ್ತದಾ?
Follow us on

ತಿರುಪತಿ: ಮಾರ್ಚ್ 19ರಿಂದ ಕೊರೊನಾ ಕಾರಣಕ್ಕೆ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲದಂತಾಗಿದೆ. ಟಿಟಿಡಿ ತಾತ್ಕಾಲಿಕವಾಗಿ ಭಕ್ತರಿಗೆ ಪ್ರವೇಶ ನಿಲ್ಲಿಸಿದೆ. ಸತತ 52 ದಿನಗಳ ಬಳಿಕ ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸುತ್ತಿರೋ ಒಂದೊಂದು ಸುಳಿವು ಭಕ್ತರಿಗೆ ಶುಭ ಸುದ್ದಿ ನೀಡುವ ಸಂಕೇತಗಳಾಗಿವೆ. ಮೇ 17ರ ಬಳಿಕ ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗುತ್ತದೆಯೇ? ಇಂಥದ್ದೊಂದು ಚರ್ಚೆ ಹುಟ್ಟು ಹಾಕಿರೋದಕ್ಕೆ ಕಾರಣ ದೇವಾಲಯದಲ್ಲಿ ಹಾಕಿರುವ ಸಾಮಾಜಿಕ ಅಂತರದ ಗುರುತುಗಳು.

ತಿಮ್ಮಪ್ಪನ ದರ್ಶನಕ್ಕೆ ಕ್ಯೂನಲ್ಲಿ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಿಳಿ ಬಣ್ಣದ ಗುರುತುಗಳನ್ನು ಮಾಡಲಾಗಿದೆ. ಇಂಥದ್ದೊಂದು ಗುರುತುಗಳು ಟಿಟಿಡಿಯ ಸಿದ್ಧತೆಯ ಸೂಚನೆಗಳನ್ನು ನೀಡುತ್ತಿವೆ. ಸತತ 52 ದಿನಗಳ ಕಾಲ ಆದಾಯವೇ ಇಲ್ಲದೇ ನಡೆಯುತ್ತಿರೋ ತಿಮ್ಮಪ್ಪನ ದೇವಾಲಯವನ್ನು ತೆಗೆಯೋದಕ್ಕೆ ಟಿಟಿಡಿ ನಿರ್ಧರಿಸಿದೆ ಅನ್ನೋ ಅನುಮಾನ ಮೂಡಿಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಆದೇಶ ನೋಡಿಕೊಂಡೇ ಟಿಟಿಡಿ ತೀರ್ಮಾನಕ್ಕೆ ಬರಲು ಮುಂದಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಲೇ ಭಕ್ತರಿಗೆ ದರ್ಶನ ನೀಡುವ ವ್ಯವಸ್ಥೆ ಕಲ್ಪಿಸೋದಕ್ಕೆ ಟಿಟಿಡಿ ಮುಂದಾಗಿದೆ ಅನ್ನೋ ಚರ್ಚೆ ನಡೀತಿದೆ. ವಿಶ್ವದ ಶ್ರೀಮಂತ ದೇವರ ದೇಗುಲ ತೆರೆಯೋದು ಅದೆಷ್ಟು ಮುಖ್ಯ ಗೊತ್ತಾ? ಪ್ರತೀ ನಿಮಿಷಗಳ ಲೆಕ್ಕದಲ್ಲಿ ಲಕ್ಷಾಂತರ ರೂಪಾಯಿಗಳ ಲೆಕ್ಕದಲ್ಲಿ ದೇವಾಲಯ ದುಡಿಯುತ್ತಿದೆ. ಅದು ಹೇಗೆ ಅಂತೀರಾ? ಇಲ್ಲಿ ಓದಿ..

ತಿಮ್ಮಪ್ಪನ ಹುಂಡಿಗೆ ಪ್ರತೀ ವರ್ಷ ಕಡಿಮೆ ಅಂದ್ರೂ ಸಾವಿರ ಕೋಟಿ ರೂಪಾಯಿ ಬಂದು ಬೀಳುತ್ತದೆ. ಇದುವೇ ದೇವಾಲಯದ ಬಹುದೊಡ್ಡ ಆದಾಯ ಮೂಲ. ಇದನ್ನು ಬಿಟ್ರೆ ಈ ತನಕ ರಾಷ್ಟ್ರೀಯ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿರೋ 9 ಟನ್ ಚಿನ್ನಕ್ಕೆ ಬಡ್ಡಿ ರೂಪದಲ್ಲಿ ಪ್ರತೀ ವರ್ಷ 100 ಕೆಜಿ ಚಿನ್ನ ನೀಡಲಾಗುತ್ತದೆ. ಇನ್ನು, ಗೋವಿಂದನ ಹೆಸರಿನಲ್ಲಿ ಸ್ಥಿರ ಠೇವಣಿ ಇಟ್ಟಿರೋ 14 ಸಾವಿರ ಕೋಟಿ ರೂಪಾಯಿಗೆ ಪ್ರತೀ ವರ್ಷ 845 ಕೋಟಿ ರೂಪಾಯಿ ಬಡ್ಡಿ ಸಿಗುತ್ತದೆ.

ವಿಐಪಿ, ವಿವಿಐಪಿ ಟಿಕೆಟ್ ಮಾರಾಟದಿಂದಾಗಿ ಟಿಟಿಡಿಗೆ ಕನಿಷ್ಠ 250 ಕೋಟಿ ರೂಪಾಯಿ ವಾರ್ಷಿಕ ಆದಾಯ ಸಲ್ಲುತ್ತದೆ. ಇನ್ನು, ತಿಮ್ಮಪ್ಪನ ಮಹಾಪ್ರಸಾದ ಲಡ್ಡು ಮಾರಾಟದಿಂದಲೂ ಟಿಟಿಡಿಗೆ ಪ್ರತೀ ವರ್ಷ ಕನಿಷ್ಠ 200 ಕೋಟಿ ರೂಪಾಯಿ ಲಾಭ ದೊರೆಯುತ್ತದೆ. ಇದೆಲ್ಲಕ್ಕಿಂತಲೂ ವಿಶೇಷ ಅನಿಸೋ ಆದಾಯದ ಮೂಲ ತಿಮ್ಮಪ್ಪನಿಗೆ ಭಕ್ತರು ಸಮರ್ಪಿಸೋ ಮುಡಿ ಕೂದಲು!

ಹೌದು, ಮುಡಿ ಕೂದಲನ್ನು ಟಿಟಿಡಿ ಪ್ರತೀ ವರ್ಷ ಹರಾಜು ಹಾಕುತ್ತದೆ. ಈ ಹರಾಜು ಪ್ರಕ್ರಿಯೆಯಲ್ಲಿ ಮುಡಿಯಿಂದಾಗಿಯೇ ಟಿಟಿಡಿ ಖಜಾನೆಗೆ ಪ್ರತೀ ವರ್ಷ ಕನಿಷ್ಠ ನೂರು ಕೋಟಿ ಸೇರುತ್ತದೆ.