ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ಇಡಿ ಜಗತ್ತು ಆತಂಕಕ್ಕೆ ಒಳಗಾಗಿ, ಯಾರಿಗೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲಿ ಅನೇಕ ದೇಶಗಳು ಇದೆ. ಉಕ್ರೇನ್ ಈಗ ಸಂಕಷ್ಟದಲ್ಲಿ ಇದೆ, ಅದಕ್ಕೆ ಸಹಾಯ ಮಾಡುವ ಎಂದು ಹೇಳಿದರೆ ಈ ಕಡೆ ರಷ್ಯಾ ಒಂದು ಬಲಿಷ್ಠ ರಾಷ್ಟ್ರ, ಯಾವುದಕ್ಕೂ ಸಹಾಯ ಮಾಡಿದರು ನನ್ನ ದೇಶಕ್ಕೆ ಅಪಾಯ ತಪ್ಪಿದಲ್ಲ ಎಂಬ ಭಯದಲ್ಲಿದೆ. ಇನ್ನೂ ಕೆಲವು ರಾಷ್ಟ್ರಗಳು ಉಕ್ರೇನ್ ಗೆ ಬೆಂಬಲ ನೀಡಿದೆ. ಇನ್ನೊಂದು ಕಡೆಯಲ್ಲಿ ರಷ್ಯಾಕ್ಕೆ ಕೆಲವೊಂದು ರಾಷ್ಟ್ರಗಳು ಬೆಂಬಲ ನೀಡಿದೆ. ಆದರೆ ಇಲ್ಲಿ ಭಾರತದ ಪರಿಸ್ಥಿತಿಯು ಗೊಂದಲ ಇದೆ. ಏಕೆಂದರೆ ರಷ್ಯಾಕ್ಕೆ ಬೆಂಬಲ ನೀಡದರೆ ಉಕ್ರೇನ್ ಜೊತೆಗಿನ ಸಂಬಂಧ ದುಸ್ಥಿತಿಗೆ ತಲುಪುದು ಖಂಡಿತ, ಆದರೆ ಈ ಕಡೆ ಉಕ್ರೇನ್ ಬೆಂಬಲ ನೀಡುವಂತಿಲ್ಲ ಏಕೆಂದರೆ ರಷ್ಯಾ ಭಾರತಕ್ಕೆ ರಾಜತಾಂತ್ರಿಕವಾಗಿ ಸಹಾಯ ಮಾಡಿದೆ ಮತ್ತು ಒಬ್ಬ ನಂಬಿಕೆ, ಒಳ್ಳೆಯ ಸ್ನೇಹಿತ ಆ ಕಾರಣದಿಂದ ಭಾರತ ಈಗ ತಟಸ್ಥ ನೀತಿಯನ್ನು ಅನುಸರಿಸಿದೆ.
ಮುಂದೊಂದು ದಿನ ಭಾರತ ಯಾವುದಾರರೂ ರಾಷ್ಟ್ರಕ್ಕೆ ಬೆಂಬಲ ನೀಡಬೇಕೆಂದರೆ ಯಾವ ದೇಶಕ್ಕೆ ಬೆಂಬಲ ನೀಡಬೇಕು ಎಂಬ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸೋಶಿಯಲ್ ಮಿಡಿಯಾದ ಮೂಲಕ ಒಂದು ಸಮೀಕ್ಷೆಯನ್ನು ನಡೆಸಿತ್ತು. ಅದರಲ್ಲಿ ಜನಭಿಪ್ರಾಯಕ್ಕೆ ಅವಕಾಶವನ್ನು ನೀಡಿತ್ತು. ನಮ್ಮ ಈ ಸಮೀಕ್ಷೆಗೆ ಮಹತ್ವದ ಅಭಿಪ್ರಾಯಗಳು ಬಂತು. ಭಾರತ ಯಾವ ದೇಶಕ್ಕೆ ಬೆಂಬಲ ನೀಡಬೇಕು, ರಷ್ಯಾ ಅಥವಾ ಉಕ್ರೇನ್ ಎಂದು ಕೇಳಿದ ಪ್ರಶ್ನೆಗೆ ಜನಸಾಮಾನ್ಯರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,
ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆ ?
ಭಾರತದ ಪ್ರಧಾನಿ ಮೋದಿ ರಷ್ಯಾ ಜೊತೆಗೆ ಒಂದು ಉತ್ತಮ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಭಾರತ ಯಾಕೆ ರಷ್ಯಾಕ್ಕೆ ಬೆಂಬಲ ನೀಡಬೇಕು ಅಥವಾ ಉಕ್ರೇನ್ ಗೆ ಯಾಕೆ? ಬೆಂಬಲ ನೀಡಬೇಕು ಎಂಬ ಪ್ರಶ್ನೆಗಳು ಉದ್ಭುವಿಸುವುದು ಸಹಜ ಆದರೆ ನಮ್ಮ ಸಮೀಕ್ಷೆಗೆ ಬಂದ ಉತ್ತರ ಮಾತ್ರ ಅಚ್ಚರಿಯಾಗಿತ್ತು, ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆ ಭಾರತ ಯಾರಿಗೆ ಬೆಂಬಲ ನೀಡಬೇಕು ಎಂದು ಕೇಳಿದಾಗ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಉತ್ತರಗಳು ಬಂದಿದೆ. ಒಂದಿಷ್ಟು ಜನ ರಷ್ಯಾ ಪರವಾಗಿದ್ದಾರೆ. ಮತ್ತೊಂದಿಷ್ಟು ಜನ ಉಕ್ರೇನ್ ಪರ, ಇನ್ನು ಕೆಲವರು ಯುದ್ಧ ಬೇಡ ಅವರಿಬ್ಬರನ್ನು ಒಂದು ಮಾಡಿ ಎಂದು ಹೇಳಿದರೆ, ಇನ್ನೊಂದಿಷ್ಟು ಜನ ಭಾರತ ತಟಸ್ಥ ನೀತಿಯನ್ನು ಪಾಲಿಸಿ ಎಂದಿದ್ದಾರೆ, ಇನ್ನೂ ನಮ್ಮ ದೇಶದಲ್ಲಿ ಆಗುತ್ತಿರುವ ಆಂತರಿಕ ಜಗಳವನ್ನು ನಿಲ್ಲಿಸಿ ಎಂದು ಉತ್ತರ ನೀಡದ್ದಾರೆ.
ಸಮೀಕ್ಷೆಯಲ್ಲಿ ಬಂದ ಉತ್ತರ
ಭಾರತ ಯಾವ ದೇಶಕ್ಕೆ ಬೆಂಬಲ ನೀಡಬೇಕು ಎಂದು ಕೇಳಿದ ಪ್ರಶ್ನೆಗೆ ಸೋಶಿಯಲ್ ಮಿಡಿಯಾದಲ್ಲಿ ಬಂದ ಉತ್ತರ ಭಿನ್ನವಾಗಿತ್ತು. ಸಾಮಾಜಿಕ ಜಾಲದಲ್ಲಿ ಭಾರತ ರಷ್ಯಾಕ್ಕೆ ಆಥವಾ ಉಕ್ರೇನ್ ಗೆ ಬೆಂಬಲ ನೀಡಬೇಕಾ ಎಂದಾಗ, 100ರಲ್ಲಿ 65ಶೇಕಾಡದಷ್ಟು ಜನ ಭಾರತ ತಟಸ್ಥ ನೀತಿಯನ್ನು ಅನುಸರಿಸುವುದು ಒಳ್ಳೆಯದು, ಏಕೆಂದರೆ ಭಾರತ ಶಾಂತಿ ಪ್ರೀಯ ರಾಷ್ಟ್ರ ಜೊತೆಗೆ ಎರಡು ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದೇವೆ. ಇನ್ನೂ 25ಶೇಕಾಡದಷ್ಟು ಜನ ರಷ್ಯಾಕ್ಕೆ ಭಾರತ ಬೆಂಬಲವನ್ನು ನೀಡಬೇಕು ಎಂದಿದೆ. ಏಕೆಂದರೆ ಅಮೆರಿಕ ಪಾಕ್ತಿಸ್ಥಾನಕ್ಕೆ ಬೆಂಬಲ ನೀಡಿದಾಗ ನಮ್ಮ ಬೆಂಬಲಕ್ಕೆ ನಿಂತಿದ್ದು ರಷ್ಯಾ. ಆ ಕಾರಣಕ್ಕೆ ರಷ್ಯಾಕ್ಕೆ ಬೆಂಬಲ ನೀಡುವುದು ಒಳ್ಳೆಯದು ಎಂದಿದ್ದಾರೆ. ಇದರ ಜೊತೆಗೆ ಭಾರತಕ್ಕೆ ರಾಜತಾಂತ್ರಿಕವಾಗಿ ಹಾಗೂ ಸೈನ್ಯಕ್ಕೆ, ಆರ್ಥಿಕವಾಗಿ ಸಹಾಯವನ್ನು ಮಾಡಿದೆ. ಇನ್ನೂ 3ಶೇಕಾಡದಷ್ಟು ಜನ ಉಕ್ರೇನ್ ಗೆ ಬೆಂಬಲ ನೀಡಬೇಕು ಏಕೆಂದರೆ ಯುದ್ಧದಲ್ಲಿ ನಾಶದ ಅಂಚಿನಲ್ಲಿದೆ ಉಕ್ರೇನ್, ಜೊತೆಗೆ ಅಲ್ಲಿ ಜನ ಸಂಕಷ್ಟದಲ್ಲಿ ಇದ್ದರೆ, ನ್ಯಾಟೋ ಅಧಿಕಾರವನ್ನು ಉಪಯೋಗಿಸಿಕೊಂಡು ಅಮೆರಿಕ ಸಹಾಯ ಕೇಳಿದರು ಯಾವುದೇ ಪ್ರಕ್ರಿಯೆಯನ್ನು ನೀಡಿಲ್ಲ. ಆ ಕಾರಣ ಸದ್ಯ ಪರಿಸ್ಥಿತಿ ಉಕ್ರೇನ್ ಗೆ ಬೆಂಬಲ ನೀಡಬೇಕು. ಇದರ ಜೊತೆಗೆ ಕೆಲವರು ಎರಡು ರಾಷ್ಟ್ರಕ್ಕೂ ಬೆಂಬಲವನ್ನು ನೀಡಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಸೋಶಿಯಲ್ ಮಿಡಿಯಾ ಸಮೀಕ್ಷೆ
ಟಿವಿ9 ಡಿಜಿಟಲ್ ಕನ್ನಡ ಟ್ವಿಟರ್, ಫೇಸ್ ಬುಕ್, ಯೂಟಬ್, ಇನ್ಸ್ಟಾಗ್ರ್ಯಾಮ್ ನಲ್ಲಿ ಭಾರತ ಯಾರಿಗೆ ಬೆಂಬಲ ನೀಡಬೇಕು ಎಂಬ ಪ್ರಶ್ನೆಗೆ ಸಮೀಕ್ಷೆ ನಡೆಸಿದೆ.
ಒಟ್ಟಾರೆಯಾಗಿ ಸೋಶಿಯಲ್ ಮಿಡಿಯಾದಲ್ಲಿ ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಇದರ ಜೊತೆಗೆ ಭಾರತದ ನಿಲ್ಲುವು ಏನು ? ಎಂಬ ಪ್ರಶ್ನೆಯು ಮೂಡಿದೆ. ಈಗಾಗಲೇ ಉಕ್ರೇನ್ ನಮಗೆ ಬೆಂಬಲ ನೀಡಿ ಎಂದು ಭಾರತದ ಬಳಿ ಕೇಳಿದೆ, ಆದರೆ ಭಾರತದ ಪ್ರಧಾನಿ ಮೋದಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ, ರಷ್ಯಾಕ್ಕೆ ಬಲವಾಗಿ ನಂಬಿಕೆ ಇದೆ ಭಾರತ ಯಾವುದೇ ಕಾರಣಕ್ಕೂ ನನ್ನ ವಿರೋಧ ಕಟ್ಟಿಕೊಳ್ಳವುದಿಲ್ಲ ಎಂದು, ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪರ-ವಿರೋಧ, ಬೆಂಬಲ, ನೀತಿ ಪಾಠ ಎಲ್ಲವನ್ನು ಟಿವಿ9 ಕನ್ನಡ ಡಿಜಿಟಲ್ ಸೋಶಿಯಲ್ ಮಿಡಿಯಾ ಸಮೀಕ್ಷೆಯ ಮೂಲಕ ಅಭಿಪ್ರಾಯವನ್ನು ಪಡೆದುಕೊಂಡಿದೆ. ಭಾರತ ತೆಗೆದುಕೊಳ್ಳವ ನಿರ್ಧಾರದಲ್ಲಿ ಪ್ರಜೆಗಳಾಗಿ ಭಾಗವಹಿಸಿ, ದೇಶದ ನಿರ್ಧಾರದಲ್ಲಿ ನಮ್ಮ ಅಭಿಪ್ರಾಯ ಏನು ಎಂಬುದನ್ನು ವ್ಯಕ್ತಪಡಿಸಿದ್ದಾರೆ.