ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ಪ್ರಾಣಿ, ಗಿಡಗಳ ಆರೈಕೆ ಹೇಗೆ?

|

Updated on: Oct 24, 2019 | 12:15 PM

ನೀವು ಊರು ಬಿಟ್ಟು ಊರಿಗೆ ಕೆಲಸಕ್ಕೆ ಬಂದಿರ್ತೀರಿ. ಮಕ್ಕಳ ರಜಾದಿನಗಳಲ್ಲಿ ನೀವು ಊರಿಗೆ ಹೋಗಬೇಕು. ಆಗ ಒಂದಿಷ್ಟು ತೊಡಕುಗಳಿರ್ತವೆ. ಅದ್ರಲ್ಲಿ ಒಂದು ಮನೆ ಬಿಟ್ಟು ಊರಿಗೆ ಹೋಗುವಾಗ ಮನೆಯ ಗಿಡಗಳಿಗೆ ನೀರು ಹಾಕೋರು ಯಾರು..? ಮನೆಯಲ್ಲಿರುವ ಸಾಕುಪ್ರಾಣಿಗಳಿಗೆ ಊಟ ತಿಂಡಿ ಹಾಕೋರು ಯಾರು ಅದ್ರ ಬೇಕು ಬೇಡಗಳನ್ನು ನೋಡಿಕೊಳ್ಳೋರು ಯಾರು ಅಂತ ಊರಿಗೆ ಹೋಗೋಕೆ ಹಿಂಟೇಟು ಹಾಕ್ತಾರೆ. ಹಾಗಾಗಿ, ಸಮ್ಮರ್ ವೆಕೇಶನ್ ಖೋತಾ..? ಆದ್ರೆ ಇದಕ್ಕೆ ಪರಿಹಾರ ಇದೆ. ನಿಮ್ಮ ಮೊದಲ ಪ್ರಾಬ್ಲಂ ಯಾವುದು ಹೇಳಿ. ಗಿಡಗಳ […]

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ಪ್ರಾಣಿ, ಗಿಡಗಳ ಆರೈಕೆ ಹೇಗೆ?
Follow us on

ನೀವು ಊರು ಬಿಟ್ಟು ಊರಿಗೆ ಕೆಲಸಕ್ಕೆ ಬಂದಿರ್ತೀರಿ. ಮಕ್ಕಳ ರಜಾದಿನಗಳಲ್ಲಿ ನೀವು ಊರಿಗೆ ಹೋಗಬೇಕು. ಆಗ ಒಂದಿಷ್ಟು ತೊಡಕುಗಳಿರ್ತವೆ. ಅದ್ರಲ್ಲಿ ಒಂದು ಮನೆ ಬಿಟ್ಟು ಊರಿಗೆ ಹೋಗುವಾಗ ಮನೆಯ ಗಿಡಗಳಿಗೆ ನೀರು ಹಾಕೋರು ಯಾರು..? ಮನೆಯಲ್ಲಿರುವ ಸಾಕುಪ್ರಾಣಿಗಳಿಗೆ ಊಟ ತಿಂಡಿ ಹಾಕೋರು ಯಾರು ಅದ್ರ ಬೇಕು ಬೇಡಗಳನ್ನು ನೋಡಿಕೊಳ್ಳೋರು ಯಾರು ಅಂತ ಊರಿಗೆ ಹೋಗೋಕೆ ಹಿಂಟೇಟು ಹಾಕ್ತಾರೆ. ಹಾಗಾಗಿ, ಸಮ್ಮರ್ ವೆಕೇಶನ್ ಖೋತಾ..? ಆದ್ರೆ ಇದಕ್ಕೆ ಪರಿಹಾರ ಇದೆ.
ನಿಮ್ಮ ಮೊದಲ ಪ್ರಾಬ್ಲಂ ಯಾವುದು ಹೇಳಿ. ಗಿಡಗಳ ಸಂರಕ್ಷಣೆ ತಾನೇ..? ನೀವು ಊರಿಗೆ ಹೋಗಿ ಬರುವಾಗ ನಿಮ್ಮ ಗಿಡಗಳು ಒಣಗಿ ಸತ್ತು ಹೋಗಿರುತ್ತೆನ್ನುವವರು ಇಲ್ಲಿ ಒಮ್ಮೆ ಕಿವಿ ಕೊಡಿ. ನೀವು ಊರಿಗೆ ನಿಶ್ಚಿಂತೆಯಿಂದ ಹೋಗಿಬನ್ನಿ. ಆದ್ರೆ ಒಂಚೂರು ಮನ್ನೆಚ್ಚರಿಕೆ ಇರಲಿ. ನೀವು ರಜೆಗೆ ಹೋಗುವ ಮುನ್ನ ನೀವು ಗಿಡಗಳ ಬಗ್ಗೆ ತುಂಬ ಕೇರ್ ಫುಲ್ ಆಗಿರಬೇಕು. ಯಾವುದಕ್ಕೂ ಅಡ್ವಾನ್ಸ್ ಆಗಿ ನೀವು ಗಿಡಗಳ ಕೇರ್ ತಗೊಳ್ಳಿ. ಫಾರ್ ಎಕ್ಸಾಂಪಲ್ ರಸಗೊಬ್ಬರಗಳ ಬಳಕೆ ಕಳೆ ಕೀಳೋದು ಮಣ್ಣು ಬದಲಾಯಿಸೋದು ಹೀಗೆ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿರಬೇಕು. ಆ ಬಳಿಕ ಕೊನೆಯ ಪ್ರಶ್ನೆ ಇರೋದು ದಿನಾ ನೀರು ಹಾಕೋದು ಒಂದು ಟಾಸ್ಕ್ ಅದು ಖುದ್ದು ತಾವಿಲ್ಲದೇ ಹೇಗೆ ನಡೆಯುತ್ತೆ..?

ಕೈತೋಟಕ್ಕೆ ನೀರಿನ ಸರಬರಾಜು..?
ನೀವು ನಿಮ್ಮ ಕೈತೋಟದಲ್ಲಿರುವ ಗಿಡದ ಬುಡದಲ್ಲಿ ನೀರಿನ ಅಂಶ ಬೇಸಿಗೆ ಕಾಲಕ್ಕ ಇರಬೇಕೆಂದಲ್ಲಿ ನೀರು ಕೈತೋಟದಲ್ಲಿ ಒಂದು ಪ್ರಮಾಣದ ಲಾನ್ ಅಂದ್ರೆ ಹುಲ್ಲುಗಾವಲನ್ನು ಬೆಳೆಸಿ. ಆಗ ಬಿಸಿಲಲ್ಲಿ ತೋಟದಲ್ಲಿರುವ ಗಿಡಗಳ ಬುಡದಲ್ಲಿರುವ ನೀರನಾಂಶ ನಷ್ಟವಾಗಲ್ಲ. ನೆನಪಿರಲಿ. ಇದು ನಿತ್ಯಕ್ಕೂ ಆಯ್ತು, ರಜಾದಿನದ ನಿಮ್ಮ ನಿಶ್ಚಿಂತ ಪಯಣಕ್ಕೂ ಉಪಯುಕ್ತ. ಅದ್ರ ಜೊತೆ ನೀವು ನಿಮ್ಮ ರಜಾ ದಿನಗಶಳಲ್ಲಿ ಗಿಡಗಳನ್ನು ಬಿಟ್ಟು ಹೋಗುವ ಮೊದಲು ನಿಮ್ಮ ಗಿಡಗಳ ನೀರನ್ನು ಕದಿಯುವ ಕಳೆಗಳನ್ನು ಕಿತ್ತು ಬಿಡಿ. ನಿಮ್ಮ ಗಿಡಗಳಿಗೆ ನೀರು ಉಳಿಯುತ್ತೆ… ಹಾಗೆ, ತೋಟದಲ್ಲಿ ಇರುವ ಗಿಡಗಳ ಬುಡದ ಮಣ್ಣಿಗೆ ಮರಳು ಬೆರೆಸಿ. ಮರಳಿನಾಂಶ ಇದ್ರೆ ಅದ್ರಲ್ಲಿ ನೀರಿನಾಂಶ ಉಳಿಯುತ್ತೆ. ಹಾಗಾಗಿ, ಕೈ ತೋಟಕ್ಕೆ ಪುಟ್ಟದಾದ ಹನಿ ನೀರಾವರಿಯನ್ನು ವ್ಯವಸ್ಥೆ ಮಾಡಬಹುದು. ಹಾಗಾಗಿ, ನೀವು ವ್ಯವಸ್ಥೆ ಮಾಡಿದ ಹನಿ ನೀರಾವರಿ ಮರಳಿನಾಂಶ ಇರುವ ಮಣ್ಣಲ್ಲಿ ತೇವಾಂಶ ಉಳಿಸುತ್ತೆ..

ಕಿಚನ್ ಗಾರ್ಡನ್ ಅಥವಾ ತರಕಾರಿ ತೋಟ ಇದ್ರೆ..?
ನಿಮ್ಮ ಮನೆಲ್ಲಿ ಕಿಚನ್ ಗಾರ್ಡನ್ ಇದ್ರೆ ಅದೂ ಹೂ ಬಿಟ್ಟಿದೆ ಇಲ್ಲ ಕಾಯಿ ಕೊಟ್ತಿದೆ ಅಂದ್ರೆ ನೀವು ತುಂಬಾ ಕೇರ್ ಪುಲ್ ಆಗಿರಬೇಕು. ಈ ಕಾಲಕ್ಕೆ ನೀರು ಕಡಿಮೆಯಾದ್ರೆ ಖಂಡಿತಾ ಹೂವು ಕಾಯಿ ಉದುರಬಹುದು. ಗಿಡ ಸೊರಗಬಹುದು. ಇಲ್ಲೂ ಹುಲ್ಲು ಹಾಸು ಬೇಕು. ಕಿಚನ್ ಗಾರ್ಡನ್ನಲ್ಲಿ 3 ರಿಂದ 4 ಇಂಚು ಹುಲ್ಲುಹಾಸಿದ್ರೆ ಉತ್ತಮ. ಒಳಾಂಗಣ ಗಿಡಗಳಿಗೆ ನೀರಿನ ಆರೈಕೆ. ಹೊರಾಂಗಣ ಗಿಡಗಳಿಗೆ ನಿಮ್ಮ ಗೆಳೆಯರು ನೆರೆಹೊರೆಯವರು ನೀರು ಹಾಕಿದ್ರೂ ಹಾಕಬಹದೇನೋ..? ಆದ್ರೆ ಒಳಾಂಗಣ ಗಿಡಗಳಿಗೆ ಬಾಲ್ಕನಿ ಗಾರ್ಡನಿಗೆ ಅದು ಹೇಗೆ ನೀರು ಪೂರೈಸೋದು ಅನ್ನೋದು ಒಂದು ಪ್ರಶ್ನೆ. ಸಾಮಾನ್ಯವಾಗಿ ಇಂಥ ಗಿಡಗಳನ್ನು ಪಾಟ್ ಗಳಲ್ಲಿ ಹಾಕಿ ಇಡಲಾಗುತ್ತೆ ಮತ್ತು ದಿನಕ್ಕೆ 2 ಬಾರಿಯಾದರೂ ನೀರು ಹಾಕೋದು ಕಾಮನ್ ಆಗಿರುತ್ತೆ. ಹಾಗೆಂಗು ನೀವು ರಜಾ ಹೋದಾಗ ಏನು ಮಾಡೋದು ಅನ್ನೋ ಪ್ರಶ್ನೆ ಹುಟ್ಟುತ್ತೆ ಅಲ್ವಾ..? ಮನೆಯಲ್ಲಿರೋದು ದೊಡ್ಡ ಪಾಟ್ ಇದ್ರೆ ಅದಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಕಿದ್ರೆ ವಾರದವರೆಗೆ ಕಾಪಾಡಬಹುದು. ಆದ್ರೆ ಪುಟ್ಟ ಪಾಟ್ ಗಳದ್ದೇ ಸಮಸ್ಯೆ. ಪುಟ್ಟ ಪಾಟ್‌ ಗಳಿಗೆಂದು ಮಾರ್ಕೆಟಿನಲ್ಲಿ ಬೇಜಾನ್ ಹನಿ ನೀರಾವರಿಯ ರೆಡಿಮೇಡ್ ವ್ಯವಸ್ಥೆಗಳು ಸಿಗ್ತವೆ. ಅದನ್ನು ನೀವು ಊರಿಗೆ ಹೋಗುವಾಗ ಫಿಕ್ಸ್ ಮಾಡಿದ್ರೆ ಹನಿಯುವ ನೀರು ಗಿಡಮರಗಳನ್ನು ಬೆಳೆಸುತ್ತೆ.

ಗಿಡಗಳಿಂದ ನೀರು ಆವಿಯಾಗದಂತೆ ಕಾಪಾಡಿ, ಕೆಲವೊಮ್ಮೆ ನಮ್ಮ ಅನುಪಸ್ಥಿತಿಯಲ್ಲಿ ಗಿಡಗಳಿಗೆ ನೀರು ಹಾಕುವುದಕ್ಕಿಂತಲೂ ಗಿಡದ ನೀರು ಆವಿಯಾಗದಂತೆ ಕಾಯುವುದೇ ಬಹಳ ಮುಖ್ಯವಾಗಿರುತ್ತೆ. ಅದಕ್ಕಾಗಿ ಒಂದಿಷ್ಟು ಬಿಸಿಲು ಬೀಳುವ ಬಾಲ್ಕನಿ ಗಾರ್ಡನ್ನಿನಲ್ಲಿರುವ ಗಿಡಗಳನ್ನು ಒಂದು ಕ್ಲಿಯರ್ ಪಾಟ್ ಬಳಸಿ ಕವರ್ ಮಾಡಬೇಕಾಗುತ್ತೆ. ಇದರಿಂದ ಗಿಡಗಳು ತೇವ ಕಳೆದುಕೊಳ್ಳುವುದು ಕಡಿಮೆಯಾಗುತ್ತೆ. ಹೀಗೆ ಮಾಡುವುದರಿಂದ ಗಿಡಗಳನ್ನು 2 ವಾರ ಕಾಲ ಬಾಡದಂತೆ ಕಾಪಾಡಬಹುದು..

ರಜಾಕ್ಕೆ ಹೊರಟ್ರೆ ಬೆಕ್ಕು ನಾಯಿಗಳ ಗತಿಯೇನು..?
ಗಿಡಗಳ ಬಗ್ಗೆ ಏನೋ ಸಮಾಧಾನಕರ ಉತ್ತರಸಿಗಬಹುದು. ಆದ್ರೆ, ಮನೆಯಲ್ಲಿ ಸಾಕೋ ಸಾಕುಪ್ರಾಣಿಗಳಾದ ನಾಯಿ ಬೆಕ್ಕುಗಳ ಕಾಳಜಿ ಕೂಡಾ ನಮ್ಮಲ್ಲಿ ಹೆಚ್ಚಿನವರಿಗಿದೆ. ಯೆಸ್ ಕಾರ್ ಇದ್ದವರು ಮಾತ್ರ ತಾವು ಹೋಗುವಲ್ಲಿ ನಾಯಿಬೆಕ್ಕುಗಳನ್ನು ಕರೆದೊಯ್ಯಬಹುದು. ಆದ್ರೆ ಸಾರ್ವಜನಿಕ ವಾಹನಗಳಲ್ಲಿ ನಿಮ್ಮ ಪೆಟ್‌ ಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಹಾಗಾಗಿ, ಅವನ್ನಂತೂ ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ಆಗ ಅವುಗಳ ಸಹಾಯಕ್ಕೆ ಬರೋದು ಪೆಟ್‌ ಕೇರ್ ಸೆಂಟರ್‌. ತಮ್ಮ ಅನುಕೂಲತೆಗಳಿಗೆ ತಕ್ಕಂತೆ ಪೆಟ್‌ಗಳನ್ನು ನೋಡಿಕೊಳ್ಳು ವ್ಯವಸ್ಥೆ ಈಗ ಎಲ್ಲಾ ಕಡೆ ಇದೆ. ಹಾಗಾಗಿ, ತಮ್ಮ ಸಾಕು ಪ್ರಾಣಿಗಳನ್ನು ಪೆಟ್ ಕೇರ್ ಸೆಂಟರ್‌ಗಳಲ್ಲಿ ಇಟ್ಟು ಮುಂದುವರೆಯೋದರಿಂದ ರಜಾದಿನ ಮಜಾವಾಗಿ ಕಳೆಯುತ್ತೆ. ಮನೆ ಪ್ರಾಣಿಗಳು ಕೂಡಾ ಇತ್ತ ಆರಾಮವಾಗಿರುತ್ತವೆ. ಅಲ್ಲಿ ನಿಮ್ಮ ಮನೆ ಪ್ರಾಣಿಗಳನ್ನು ನಿಮಗಿಂತ ಕಾಳಜಿಯಿಂದ ನೋಡಿಕೊಳ್ತಾರೆ. ಅಲ್ಲಿ ಅವಕ್ಕೆ ಊಟ ತಿಂಡಿಯ ಕಾಳಜಿ, ಆಯಾಳಿಂದ ಸೇವೆ ಅಷ್ಟೇ ಯಾಕೆ ಬ್ಯೂಟಿಟ್ರೀಟ್ಮೆಂಟ್ ಕೂಡಾ ಸಿಗುತ್ತಂತೆ..ಈಗ ಎಲ್ಲರೂ ನಿಶ್ಚಿಂತ ಏನಂತೀರಾ..?

Published On - 12:30 pm, Wed, 23 October 19