ನಿಮ್ಮ ಮಕ್ಕಳ ವಿಷಯದಲ್ಲಿ ನೀವು ಹೆಲಿಕಾಪ್ಟರ್ ಪೋಷಕರಾ?
ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಸಹಜ. ಪ್ರತಿಯೊಬ್ಬ ತಂದೆತಾಯಿಗೂ ತನ್ನ ಮಗುವನ್ನು ಚೆನ್ನಾಗಿ ಬೆಳೆಯಬೇಕು ಮತ್ತು ಆರೋಗ್ಯವಂತವಾಗಿರಬೇಕು ಎನ್ನುವಂತಹ ಇಚ್ಛೆ ಇರುವುದು. ಆದರೆ ಕೆಲವು ಪೋಷಕರು ಮಾತ್ರ ತುಂಬಾ ಅತಿಯಾಗಿಯೇ ಮಕ್ಕಳ ಬಗ್ಗೆ ಕಾಳಜಿ ವಹಿಸುವರು. ಇದು ಸ್ವಲ್ಪ ಅತಿರೇಕದ ವರ್ತನೆ ಎಂದು ನಮಗೆ ಅನಿಸುವುದುಂಟು. ಮಕ್ಕಳ ಬಗ್ಗೆ ಎಲ್ಲರೂ ರೇಜಿಗೆ ಬರುವಷ್ಟು ಕಾಳಜಿ ತೋರಿಸುವಂಥಹ ಪೋಷಕರಿಗೆ ಒಂದು ಸ್ಪೆಷಲ್ ಹೆಸರಿದೆ ಅದೇ ಹೆಲಿಕಾಪ್ಟರ್ ಪೋಷಕರು. ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ತೀರ ಹತ್ತಿರದಿಂದ ಗಮನಹರಿಸುವಂತಹ, […]
ಮಕ್ಕಳ ಬಗ್ಗೆ ಪೋಷಕರು ಕಾಳಜಿ ವಹಿಸುವುದು ಸಹಜ. ಪ್ರತಿಯೊಬ್ಬ ತಂದೆತಾಯಿಗೂ ತನ್ನ ಮಗುವನ್ನು ಚೆನ್ನಾಗಿ ಬೆಳೆಯಬೇಕು ಮತ್ತು ಆರೋಗ್ಯವಂತವಾಗಿರಬೇಕು ಎನ್ನುವಂತಹ ಇಚ್ಛೆ ಇರುವುದು. ಆದರೆ ಕೆಲವು ಪೋಷಕರು ಮಾತ್ರ ತುಂಬಾ ಅತಿಯಾಗಿಯೇ ಮಕ್ಕಳ ಬಗ್ಗೆ ಕಾಳಜಿ ವಹಿಸುವರು. ಇದು ಸ್ವಲ್ಪ ಅತಿರೇಕದ ವರ್ತನೆ ಎಂದು ನಮಗೆ ಅನಿಸುವುದುಂಟು. ಮಕ್ಕಳ ಬಗ್ಗೆ ಎಲ್ಲರೂ ರೇಜಿಗೆ ಬರುವಷ್ಟು ಕಾಳಜಿ ತೋರಿಸುವಂಥಹ ಪೋಷಕರಿಗೆ ಒಂದು ಸ್ಪೆಷಲ್ ಹೆಸರಿದೆ ಅದೇ ಹೆಲಿಕಾಪ್ಟರ್ ಪೋಷಕರು.
ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ತೀರ ಹತ್ತಿರದಿಂದ ಗಮನಹರಿಸುವಂತಹ, ಮತ್ತು ಎಲ್ಲದಕ್ಕೂ ತಲೆ ತೂರಿಸುವಂಥಹ ಪೋಷಕರನ್ನು ಹೆಲಿಕಾಪ್ಟರ್ ಪೋಷಕರು ಎಂದು ಕರೆಯಲಾಗುತ್ತದೆ. ಇವರು ಮಕ್ಕಳನ್ನು ನೆತ್ತಿಯ ಮೇಲಿಟ್ಟುಕೊಂಡು ಅತೀವ ಕಾಳಜಿ ಮಾಡುವ ಪೋಷಕರು ಎನ್ನಬಹುದು. ಆಕೆ ಅಥವಾ ಆತ ತಮ್ಮ ಮಗ ಅಥವಾ ಮಗಳ ಬಗ್ಗೆ ಹೆಚ್ಚಿನ ಗಮನ ಹರಿಸುವರು ಮತ್ತು ಸಣ್ಣ ಸಣ್ಣ ವಿಷಯಗಳಲ್ಲೂ ಅವರಿಗೆ ನೆರವಾಗುತ್ತಲಿರುವರು. ಹೆಲಿಕಾಪ್ಟರ್ ಪೋಷಕರು ತಮ್ಮ ಮಕ್ಕಳಿಗೆ ಮನೆಗೆಲಸ ಮಾಡಲು ನೆರವಾಗುವ ಬದಲು ಅವರೇ ಅದನ್ನು ಮಾಡಿ ಮುಗಿಸುವರು. ಹೆಚ್ಚಿನ ಸಂದರ್ಭದಲ್ಲಿ ಇವರು ಮಕ್ಕಳ ಶಾಲೆಯ ಪ್ರಿನ್ಸಿಪಾಲ್ ಅಥವಾ ಶಿಕ್ಷಕರಿಗೆ ಕರೆ ಮಾಡಿ ಮಕ್ಕಳು ಸುರಕ್ಷಿತವಾಗಿದ್ದಾರೆಯಾ ಮತ್ತು ಅವರಿಗೆ ಮನೆಯ ನೆನಪು ಬರುತ್ತಿದೆಯಾ ಎಂದು ಕೇಳುವರು. ಮಕ್ಕಳ ದೈನಂದಿನ ಚಟುವಟಿಕೆ, ಅನುಭವ, ವೈಫಲ್ಯ ಮತ್ತು ಯಶಸ್ಸಿನಲ್ಲಿ ಹೆಲಿಕಾಪ್ಟರ್ ಪೋಷಕರು ಗಮನವಿಡುವರು. ಇದಕ್ಕೆ ಮುಖ್ಯ ಕಾರಣವೇನೆಂದರೆ ತನ್ನ ಅನುಪಸ್ಥಿತಿಯಲ್ಲಿ ಮಕ್ಕಳಿಗೆ ಏನಾದರೂ ಆದರೆ ಎನ್ನುವ ಆತಂಕ.
ಹೆಲಿಕ್ಯಾಪ್ಟರ್ ಪೋಷಕರ ಲಕ್ಷಣಗಳು ಏನು ಗೊತ್ತಾ..?ನಿಮ್ಮನ್ನು ನೀವು ಚೆಕ್ ಮಾಡ್ಕೊಳ್ಳಿ ಅದಕ್ಕೊಂದು ಮಾನದಂಡವಿದೆ. ಅದ್ರ ಮೂಲಕ ಚೆಕ್ ಮಾಡಿದ್ರೆ ನೀವು ಹೆಲಿಕಾಪ್ಟರ್ ಪೋಷಕರಾ ಅಂತ ಗೊತ್ತಾಗುತ್ತೆ.
ಮಕ್ಕಳಿಗೆ ತಮ್ಮ ಮನೆಗೆಲಸ ಮತ್ತು ಪ್ರಾಜೆಕ್ಟ್ ಗಳನ್ನು ಪೂರ್ತಿಗೊಳಿಸಲು ಪೋಷಕರು ಯಾವಾಗಲೂ ನೆರವು ಹಾಗೂ ಮಾರ್ಗದರ್ಶನ ನೀಡುವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಪೋಷಕರು ತಮ್ಮ ಮಕ್ಕಳು ಸಮಯಕ್ಕೆ ಸರಿಯಾಗಿ ಮನೆಗೆಲಸ ಮಾಡಿ ಮುಗಿಸಬೇಕೆಂದು ಬಯಸುವರು. ಆದರೆ ಹೆಲಿಕಾಪ್ಟರ್ ಪೋಷಕರು ಇದಕ್ಕೆ ಭಿನ್ನವಾಗಿ ಇರುವರು. ಇವರು ಮಕ್ಕಳಿಗೆ ನೆರವಾಗುವುದರಲ್ಲಿ ಮುಂಚೂಣಿಯಲ್ಲಿರುವರು ಮತ್ತು ಮಕ್ಕಳ ಮನೆಗೆಲಸ ಮತ್ತು ಪ್ರಾಜೆಕ್ಟ್ ನ್ನು ತಾವೇ ಮುಗಿಸುವರು. ತಮ್ಮ ಮಕ್ಕಳು ಚೆನ್ನಾಗಿದ್ದಾರೆ ಎಂದು ಪರೀಕ್ಷೆ ಮಾಡಲು ಹೆಲಿಕ್ಯಾಪ್ಟರ್ ಪೋಷಕರು ತುದಿಗಾಲಲ್ಲಿ ನಿಲ್ಲುತ್ತಾರೆ.ಮಕ್ಕಳು ಹೊರಗಡೆ ಆಟವಾಡಿದರೆ ಆಗ ಬಿದ್ದು ಗಾಯ ಮಾಡಿಕೊಳ್ಳುವರು ಎನ್ನುವ ಕಾರಣಕ್ಕಾಗಿ ಹೊರಗಡೆ ಆಡಲು ಬಿಡಲ್ಲ. ಶಾಲೆಯಲ್ಲಿ ಸಹಪಾಠಿಗಳು ತಮ್ಮ ಮಗನಿಗೆ ಹೊಡೆದಿದ್ದಾರೆಯಾ ಅಥವಾ ಯಾವುದೇ ರೀತಿಯ ಸಮಸ್ಯೆಯು ಶಾಲೆಯಲ್ಲಿ ಇದೆಯಾ ಎನ್ನುವುದನ್ನು ತಿಳಿಯಲು ಹೆಲಿಕ್ಯಾಪ್ಟರ್ ಪೋಷಕರು ಆಗಾಗ ಶಿಕ್ಷಕರನ್ನು ಭೇಟಿ ಮಾಡುತ್ತಲಿರುತ್ತಾರೆ.. ಇಂಥ ಲಕ್ಷಣಗಳು ನಿಮ್ಮಲ್ಲೂ ಇವೆಯಾ..?
ಪೋಷಕರು ಹೇಗಿರಬೇಕು ಮತ್ತು ಮಕ್ಕಳ ಪಾಲನೆ ಹೇಗೆ ಎಂದು ಯಾರಾದರೂ ಇವರಿಗೆ ಸಲಹೆ ನೀಡಿದರೆ, ಆಗ ಅವರು ಇದನ್ನು ಸಂಪೂರ್ಣವಾಗಿ ಕಡೆಗಣಿಸುವರು. ಹೆಲಿಕ್ಯಾಪ್ಟರ್ ಪೋಷಕರಿಗೆ ತಮ್ಮ ಪಾಲನೆಯು ಅತ್ಯುತ್ತಮವಾಗಿರುವುದು ಮತ್ತು ಅವರು ತಮ್ಮ ಮಕ್ಕಳನ್ನು ಬೆಳೆಸುವ ಮತ್ತು ಅವರ ಕಾಳಜಿ ವಹಿಸುವ ಬಗ್ಗೆ ಯಾವುದೇ ಪ್ರಯೋಗ ಮಾಡಲು ಬಯಸುವುದಿಲ್ಲ. ಕಡೆಗೆ ತಮ್ಮ ಮಕ್ಕಳು ಹೇಳುವ ಮಾತನ್ನು ಕೂಡ ಇವರು ಕೇಳಲ್ಲ. ಮಕ್ಕಳ ಸುರಕ್ಷತೆ ಬಗ್ಗೆ ಯಾವುದೇ ಅಪಾಯವಿದ್ದರೂ ಅದನ್ನು ಪೋಷಕರು ಕಂಡುಹಿಡಿಯುವರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಹೆಲಿಕಾಪ್ಟರ್ ಪೋಷಕರಿಗೆ ಮಾತ್ರ ಪ್ರತಿಯೊಂದರಲ್ಲೂ ಮತ್ತು ಪ್ರತಿಯೊಂದು ಕಡೆಯೂ ಅಪಾಯ ಕಾಣಿಸುವುದು. ಮಕ್ಕಳು ಶಾಲೆಗೆ ತೆರಳಲು ಶಾಲೆಯ ಬಸ್ ನ್ನು ಸುರಕ್ಷಿತವಾಗಿ ಹತ್ತಿದರೂ ಅವರಿಗೆ ಮಾತ್ರ ಯಾವುದೇ ತೃಪ್ತಿ ಇರಲ್ಲ ಮತ್ತು ಅಪಘಾತವಾದರೆ ಏನು ಮಾಡುವುದು ಅಥವಾ ಮಗು ಸೀಟಿನಿಂದ ಬಿದ್ದರೆ ಗತಿಯೇನು ಎನ್ನುವ ನಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಲಿರುವರು. ಮಕ್ಕಳನ್ನು ಮೈದಾನದಲ್ಲಿ ಆಡಲು ಕೂಡ ಬಿಡುವುದಿಲ್ಲ. ಯಾಕೆಂದರೆ ಮಕ್ಕಳು ಬಿದ್ದು ಗಾಯಗೊಂಡರೆ ಏನು ಮಾಡುವುದು ಎನ್ನುವು ಭೀತಿ ಅವರಲ್ಲಿ ಇರುವುದು.
ಮಕ್ಕಳಿಗೆ ವೈಯಕ್ತಿಕವಾಗಿ ಇರಲು ಬಿಡುವುದು ಹೆಲಿಕಾಪ್ಟರ್ ಪೋಷಕರಿಗೆ ಸಾಧ್ಯವೇ ಇಲ್ಲ. ಕೆಲವರು ಇದನ್ನು ಮೂರ್ಖತನದ್ದು ಎಂದು ಭಾವಿಸುವರು. ಮಕ್ಕಳು ಸ್ನೇಹಿತರೊಂದಿಗೆ ಆಟವಾಡುವುದು ಅಥವಾ ಬೇರೆ ಕೋಣೆಯಲ್ಲಿ ಮಲಗುವುದು ಇವರಿಗೆ ಅದು ಸರಿಯೆಂದು ಅನಿಸದು. ಹೆಲಿಕಾಪ್ಟರ್ ಪೋಷಕರು ತಾವು ಶಾಪಿಂಗ್ ಗೆ ಹೋಗುವ ವೇಳೆ ಮಕ್ಕಳನ್ನು ಅಜ್ಜಅಜ್ಜಿ ಜತೆಗೆ ಅಥವಾ ಕುಟುಂಬದ ಬೇರೆಯವರ ಜತೆಗೆ ಬಿಡಲು ಕೂಡಾ ಹಿಂದೇಟು ಹಾಕುತ್ತಾರೆ.
ಮಕ್ಕಳು ಬೆಳೆಯುತ್ತಿರುವಂತೆ, ಪೋಷಕರು ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು ಮತ್ತು ತಮ್ಮ ದೈನಂದಿನ ಕೆಲಸಗಳನ್ನು ಹೇಗೆ ಮಾಡಿಕೊಳ್ಳಬೇಕು ಹಾಗೆ ಅವರಿಗೆ ತರಬೇತಿ ನೀಡಬೇಕು. ಆದರೆ ಹೆಲಿಕಾಪ್ಟರ್ ಪೋಷಕರು,ಮಕ್ಕಳು ಬಟ್ಟೆ ಧರಿಸುವುದು, ಕೂದಲು ಬಾಚುವುದು, ಊಟ ಮಾಡಿಸುವುದು, ಮಲಗಿಸುವುದು, ಪುಸ್ತಕ ಸರಿಯಾಗಿ ಇಟ್ಟುಕೊಳ್ಳುವುದು ಹೀಗೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ತಾವೇ ಮಾಡುವರು. ಮಕ್ಕಳ ಬಗ್ಗೆ ಕಾಳಜಿ ಇಟ್ಟುಕೊಳ್ಳುವುದು ಮತ್ತು ಅವರ ಪೋಷಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಮಕ್ಕಳ ಶ್ರೇಯೋಭಿವೃದ್ಧಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಸಂಪೂರ್ಣ ಹಕ್ಕಿದೆ. ಆದರೆ ಅತಿಯಾದ ಕಾಳಜಿ ಮತ್ತು ಗಮನಹರಿಸುವ ಪರಿಣಾಮವಾಗಿ ಮಕ್ಕಳಿಗೆ ಉಸಿರು ಗಟ್ಟಿಸುವ ವಾತಾವರಣದಲ್ಲಿ ಬದುಕುವಂತೆ ಆಗಬಹುದು. ಅವರಿಗೂ ವೈಯಕ್ತಿಕ ಸಮಯ ಬೇಕು. ಇದರಿಂದಾಗಿ ನೀವು ಹೆಲಿಕಾಪ್ಟರ್ ಪೋಷಕರಾಗುವುದನ್ನು ತಡೆಯಿರಿ ಮತ್ತು ಮಕ್ಕಳು ತಮ್ಮ ಚಟುವಟಿಕೆಗಳನ್ನು ತಾವಾಗಿಯೇ ಮಾಡಲು ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿ ಉತ್ತಮ ಪೋಷಕರಾಗಿ.
Published On - 12:16 pm, Thu, 24 October 19