ಮನುಷ್ಯನಾಗಿ ಹುಟ್ಟಿದ ಮೇಲೆ ಈ ನಾಲ್ಕು ಋಣಗಳನ್ನು ತೀರಿಸಲೇಬೇಕು!

ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತಹ ಆಚರಣೆಗಳಲ್ಲಿ ಒಂದು ಋಣಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಬೇಕು. ಮಹಾಭಾರತದಲ್ಲಿ ಮನುಷ್ಯ ಕಡ್ಡಾಯವಾಗಿ ತೀರಿಸಬೇಕಾದ ಋಣಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅದರಂತೆ […]

ಮನುಷ್ಯನಾಗಿ ಹುಟ್ಟಿದ ಮೇಲೆ ಈ ನಾಲ್ಕು ಋಣಗಳನ್ನು ತೀರಿಸಲೇಬೇಕು!
Follow us
ಸಾಧು ಶ್ರೀನಾಥ್​
|

Updated on:Oct 27, 2019 | 7:04 AM

ಹಿಂದೂ ಧರ್ಮದಲ್ಲಿ ಇರುವ ಎಷ್ಟೋ ಆಚಾರ-ವಿಚಾರ, ಪದ್ಧತಿಗಳು ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವು ಪಾಲಿಸುವ ಪ್ರತಿ ಆಚರಣೆಯ ಹಿಂದೆಯೂ ಒಂದು ನಿಗೂಢ ಸತ್ಯ ಅಡಗಿರುತ್ತೆ. ಆ ಆಚರಣೆ ಬಗ್ಗೆ ಸಂಪೂರ್ಣವಾಗಿ ತಿಳಿದು ಆಚರಿಸಿದಾಗ ಮಾತ್ರ ಅದರ ಸಂಪೂರ್ಣ ಫಲ ಸಿಗುತ್ತೆ ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಅಂತಹ ಆಚರಣೆಗಳಲ್ಲಿ ಒಂದು ಋಣಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಅದಕ್ಕೆ ಪ್ರತಿಫಲವಾಗಿ ಕೆಲವು ಋಣಗಳನ್ನು ಸಂದಾಯ ಮಾಡಬೇಕು. ಮಹಾಭಾರತದಲ್ಲಿ ಮನುಷ್ಯ ಕಡ್ಡಾಯವಾಗಿ ತೀರಿಸಬೇಕಾದ ಋಣಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅದರಂತೆ ನಾಲ್ಕು ಅತಿ ಮುಖ್ಯ. ಆ ಋಣಗಳನ್ನು ಮನುಷ್ಯ ತೀರಿಸಲೇಬೇಕು.

ಮನುಷ್ಯರು ತೀರಿಸಲೇಬೇಕಾದ ಋಣಗಳು 1) ದೇವತಾ ಋಣ: ಮಾನವ ಜನ್ಮ ಪಡೆದು ಸನಾತನ ಧರ್ಮದ ವ್ಯಾಪ್ತಿಗೆ ಬಂದ ನಂತರ ನಮ್ಮ ಕುಲದೇವರು, ಮನೆದೇವರು, ಇಷ್ಟದೇವರ ಸೇವೆ ಸಲ್ಲಿಸಿ ಋಣಮುಕ್ತರಾಗಬೇಕು. ಅದು ಹೇಗೆ ಅಂದ್ರೆ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆಗಳನ್ನು ಕೈಗೊಳ್ಳೋದು. ಹೇಗೆ ನಾವು ದಿನದಲ್ಲಿ ಮೂರು ಬಾರಿ ಊಟ ಉಪಹಾರಗಳನ್ನು ತಪ್ಪದೇ ಮಾಡುತ್ತೇವೋ, ಅದೇ ರೀತಿ ಪ್ರತಿವರ್ಷ ತಪ್ಪದೇ ನಮ್ಮ ಕುಲದೇವರು, ಮನೆದೇವರು ಹಾಗೂ ಇಷ್ಟದೇವರ ಆರಾಧನೆ ಮಾಡಬೇಕು. ಇದನ್ನು ಒಂದು ಸಾಧನೆಯ ರೀತಿಯಲ್ಲಿ ಮಾಡಿಕೊಂಡು ನಡೆಸುತ್ತಾ ಬರಬೇಕು. ಕುಲದೇವರ ಆರಾಧನೆ ನಮ್ಮಲ್ಲಿನ ತರ್ಕ ಬುದ್ಧಿಯಿಂದ ಬಿಡುಗಡೆ ಹೊಂದಲು ಸಹಕರಿಸುತ್ತೆ. ಇನ್ನು ನಮ್ಮ ಗ್ರಹಣಶಕ್ತಿಯನ್ನು ಲೌಕಿಕ, ಭೌತಿಕಗಳಿಂದ ಆಧ್ಯಾತ್ಮದ ಕಡೆ ಹರಿಸಬೇಕಾದರೆ ನಾವು ಕುಲದೇವರನ್ನು ಆರಾಧಿಸಲೇಬೇಕು ಎನ್ನಲಾಗುತ್ತೆ.

2)ಪಿತೃ ಋಣ: ಆತ್ಮವು ಬರುವುದು ಪರಮಾತ್ಮನಿಂದ. ಹಾಗೆಯೇ ಆ ಆತ್ಮವನ್ನು ಹೊಂದುವ ದೇಹ ಕೊಟ್ಟ ತಂದೆ-ತಾಯಿಯರಿಗೆ ನಾವು ಋಣಿಗಳಾಗಿರಬೇಕು. ಆದ್ದರಿಂದ ಜನ್ಮದಾತರಿಗೆ ನಾವು ಗೌರವ ಸಲ್ಲಿಸಬೇಕು. ನಮ್ಮ ಕುಟುಂಬದಲ್ಲಿ ಮರಣ ಹೊಂದಿದ್ದ ಪಿತೃದೇವತೆಗಳಿಗೆ ಪ್ರತಿವರ್ಷ ತರ್ಪಣ ಕೊಟ್ಟು ಋಣ ತೀರಿಸಬೇಕು ಅಂತಾ ನಮ್ಮ ಶಾಸ್ತ್ರಗಳು ಹೇಳುತ್ತವೆ.

3)ದಾನ ಋಣ: ಮನುಷ್ಯ ತಾನು ಎಷ್ಟು ದಿನ ಬದುಕಿರುತ್ತಾನೋ ಅಷ್ಟು ದಿನ ದಾನ ಧರ್ಮಗಳನ್ನು ಮಾಡಿ ದೇವರ ಋಣ ತೀರಿಸಬೇಕು. ಈ ರೀತಿಯ ಕಾರ್ಯಗಳನ್ನು ಮನುಷ್ಯ ಮಾಡದೇ ಸಾವನ್ನಪ್ಪಿದ್ರೆ ಅವರ ಕುಟುಂಬದವರು ಶ್ರಾದ್ಧ ಕ್ರಿಯೆ ಮಾಡುವುದರಿಂದ ದೇವರ ಋಣ ತೀರಿ ಅವರಿಗೆ ಒಳ್ಳೆಯ ಲೋಕ ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ.

4)ಋಷಿ ಋಣ: ಮನುಷ್ಯ ಬುದ್ಧಿಜೀವಿ. ತನ್ನ ಜ್ಞಾನವನ್ನು ಬಚ್ಚಿಡದೇ ಪ್ರತಿಯೊಬ್ಬರಿಗೂ ಹಂಚುವ ಗುಣವಿರಬೇಕು. ಮೇಲೆ ತಿಳಿಸಿದ ದೇವ ಋಣ ಹಾಗೂ ಋಷಿ ಋಣವನ್ನು ಮನುಷ್ಯ ಬದುಕಿದ್ದಾಗ ಭೂಮಿಯ ಮೇಲೆ ತಾನಾಗಿಯೇ ಮಾಡಿದರೆ ಆತ ಸಾವನ್ನಪ್ಪಿದ ಮೇಲೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ.

ಹೀಗೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತನ್ನ ಜನ್ಮ ಸಾರ್ಥಕವಾಗಲು ಮೇಲೆ ತಿಳಿಸಿದ ಅಷ್ಟೂ ಋಣಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನಮ್ಮ ಕೈಲಾದ ಮಟ್ಟಿಗೆ ಧರ್ಮ, ಕರ್ಮಾನುಸಾರವಾಗಿ ಈ ಋಣಗಳನ್ನ ತೀರಿಸಬೇಕು. ಇವುಗಳನ್ನು ಸಲ್ಲಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತೆ ಎನ್ನುತ್ತೆ ನಮ್ಮ ಧರ್ಮಶಾಸ್ತ್ರ.

Published On - 10:45 pm, Sat, 26 October 19

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ