ದೀಪಾವಳಿಯಂದು ನರಕ ಚತುರ್ದಶಿ ಆಚರಣೆಯ ವಿಶೇಷತೆ ಏನು?
ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. 3 ದಿನ ಆಚರಿಸಲ್ಪಡುವ ದೀಪಾವಳಿ ಹಬ್ಬ ಈ ಬಾರಿ ಎರಡೇ ದಿನ ಎನ್ನಲಾಗ್ತಿದೆ. ಆ ಪ್ರಕಾರವಾಗಿ ಇಂದು ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆಯನ್ನು ಮಾಡಬೇಕು ಎನ್ನಲಾಗ್ತಿದೆ. ಈಗ ನಾವು ಮೊದಲಿಗೆ ನರಕ ಚತುರ್ದಶಿ ಬಗ್ಗೆ ತಿಳಿಯೋಣ. ನರಕ ಚತುರ್ದಶಿ ನರಕಾಸುರ ಸಂಹಾರವಾಗಿದ್ದು ಆಶ್ವೀಜ ಕೃಷ್ಣ ಚತುರ್ದಶಿಯ ದಿನ ಕಗ್ಗತ್ತಲಲ್ಲಿ. ಹೀಗಾಗೇ ದೀಪಾವಳಿಯ ಪ್ರಮುಖ ದಿನವಾದ ಆಶ್ವೀಜ ಚತುರ್ದಶಿ, ನರಕ ಚತುರ್ದಶಿಯಾಯ್ತು ಅಂತಾ ನಮ್ಮ ಶಾಸ್ತ್ರಗಳಲ್ಲಿ […]
ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ದೀಪಾವಳಿಯೂ ಒಂದು. 3 ದಿನ ಆಚರಿಸಲ್ಪಡುವ ದೀಪಾವಳಿ ಹಬ್ಬ ಈ ಬಾರಿ ಎರಡೇ ದಿನ ಎನ್ನಲಾಗ್ತಿದೆ. ಆ ಪ್ರಕಾರವಾಗಿ ಇಂದು ನರಕ ಚತುರ್ದಶಿ ಹಾಗೂ ಧನಲಕ್ಷ್ಮೀ ಪೂಜೆಯನ್ನು ಮಾಡಬೇಕು ಎನ್ನಲಾಗ್ತಿದೆ. ಈಗ ನಾವು ಮೊದಲಿಗೆ ನರಕ ಚತುರ್ದಶಿ ಬಗ್ಗೆ ತಿಳಿಯೋಣ.
ನರಕ ಚತುರ್ದಶಿ ನರಕಾಸುರ ಸಂಹಾರವಾಗಿದ್ದು ಆಶ್ವೀಜ ಕೃಷ್ಣ ಚತುರ್ದಶಿಯ ದಿನ ಕಗ್ಗತ್ತಲಲ್ಲಿ. ಹೀಗಾಗೇ ದೀಪಾವಳಿಯ ಪ್ರಮುಖ ದಿನವಾದ ಆಶ್ವೀಜ ಚತುರ್ದಶಿ, ನರಕ ಚತುರ್ದಶಿಯಾಯ್ತು ಅಂತಾ ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಮಹಾವಿಷ್ಣು ಲೋಕ ರಕ್ಷಣೆಯ ಉದ್ದೇಶದಿಂದ ವರಾಹ ಅವತಾರ ತಳೆಯುತ್ತಾನೆ. ಆ ಸಂದರ್ಭದಲ್ಲಿ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬಿದ್ದ ಪರಿಣಾಮ ಭೂದೇವಿಗೆ ನರಕಾಸುರ ಜನಿಸ್ತಾನೆ. ಭೂದೇವಿ ಮಹಾವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸ್ತಾಳೆ. ಇದರಿಂದ ಬಲಿಷ್ಠನಾಗುವ ನರಕಾಸುರ ಲೋಕಕ್ಕೆ ಕಂಟಕನಾಗ್ತಾನೆ.
ಬ್ರಹ್ಮನಿಂದಲೂ ವಿಶೇಷ ವರ ಪಡೆದಿದ್ದ ನರಕಾಸುರ ತಾನು ಪಡೆದ ದಿವ್ಯವಾದ ವರದ ಪ್ರಭಾವದಿಂದ ಎಲ್ಲೆಡೆ ದಾಳಿ ಮಾಡಲು ಆರಂಭಿಸಿದ. ಭೂಮ೦ಡಲದಲ್ಲಿರುವ ಎಲ್ಲಾ ಸಾಮ್ರಾಜ್ಯಗಳನ್ನೂ ಜಯಿಸಿದ. ದುಷ್ಟ ನರಕಾಸುರ ತನಗಿದ್ದ ವಿಶೇಷ ವರದಿಂದ ಹಲವಾರು ಅನಾಚರಗಳನ್ನು ಮಾಡ್ತಾನೆ. ಕಪಟದಿಂದ 16ಸಾವಿರ ಗೋಪಿಕೆಯರನ್ನು ಸೆರೆಹಿಡಿದು ಬಂಧಿಸಿರ್ತಾನೆ. ಈ ಎಲ್ಲವನ್ನೂ ಬಲ್ಲವನಾದ ಶ್ರೀ ಕೃಷ್ಣ ಕೂಡಲೇ ಕಾರ್ಯೋನ್ಮುಖನಾಗ್ತಾನೆ. ಈ ಯುದ್ಧದಲ್ಲಿ ಕೃಷ್ಣನ ಜೊತೆಗೆ ಸತ್ಯಭಾಮೆ ಸೇರಿದಂತೆ ಗರುಡನೂ ಕೂಡ ಪಾಲ್ಗೊಂಡಿರ್ತಾರೆ.
ಒಂದು ಸಂದರ್ಭದಲ್ಲಿ ನರಕಾಸುರ ತನ್ನ ಪ್ರಬಲ ಅಸ್ತ್ರವಾದ ತಿಶೂಲವನ್ನು ಶ್ರೀ ಕೃಷ್ಣನತ್ತ ಬೀಸಿಬಿಡ್ತಾನೆ. ಆ ತ್ರಿಶೂಲವು ಭಗವಾನ್ ಶ್ರೀ ಕೃಷ್ಣನ ಎದೆಗೆ ಬಡಿದು ಆತ ಮೂರ್ಛೆ ತಪ್ಪಿ ಬೀಳ್ತಾನೆ. ಶ್ರೀಕೃಷ್ಣನು ಕೆಳಗೆ ಬಿದ್ದ ಕೂಡಲೇ ಸತ್ಯಭಾಮೆ ಒಂದು ಕ್ಷಣ ವಿಚಲಿತಳಾಗ್ತಾಳೆ. ಕೂಡಲೇ ಎಚ್ಚೆತ್ತುಕೊಂಡ ಸತ್ಯಭಾಮೆ ಕ್ಷಣ ಮಾತ್ರದಲ್ಲಿ ನರಕಾಸುರನತ್ತ ಬಾಣವೊ೦ದನ್ನು ಪ್ರಯೋಗಿಸ್ತಾಳೆ. ಅದು ಸರಿಯಾಗಿ ನರಕಾಸುರನ ತಲೆಯನ್ನು ಸೀಳಿಬಿಡುತ್ತೆ. ನರಕಾಸುರ ಮೃತನಾಗ್ತಾನೆ. ನರಕಾಸುರನ ಸಂಹಾರವಾದ ಈ ದಿನದಿಂದ ಬಲಿಪಾಡ್ಯಮಿಯವರೆಗೆ ನಿಷ್ಕಲ್ಮಶ ಮನಸ್ಸಿನಿಂದ ಭಗವಂತನ ಸೇವೆ ಮತ್ತು ಆರಾಧನೆ ಮಾಡಬೇಕು. ಇದ್ರಿಂದ ದೀರ್ಘಾಯುಷ್ಯ, ಐಶ್ವರ್ಯ ಮತ್ತು ಸದ್ಬುದ್ಧಿಯನ್ನು ಭಗವಂತ ನೀಡ್ತಾನೆ. ಜೀವನದಲ್ಲಿ ಯಾವ ಕಷ್ಟವೂ ಬಾರದಂತೆ ಜಗತ್‌ರಕ್ಷಕ ಕಾಪಾಡ್ತಾನೆ ಎಂಬ ನಂಬಿಕೆ ಇದೆ.
ಧನಲಕ್ಷ್ಮೀ ಪೂಜೆ ದೀಪಾವಳಿ ಅಮಾವಾಸ್ಯೆಯಂದು ಮಾಡುವ ಧನಲಕ್ಷ್ಮೀ ಪೂಜೆಗೆ ನಮ್ಮ ಶಾಸ್ತ್ರಗಳಲ್ಲಿ ವಿಶೇಷ ಮಹತ್ವ ಇದೆ. ಲಕ್ಷ್ಮೀದೇವಿ ಸಂಪತ್ತಿನ ಅಧಿದೇವತೆ ಮಾತ್ರವಲ್ಲ. ಜೀವನದಲ್ಲಿ ಸುಖ ಸಮೃದ್ಧಿಗೆ ಕಾರಣವಾಗೋ ಎಲ್ಲವನ್ನೂ ಅವಳು ನೀಡ್ತಾಳೆ. ಹೀಗಾಗೇ ಲಕ್ಷ್ಮೀದೇವಿಯನ್ನ ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸಲಾಗುತ್ತೆ. ಅಷ್ಟಲಕ್ಷ್ಮೀಯರಲ್ಲಿ ಲಕ್ಷ್ಮೀಯ ಒಂದು ರೂಪವೇ ಧನಲಕ್ಷ್ಮೀ. ಇದೇ ಧನಲಕ್ಷ್ಮೀ ಪೂಜೆಯನ್ನು ದೀಪಾವಳಿ ಅಮಾವಾಸ್ಯೆಯಂದು ಮಾಡಬೇಕು. ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯಿಂದ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತೆ ಎಂಬ ನಂಬಿಕೆ ಇದೆ. ನಾವು ಲಕ್ಷ್ಮೀಯನ್ನು ಶ್ರೀಮಂತರಾಗಿ, ಸರಳವಾಗಿ ಹೇಗೆ ಬೇಕಾದ್ರೂ ಪೂಜಿಸಬಹುದು. ಆದ್ರೆ ಲಕ್ಷ್ಮೀ ನಮ್ಮಿಂದ ಬಯಸೋದು ಪ್ರೀತಿಯ ಪೂಜೆ.
Published On - 11:09 am, Sun, 27 October 19