ಹುಬ್ಬಿನ ಜಡೆ -ಇದು ಫ್ಯಾಷನ್ ಲೋಕದ ಹೊಸ ಟ್ರೆಂಡ್ ಅಂದ್ರೆ ನೀವು ನಂಬ್ಲೇಬೇಕು
ಸುಂದರವಾದ ಉದ್ದನೆಯ ಜಡೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ? ನೀಟಾಗಿ ಜಡೆ ಹೆಣೆದುಕೊಂಡು ಹೂವು ಮುಡಿಯೋದು ಕಾಮನ್. ಆದ್ರೆ ಹುಬ್ಬಿನ ಮೇಲೆ ಜಡೆ ಇದ್ರೆ ಹೇಗಿರಬಹುದು ಅನ್ನೋದನ್ನು ಊಹಿಸ್ಕೊಂಡಿದ್ದೀರಾ.. ಅರೇ ಇದೇನಪ್ಪಾ ಹುಬ್ಬಿನ ಮೇಲೆ ಜಡೆನಾ ಅಂತ ಶಾಕ್ ಆದ್ರಾ..? ಹೌದು ಹುಬ್ಬಿನ ಮೇಲೆ ಜಡೆ ಹಾಕೋದು ಈಗ ಟ್ರೆಂಡ್ ಆಗಿದೆ. ಇದೆಂಥ ಟ್ರೆಂಡ್ ಬಂತಪ್ಪ ಅನ್ಕೊಂಡ್ರಾ. ಆದರೆ ಈಗಿನ ಟ್ರೆಂಡ್ ನಲ್ಲಿ ಹೊಸ ಡಿಸೈನ್ ಗಳ ಐ ಬ್ರೋ ಸಖತ್ ಫೇಮಸ್ ಆಗಿದೆ. […]

ಸುಂದರವಾದ ಉದ್ದನೆಯ ಜಡೆ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ? ನೀಟಾಗಿ ಜಡೆ ಹೆಣೆದುಕೊಂಡು ಹೂವು ಮುಡಿಯೋದು ಕಾಮನ್. ಆದ್ರೆ ಹುಬ್ಬಿನ ಮೇಲೆ ಜಡೆ ಇದ್ರೆ ಹೇಗಿರಬಹುದು ಅನ್ನೋದನ್ನು ಊಹಿಸ್ಕೊಂಡಿದ್ದೀರಾ.. ಅರೇ ಇದೇನಪ್ಪಾ ಹುಬ್ಬಿನ ಮೇಲೆ ಜಡೆನಾ ಅಂತ ಶಾಕ್ ಆದ್ರಾ..? ಹೌದು ಹುಬ್ಬಿನ ಮೇಲೆ ಜಡೆ ಹಾಕೋದು ಈಗ ಟ್ರೆಂಡ್ ಆಗಿದೆ.
ಇದೆಂಥ ಟ್ರೆಂಡ್ ಬಂತಪ್ಪ ಅನ್ಕೊಂಡ್ರಾ. ಆದರೆ ಈಗಿನ ಟ್ರೆಂಡ್ ನಲ್ಲಿ ಹೊಸ ಡಿಸೈನ್ ಗಳ ಐ ಬ್ರೋ ಸಖತ್ ಫೇಮಸ್ ಆಗಿದೆ. ಬ್ರೈಡಡ್ ಐ ಬ್ರೋ ಅಂದರೆ ಹುಬ್ಬಿನ ಕೂದಲಿನಿಂದ ಜಡೆ ಹಾಕೋದು. ಇದು ಅಷ್ಟು ಸುಲಭವಾಗಿ ಎಲ್ಲರಿಗೂ ಇಷ್ಟವಾಗೋದಿಲ್ಲ. ಆದ್ರೆ ಜಡೆ ಹುಬ್ಬು ಲೇಟೆಸ್ಟ್ ಬ್ಯೂಟಿ ಟ್ರೆಂಡ್ ಆಗಿದೆ.ಆಫ್ರಿಕಾ ದೇಶದಲ್ಲಿ ನಿಜವಾಗ್ಲೂ ಹುಬ್ಬಿನ ಕೂದಲಿನಿಂದ ಜಡೆ ಹೆಣೆಯಲಾಗುತ್ತೆ. ನೋಡಲು ತುಂಬಾ ವಿಚಿತ್ರವೆನಿಸಿದ್ರು ಇದು ನಿಜ. ಜಡೆ ಹೆಣೆಯೋದು ಕಷ್ಟದ ಕೆಲಸವೇ ಸರಿ. ಆದ್ರೆ ಆಫ್ರಿಕಾದಲ್ಲಿ ಮಾತ್ರ ಹುಬ್ಬಿನ ಕೂದಲಿಗೆ ಜಡೆ ಹಾಕಲಾಗುತ್ತೆ. ಇದನ್ನ ನೋಡಿಯೇ ಬ್ರೈಡಡ್ ಐಬ್ರೋ ಡಿಸೈನ್ ಅನ್ನೋ ಟ್ರೆಂಡ್ ಶುರುವಾಗಿದ್ದು.
ಮೊದಲಿಗೆ ಈ ಬ್ರೈಡಡ್ ಐ ಬ್ರೋ ಫೋಟೋ ನೋಡಿದ ತಕ್ಷಣ ನಿಮಗೆ ಆಶ್ಚರ್ಯ ಅನಿಸೋದ್ರಲ್ಲಿ ನೋ ಡೌಟ್.. ಹುಬ್ಬಿನ ಕೂದಲಿನಿಂದ ಹೇಗೆ ಜಡೆ ಹೆಣೆಯೋದು ಅಂತ ತಲೆಕೆಡುತ್ತೆ. ಆದ್ರೆ ಇಲ್ಲಿ ಒಂದು ಟ್ವಿಸ್ಟ್ ಇದೆ. ಹುಬ್ಬಿಗೆ ಜಡೆ ಹೆಣೆದಿರೋ ಹಾಗೆ ಕಾಣುತ್ತೆ ಆದ್ರೆ ನಿಜವಾಗಿ ಹೆಣೆದಿರೋದಿಲ್ಲಾ. ಹೆಣೆದಿರೋ ಹಾಗೆ ಡಿಸೈನ್ ಮಾಡಲಾಗುತ್ತೆ.ಈ ಜಡೆ ಹುಬ್ಬಿನ ಡಿಸೈನ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿದೇಶೀಯರಂತೂ ಈ ಹೊಸ ಫ್ಯಾಷನ್ ಟ್ರೆಂಡ್ ಹಿಂದೆ ಬಿದ್ದಿದ್ದಾರೆ. ಹೊಸ ಲುಕ್ ಗಾಗಿ ಹುಬ್ಬಿನ ಮೇಲೂ ಜಡೆ ಹೆಣೆದಿರುವ ಹಾಗೆ ಡಿಸೈನ್ ಮಾಡಿಕೊಳ್ತಿದ್ದಾರೆ. ಆದ್ರೆ ಈ ಜಡೆ ಹುಬ್ಬು ಒಂದು ರೀತಿಯ ವಿಚಿತ್ರ ಲುಕ್ ಕೊಡೋದಂತೂ ಗ್ಯಾರಂಟಿ. ಡಿಫರೆಂಟ್ ಲುಕ್ ಬೇಕು ಅನ್ನೋವ್ರು ಟ್ರೈ ಮಾಡಬಹುದು.
ಸುಂದರವಾದ ಐ ಬ್ರೋ ಹೊಂದಲು ಪ್ರತಿಯೊಬ್ಬ ಮಹಿಳೆಗೂ ಇಷ್ಟವಿರುತ್ತೆ. ಆಕರ್ಷಕ ಹುಬ್ಬುಗಳನ್ನ ಪಡೆಯಲು ಥ್ರೆಡ್ಡಿಂಗ್ ಮಾಡಿಸಿ ಶೇಪ್ ಮಾಡಬಹುದು. ಆದ್ರೆ ಈ ಬ್ರೈಡಡ್ ಐ ಬ್ರೋ ಕಾನ್ಸೆಪ್ಟ್ ನಿಮಗೆ ಆಕರ್ಷಕ ಲುಕ್ ನೀಡೋದಂತು ನಿಜ. ಆದರೆ ಇದಕ್ಕಾಗಿ ಪ್ರತಿ ಬಾರಿಯೂ ಸೆಲೂನ್‌ಗೆ ಹೋಗಬೇಕು ಅಂತಾ ಏನು ಇಲ್ಲಾ. ಮನೆಯಲ್ಲೇ ನೀವೇ ಕಾಜಲ್ ಅಥವ ಐ ಲೈನರ್ ಜೆಲ್ ಬಳಸಿ ಟ್ರೈ ಮಾಡಬಹುದು.ನೀಟಾಗಿ ಜಡೆ ಹಾಕಿದಂತೆ ಕಾಣುವ ಈ ಬ್ರೈಡಡ್ ಐಬ್ರೋ ಫೋಟೋ ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್ ಪ್ರಿಯರ ಪ್ರಯೋಗಾತ್ಮಕ ಟ್ರಯಲ್‌ನಲ್ಲಿ ಬ್ರೈಡಡ್ ಡಿಸೈನ್ ಸೇರಿಕೊಂಡಿದೆ. ವೈಲ್ಡ್ ಲುಕ್ ನೀಡುವ ಈ ಐ ಬ್ರೋ ಶೇಪಿಂಗ್ ಮಾಡೆಲ್ಗಳ ಬಿಂದಾಸ್ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸೈ ಎಂದಿದೆ.
ಕೂದಲನ್ನು ಭಾಗ ಮಾಡಿ ಹೇರ್ ಸ್ಟೈಲ್ ಮಾಡುವುದು ಎಲ್ಲರಿಗೂ ಗೊತ್ತು. ಆದ್ರೆ ಐಬ್ರೋವನ್ನೂ ಕೂಡ ಭಾಗ ಮಾಡಿ ಐಬ್ರೋ ಸ್ಟೈಲ್ ಮಾಡುವ ವಿಷಯ ಗೊತ್ತಾ ? ಐಬ್ರೋ ಶೇಪಿಂಗ್ ಮಾತ್ರವಲ್ಲ, ಅದನ್ನು ಸ್ಟೈಲ್ ಮಾಡುವ ಹೊಸ ವಿಧಾನಗಳು ಇಂದು ಬ್ಯೂಟಿ ವರ್ಲ್ಡ್‌ನಲ್ಲಿ ಬಂದಿವೆ. ಜತೆಗೆ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಅಂದ ಹಾಗೆ, ಈ ರೀತಿಯ ಹೊಸ ಬ್ಯೂಟಿ ಆ್ಯಂಡ್ ಸ್ಟೈಲ್ ಎಕ್ಸಪರೆಮೆಂಟ್ಗಳನ್ನ ಮಾಡುವವರು ಬೇರೆ ಯಾರು ಅಲ್ಲ, ಮೇಕಪ್ ಆರ್ಟಿಸ್ಟ್ಗಳು. ಆದ್ರೆ ಈ ಹೊಸ ಸ್ಟೈಲ್ಗಳು ಮೊದಲು ಪ್ರಯೋಗವಾಗುವುದು ವಿದೇಶಗಳಲ್ಲಿ. ಈ ಬ್ರೈಡಡ್ ಐ ಬ್ರೋ ಕೂಡ ವಿದೇಶದಿಂದ ಬಂದಿರುವ ಸ್ಟೈಲ್ ಸ್ಟೇಟ್ಮೆಂಟ್. ಐಬ್ರೋ ಶೇಪಿಂಗ್‌ನಲ್ಲೆ ಇಂದು ಸಾಕಷ್ಟು ವಿನೂತನ ಬಗೆಯ ಟೆಕ್ನಿಕ್‌ಗಳು ಬಂದಿವೆ. ಅದರಲ್ಲಿ ಈ ಬ್ರೈಡಡ್ ಐ ಬ್ರೋ ಸಖತ್ ಟ್ರೆಂಡಿಯಾಗಿದ್ದು, ಬ್ಯೂಟಿ ಪ್ರಿಯರನ್ನು ಸೆಳೆಯುತ್ತಿದೆ.

Published On - 8:48 pm, Sun, 27 October 19




