ಮೇಕಪ್ ಬಾಕ್ಸ್ ಇಲ್ಲದೆ ಮೇಕಪ್ ಮಾಡಿ, ಇಲ್ಲಿದೆ ಕಾಸು ಉಳಿಸೋ ಉಪಾಯ

ಹುಡುಗೀರು ಸೌಂದರ್ಯ ಪ್ರಿಯರು. ಅವ್ರಿಗೆ ಬ್ಯೂಟಿ ಬಗ್ಗೆ ಕಾಳಜಿ ವಹಿಸೋದು, ಮೇಕಪ್ ಮಾಡ್ಕೊಳ್ಳೋದು, ಸ್ಟೈಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಇದು ಎಲ್ಲರಿಗೂ ಗೊತ್ತಿರೋ ಜಗತ್ತಿನ ಸತ್ಯ ವಿಚಾರ. ಆದ್ರೆ ಮೇಕಪ್‌ ವಿಷ್ಯದಲ್ಲಿ ನಿಮ್ಗೊದಿಂಷ್ಟು ಸಿಂಪಲ್‌ ಟೆಕ್ನಿಕ್ ಹೇಳಿ ಕೊಡ್ತೀವಿ. ಇದು ಕಡಿಮೆ ಬಜೆಟ್‌ನಲ್ಲಿ ಮೇಕಪ್‌ ಮಾಡ್ಕೊಳ್ಳೋ ಟಿಪ್ಸ್. ಐ ಪೆನ್ಸಿಲ್‌ನಿಂದ ಪಡೆಯಿರಿ ಐ ಲೈನರ್‌: ಅದು ಹೇಗೆ ಅಂತ ನಿಮ್ಗೆ ಅನ್ನಿಸ್ಬಹುದು. ಐ ಪೆನ್ಸಿಲ್‌ನ ಟಿಪ್‌ನ್ನು ಬೆಂಕಿಯ ಬಳಿ ಸುಮಾರು 30 ಸೆಕೆಂಡ್‌ ಇಟ್ಕೊಳ್ಳಿ. ನಂತ್ರ […]

ಮೇಕಪ್ ಬಾಕ್ಸ್ ಇಲ್ಲದೆ ಮೇಕಪ್ ಮಾಡಿ, ಇಲ್ಲಿದೆ ಕಾಸು ಉಳಿಸೋ ಉಪಾಯ
ಮೇಕಪ್
sadhu srinath

|

Nov 04, 2019 | 1:35 PM

ಹುಡುಗೀರು ಸೌಂದರ್ಯ ಪ್ರಿಯರು. ಅವ್ರಿಗೆ ಬ್ಯೂಟಿ ಬಗ್ಗೆ ಕಾಳಜಿ ವಹಿಸೋದು, ಮೇಕಪ್ ಮಾಡ್ಕೊಳ್ಳೋದು, ಸ್ಟೈಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಇದು ಎಲ್ಲರಿಗೂ ಗೊತ್ತಿರೋ ಜಗತ್ತಿನ ಸತ್ಯ ವಿಚಾರ. ಆದ್ರೆ ಮೇಕಪ್‌ ವಿಷ್ಯದಲ್ಲಿ ನಿಮ್ಗೊದಿಂಷ್ಟು ಸಿಂಪಲ್‌ ಟೆಕ್ನಿಕ್ ಹೇಳಿ ಕೊಡ್ತೀವಿ. ಇದು ಕಡಿಮೆ ಬಜೆಟ್‌ನಲ್ಲಿ ಮೇಕಪ್‌ ಮಾಡ್ಕೊಳ್ಳೋ ಟಿಪ್ಸ್.

ಐ ಪೆನ್ಸಿಲ್‌ನಿಂದ ಪಡೆಯಿರಿ ಐ ಲೈನರ್‌: ಅದು ಹೇಗೆ ಅಂತ ನಿಮ್ಗೆ ಅನ್ನಿಸ್ಬಹುದು. ಐ ಪೆನ್ಸಿಲ್‌ನ ಟಿಪ್‌ನ್ನು ಬೆಂಕಿಯ ಬಳಿ ಸುಮಾರು 30 ಸೆಕೆಂಡ್‌ ಇಟ್ಕೊಳ್ಳಿ. ನಂತ್ರ 15 ನಿಮಿಷ ಕೂಲ್‌ ಆಗಲು ಬಿಡಿ. ಈಗ ಅದು ನಿಮ್ಗೆ ಥಿಕ್ ಆಗಿರುವ ಐ ಲೈನರ್‌ ಲಭ್ಯವಾಗುತ್ತೆ. ಲಿಪ್‌ಲೈನರ್‌ ಇಲ್ಲದೆ ಲಿಪ್‌ಸ್ಟಿಕ್‌ ಸೆಟ್ಟಿಂಗ್‌! ಲಿಪ್‌ಸ್ಟಿಕ್ ಸೆಟ್ ಆಗಿರಬೇಕು ಅಂದ್ರೆ ಲಿಪ್‌ ಲೈನರ್‌ ಬೇಕೇಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಆದ್ರೆ ಲಿಪ್‌ಲೈನರ್‌ ಇಲ್ಲದೆಯೂ ಲಿಪ್‌ಸ್ಟಿಕ್‌ ನೀಟಾಗಿ ಮಾಡ್ಕೊಳ್ಳೋದು. ಲಿಪ್‌ಸ್ಟಿಕ್‌ ಹಚ್ಕೊಂಡು ಅದನ್ನು ಟಿಶ್ಯೂಪೇಪರ್‌ನಿಂದ ಪ್ರೆಸ್ ಮಾಡ್ಕೊಳ್ಳಿ. ನಂತ್ರ ಪೌಡರ್ ಅಪ್ಲೈ ಮಾಡ್ಕೊಳ್ಳಿ. ಇದು ಲಿಪ್‌ಸ್ಟಿಕ್‌ ಹೆಚ್ಚು ಕಾಲ ತುಟಿಯಲ್ಲಿ ಉಳಿಯುವಂತೆ ಮಾಡುತ್ತೆ.

ನೈಲ್‌ಪಾಲಿಶ್ ಬೇಗ ಒಣಗೋದು ಹೇಗೆ? ನೈಲ್‌ಪಾಲಿಶ್ ಹಚ್ಕೊಂಡ್ರಿ, ಬೇಗ ಒಣಗಬೇಕು. ಅರ್ಜೆಂಟಾಗಿ ಹೊರಗಡೆ ಹೋಗ್ಬೇಕು ಅಂದ್ರೆ, ತಕ್ಷಣ ಒಂದು ಬೌಲ್‌ನಲ್ಲಿ ತಣ್ಣೀರು ಹಾಕಿ ಅದ್ರಲ್ಲಿ ನಿಮ್ಮ ಕೈಯನ್ನು ಡಿಪ್‌ ಮಾಡಿ. ಉಗುರಿಗೆ ಹಚ್ಚಿದ ನೈಲ್‌ಪಾಲಿಶ್ ಥಟ್‌ ಅಂತ ಒಣಗುತ್ತೆ.

ಕರ್ಲಿಯಿಂಗ್‌ ಐರನ್‌ ಇಲ್ಲದೆ ಕೂದಲು ಕರ್ಲಿ ಮಾಡೋದು: ನಿಮ್ಮ ಕೂದಲು ಕರ್ಲಿ ಮಾಡ್ಕೊಳ್ಳೋದಕ್ಕೆ ಕರ್ಲಿಯಿಂಗ್ ಐರನ್ ಬಳಸೋ ಬದಲು ಒಂದು ನೈಟ್‌ ಸ್ಟೆಪ್‌ ಜಡೆಯನ್ನು ಹೆಣೆದು ಮಲಗಿ ಬಿಡಿ ಮಾರನೆ ದಿನ ಕೂದಲು ಬಿಚ್ಚಿದ್ರೆ ನಿಮ್ಮ ಕೂದಲು ಕರ್ಲಿ ಆಗಿರುತ್ತೆ.

ಮಸ್ಕರಾ ಪರ್ಫೆಕ್ಟ್ ಮಾಡೋಕೆ ಬ್ಯುಸಿನೆಸ್‌ ಕಾರ್ಡ್: ನೀವು ಮಸ್ಕರಾ ಹಚ್ಚಿಕೊಳ್ಳೋದ್ರಲ್ಲಿ ವೀಕ್ ಇದ್ದೀರಾ? ಮಸ್ಕರಾ ಹಚ್ಚಿಕೊಳ್ಳುವಾಗೆಲ್ಲ ಸ್ಪ್ರೆಡ್ ಆಗಿ ಬಿಡುತ್ತಾ? ಹಾಗಾದ್ರೆ ಮಸ್ಕರಾ ಹಚ್ಚಿಕೊಳ್ಳೋದಕ್ಕೆ ಒಂದು ಸಿಂಪಲ್ ಐಡಿಯಾ ಇದೆ. ಅದೇ ಬ್ಯುಸಿನೆಸ್‌ ಕಾರ್ಡ್, ವಿಸಿಟಿಂಗ್‌ ಕಾರ್ಡ್‌ಗಳನ್ನು ಬಳಸೋದು. ನಿಮ್ಮ ಕಣ್ಣಿನ ರೆಪ್ಪೆಯ ಮೇಲ್ಬಾಗದಲ್ಲಿ ವಿಸಿಟಿಂಗ್‌ ಕಾರ್ಡ್ ಇಟ್ಟು ಮಸ್ಕರಾ ಅಪ್ಲೈ ಮಾಡಿ. ಆಗ ಮಸ್ಕರಾ ಸ್ಪ್ರೆಡ್‌ ಕೂಡ ಆಗಲ್ಲ, ಪರ್ಫೆಕ್ಟ್ ಆಗೂ ಇರುತ್ತೆ.

ಆಯಿಲಿ ಹೇರ್‌ ವಾಷ್‌ ಮಾಡೋಕೆ ಟೈಮ್ ಇಲ್ಲ. ಕೆಲವೊಮ್ಮೆ ಕೂದಲು ತೀರಾ ಆಯಿಲಿ ಅನ್ನಿಸುತ್ತೆ. ಆಗ ಅದನ್ನು ಸರಿ ಮಾಡೋಕೆ ಆಕ್ಚುಲಿ ಹೇರ್‌ವಾಷ್ ಮಾಡ್ಬೇಕು. ಶಾಂಪೂ ಹಚ್ಬೇಕು. ಬಟ್‌ ಅಷ್ಟೆಲ್ಲ ಟೈಮ್ ಇಲ್ಲದೇ ಇರುವಾಗ ನೀವು ಸ್ವಲ್ಪ ಬೇಬಿ ಪೌಡರ್ ಸಹಾಯ ಪಡೀಬಹುದು. ನೀವು ಸೆಟ್ ಮಾಡ್ಕೊಳ್ಳಬೇಕು ಅಂತ ಇರುವ ಕೂದಲಿಗೆ ಸ್ವಲ್ಪ ಬೇಬಿ ಪೌಡರ್ ಅಪ್ಲೈ ಮಾಡಿ ಒರೆಸಿ. ಕೂದಲಿನಲ್ಲಿರುವ ಆಯಿಲಿ ಅಂಶವನ್ನು ಬೇಬಿ ಪೌಡರ್‌ ರಿಮೂವ್ ಮಾಡುತ್ತೆ.

ಹಣೆಗೆ ಇಡೋಕೆ ಬಿಂದಿ ಖಾಲಿಯಾಗಿದೆ. ಏನ್ ಮಾಡೋದು ಅಂತ ಯೋಚಿಸ್ತಾ ಇದ್ದೀರಾ? ಸಿಂಪಲ್‌ ಐಡಿಯಾ ಇದೆ. ನಿಮ್ಮಲ್ಲಿರುವ ಐ ಲೈನರ್‌ನಿಂದ ಹಣೆಗೆ ಬಿಂದಿ ಇಟ್ಟುಕೊಳ್ಳಬಹುದು.

ಐ ಶಾಡೋ ಇಲ್ಲದೆ ಇದ್ರೆ ಏನ್ ಮಾಡ್ಬಹುದು: ಐ ಶಾಡೋ ಬಾಕ್ಸ್‌ ಇಲ್ಲ. ಬಟ್ ಕಣ್ಣಿನ ಅಂದಕ್ಕೆ ಐ ಶಾಡೋ ಬಳಸ್ಬೇಕು ಏನ್ ಮಾಡೋದು ಅಂತ ಯೋಚಿಸ್ತಾ ಇದ್ರೆ ಸಿಂಪಲ್‌ ಸೆಲ್ಯೂಷನ್ ಲಿಪ್‌ಸ್ಟಿಕ್. ನಿಮ್ಗೆ ಆಶ್ಚರ್ಯ ಆಗ್ಬಹುದು ಬಟ್ ನಿಮ್ಮ ಲಿಪ್‌ಸ್ಟಿಕ್‌ನ್ನೇ ಕಣ್ಣಿನ ಮೇಲ್ಬಾಗಕ್ಕೆ ಲೈಟಾಗಿ ಅಪ್ಲೈ ಮಾಡಿ. ಯಾವ ಐ ಶಾಡೋವನ್ನು ಮೀರಿಸಿದಂತೆ ಲಿಪ್‌ಸ್ಟಿಕ್‌ ಐ ಶಾಡೋ ಲುಕ್ ನೀಡುತ್ತೆ.

ಐಬ್ರೋ ಚೆನ್ನಾಗಿ ಕಾಣ್ಬೇಕು ಅಂದ್ರೆ ಐ ಬ್ರೋ ಪೆನ್ಸಿಲ್‌ನಿಂದ ಅಪ್ಲೈ ಮಾಡ್ಕೊಬೇಕು. ಬಟ್ ಐ ಬ್ರೋ ಇಲ್ಲದೇ ಇದ್ದಾಗ ಏನ್ ಮಾಡ್ಬಹುದು ಗೊತ್ತಾ? ಜಸ್ಟ್‌ ಅಪ್ಲೈ ಬ್ರ್ಲೌನ್ ಅಥ್ವಾ ಬ್ಲಾಕ್‌ ಕಲರಿನ ಐ ಶಾಡೋವನ್ನು ಐ ಬ್ರೋ ಮೇಲೆ ಲೈಟಾಗಿ ಅಪ್ಲೈ ಮಾಡಿ. ನಿಮ್ಮ ಥಿನ್ ಆಗಿರುವ ಐ ಬ್ರೋ ಡಾರ್ಕ್ ಆಗಿ ಬೊಂಬಾಟ್ ಲುಕ್‌ ಬರುತ್ತೆ.

ಒಟ್ಟಿನಲ್ಲಿ ಕೆಲವೇ ಕೆಲವು ಮೇಕಪ್ ಮೆಟಿರಿಯಲ್‌ಗಳಿಂದಲೂ ಬೊಂಬಾಟ್ ಲುಕ್ ಪಡೀಬಹುದು ಅನ್ನೋದಂತೂ ನಿಜ. ಅದಕ್ಕಾಗಿ ಲೇಡಿಸ್ ಸ್ವಲ್ಪ ಹ್ಯಾಕಿಂಗ್‌ ಬುದ್ಧಿ ಕಲಿತಿರಬೇಕು ಅಷ್ಟೇ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada