ಪಾದದ ದುರ್ವಾಸನೆ ನಿರ್ಮೂಲನೆಗೆ ಮನೆಮದ್ದಿನಿಂದ ಪಡೆಯಿರಿ ಶಾಶ್ವತ ಪರಿಹಾರ

|

Updated on: Nov 15, 2019 | 8:41 PM

ದೇಹದಲ್ಲಿ ಎಲ್ಲಕ್ಕಿಂತ ತ್ರಾಸದಾಯಕವಾದ ಕೆಲಸ ಮಾಡುವಂತಹ ಅಂಗವೆಂದರೆ ಅವು ಪಾದಗಳು. ಯಾಕೆಂದ್ರೆ ಪ್ರತೀ ಕ್ಷಣವೂ ಪಾದಗಳ ಮೇಲೆ ಭಾರ ಬೀಳುತ್ತಲೇ ಇರುತ್ತೆ. ಅದರಲ್ಲೂ ನೀವು ಸ್ವಲ್ಪ ಹೆಚ್ಚಿನ ತೂಕ ಹೊಂದಿದ್ದರೆ ಆಗ ಪಾದಗಳಿಗೆ ಅಧಿಕ ಕೆಲಸವಿರುತ್ತದೆ. ಪಾದಗಳು ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹಾಗೆಯೇ ನಡೆದಾಡುವಾಗ ಪಾದಗಳಿಗೆ ಹೆಚ್ಚಿನ ಧೂಳು, ಕಲ್ಮಶ ಅಂಟಿಕೊಳ್ಳುತ್ತೆ. ಇದರೊಂದಿಗೆ ಬೆವರು ಕೂಡ ಸೇರಿಕೊಂಡು ಪಾದಗಳು ದರ್ವಾಸನೆ ಬೀರುತ್ತೆ. ಕೆಲವೊಮ್ಮೆ ನೀವು ಶೂ ತೆಗೆದಾಗ ಪಕ್ಕದಲ್ಲಿ ಇದ್ದವರು ಮೂಗು ಮುಚ್ಚಿಕೊಳ್ಳಬೇಕಾಗುವ ಪರಿಸ್ಥಿತಿ ಎದುರಾಗುತ್ತೆ. […]

ಪಾದದ ದುರ್ವಾಸನೆ ನಿರ್ಮೂಲನೆಗೆ ಮನೆಮದ್ದಿನಿಂದ ಪಡೆಯಿರಿ ಶಾಶ್ವತ ಪರಿಹಾರ
Follow us on

ದೇಹದಲ್ಲಿ ಎಲ್ಲಕ್ಕಿಂತ ತ್ರಾಸದಾಯಕವಾದ ಕೆಲಸ ಮಾಡುವಂತಹ ಅಂಗವೆಂದರೆ ಅವು ಪಾದಗಳು. ಯಾಕೆಂದ್ರೆ ಪ್ರತೀ ಕ್ಷಣವೂ ಪಾದಗಳ ಮೇಲೆ ಭಾರ ಬೀಳುತ್ತಲೇ ಇರುತ್ತೆ. ಅದರಲ್ಲೂ ನೀವು ಸ್ವಲ್ಪ ಹೆಚ್ಚಿನ ತೂಕ ಹೊಂದಿದ್ದರೆ ಆಗ ಪಾದಗಳಿಗೆ ಅಧಿಕ ಕೆಲಸವಿರುತ್ತದೆ. ಪಾದಗಳು ದೇಹದ ಸಂಪೂರ್ಣ ಭಾರವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹಾಗೆಯೇ ನಡೆದಾಡುವಾಗ ಪಾದಗಳಿಗೆ ಹೆಚ್ಚಿನ ಧೂಳು, ಕಲ್ಮಶ ಅಂಟಿಕೊಳ್ಳುತ್ತೆ. ಇದರೊಂದಿಗೆ ಬೆವರು ಕೂಡ ಸೇರಿಕೊಂಡು ಪಾದಗಳು ದರ್ವಾಸನೆ ಬೀರುತ್ತೆ.

ಕೆಲವೊಮ್ಮೆ ನೀವು ಶೂ ತೆಗೆದಾಗ ಪಕ್ಕದಲ್ಲಿ ಇದ್ದವರು ಮೂಗು ಮುಚ್ಚಿಕೊಳ್ಳಬೇಕಾಗುವ ಪರಿಸ್ಥಿತಿ ಎದುರಾಗುತ್ತೆ. ಕೆಲವೊಮ್ಮೆ ಸುವಾಸನೆಯುಕ್ತ ಪೌಡರ್ ಅನ್ನು ಸಿಂಪಡಿಸಿದರೆ ಪಾದಗಳ ದುರ್ವಾಸನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು ಆದರೆ ಇದಕ್ಕೆ ಶಾಶ್ವತ ಪರಿಹಾರಬೇಕೆಂದಲ್ಲಿ ಕೆಲವೊಂದು ಮನೆಮದ್ದನ್ನು ಪ್ರಯತ್ನಿಸಬಹುದು.

ಎರಡು ಚಮಚ ಅಡುಗೆ ಸೋಡಾವನ್ನು ನೀರಿಗೆ ಹಾಕಿಕೊಂಡು ಪಾದಗಳನ್ನು ಅದರಲ್ಲಿ ಅದ್ದಿಡಿ. ಅಡುಗೆ ಸೋಡಾದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಲ್ ವಿರೋಧಿ ಗುಣಗಳಿವೆ. ಇದು ಪಾದಗಳ ವಾಸನೆಯನ್ನು ಬೇಗನೆ ಹೋಗಲಾಡಿಸುತ್ತೆ.

ಕೆಲವು ಹನಿ ಲ್ಯಾವೆಂಡರ್​ ತೈಲವನ್ನು ಬಿಸಿ ನೀರಿಗೆ ಹಾಕಿ ಪಾದಗಳನ್ನು ಅದರಲ್ಲಿ ಮುಳುಗಿಸಿಡಿ. ತೈಲದ ಸುವಾಸನೆ ಪಾದಗಳಲ್ಲಿ ಯಾವುದೇ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.

ವಾಸನೆಯನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ಮೌಥ್ ವಾಶ್​ನಲ್ಲಿರುವ ಆಲ್ಕೋಹಾಲ್ ಮತ್ತು ಪುದೀನಾ ದೂರ ಮಾಡುತ್ತೆ. ಬಿಸಿ ನೀರಿಗೆ ಮೌಥ್ ವಾಶ್ ಬೆರೆಸಿ ಅದರಲ್ಲಿ ಕೆಲವು ಸಮಯ ಪಾದಗಳನ್ನು ಇಟ್ಟರೆ ಪಾದಗಳ ದುರ್ವಾಸನೆ ದೂರವಾಗೋದ್ರಲ್ಲಿ ನೋ ಡೌಟ್.​ ದುರ್ವಾಸನೆಯನ್ನು ಹೋಗಲಾಡಿಸಲು ಇದು ಅತ್ಯಂತ ಸುಲಭವಾದ ಮನೆಮದ್ದು ಎನ್ನಬಹುದು.

ಒಂದು ಕಪ್ ಕಪ್ಪು ಚಹಾವನ್ನು ಬಿಸಿ ನೀರಿಗೆ ಹಾಕಿ. ಇದರಲ್ಲಿ ಸುಮಾರು 20 ನಿಮಿಷಗಳ ಕಾಲ ಪಾದಗಳನ್ನು ಅದ್ದಿ ಇಡಿ. ಇದರಿಂದ ಪಾದಗಳ ದುರ್ವಾಸನೆ ಹೋಗುವುದರ ಜೊತೆಗೆ ಪಾದಗಳ ಆಯಾಸ ಕೂಡ ದೂರವಾಗುತ್ತೆ. ಇದಕ್ಕಿಂತ ಒಳ್ಳೆಯ ನೈಸರ್ಗಿಕ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದ ಸಂಗತಿಯೇ ಸರಿ.

ಆ್ಯಪೆಲ್ ಸೀಡರ್ ವಿನೇಗರ್ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತೆ. ಹಾಗೂ ಇದರಲ್ಲಿರುವ ಆಮ್ಲೀಯ ಗುಣವು ಬ್ಯಾಕ್ಟೀರಿಯಾವನ್ನು ನಿವಾರಿಸುತ್ತೆ ಕೂಡ. ಪಾದಗಳ ದುರ್ವಾಸನೆ ನಿವಾರಿಸಲು ಇದು ಅತ್ಯುತ್ತಮವಾಗಿರುವ ಮನೆಮದ್ದು.

Published On - 8:40 pm, Fri, 15 November 19